ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದು ಮುದಿಯಾಗಿತ್ತು. ಪ್ರಾಣಿಗಳನ್ನು ಬೇಟೆ ಆಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅದು ನರಿಯನ್ನು ಕರೆದು, “ನರಿರಾಯ, ನೀನು ಇನ್ನು ಮೇಲೆ ನನ್ನ ಮಂತ್ರಿ. ನಿನ್ನ ಕೆಲಸವೇನೆಂದರೆ ನಂಗೆ ದಿನಕ್ಕೊಂದು ಪ್ರಾಣೀನ ಆಹಾರವಾಗಿ ತಂದುಕೊಡೋದು” ಎಂದಿತು. ಅಳಿದುಳಿದ ಮಾಂಸ ತನಗೆ ಸಿಗುವುದೆಂಬ ಆಶೆಯಿಂದ ನರಿ “ಆಗಲಿ” ಎಂದಿತು. ನದೀತೀರದ ಮರಳಿನ ಮೇಲೆ ಮೊಸಳೆ ಬಿಸಲಿಗೆ ಮೈ ಕಾಯಿಸಿಕೊಳ್ಳುತ್ತಾ ಮಲಗಿತ್ತು. ನರಿ ಪ್ರಾಣಿಯನ್ನು ಹುಡುಕಿ ಕೊಂಡು ಕಾಡಿನೊಳಗೆ ಹೋಯಿತು. ಅದರ ಎದುರಿಗೆ ಮೊಲವೊಂದು ಸಿಕ್ಕಿದಾಗ ನರಿ, “ಮೊಲರಾಯ, ಮೊಸಳೆ ನಿನ್ನ ಹತ್ತಿರ …
ಪೂರ್ತಿ ಓದಿ...ಕತ್ತೆಯ ಉಪಾಯ
ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ. ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ “ಎಂಥಾ ಜನ್ಮವಪ್ಪಾ ನಿಂದೂ? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗೋದೇ ನಿನ್ನ ಹಣೆ ಬರಹವಾಯ್ತು ಅಲ್ವಾ! ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ. ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ.” ಎಂದು ಪರಿಹಾಸ್ಯ ಮಾಡಿ ನಕ್ಕಿತು. ಈ ಮಾತು ಕೇಳಿ ಕತ್ತೆಗೆ ತುಂಬಾ …
ಪೂರ್ತಿ ಓದಿ...ಜೋನ್ ಆಫ್ ಆರ್ಕ್
ಫ್ರಾನ್ಸ್ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿದ್ದ ಕಾಲವದು. ಫ್ರಾನ್ಸ್ಗೆ ಹೆಸರಿಗೊಬ್ಬ ರಾಜನಿದ್ದನು ಅವನು ಆಂಗ್ಲರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದನು. ಇಂತಹ ದಿನಗಳಲ್ಲಿ ಒಮ್ಮೆ ಫ್ರಾನ್ಸ್ನ ಬೀದಿಯಲ್ಲಿ ಮಲಗಿದ್ದ ಅನಾಥ ಬಾಲಕಿಯೊಬ್ಬಳಿಗೆ ಕನಸೊಂದು ಬಿದ್ದಿತು. ಆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು ಫ್ರಾನ್ಸ್ನ್ನು ಬ್ರಿಟಿಷರಿಂದ ಮುಕ್ತಗೊಳಿಸುವಂತೆ ಬಾಲಕಿಗೆ ಆದೇಶವಿತ್ತರಂತೆ. ಆದರೆ, ದೇಶಕ್ಕೆ ದೇಶವೇ ಮಹಾರಾಜನಿಂದ ಹಿಡಿದು ಎಲ್ಲರೂ ಬ್ರಿಟಿಷರ ಅಡಿಯಾಳಾಗಿರುವಾಗ ಕೇವಲ ೧೩ ವರ್ಷ ವಯಸ್ಸಿನ ಆ ಹುಡುಗಿಯಿಂದ ಫ್ರಾನ್ಸ್ ಗೆ ಸ್ವಾತಂತ್ರ ಕೊಡಿಸಲಾದೀತೇ? ಆದರೆ, ಆ ಬಾಲಕಿ ಧೃತಿಗೆಡದೆ ಸಂತವಾಣಿಯಿಂದ ಪ್ರಭಾವಿತಳಾದವಳಂತೆ ನೇರವಾಗಿ ಸೇನಾ …
ಪೂರ್ತಿ ಓದಿ...ಅಪ್ರತಿಮ ವೀರ ಏಕಲವ್ಯನ ಸಾವಿಗೆ ಶ್ರೀಕೃಷ್ಣ ಕಾರಣನೇ?
ಮಹಾಭಾರತವನ್ನು ಆಧರಿಸಿದ ಕಥೆಗಳು ಜನರಿಂದ ಜನರಿಗೆ ದಾಟುತ್ತಾ ಹೋದಂತೆ ಮೂಲಕಥೆಯಿಂದ ಸ್ವಲ್ಪಸ್ವಲ್ಪವಾಗಿ ಬದಲಾವಣೆ ಪಡೆಯುತ್ತಾ ಇಂದು ಮೂಲಕಥೆಗೂ ಭಿನ್ನವಾಗಿ ಮೂಲಕಥೆಯ ಸತ್ಯತೆಯನ್ನೇ ಪ್ರಶ್ನಿಸುವಂತಾಗಿದೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಮತ್ತು ಕೆಟ್ಟ ಮುಖಗಳಿವೆ. ಇದಕ್ಕೆ ಭಗವಾನ್ ಕೃಷ್ಣನೂ ಹೊರತಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ಉದಾಹರಣೆಗೆ ಗಾಂಧಾರಿಗೆ ಕಣ್ಣಿದ್ದೂ ಗಂಡನಿಗೆ ಕಣ್ಣಿಲ್ಲದ ಕಾರಣ ಕಣ್ಣಿಗೆ ಪಟ್ಟಿಕಟ್ಟಿ ಗಂಡನ ಕುರುಡಿನಲ್ಲಿ ಭಾಗಿಯಾಗುವ ಮೂಲಕ ಪಾತಿವ್ರತೆಯ ಮಹತ್ವವನ್ನು ಕೊಂಡಾಡಿದರೆ ಮಗ ದುರ್ಯೋಧನ ಮಾಡುತ್ತಿರುವುದು ತಪ್ಪು ಎಂದು ತಿಳಿದೂ ತನ್ನ ಕಣ್ಣಿನ …
ಪೂರ್ತಿ ಓದಿ...ಅಕ್ಬರನ ಸಂದೇಹ
ಬಾದಶಹನ ಮನಸ್ಸಿನಲ್ಲಿ ಒಂದು ವಿಷಯ ಕೊರೆಯುತ್ತಿತ್ತು. ಆ ವಿಷಯ ಏನೆಂದರೆ, ಮೂರ್ಖರ ಜೊತೆ ಕೆಲಸ ಬಿದ್ದರೆ ಏನು ಮಾಡಬೇಕು? ಎಂಬ ಆಲೋಚನೆ ಬಾದಶಹನಿಗೆ ಪದೇ ಪದೇ ಜ್ಞಾಪಕ ಬರುತಿತ್ತು. ಒಂದು ದಿನ ಅಕ್ಬರನ ದರಬಾರು ಸೇರಿತು. ಆಗ ಬಾದಶಹನಿಗೆ ಆ ವಿಷಯ ನೆನಪಾಯಿತು. ಮೂರ್ಖನ ಜೊತೆ ಕೆಲಸ ಬಿದ್ದರೆ ಏನು ಮಾಡಬೇಕು? ಎಂಬ ಅಕ್ಬರ ನೆರೆದವರನ್ನು ಕೇಳಿದ. ಅಕ್ಬರನ ಪ್ರಶ್ನೆಗೆ ಬೀರಬಲ್ಲನು ಮುಗುಳು ನಕ್ಕ. ಆದರೆ, ಏನು ಮಾತನಾಡದೆ ಮೌನ ತಾಳಿ ಕುಳಿತ. “ಜಹಾಂಪನಾ, ಮೂರ್ಖನ ಜತೆ ಕೆಲಸ ಬಿದ್ದರೆ ಯಾವ ಪ್ರಯೋಜನ? ಅಂಥ …
ಪೂರ್ತಿ ಓದಿ...ಭೂತದ ಕಾಟ
ರಜೆಯ ಕಾಲ ಎಂದರೆ ಮಾಜದ ಕಾಲ ಎಂದೇ ಪುಟ್ಟಣ್ಣ ಮತ್ತು ಚಿಟ್ಟೆಯ ನಂಬಿಕೆ. ಶಾಲೆಗೆ ರಜೆ ಬಂತೆಂದರೆ ಸಾಕು ಹಳ್ಳಿಯಲ್ಲಿರುವ ಅಜ್ಜನ ಮನೆ ಅವರನ್ನು ಕರೆಯುತ್ತಿತ್ತು. ತೋಟ ಸುತ್ತವ ಕಾಡು ಹಣ್ಣುಗಳನ್ನು ಹೆಕ್ಕುವ, ತೊರೆಯ ನೀರಲ್ಲಿ ಮೀನಾಗಿ ಈಜುವ ಮಕ್ಕಳ ಕನಸು ರಜೆಯಲ್ಲಿ ಸಾಕಾರಗೊಳ್ಳುತ್ತಿತ್ತು. ಎಂದಿನಂತೆ ಈ ಸಲವೂ ಅಜ್ಜನ ಮನೆ ಸೇರಿದ ಮಕ್ಕಳಿಗೆ ಊರಲ್ಲಿ ಕೇಳಿದ ಹೊಸ ಸುದ್ಧಿ ಹೆದರಿಕೆಯನ್ನು, ಕುತೂಹಲವನ್ನು ಹುಟ್ಟಿಸಿತ್ತು. ಅವರ ಮನೆಯಿಂದ ಒಂದೆರಡು ಫರ್ಲಾಂಗು ದೂರ ಇದ್ದ ಹುಲ್ಲಿನ ಛಾವಣಿಯ ಮನೆಯದು. ಹಗಲು ಹೊತ್ತಿನಲ್ಲಿ ಅಲ್ಲಿ ವಿಶೇಷವೇನೂ ಕಾಣದಿದ್ದರೂ …
ಪೂರ್ತಿ ಓದಿ...ಪರೀಕ್ಷೆಯ ಪ್ರಶ್ನೆಯನ್ನು ವಿರೋಧಿಸಿ ತುಂಬಿದ ಸಭಾಗೃಹದಿಂದ ಹೊರನಡೆದ ರಾಷ್ಟ್ರಾಭಿಮಾನಿ ಸುಭಾಷಚಂದ್ರ ಬೋಸ್
ನೇತಾಜಿ ಸುಭಾಷಚಂದ್ರ ಬೋಸ್ ‘ಐ.ಸಿ.ಎಸ.’ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್.ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು ಪ್ರಶ್ನೆ ಪತ್ರಿಕೆಯನ್ನು ನೋಡಿ ಕೂಡಲೇ ರೊಚ್ಚಿಗೆದ್ದರು. ಆ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರಕ್ಕೆ ಒಂದು ಪರಿಚ್ಛೇದವನ್ನು ನೀಡಲಾಗಿತ್ತು. ಆ ಪರಿಚ್ಛೇದದ ಶಿರೋನಾಮೆಯು ಮುಂದಿನಂತೆ ಇತ್ತು – ‘Indian Soldiers are generally Dishonest’ (ಅಂದರೆ ‘ಸಾಮಾನ್ಯವಾಗಿ ಭಾರತೀಯ ಸೈನಿಕರು ಅಪ್ರಾಮಾಣಿಕರು’). ಇಂತಹ ವೋಶಯದ ಮೇಲೆ ಇದ್ದ ಆಂಗ್ಲ ಪರಿಚ್ಛೇದವನ್ನು ಪರೀಕ್ಷಾರ್ಥಿಗಳು ಭಾಷಾಂತರ ಮಾಡಬೇಕಿತ್ತು. ಇದನ್ನು ನೋಡಿದ ಸುಭಾಷಚಂದ್ರ ಈ ಪ್ರಶ್ನೆಗೆ …
ಪೂರ್ತಿ ಓದಿ...ಮನಃಶಾಂತಿ
ಒಬ್ಬನು ಮನಶಾಂತಿಯನ್ನು ಹುಡುಕಿಕೊಂಡು ವಿವಿಧ ಆಧಾತ್ಮಿಕ ಗುರುಗಳು ಹೇಳಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಒಮ್ಮೆ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ’ಸ್ವಾಮೀಜಿ, ನಾನು ಒಂದು ಮುಚ್ಚಿದ ಕೋಣೆಯಲ್ಲಿ ಗಂಟೆಗಟ್ಟೆಲೆ ಕುಳಿತು ಧ್ಯಾನ ಮಾಡುತ್ತೇನೆ, ಅದರೆ ನನಗೆ ಮನಃಶಾಂತಿ ಸಿಗಲಿಲ್ಲ’ ಎಂದು ಹೇಳಿದನು. ಆಗ ಸ್ವಾಮೀ ವಿವೇಕಾನಂದರು ’ ಮೊಟ್ಟಮೊದಲು ನೀನು ನಿನ್ನ ಕೋಣೆಯ ಬಾಗಿಲನ್ನು ತೆರೆದಿಡು. ಅನಂತರ ಹೊರಗೆ ದುಃಖದಲ್ಲಿರುವವರನ್ನು, ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡು’ ಎಂದು ಹೇಳಿದರು. ಆಗ ಆ ವ್ಯಕ್ತಿಯು ವಿವೇಕಾನಂದರಿಗೆ ’ರೋಗಿಗಳ …
ಪೂರ್ತಿ ಓದಿ...ಏಕಾಗ್ರತೆಯ ಮಹತ್ವ
ಒಮ್ಮೆ ಸ್ವಾಮೀ ವಿವೇಕಾನಂದರು ಅಮೇರಿಕಾದ ಚಿಕಾಗೊ ಪಟ್ಟಣದ ನದಿಯ ತೀರದಲ್ಲಿ ವಿಹರಿಸುತ್ತಿದ್ದರು. ಆಗ ಅವರಿಗೆ ಕೆಲವು ಹುಡುಗರು ಕೋವಿಯನ್ನು ಹಿಡಿದು ನದಿಯಲ್ಲಿ ತೇಲುತ್ತಿರುವ ಮೊಟ್ಟೆಯ ಚಿಪ್ಪನ ಮೇಲೆ ಗುರಿಯಿಡಲು ಪ್ರಯತ್ನಿಸುತ್ತಿರುವುದು ಕಂಡಿತು. ಅದರೆ ಅಲೆಗಳಿಂದ ಮೊಟ್ಟೆಯ ಚಿಪ್ಪು ಮೇಲೆ ಕೆಳಗೆ ತಿರುಗುತ್ತಿದ್ದರಿಂದ ಅವರಿಗೆ ಗುರಿಯಿಡಲು ಸಾಧ್ಯವಾಗಲ್ಲಿಲ್ಲ. ಬಹಳಷ್ಟು ಬಾರಿ ಪ್ರಯತ್ನಿಸಿಯೂ ಅವರಿಂದ ಮೊಟ್ಟೆಯ ಚಿಪ್ಪಿನ ಮೇಲೆ ಗುರಿಯಿಡಲು ಸಾಧ್ಯವಾಗಲಿಲ್ಲ. ಸ್ವಾಮೀವಿವೇಕಾನಂದರು ಅವರ ಆಟವನ್ನು ಕೂತೂಹಲದಿಂದ ನಿಂತು ನೋಡುತ್ತಿದ್ದರು. ಆಗ ಹುಡುಗರು ಅವರನ್ನು ನೋಡಿ ’ಸರ್, ನೀವು ನಮ್ಮನ್ನು ಆಗಿನಿಂದ ನೋಡುತ್ತಿದ್ದೀರಿ, ನೀವು ಒಂದು ಬಾರಿ …
ಪೂರ್ತಿ ಓದಿ...೯ ವರ್ಷದ ಜೋರಾವರ ಸಿಂಗ್ ಹಾಗೂ ೭ ವರ್ಷದ ಫತೆಹ ಸಿಂಗ್ ಎಂಬ ಧರ್ಮಯೋಧರು !
ಫತೇಹ ಸಿಂಗ್ ಹಾಗೂ ಜೋರಾವರ ಸಿಂಗ್ ಸಿಖ್ಖರ ೧೦ ನೇ ಗುರುಗಳಾದ ಗುರುಗೋವಿಂದಸಿಂಗ್ ರ ಸುಪುತ್ರರಾಗಿದ್ದರು. ಗುರು ಗೋವಿಂದಸಿಂಗ್ ಮೊಘಲರ ವಿರುದ್ಧ ಘೋಷಿಸಿದ ಸ್ವಾತಂತ್ರ್ಯ ಯುದ್ಧದ ಒಂದು ಯುದ್ಧದಲ್ಲಿ ಫತೇಹಸಿಂಗ್ ಹಾಗೂ ಜೋರಾವರಸಿಂಗ್ ತಂದೆಯಿಂದ ಅಗಲಿದ ನಂತರ ಕ್ರೂರಿಯಾದ ಔರಂಗಜೇಬನ ಸರಹಿಂದನ ಸುಬೇದಾರನಾದ ವಝೀರಖಾನನ ಕೈಗೆ ಸಿಕ್ಕಿಬಿದ್ದರು. ವಝೀರ ಖಾನನು ಅವರಿಗೆ ‘ಮುಸಲ್ಮಾನರಾಗಿ ಇಲ್ಲದಿದ್ದರೆ ಕೊಲ್ಲುತ್ತೇನೆ’ ಎಂದು ಬೆದರಿಸಿದನು. ಈ ವಾಕ್ಯ ಕೇಳುತ್ತಲೇ ಆ ಮಕ್ಕಳು ‘ಪ್ರಾಣ ತೆತ್ತರೂ ಚಿಂತೆಯಿಲ್ಲ, ಆದರೆ ನಾವು ಧರ್ಮವನ್ನು ಬಿಡುವುದಿಲ್ಲ ! ನಮಗೆ ನಮ್ಮ ಧರ್ಮ ಪ್ರಾಣಕ್ಕಿಂತಲೂ ಪ್ರಿಯವಾಗಿದೆ. …
ಪೂರ್ತಿ ಓದಿ...