ಕಥೆಗಳು

ಒಂದು ಒಳ್ಳೆಯ ಎತ್ತಿನ ಕಥೆ

ಒಂದು ಊರಿನಲ್ಲಿ ಗೋಪಯ್ಯ ಎಂಬ ಒಬ್ಬ ರೈತನ ಹತ್ತಿರ ಒಂದು ಎತ್ತು ಇತ್ತು… ಅದು ತುಂಬಾ ಬಲವಾಗಿತ್ತು. ಆದರೂ ಅದು ತುಂಬಾ ಶಾಂತವಾಗಿರುತ್ತಿತ್ತು. ಗೋಪಯ್ಯ ಯಾವ ಕೆಲಸ ಹೇಳಿದರೆ ಅದನ್ನು ತುಂಬಾ ಇಷ್ಟವಾಗಿ ಮಾಡುತ್ತಿತ್ತು. ಗೋಪಯ್ಯ ಸಹ ಆ ಎತ್ತನ್ನು ತುಂಬಾ ಪ್ರೀತಿಯಿಂದ ಜಾಗರೂಕತೆಯಿದ ನೋಡಿಕೊಳ್ಳುತ್ತಿದ್ದ. ಅದನ್ನು ಹೊಡೆಯುವ ಮಾತೇಯಿಲ್ಲ. ಅದರ ಮೇಲೆ ನೊಣವನ್ನು ಸಹ ಕೂರಲು ಬಿಡುತ್ತಿರಲಿಲ್ಲ. ಆ ಎತ್ತಿನ ಬಗ್ಗೆ ಎಲ್ಲರ ಜೊತೆ ಹೆಚ್ಚಾಗಿ ಹೇಳುತ್ತಿದ್ದ. ಒಂದು ಬಾರಿ ಗೋಪಯ್ಯ ಊರಿನ ದೊಡ್ಡವನೊಬ್ಬನ ಜೊತೆ ಮಾತನಾಡುತ್ತಾ “ನನ್ನ ಎತ್ತು ನೂರು ಎತ್ತಿನ …

ಪೂರ್ತಿ ಓದಿ...

ಹೆಸರಿನಲ್ಲಿ ಏನಿದೆ?

name

ಮಹಾತ್ಮರಿಗೊಬ್ಬ ಶಿಷ್ಯನಿದ್ದ. ಅವನ ಹೆಸರು ದುಷ್ಟ ಅಂತ. ಆ ಶಿಷ್ಯನಿಗೆ ತನ್ನ ಹೆಸರಿನ ಬಗ್ಗೆ ಅತೀವವಾದ ನೋವಿತ್ತು. ಕೆಟ್ಟ ಕೆಲಸ ಮಾಡದಿದ್ದರೂ ಲೋಕದ ದೃಷ್ಟಿಯಲ್ಲಿ ದುಷ್ಟನಾದೆನಲ್ಲ ಎಂಬ ಕೊರತೆ ಅವನನ್ನು ಕಾಡುತಿತ್ತು. ಒಂದು ದಿನ ಆತ ಗುರುಗಳ ಬಳಿ ಹೋದ. ತನ್ನ ಸಂಕಟವನ್ನು ತೋಡಿಕೊಂಡ. ಗುರುಗಳು ನಕ್ಕು ನುಡಿದರು. ಹೊರಗಿನ ಪ್ರಪಂಚವನ್ನು ಒಮ್ಮೆ ಸುತ್ತಿ ಬಾ. ಯಾರ್ಯಾರ ಹೆಸರು ಹೇಗಿದೆ ಎಂಬುದನ್ನು ತಿಳಿದುಕೊಂಡು ಬಾ ಎಂದರು. ಗುರುಗಳ ಆಜ್ಞೆಯಂತೆ ಶಿಷ್ಯನು ಲೋಕಸಂಚಾರಕ್ಕೆ ಹೊರಟ. ಮಾರ್ಗಮಧ್ಯೆ ಬಿಕ್ಷುಕನೊಬ್ಬ ಎದುರಾದ. ಅವನೋ ದಟ್ಟದರಿದ್ರ ಆದರೆ ಅವನ ಹೆಸರು …

ಪೂರ್ತಿ ಓದಿ...

ವೃದ್ಧೆಯ ಉಪಕಾರ

ase

ಬ್ರಹ್ಮಪುರವೆಂಬ ಪಟ್ಟಣದ ಜನರು ತುಂಬಾ ಭಯಭೀತರಾಗಿದ್ದರು. ಏಕೆಂದರೆ ಸಮೀಪದಲ್ಲಿದ್ದ ಪರ್ವತದ ತುದಿಯಲ್ಲಿ ಘಂಟಾಕರ್ಣನೆಂಬ ರಾಕ್ಷಸನಿರುವನೆಂದು ಅವರು ನಂಬಿದ್ದರು. ಆ ಪ್ರದೇಶದಲ್ಲಿ ಆಗಾಗ ಗಂಟೆಯ ಸಪ್ಪಳವೂ ಕೇಳಿಬರುತ್ತಿತ್ತು. ಆದ್ದರಿಂದ ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಘಂಟಾಕರ್ಣನು ಜನರನ್ನು ತಿನ್ನುತ್ತಾನೆ ಎಂಬ ಸುದ್ದಿ ಹಬ್ಬಲು ಜನರು ಊರು ಬಿಟ್ಟು ಹೋಗತೊಡಗಿದರು. ಅಲ್ಲಿಯ ಅರಸನು ಬಹಳ ಚಿಂತಾಕ್ರಾಂತನಾದನು. ಯಾರಾದರೂ ಘಂಟಾಕರ್ಣನ ಕಾಟವನ್ನು ತಪ್ಪಿಸಿದರೆ ಹೇರಳ ಹಣವನ್ನು ಕೊಡುವುದಾಗಿ ಅರಸ ಡಂಗುರ ಸಾರಿಸಿದನು. ಯಾರು ಆ ಸಾಹಸಕ್ಕೆ ಹೊರಡಲಿಲ್ಲ. ಕೊನೆಗೆ ಒಬ್ಬಳು ವೃದ್ಧೆಗೆ ಡಂಗುರದ ಸುದ್ದಿ ತಿಳಿಯಿತು. ಅವಳು ಜನರ …

ಪೂರ್ತಿ ಓದಿ...

ಕರ್ನಾಟಕ ಪೋಲೀಸ್ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಗೊತ್ತಿಲ್ಲದಿರುವ 14 ಐತಿಹಾಸಿಕ ಸತ್ಯಗಳು

police

ಕರ್ನಾಟಕಲ್ಲಿ ಪೊಲೀಸ್ ವ್ಯವಸ್ಥೆಗೆ ಸುಮಾರು 200ಕ್ಕೂ ಹೆಚ್ಚು ವರ್ಷದ ಇತಿಹಾಸ ಇದೆ. ಬೇರೆ ಬೇರೆ ಕಾಲಮಾನದಲ್ಲಿ ಬೇರೆ ಬೇರೆ ಥರ ವ್ಯವಸ್ಥೆಗಳನ್ನ ಕಂಡು ಬೆಳೆದಿದೆ ನಮ್ಮ ಕರ್ನಾಟಕ ಪೊಲೀಸ್ ವ್ಯವಸ್ಥೆ. ಬನ್ನಿ ಚುಟುಕಾಗಿ ಎಲ್ಲಾ ತಿಳ್ಕೊಳೋರಂತೆ… 1. ಮೊದಲು ನಮ್ಮಲ್ಲಿ ಪೋಲೀಸ್ನೋರು ಅಂತ ಯಾರೂ ಇರ್ಲಿಲ್ಲ ಆದ್ರೆ ತೋಟಿ-ತಳವಾರರು, ಅಮಲ್ದಾರರು, ಕಟ್ಟುಬಿಡಿ, ನೀರಗಂಟೆ, ಹೀಗೆ ಬೇರೆ ಬೇರೆ ಹೆಸರಿನ ಕಸುಬಿನೋರು ಇವತ್ತು ಪೊಲೀಸ್ನೋರು ಮಾಡೋ ಬೇರ್ ಬೇರೆ ಕೆಲ್ಸ ಮಾಡ್ತಿದ್ರು. 2. ಮೈಸೂರು ಸಂಸ್ಥಾನದಲ್ಲಿ ಮೊದಲ ಸಲ ಪೊಲೀಸ್ ಅನ್ನೋ ಹುದ್ದೆ ಹುಟ್ಟಿಕೊಂಡಿದ್ದು ಮುಮ್ಮಡಿ …

ಪೂರ್ತಿ ಓದಿ...

ಗಿಣಿಯ ಕೆಂಪು ಕೊಕ್ಕು ಮತ್ತು ಕಾಗೆಯ ಸ್ನಾನ

ಗಿಣಿ

ಒಂದು ಸಲ ಪುಟ್ಟ ಗಿಳಿಗೆ ತನ್ನ ಕೊಕ್ಕು ಯಾಕೆ ಕೆಂಪಿದೆ ಅಂತ ಕೇಳಿ ಅಮ್ಮನ ಹತ್ತಿರ ತಿಳಿದುಕೊಳ್ಳಬೇಕೆನಿಸಿತು. ಈಗ್ಯಾಕೆ ಈ ಪ್ರಶ್ನೆ ಬಂತು ಅಂದರೆ ಹೇಳಿಕೇಳಿ ಅದು ಕಾಡು, ಅಲ್ಲಿ ಬೇರೆ ಬೇರೆ ಪಕ್ಷಿಗಳು ಬಂದು ಹೋಗುತ್ತಿದ್ದವು. ಸ್ನೇಹಿತರೂ ಆಗುತ್ತಿದ್ದವು, ಅವುಗಳಲ್ಲಿ ಈ ಗಿಳಿಯೇ ತುಂಬ ಸುಂದರವಾಗಿ ಕಾಣುತ್ತಿತ್ತು, ಅದರ ಸೌಂದರ್ಯ ಕಂಡು ಕೆಲವರು ಖುಷಿ ಪಟ್ಟರೆ ಇನ್ನೂ ಕೆಲ ಪಕ್ಷಿಗಳು ಹೊಟ್ಟೆಕಿಚ್ಚು ತಾಳಲಾರದೇ “ಇದೇನಾಗಿದೆ ನಿನ್ನ ಕೊಕ್ಕಿಗೆ.. ಮೈಯೆಲ್ಲಾ ಹಸಿರು, ಕೊಕ್ಕು ಮಾತ್ರ ಯಾಕೆ ಕೆಂಪು. ಏನು ಮಾಡೋಕ್ಕೆ ಹೋಗಿ ಕೊಕ್ಕನ್ನ ರಕ್ತ …

ಪೂರ್ತಿ ಓದಿ...

ನಮ್ಮ ತಪ್ಪಿಗೆ ನಾವೇ ಜವಾಬ್ದಾರರು

mistakes

ಬಜಗನ್ ಎಂಬ ಸೂಫೀ ಸಂಪ್ರದಾಯ ಮಧ್ಯ ಏಷ್ಯಾದಲ್ಲಿ ಬೆಳೆದು ಭಾರತ ಉಪಖಂಡದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹದಿನಾಲ್ಕನೇ ಶತಮಾನದ ಅಂತ್ಯಭಾಗದಲ್ಲಿದ್ದ ಖಾಜಾ ಬಹಾ­ವುದ್ದೀನ್ ನಕ್ಷಾಬಂದ್ ಈ ಪಂಥದ ಒಬ್ಬ ಮಹಾನ್ ವ್ಯಕ್ತಿ. ಅವನ ಕಾಲಾನಂತರ ಈ ಪಂಥವನ್ನು ನಕ್ಷಾಬಂದೀ ಪಂಥ ಎಂದೇ ಕರೆಯಲಾಯಿತು. ನಕ್ಷಾಬಂದೀ ಪರಂಪರೆಯ ಸೂಫೀ ಸಂತರ ಕಥನ ಕಲೆ ವಿಶೇಷವಾದದ್ದು. ಆ ಕಥೆಯ ಕೊನೆಗೆ ಒಂದು ಸಂದೇಶವನ್ನು ನೀಡುವುದು ಅವರ ಕಲೆ. ಇಂಥ ಒಂದು ಪುಟ್ಟ ಕಥೆ ಹೀಗಿದೆ. ಒಂದು ರಾತ್ರಿ ಒಬ್ಬ ಕಳ್ಳ ಹೊಂಚುಹಾಕಿ ಒಂದು ಮನೆಯಲ್ಲಿ ಕಳ್ಳತನ ಮಾಡಲು …

ಪೂರ್ತಿ ಓದಿ...

ಸುಖೀ ದಾಂಪತ್ಯದ ಗುಟ್ಟು

old couple

ನಾನೊಮ್ಮೆ ಪಾಶ್ಚಾತ್ಯ ದೇಶದಲ್ಲಿದ್ದಾಗ ಒಬ್ಬರು “ನಿಮಗೆ ಮದುವೆಯಾಗಿ ಎಷ್ಟು ವರ್ಷವಾಯಿತು” ? ಎಂದು ಕೇಳಿದರು. ನಾನು “ಇಪ್ಪತ್ತೆಂಟು ವರ್ಷ” ಎಂದೆ, ಆವರು, ” ಒಬ್ಬಳೇ ಹೆಂಡತಿಯೊಂದಿಗೆ ಅಷ್ಟು ವರ್ಷ ಹೇಗಿದ್ದೀರಿ ?” ಎಂದು ಆಶ್ಚರ್ಯ ಪಟ್ಟರು. ನಾನು ಅವರಿಗೆ ಹೇಳಿದೆ, ” ನನ್ನದೇನೂ ವಿಶೇಷವಲ್ಲ, ನನ್ನ ಅಜ್ಜ, ಅಜ್ಜಿ ದಂಪತಿಗಳಾಗಿ ಎಪ್ಪತ್ತು ವರ್ಷಗಳ ಕಾಲ ಇದ್ದರು ” ಅವರಿಗೆ ನಂಬಲಾಗಲಿಲ್ಲ. ನನ್ನಜ್ಜ, ಅಜ್ಜಿ ಚೆನ್ನಾಗಿಯೇ ಬದುಕಿದರು. ಅಂದರೆ ಅವರಲ್ಲಿ ಜಗಳ, ಮನಸ್ತಾಪ , ವಿಚಾರ ಭೇದ ಇರಲಿಲ್ಲವೆಂದಲ್ಲ. ಒಂದೊಂದು ಬಾರಿ ಜಗಳವಾಡುತ್ತಿದ್ದರೆ ಏಳೇಳು ಜನ್ಮದಲ್ಲಿ …

ಪೂರ್ತಿ ಓದಿ...

ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ

home

ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ ಗಂಡ ಹೆಂಡತಿ ಎರಡು ಮಕ್ಕಳಿರುವ ಕುಟುಂಬ… ಒಂದು ದಿವಸ ದುಬೈ ಪೆಸ್ಟಿವಲ್ ಗೆ ಸುತ್ತಲು ಹೋದ ಈ ಕುಟುಂಬ ಗಂಟೆಗಟ್ಟಲೆ ಸುತ್ತಿ ಸಂತೋಷಿಸಿದರು… ಅದರೆಡೆಯಲ್ಲಿ ಅಲ್ಲಿನ ನೂಕುನುಗ್ಗಲಿಗೆ ಅವರ ಮಗನನ್ನು ಕಾಣುವುದಿಲ್ಲ… ಅವರು ಅವನನ್ನು ಹುಡುಕಿ ಹುಡುಕಿ ಸಿಗದಾದಾಗ ಅವನ ತಾಯಿ ಬೊಬ್ಬೆ ಹಾಕಲು ಸುರುಮಾಡಿದರು…. ಬೊಬ್ಬೆ ಕೇಳಿ ಸಾರ್ವಜನಿಕರು ಒಟ್ಟು ಗೂಡಿದರು ಪೋಲಿಸರಿಗೆ ತಿಳಿಸಿದರು ಪೋಲಿಸರು ಗಂಟೆಗಟ್ಟಲೆ ಹುಡುಕಿ ಹೇಗಾದರೂ ಮಗನನ್ನು ಕಂಡುಹಿಡಿದರು ಅವನನ್ನು ತಂದೆ ತಾಯಿಗೆ ಮುಟ್ಟಿಸಿದರು ಮಗನು ಸಿಕ್ಕಿದ ಕೂಡಲೇ …

ಪೂರ್ತಿ ಓದಿ...

ಆಸೆಯೇ ಅಧಃಪತನಕ್ಕೆ ಕಾರಣ

ase

ಮೋಕ್ಷಪುರ ಎಂಬ ಊರಲ್ಲಿ ರಾಮಯ್ಯಶೆಟ್ಟಿ ಎಂಬ ದುರಾಸೆಯ ವ್ಯಕ್ತಿ ಕಿರಾಣಿ ವ್ಯಾಪಾರ ಮಾಡುತ್ತಿದ್ದನು. ತಾನು ಮಾಡುವ ಸರಕಿನ ಮೇಲೆ ವಿಪರೀತವಾಗಿ ಲಾಭಗಳನ್ನು ಆಶಿಸುತ್ತಾ. ತನಗೆ ಮಾರುವವರಿಗೆ ನಷ್ಟ ಮಾಡಿ ಆನಂದಿಸುವ ಮನಸ್ಸು ಆತನದು. ರಾಮಯ್ಯ ಪಟ್ಟಣದಿಂದ ಸರಕುಗಳನ್ನು ತರುವಾಗ ದಾರಿ ಮಧ್ಯದಲ್ಲಿರುವ ಒಂದು ನದಿಯನ್ನು ತೆಪ್ಪದ ಮೂಲಕ ದಾಟಬೇಕಾಗಿತ್ತು. ತೆಪ್ಪದಲ್ಲಿ ಒಬ್ಬ ಮನುಷ್ಯ ಏರಿದಾಗ ತನ್ನೊಂದಿಗೆ ಒಂದು ಮೂಟೆಯನ್ನು ತೆಗೆದುಕೊಂಡು ಹೋದರೆ ಅದಕ್ಕೆ ಪ್ರತ್ಯೇಕ್ಷ ಹಣ ಸಲ್ಲಿಸುವ ಅವಶ್ಯಕತೆ ಇಲ್ಲ. ಈ ಪದ್ಧತಿ ಬಂಡವಾಳ ಮಾಡಿಕೊಂಡು ರಾಮಯ್ಯಶೆಟ್ಟಿ ಅದರಲ್ಲೆಲ್ಲಾ ಕಿರಾಣಿ ಮೂಟೆಗಳನ್ನು ತುಂಬುತ್ತಿದ್ದನು. ತಾನು …

ಪೂರ್ತಿ ಓದಿ...

ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ

mother and son

ಒಂದೂರಿನಲ್ಲಿ ಒಕ್ಕಣ್ಣ ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳು. ಪ್ರತೀ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು. ಹೀಗೆ ಕಾಲಚಕ್ರ ಉರುಳುತಿತ್ತು. ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯ‌ಬಳಿ “ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು” ಕೇಳಿದಾಗ, ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆ ತಾಯಿಗೆ ತನ್ನ ಮಗ ತಾನು ಪಟ್ಟ ಕಷ್ಟ ಪಡದೆ, ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು.ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು. ಮಗು ಹಠ …

ಪೂರ್ತಿ ಓದಿ...