ರಾಷ್ಟ್ರಪುರುಷರ ಕಥೆಗಳು

ಗೋಪಾಲ ಕೃಷ್ಣ ಗೋಖಲೆ – ಜೀವನ ಬರಹ

ಗೋಪಾಲ ಕೃಷ್ಣ ಗೋಖಲೆ ಜನನ ದಿನಾಂಕ:- ಮೇ ೯, ೧೮೬೬ ನಿಧನ ದಿನಾಂಕ:- ಫೆಬ್ರುವರಿ ೧೯, ೧೯೧೫ ಗೋಪಾಲ ಕೃಷ್ಣ ಗೋಖಲೆ (ಮೇ ೯, ೧೮೬೬) ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವಹಿಸುವುದರ ಜೊತೆಗೆ ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದಲ್ಲಿ ಮಹತ್ವದ ಸುಧಾರಣೆಗಳನ್ನು ತಂದವರಾಗಿದ್ದಾರೆ. ಜೀವನ ಸ್ವಾತಂತ್ರ್ಯಪೂರ್ವ ಭಾರತದ ಮಹಾನ್ ರಾಜಕೀಯ ನಾಯಕರೂ ಮತ್ತು ಸಮಾಜ ಸುಧಾರಕರಾಗಿ ಭಾರತೀಯರಿಗೆ ಗೌರವಯುತವಾದ ಉತ್ತಮ ಬದುಕನ್ನು ತಂದುಕೊಡಲು ಶ್ರಮಿಸಿದ ಗೋಪಾಲಕೃಷ್ಣ ಗೋಖಲೆಯವರು ಮೇ ೯, ೧೮೬೬ರಂದು ಕೊಲ್ಹಾಪುರದಲ್ಲಿ ಜನಿಸಿದರು. ಗೋಖಲೆಯವರು ಸಾಮಾನ್ಯ ಕುಟುಂಬಕ್ಕೆ ಸೇರಿದವರಾಗಿದ್ದರೂ ಅವರ ಹಿರಿಯರು …

ಪೂರ್ತಿ ಓದಿ...

ಆದರ್ಶ ರಾಜಕಾರಣಿ – ಭೀಮಸೇನ

bheemasena

ಮಹಾಭಾರತದ ಯುದ್ಧಾನಂತರ ಧರ್ಮರಾಜನು ಪಟ್ಟಾಭಿಷಿಕ್ತನಾಗಿ ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಭೀಮಾರ್ಜುನರ ಸಹಾಯದಿಂದ ರಾಜ್ಯಭಾರವನ್ನು ನಡೆಸುತ್ತಿದ್ದನು. ಕ್ಷತ್ರಿಯ ಸಂಪ್ರದಾಯದಂತೆ ಧೃತರಾಷ್ಟ್ರನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಅರಣ್ಯಕ್ಕೆ ಹೋಗಬೇಕಾಗಿತ್ತು. ಅದರಲ್ಲೂ ತನ್ನ ಪುತ್ರವ್ಯಾಮೋಹದ ತಪ್ಪಿನಿಂದ ಕುರುಕ್ಷೇತ್ರದಲ್ಲಿ ಘೋರವಾದ ಯುದ್ಧವು ನಡೆದು, ಎಲ್ಲ ಮಕ್ಕಳನ್ನೂ ಕಳೆದುಕೊಂಡ ದುರಂತವು ನಡೆದ ಬಳಿಕವೂ ಧೃತರಾಷ್ಟ್ರನಲ್ಲಿ ವೈರಾಗ್ಯವಾಗಲೀ, ಪಶ್ಚಾತ್ತಾಪಗಳಿಂದ ರಾಜ್ಯದ ವೈಭವವನ್ನು ತ್ಯಜಿಸುವ ಮನೋಭಾವನೆಯಾಗಲಿ ಉಂಟಾಗಲಿಲ್ಲ. ಧರ್ಮರಾಜನ ರಾಜೋಪಚಾರವನ್ನು ಪಡೆಯುತ್ತಾ ರಾಜ್ಯದ ಸುಖಭೋಗಗಳಲ್ಲಿಯೇ ಮಗ್ನನಾಗಿದ್ದ. ಭೀಮಸೇನನ ಮತ್ತು ವಿದುರನ ಉಪದೇಶದ ಪರಿಣಾಮವಾಗಿ ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಅರಣ್ಯಕ್ಕೆ ಹೋಗಲು ಸಿದ್ಧನಾದನು. ಯುದ್ಧದಲ್ಲಿ ಮಡಿದ ತನ್ನ ಮಕ್ಕಳಾದ …

ಪೂರ್ತಿ ಓದಿ...

ಪರೀಕ್ಷೆಯ ಪ್ರಶ್ನೆಯನ್ನು ವಿರೋಧಿಸಿ ತುಂಬಿದ ಸಭಾಗೃಹದಿಂದ ಹೊರನಡೆದ ರಾಷ್ಟ್ರಾಭಿಮಾನಿ ಸುಭಾಷಚಂದ್ರ ಬೋಸ್

ನೇತಾಜಿ ಸುಭಾಷಚಂದ್ರ ಬೋಸ್ ‘ಐ.ಸಿ.ಎಸ.’ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್.ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು ಪ್ರಶ್ನೆ ಪತ್ರಿಕೆಯನ್ನು ನೋಡಿ ಕೂಡಲೇ ರೊಚ್ಚಿಗೆದ್ದರು. ಆ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರಕ್ಕೆ ಒಂದು ಪರಿಚ್ಛೇದವನ್ನು ನೀಡಲಾಗಿತ್ತು. ಆ ಪರಿಚ್ಛೇದದ ಶಿರೋನಾಮೆಯು ಮುಂದಿನಂತೆ ಇತ್ತು – ‘Indian Soldiers are generally Dishonest’ (ಅಂದರೆ ‘ಸಾಮಾನ್ಯವಾಗಿ ಭಾರತೀಯ ಸೈನಿಕರು ಅಪ್ರಾಮಾಣಿಕರು’). ಇಂತಹ ವೋಶಯದ ಮೇಲೆ ಇದ್ದ ಆಂಗ್ಲ ಪರಿಚ್ಛೇದವನ್ನು ಪರೀಕ್ಷಾರ್ಥಿಗಳು ಭಾಷಾಂತರ ಮಾಡಬೇಕಿತ್ತು. ಇದನ್ನು ನೋಡಿದ ಸುಭಾಷಚಂದ್ರ ಈ ಪ್ರಶ್ನೆಗೆ …

ಪೂರ್ತಿ ಓದಿ...

ಮನಃಶಾಂತಿ

swami vivekananda

ಒಬ್ಬನು ಮನಶಾಂತಿಯನ್ನು ಹುಡುಕಿಕೊಂಡು ವಿವಿಧ ಆಧಾತ್ಮಿಕ ಗುರುಗಳು ಹೇಳಿದಂತೆ ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದನು. ಅವನು ಒಮ್ಮೆ ಸ್ವಾಮಿ ವಿವೇಕಾನಂದರನ್ನು ಭೇಟಿಯಾಗಿ ’ಸ್ವಾಮೀಜಿ, ನಾನು ಒಂದು ಮುಚ್ಚಿದ ಕೋಣೆಯಲ್ಲಿ ಗಂಟೆಗಟ್ಟೆಲೆ ಕುಳಿತು ಧ್ಯಾನ ಮಾಡುತ್ತೇನೆ, ಅದರೆ ನನಗೆ ಮನಃಶಾಂತಿ ಸಿಗಲಿಲ್ಲ’ ಎಂದು ಹೇಳಿದನು. ಆಗ ಸ್ವಾಮೀ ವಿವೇಕಾನಂದರು ’ ಮೊಟ್ಟಮೊದಲು ನೀನು ನಿನ್ನ ಕೋಣೆಯ ಬಾಗಿಲನ್ನು ತೆರೆದಿಡು. ಅನಂತರ ಹೊರಗೆ ದುಃಖದಲ್ಲಿರುವವರನ್ನು, ಅನಾರೋಗ್ಯದಿಂದ ಬಳಲುವವರನ್ನು ಹಾಗೂ ಹಸಿದವರನ್ನು ನೋಡಿ ಅವರಿಗೆ ನಿನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡು’ ಎಂದು ಹೇಳಿದರು. ಆಗ ಆ ವ್ಯಕ್ತಿಯು ವಿವೇಕಾನಂದರಿಗೆ ’ರೋಗಿಗಳ …

ಪೂರ್ತಿ ಓದಿ...

ಏಕಾಗ್ರತೆಯ ಮಹತ್ವ

vivekananda

ಒಮ್ಮೆ ಸ್ವಾಮೀ ವಿವೇಕಾನಂದರು ಅಮೇರಿಕಾದ ಚಿಕಾಗೊ ಪಟ್ಟಣದ ನದಿಯ ತೀರದಲ್ಲಿ ವಿಹರಿಸುತ್ತಿದ್ದರು. ಆಗ ಅವರಿಗೆ ಕೆಲವು ಹುಡುಗರು ಕೋವಿಯನ್ನು ಹಿಡಿದು ನದಿಯಲ್ಲಿ ತೇಲುತ್ತಿರುವ ಮೊಟ್ಟೆಯ ಚಿಪ್ಪನ ಮೇಲೆ ಗುರಿಯಿಡಲು ಪ್ರಯತ್ನಿಸುತ್ತಿರುವುದು ಕಂಡಿತು. ಅದರೆ ಅಲೆಗಳಿಂದ ಮೊಟ್ಟೆಯ ಚಿಪ್ಪು ಮೇಲೆ ಕೆಳಗೆ ತಿರುಗುತ್ತಿದ್ದರಿಂದ ಅವರಿಗೆ ಗುರಿಯಿಡಲು ಸಾಧ್ಯವಾಗಲ್ಲಿಲ್ಲ. ಬಹಳಷ್ಟು ಬಾರಿ ಪ್ರಯತ್ನಿಸಿಯೂ ಅವರಿಂದ ಮೊಟ್ಟೆಯ ಚಿಪ್ಪಿನ ಮೇಲೆ ಗುರಿಯಿಡಲು ಸಾಧ್ಯವಾಗಲಿಲ್ಲ. ಸ್ವಾಮೀವಿವೇಕಾನಂದರು ಅವರ ಆಟವನ್ನು ಕೂತೂಹಲದಿಂದ ನಿಂತು ನೋಡುತ್ತಿದ್ದರು. ಆಗ ಹುಡುಗರು ಅವರನ್ನು ನೋಡಿ ’ಸರ್, ನೀವು ನಮ್ಮನ್ನು ಆಗಿನಿಂದ ನೋಡುತ್ತಿದ್ದೀರಿ, ನೀವು ಒಂದು ಬಾರಿ …

ಪೂರ್ತಿ ಓದಿ...

೯ ವರ್ಷದ ಜೋರಾವರ ಸಿಂಗ್ ಹಾಗೂ ೭ ವರ್ಷದ ಫತೆಹ ಸಿಂಗ್ ಎಂಬ ಧರ್ಮಯೋಧರು !

singh joravar singh

ಫತೇಹ ಸಿಂಗ್ ಹಾಗೂ ಜೋರಾವರ ಸಿಂಗ್ ಸಿಖ್ಖರ ೧೦ ನೇ ಗುರುಗಳಾದ ಗುರುಗೋವಿಂದಸಿಂಗ್ ರ ಸುಪುತ್ರರಾಗಿದ್ದರು. ಗುರು ಗೋವಿಂದಸಿಂಗ್ ಮೊಘಲರ ವಿರುದ್ಧ ಘೋಷಿಸಿದ ಸ್ವಾತಂತ್ರ್ಯ ಯುದ್ಧದ ಒಂದು ಯುದ್ಧದಲ್ಲಿ ಫತೇಹಸಿಂಗ್ ಹಾಗೂ ಜೋರಾವರಸಿಂಗ್ ತಂದೆಯಿಂದ ಅಗಲಿದ ನಂತರ ಕ್ರೂರಿಯಾದ ಔರಂಗಜೇಬನ ಸರಹಿಂದನ ಸುಬೇದಾರನಾದ ವಝೀರಖಾನನ ಕೈಗೆ ಸಿಕ್ಕಿಬಿದ್ದರು. ವಝೀರ ಖಾನನು ಅವರಿಗೆ ‘ಮುಸಲ್ಮಾನರಾಗಿ ಇಲ್ಲದಿದ್ದರೆ ಕೊಲ್ಲುತ್ತೇನೆ’ ಎಂದು ಬೆದರಿಸಿದನು. ಈ ವಾಕ್ಯ ಕೇಳುತ್ತಲೇ ಆ ಮಕ್ಕಳು ‘ಪ್ರಾಣ ತೆತ್ತರೂ ಚಿಂತೆಯಿಲ್ಲ, ಆದರೆ ನಾವು ಧರ್ಮವನ್ನು ಬಿಡುವುದಿಲ್ಲ ! ನಮಗೆ ನಮ್ಮ ಧರ್ಮ ಪ್ರಾಣಕ್ಕಿಂತಲೂ ಪ್ರಿಯವಾಗಿದೆ. …

ಪೂರ್ತಿ ಓದಿ...