ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ ಈ ಊರಿಗೆ ರಾಮಪುರ ಎಂಬ ಹೆಸರು ಬಂತೆಂದೂ, ಕಾಲಕ್ರಮೇಣ ಜನರ ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತೆಂದೂ ಜನ ಈಗಲೂ ಮಾತಾಡುತ್ತಾರೆ. ಊರ ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರ ಶಿವನನ್ನು ಪೂಜಿಸಿದನಂತೆ ಎಂದು ಇನ್ನೊಂದು ಕತೆಯನ್ನು ಹೇಳುತ್ತಾರೆ. ಈಗ ಹೇಳಲಿರುವ ಕಥೆ ಅದೆಷ್ಟೋ ವರ್ಷಗಳ ಹಿಂದೆ ನಡೆದದ್ದು. ಅಂದರೆ, ರಾಜರ ಆಡಳಿತವಿತ್ತಲ್ಲ? ಆಗ ನಡೆದದ್ದು. ರಾಂಪುರದಲ್ಲಿ ಆಗ ಒಬ್ಬ ಭಿಕ್ಷುಕನಿದ್ದ. …
ಪೂರ್ತಿ ಓದಿ...ಹೆಸರಿನಲ್ಲಿ ಏನಿದೆ?
ಮಹಾತ್ಮರಿಗೊಬ್ಬ ಶಿಷ್ಯನಿದ್ದ. ಅವನ ಹೆಸರು ದುಷ್ಟ ಅಂತ. ಆ ಶಿಷ್ಯನಿಗೆ ತನ್ನ ಹೆಸರಿನ ಬಗ್ಗೆ ಅತೀವವಾದ ನೋವಿತ್ತು. ಕೆಟ್ಟ ಕೆಲಸ ಮಾಡದಿದ್ದರೂ ಲೋಕದ ದೃಷ್ಟಿಯಲ್ಲಿ ದುಷ್ಟನಾದೆನಲ್ಲ ಎಂಬ ಕೊರತೆ ಅವನನ್ನು ಕಾಡುತಿತ್ತು. ಒಂದು ದಿನ ಆತ ಗುರುಗಳ ಬಳಿ ಹೋದ. ತನ್ನ ಸಂಕಟವನ್ನು ತೋಡಿಕೊಂಡ. ಗುರುಗಳು ನಕ್ಕು ನುಡಿದರು. ಹೊರಗಿನ ಪ್ರಪಂಚವನ್ನು ಒಮ್ಮೆ ಸುತ್ತಿ ಬಾ. ಯಾರ್ಯಾರ ಹೆಸರು ಹೇಗಿದೆ ಎಂಬುದನ್ನು ತಿಳಿದುಕೊಂಡು ಬಾ ಎಂದರು. ಗುರುಗಳ ಆಜ್ಞೆಯಂತೆ ಶಿಷ್ಯನು ಲೋಕಸಂಚಾರಕ್ಕೆ ಹೊರಟ. ಮಾರ್ಗಮಧ್ಯೆ ಬಿಕ್ಷುಕನೊಬ್ಬ ಎದುರಾದ. ಅವನೋ ದಟ್ಟದರಿದ್ರ ಆದರೆ ಅವನ ಹೆಸರು …
ಪೂರ್ತಿ ಓದಿ...ವೃದ್ಧೆಯ ಉಪಕಾರ
ಬ್ರಹ್ಮಪುರವೆಂಬ ಪಟ್ಟಣದ ಜನರು ತುಂಬಾ ಭಯಭೀತರಾಗಿದ್ದರು. ಏಕೆಂದರೆ ಸಮೀಪದಲ್ಲಿದ್ದ ಪರ್ವತದ ತುದಿಯಲ್ಲಿ ಘಂಟಾಕರ್ಣನೆಂಬ ರಾಕ್ಷಸನಿರುವನೆಂದು ಅವರು ನಂಬಿದ್ದರು. ಆ ಪ್ರದೇಶದಲ್ಲಿ ಆಗಾಗ ಗಂಟೆಯ ಸಪ್ಪಳವೂ ಕೇಳಿಬರುತ್ತಿತ್ತು. ಆದ್ದರಿಂದ ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಘಂಟಾಕರ್ಣನು ಜನರನ್ನು ತಿನ್ನುತ್ತಾನೆ ಎಂಬ ಸುದ್ದಿ ಹಬ್ಬಲು ಜನರು ಊರು ಬಿಟ್ಟು ಹೋಗತೊಡಗಿದರು. ಅಲ್ಲಿಯ ಅರಸನು ಬಹಳ ಚಿಂತಾಕ್ರಾಂತನಾದನು. ಯಾರಾದರೂ ಘಂಟಾಕರ್ಣನ ಕಾಟವನ್ನು ತಪ್ಪಿಸಿದರೆ ಹೇರಳ ಹಣವನ್ನು ಕೊಡುವುದಾಗಿ ಅರಸ ಡಂಗುರ ಸಾರಿಸಿದನು. ಯಾರು ಆ ಸಾಹಸಕ್ಕೆ ಹೊರಡಲಿಲ್ಲ. ಕೊನೆಗೆ ಒಬ್ಬಳು ವೃದ್ಧೆಗೆ ಡಂಗುರದ ಸುದ್ದಿ ತಿಳಿಯಿತು. ಅವಳು ಜನರ …
ಪೂರ್ತಿ ಓದಿ...ಆಸೆಯೇ ಅಧಃಪತನಕ್ಕೆ ಕಾರಣ
ಮೋಕ್ಷಪುರ ಎಂಬ ಊರಲ್ಲಿ ರಾಮಯ್ಯಶೆಟ್ಟಿ ಎಂಬ ದುರಾಸೆಯ ವ್ಯಕ್ತಿ ಕಿರಾಣಿ ವ್ಯಾಪಾರ ಮಾಡುತ್ತಿದ್ದನು. ತಾನು ಮಾಡುವ ಸರಕಿನ ಮೇಲೆ ವಿಪರೀತವಾಗಿ ಲಾಭಗಳನ್ನು ಆಶಿಸುತ್ತಾ. ತನಗೆ ಮಾರುವವರಿಗೆ ನಷ್ಟ ಮಾಡಿ ಆನಂದಿಸುವ ಮನಸ್ಸು ಆತನದು. ರಾಮಯ್ಯ ಪಟ್ಟಣದಿಂದ ಸರಕುಗಳನ್ನು ತರುವಾಗ ದಾರಿ ಮಧ್ಯದಲ್ಲಿರುವ ಒಂದು ನದಿಯನ್ನು ತೆಪ್ಪದ ಮೂಲಕ ದಾಟಬೇಕಾಗಿತ್ತು. ತೆಪ್ಪದಲ್ಲಿ ಒಬ್ಬ ಮನುಷ್ಯ ಏರಿದಾಗ ತನ್ನೊಂದಿಗೆ ಒಂದು ಮೂಟೆಯನ್ನು ತೆಗೆದುಕೊಂಡು ಹೋದರೆ ಅದಕ್ಕೆ ಪ್ರತ್ಯೇಕ್ಷ ಹಣ ಸಲ್ಲಿಸುವ ಅವಶ್ಯಕತೆ ಇಲ್ಲ. ಈ ಪದ್ಧತಿ ಬಂಡವಾಳ ಮಾಡಿಕೊಂಡು ರಾಮಯ್ಯಶೆಟ್ಟಿ ಅದರಲ್ಲೆಲ್ಲಾ ಕಿರಾಣಿ ಮೂಟೆಗಳನ್ನು ತುಂಬುತ್ತಿದ್ದನು. ತಾನು …
ಪೂರ್ತಿ ಓದಿ...ಮೂರ್ಖ ಮೊಸಳೆ
ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದು ಮುದಿಯಾಗಿತ್ತು. ಪ್ರಾಣಿಗಳನ್ನು ಬೇಟೆ ಆಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅದು ನರಿಯನ್ನು ಕರೆದು, “ನರಿರಾಯ, ನೀನು ಇನ್ನು ಮೇಲೆ ನನ್ನ ಮಂತ್ರಿ. ನಿನ್ನ ಕೆಲಸವೇನೆಂದರೆ ನಂಗೆ ದಿನಕ್ಕೊಂದು ಪ್ರಾಣೀನ ಆಹಾರವಾಗಿ ತಂದುಕೊಡೋದು” ಎಂದಿತು. ಅಳಿದುಳಿದ ಮಾಂಸ ತನಗೆ ಸಿಗುವುದೆಂಬ ಆಶೆಯಿಂದ ನರಿ “ಆಗಲಿ” ಎಂದಿತು. ನದೀತೀರದ ಮರಳಿನ ಮೇಲೆ ಮೊಸಳೆ ಬಿಸಲಿಗೆ ಮೈ ಕಾಯಿಸಿಕೊಳ್ಳುತ್ತಾ ಮಲಗಿತ್ತು. ನರಿ ಪ್ರಾಣಿಯನ್ನು ಹುಡುಕಿ ಕೊಂಡು ಕಾಡಿನೊಳಗೆ ಹೋಯಿತು. ಅದರ ಎದುರಿಗೆ ಮೊಲವೊಂದು ಸಿಕ್ಕಿದಾಗ ನರಿ, “ಮೊಲರಾಯ, ಮೊಸಳೆ ನಿನ್ನ ಹತ್ತಿರ …
ಪೂರ್ತಿ ಓದಿ...ಕತ್ತೆಯ ಉಪಾಯ
ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ. ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ “ಎಂಥಾ ಜನ್ಮವಪ್ಪಾ ನಿಂದೂ? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗೋದೇ ನಿನ್ನ ಹಣೆ ಬರಹವಾಯ್ತು ಅಲ್ವಾ! ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ. ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ.” ಎಂದು ಪರಿಹಾಸ್ಯ ಮಾಡಿ ನಕ್ಕಿತು. ಈ ಮಾತು ಕೇಳಿ ಕತ್ತೆಗೆ ತುಂಬಾ …
ಪೂರ್ತಿ ಓದಿ...ಭೂತದ ಕಾಟ
ರಜೆಯ ಕಾಲ ಎಂದರೆ ಮಾಜದ ಕಾಲ ಎಂದೇ ಪುಟ್ಟಣ್ಣ ಮತ್ತು ಚಿಟ್ಟೆಯ ನಂಬಿಕೆ. ಶಾಲೆಗೆ ರಜೆ ಬಂತೆಂದರೆ ಸಾಕು ಹಳ್ಳಿಯಲ್ಲಿರುವ ಅಜ್ಜನ ಮನೆ ಅವರನ್ನು ಕರೆಯುತ್ತಿತ್ತು. ತೋಟ ಸುತ್ತವ ಕಾಡು ಹಣ್ಣುಗಳನ್ನು ಹೆಕ್ಕುವ, ತೊರೆಯ ನೀರಲ್ಲಿ ಮೀನಾಗಿ ಈಜುವ ಮಕ್ಕಳ ಕನಸು ರಜೆಯಲ್ಲಿ ಸಾಕಾರಗೊಳ್ಳುತ್ತಿತ್ತು. ಎಂದಿನಂತೆ ಈ ಸಲವೂ ಅಜ್ಜನ ಮನೆ ಸೇರಿದ ಮಕ್ಕಳಿಗೆ ಊರಲ್ಲಿ ಕೇಳಿದ ಹೊಸ ಸುದ್ಧಿ ಹೆದರಿಕೆಯನ್ನು, ಕುತೂಹಲವನ್ನು ಹುಟ್ಟಿಸಿತ್ತು. ಅವರ ಮನೆಯಿಂದ ಒಂದೆರಡು ಫರ್ಲಾಂಗು ದೂರ ಇದ್ದ ಹುಲ್ಲಿನ ಛಾವಣಿಯ ಮನೆಯದು. ಹಗಲು ಹೊತ್ತಿನಲ್ಲಿ ಅಲ್ಲಿ ವಿಶೇಷವೇನೂ ಕಾಣದಿದ್ದರೂ …
ಪೂರ್ತಿ ಓದಿ...ನೀವು ಕೊಟ್ಟದ್ದು ನಿಮಗೇ
ಬಹಳ ಹಿಂದೆ ಶಿವಪುರವೆಂಬ ಊರಿತ್ತು. ಆ ಊರಿನಲ್ಲಿ ರಾಮಪ್ಪನೆಂಬ ಶ್ರೀಮಂತನಿದ್ದ. ಅವನು ಬಡವರಿಗೆ ಸಹಾಯ ಮಾಡದೆ ಬರೀ ತನ್ನ ದೊಡ್ಡಸ್ತಿಕೆಯನ್ನು ಎಲ್ಲರಿಗೆ ಹೇಳಿಕೊಳ್ಳುತ್ತಿದ್ದ. ಇತರರು ಮಾಡಿದ ಸಹಾಯವನ್ನು ತನ್ನದೆಂದೇ ಹೇಳುತ್ತಿದ್ದ. ಅವನ ಮನೆಯ ಸಮೀಪದಲ್ಲಿ ಧರ್ಮಯ್ಯನೆಂಬ ಬಡವನಿದ್ದ. ಅವನು ಇತರರಿಗೆ ತನ್ನ ಕೈಲಾದ ನೆರವು ನೀಡುತ್ತಿದ್ದ. ಆಗ ಶ್ರೀಮಂತ ರಾಮಪ್ಪ ಆ ಕೆಲಸದ ಸಹಾಯವನ್ನು ಧರ್ಮಯ್ಯನ ಮೂಲಕ ತಾನೇ ಮಾಡಿಸಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಧರ್ಮಯ್ಯ ನಕ್ಕು ಸುಮ್ಮನಾಗುತ್ತಿದ್ದ. ಶಿವಪುರ ಊರಿನ ಹತ್ತಿರ ಒಂದು ಗುಡ್ಡವಿತ್ತು. ಆ ಗುಡ್ಡದಲ್ಲಿ ಒಬ್ಬ ಸಾಧು ವಾಸವಾಗಿದ್ದ. ಅವನು ಜನರ …
ಪೂರ್ತಿ ಓದಿ...ಜೇನು ತಂದ ಸೌಭಾಗ್ಯ
ಬೀಳಿಗಿಯ ಯಂಕಪ್ಪ, ದಿನಾಲೂ ಊರಿನ ದನಗಾಹಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ತುಂಬಾ ಬಡತನ. ಹೆಂಡತಿ ಹಾಗೂ ಬೆಳೆದು ನಿಂತ ಮಗಳೊಂದಿಗೆ ಜೀವನ ನಡೆಸುತ್ತಿದ್ದ. ಊರಿನ ಜನ ವರ್ಷಕ್ಕೊಮ್ಮೆ ನೀಡುತ್ತಿದ್ದ ಜೋಳ, ಕಾಳುಕಡಿ, ಅಲ್ಪ ಮೊತ್ತದ ಹಣ, ಜೀವನಕ್ಕೆ ಸಾಲುತ್ತಿರಲಿಲ್ಲ. ದನಗಳು ಹಾಕಿದ ಸೆಗಣಿಯ ಸಂಗ್ರಹದ ಮಾರಾಟದಿಂದ ಬಂದ ಅಲ್ಪಸ್ವಲ್ಪ ಹಣದಿಂದ ಹೊಟ್ಟೆ ಹೊರೆಯಲು ಅನುಕೂಲವಾಗುತ್ತಿತ್ತು. ಬೆಳಗಿನ ಜಾವ ಊರ ಹೊರ ಬಯಲಿನಲ್ಲಿ ಎಲ್ಲಾ ದನಗಳನ್ನು ನಿಲ್ಲಿಸಿ ನಂತರ ಸಮೀಪದ ಸಿದ್ಧೇಶ್ವರ ದೇವಸ್ಥಾನದ ಕಾಡಿಗೆ ಮೇಯಿಸಲು ತೆರಳುತ್ತಿದ್ದ. ಮಧ್ಯಾಹ್ನ ಸಮಯದಲ್ಲಿ, ಹಸಿರು ಮೇಯಿಸಿದ ದನಗಳು ಗಿಡಗಳ …
ಪೂರ್ತಿ ಓದಿ...ನಾಯಿಯ ಬುದ್ಧಿ
ಒಂದು ಊರಿನಲ್ಲಿ ಎರಡು ನಾಯಿಗಳು ಇದ್ದವು. ಅವು ತಾವು ಒಳ್ಳೆಯ ಗೆಳೆಯರೆಂದು ಅಂದುಕೊಂಡಿದ್ದವು. ಒಂದು ಬಿಳಿ ಬಣ್ಣದ್ದು ಬಿಳಿಯ, ಇನ್ನೊಂದು ಕಪ್ಪು ಬಣ್ಣದ ಕರಿಯ. ಒಂದು ದಿನ ಕರಿಯ ಮತ್ತು ಬಿಳಿಯ ಎರಡೂ ಸೇರಿ ಊರ ಹೊರತನಕ ಬಂದು ಬಿಟ್ಟವು. ಚೆಂದವಾಗಿ ಆಟವಾಡುತ್ತಾ ಮೈಮರೆತಿದ್ದವು. ಆಗ ಹತ್ತಿರದ ಪೊದೆಯಲ್ಲಿ ಸದ್ದಾಗಿ ಅವುಗಳಲ್ಲಿನ ಬೇಟೆಗಾರ ಜಾಗ್ರತನಾದ. ಒಮ್ಮೆಲೇ ಪೊದೆಯತ್ತ ದಾಳಿ ಮಾಡಿದರೆ ಸಿಕ್ಕಿತೊಂದು ಕಾಡುಕೋಳಿ. ಒಂದೇ ಹಕ್ಕಿ ಎರಡೂ ನಾಯಿಗಳ ಬಾಯಿಯಲ್ಲಿ. ಅದು ತನ್ನ ಬೇಟೆ ಎಂದು ಎರಡೂ ಕಿತ್ತಾಡುತ್ತಿದ್ದಾಗ ನಡುವೆ ಬಂತೊಂದು ಚಿರತೆ! ಇವುಗಳು …
ಪೂರ್ತಿ ಓದಿ...