ಹೆಂಗಸಿನ ಬುದ್ಧಿ ಮೊಳಕಾಲು ಕೆಳಗೆ ಎಂಬ ಗಾದೆಯನ್ನೂ ಸಹ ದೂಷಿಸುತ್ತ, ‘ಹೆಣ್ಣು ಹೆರಲಿಕ್ಕೆಂದೇ ಇರುವ ಯಂತ್ರವಲ್ಲ, ಅಡುಗೆ ಮನೆಗೆ ಸೀಮಿತಳಲ್ಲ. ಗಂಡಿಲ್ಲದೆಯೂ ಹೆಣ್ಣು ಪರಿಪೂರ್ಣಳು. ಪುರುಷನೆಂಬ ವೃಕ್ಷ ಕ್ಕೆ ಹಬ್ಬುವ ಬಳ್ಳಿಯಲ್ಲ ಹೆಣ್ಣು, ಅವನ ಅಸ್ತಿತ್ವವನ್ನು ಹಿಡಿದು ಭದ್ರಗೊಳಿಸುವ ಬೇರು ಹೆಣ್ಣು. ಹೆಣ್ಣು ಗಂಡು ಪ್ರಕೃತಿಯ ದೃಷ್ಟಿಯಲ್ಲಿ ಸರಿ ಸಮಾನರಾಗಿರುವಾಗ ಸಾಮಾಜಿಕವಾಗಿ ಸಮಾನತೆ ಹೆಣ್ಣಿಗೇಕೆ ದೊರೆಯುತ್ತಿಲ್ಲ’ ಎಂದೆಲ್ಲ ಭಯಂಕರ ಭಾಷಣಕ್ಕೆ ನಿಂತರೆ ಅವಳನ್ನು ಮೀರಿಸಲು ಯಾರಿಂದಲೂ ಶಕ್ಯವಿಲ್ಲ. ಮರುದಿನ ಪ್ರತಿಷ್ಠಿತ ಕಾಲೇಜಿನಲ್ಲಿ ‘ಹೆಣ್ಣಿಗೆ ಸಮಾನತೆ ಬೇಕೇ ಬೇಡವೇ’ ಎಂಬ ವಿಷಯದ ಮೇಲಿನ ಚರ್ಚಾಸ್ಪರ್ಧೆಯಲ್ಲಿ ವಿಷಯದ …
ಪೂರ್ತಿ ಓದಿ...ಲಂಗ ದವಣಿ ಎತ್ತಗೋತೆ ಕಾಲೇಜ್ ಹುಡುಗೀರ, ಲೇ ಲೇ
ಕರ್ನಾಟಕ ಪೋಲೀಸ್ ಬಗ್ಗೆ ಸಾಮಾನ್ಯವಾಗಿ ಯಾರಿಗೂ ಗೊತ್ತಿಲ್ಲದಿರುವ 14 ಐತಿಹಾಸಿಕ ಸತ್ಯಗಳು
ಕರ್ನಾಟಕಲ್ಲಿ ಪೊಲೀಸ್ ವ್ಯವಸ್ಥೆಗೆ ಸುಮಾರು 200ಕ್ಕೂ ಹೆಚ್ಚು ವರ್ಷದ ಇತಿಹಾಸ ಇದೆ. ಬೇರೆ ಬೇರೆ ಕಾಲಮಾನದಲ್ಲಿ ಬೇರೆ ಬೇರೆ ಥರ ವ್ಯವಸ್ಥೆಗಳನ್ನ ಕಂಡು ಬೆಳೆದಿದೆ ನಮ್ಮ ಕರ್ನಾಟಕ ಪೊಲೀಸ್ ವ್ಯವಸ್ಥೆ. ಬನ್ನಿ ಚುಟುಕಾಗಿ ಎಲ್ಲಾ ತಿಳ್ಕೊಳೋರಂತೆ… 1. ಮೊದಲು ನಮ್ಮಲ್ಲಿ ಪೋಲೀಸ್ನೋರು ಅಂತ ಯಾರೂ ಇರ್ಲಿಲ್ಲ ಆದ್ರೆ ತೋಟಿ-ತಳವಾರರು, ಅಮಲ್ದಾರರು, ಕಟ್ಟುಬಿಡಿ, ನೀರಗಂಟೆ, ಹೀಗೆ ಬೇರೆ ಬೇರೆ ಹೆಸರಿನ ಕಸುಬಿನೋರು ಇವತ್ತು ಪೊಲೀಸ್ನೋರು ಮಾಡೋ ಬೇರ್ ಬೇರೆ ಕೆಲ್ಸ ಮಾಡ್ತಿದ್ರು. 2. ಮೈಸೂರು ಸಂಸ್ಥಾನದಲ್ಲಿ ಮೊದಲ ಸಲ ಪೊಲೀಸ್ ಅನ್ನೋ ಹುದ್ದೆ ಹುಟ್ಟಿಕೊಂಡಿದ್ದು ಮುಮ್ಮಡಿ …
ಪೂರ್ತಿ ಓದಿ...ಗಿಣಿಯ ಕೆಂಪು ಕೊಕ್ಕು ಮತ್ತು ಕಾಗೆಯ ಸ್ನಾನ
ಒಂದು ಸಲ ಪುಟ್ಟ ಗಿಳಿಗೆ ತನ್ನ ಕೊಕ್ಕು ಯಾಕೆ ಕೆಂಪಿದೆ ಅಂತ ಕೇಳಿ ಅಮ್ಮನ ಹತ್ತಿರ ತಿಳಿದುಕೊಳ್ಳಬೇಕೆನಿಸಿತು. ಈಗ್ಯಾಕೆ ಈ ಪ್ರಶ್ನೆ ಬಂತು ಅಂದರೆ ಹೇಳಿಕೇಳಿ ಅದು ಕಾಡು, ಅಲ್ಲಿ ಬೇರೆ ಬೇರೆ ಪಕ್ಷಿಗಳು ಬಂದು ಹೋಗುತ್ತಿದ್ದವು. ಸ್ನೇಹಿತರೂ ಆಗುತ್ತಿದ್ದವು, ಅವುಗಳಲ್ಲಿ ಈ ಗಿಳಿಯೇ ತುಂಬ ಸುಂದರವಾಗಿ ಕಾಣುತ್ತಿತ್ತು, ಅದರ ಸೌಂದರ್ಯ ಕಂಡು ಕೆಲವರು ಖುಷಿ ಪಟ್ಟರೆ ಇನ್ನೂ ಕೆಲ ಪಕ್ಷಿಗಳು ಹೊಟ್ಟೆಕಿಚ್ಚು ತಾಳಲಾರದೇ “ಇದೇನಾಗಿದೆ ನಿನ್ನ ಕೊಕ್ಕಿಗೆ.. ಮೈಯೆಲ್ಲಾ ಹಸಿರು, ಕೊಕ್ಕು ಮಾತ್ರ ಯಾಕೆ ಕೆಂಪು. ಏನು ಮಾಡೋಕ್ಕೆ ಹೋಗಿ ಕೊಕ್ಕನ್ನ ರಕ್ತ …
ಪೂರ್ತಿ ಓದಿ...ನಮ್ಮ ತಪ್ಪಿಗೆ ನಾವೇ ಜವಾಬ್ದಾರರು
ಬಜಗನ್ ಎಂಬ ಸೂಫೀ ಸಂಪ್ರದಾಯ ಮಧ್ಯ ಏಷ್ಯಾದಲ್ಲಿ ಬೆಳೆದು ಭಾರತ ಉಪಖಂಡದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹದಿನಾಲ್ಕನೇ ಶತಮಾನದ ಅಂತ್ಯಭಾಗದಲ್ಲಿದ್ದ ಖಾಜಾ ಬಹಾವುದ್ದೀನ್ ನಕ್ಷಾಬಂದ್ ಈ ಪಂಥದ ಒಬ್ಬ ಮಹಾನ್ ವ್ಯಕ್ತಿ. ಅವನ ಕಾಲಾನಂತರ ಈ ಪಂಥವನ್ನು ನಕ್ಷಾಬಂದೀ ಪಂಥ ಎಂದೇ ಕರೆಯಲಾಯಿತು. ನಕ್ಷಾಬಂದೀ ಪರಂಪರೆಯ ಸೂಫೀ ಸಂತರ ಕಥನ ಕಲೆ ವಿಶೇಷವಾದದ್ದು. ಆ ಕಥೆಯ ಕೊನೆಗೆ ಒಂದು ಸಂದೇಶವನ್ನು ನೀಡುವುದು ಅವರ ಕಲೆ. ಇಂಥ ಒಂದು ಪುಟ್ಟ ಕಥೆ ಹೀಗಿದೆ. ಒಂದು ರಾತ್ರಿ ಒಬ್ಬ ಕಳ್ಳ ಹೊಂಚುಹಾಕಿ ಒಂದು ಮನೆಯಲ್ಲಿ ಕಳ್ಳತನ ಮಾಡಲು …
ಪೂರ್ತಿ ಓದಿ...ಸುಖೀ ದಾಂಪತ್ಯದ ಗುಟ್ಟು
ನಾನೊಮ್ಮೆ ಪಾಶ್ಚಾತ್ಯ ದೇಶದಲ್ಲಿದ್ದಾಗ ಒಬ್ಬರು “ನಿಮಗೆ ಮದುವೆಯಾಗಿ ಎಷ್ಟು ವರ್ಷವಾಯಿತು” ? ಎಂದು ಕೇಳಿದರು. ನಾನು “ಇಪ್ಪತ್ತೆಂಟು ವರ್ಷ” ಎಂದೆ, ಆವರು, ” ಒಬ್ಬಳೇ ಹೆಂಡತಿಯೊಂದಿಗೆ ಅಷ್ಟು ವರ್ಷ ಹೇಗಿದ್ದೀರಿ ?” ಎಂದು ಆಶ್ಚರ್ಯ ಪಟ್ಟರು. ನಾನು ಅವರಿಗೆ ಹೇಳಿದೆ, ” ನನ್ನದೇನೂ ವಿಶೇಷವಲ್ಲ, ನನ್ನ ಅಜ್ಜ, ಅಜ್ಜಿ ದಂಪತಿಗಳಾಗಿ ಎಪ್ಪತ್ತು ವರ್ಷಗಳ ಕಾಲ ಇದ್ದರು ” ಅವರಿಗೆ ನಂಬಲಾಗಲಿಲ್ಲ. ನನ್ನಜ್ಜ, ಅಜ್ಜಿ ಚೆನ್ನಾಗಿಯೇ ಬದುಕಿದರು. ಅಂದರೆ ಅವರಲ್ಲಿ ಜಗಳ, ಮನಸ್ತಾಪ , ವಿಚಾರ ಭೇದ ಇರಲಿಲ್ಲವೆಂದಲ್ಲ. ಒಂದೊಂದು ಬಾರಿ ಜಗಳವಾಡುತ್ತಿದ್ದರೆ ಏಳೇಳು ಜನ್ಮದಲ್ಲಿ …
ಪೂರ್ತಿ ಓದಿ...ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ
ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ ಗಂಡ ಹೆಂಡತಿ ಎರಡು ಮಕ್ಕಳಿರುವ ಕುಟುಂಬ… ಒಂದು ದಿವಸ ದುಬೈ ಪೆಸ್ಟಿವಲ್ ಗೆ ಸುತ್ತಲು ಹೋದ ಈ ಕುಟುಂಬ ಗಂಟೆಗಟ್ಟಲೆ ಸುತ್ತಿ ಸಂತೋಷಿಸಿದರು… ಅದರೆಡೆಯಲ್ಲಿ ಅಲ್ಲಿನ ನೂಕುನುಗ್ಗಲಿಗೆ ಅವರ ಮಗನನ್ನು ಕಾಣುವುದಿಲ್ಲ… ಅವರು ಅವನನ್ನು ಹುಡುಕಿ ಹುಡುಕಿ ಸಿಗದಾದಾಗ ಅವನ ತಾಯಿ ಬೊಬ್ಬೆ ಹಾಕಲು ಸುರುಮಾಡಿದರು…. ಬೊಬ್ಬೆ ಕೇಳಿ ಸಾರ್ವಜನಿಕರು ಒಟ್ಟು ಗೂಡಿದರು ಪೋಲಿಸರಿಗೆ ತಿಳಿಸಿದರು ಪೋಲಿಸರು ಗಂಟೆಗಟ್ಟಲೆ ಹುಡುಕಿ ಹೇಗಾದರೂ ಮಗನನ್ನು ಕಂಡುಹಿಡಿದರು ಅವನನ್ನು ತಂದೆ ತಾಯಿಗೆ ಮುಟ್ಟಿಸಿದರು ಮಗನು ಸಿಕ್ಕಿದ ಕೂಡಲೇ …
ಪೂರ್ತಿ ಓದಿ...ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ
ಒಂದೂರಿನಲ್ಲಿ ಒಕ್ಕಣ್ಣ ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳು. ಪ್ರತೀ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು. ಹೀಗೆ ಕಾಲಚಕ್ರ ಉರುಳುತಿತ್ತು. ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯಬಳಿ “ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು” ಕೇಳಿದಾಗ, ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆ ತಾಯಿಗೆ ತನ್ನ ಮಗ ತಾನು ಪಟ್ಟ ಕಷ್ಟ ಪಡದೆ, ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು.ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು. ಮಗು ಹಠ …
ಪೂರ್ತಿ ಓದಿ...ಜೋನ್ ಆಫ್ ಆರ್ಕ್
ಫ್ರಾನ್ಸ್ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿದ್ದ ಕಾಲವದು. ಫ್ರಾನ್ಸ್ಗೆ ಹೆಸರಿಗೊಬ್ಬ ರಾಜನಿದ್ದನು ಅವನು ಆಂಗ್ಲರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದನು. ಇಂತಹ ದಿನಗಳಲ್ಲಿ ಒಮ್ಮೆ ಫ್ರಾನ್ಸ್ನ ಬೀದಿಯಲ್ಲಿ ಮಲಗಿದ್ದ ಅನಾಥ ಬಾಲಕಿಯೊಬ್ಬಳಿಗೆ ಕನಸೊಂದು ಬಿದ್ದಿತು. ಆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು ಫ್ರಾನ್ಸ್ನ್ನು ಬ್ರಿಟಿಷರಿಂದ ಮುಕ್ತಗೊಳಿಸುವಂತೆ ಬಾಲಕಿಗೆ ಆದೇಶವಿತ್ತರಂತೆ. ಆದರೆ, ದೇಶಕ್ಕೆ ದೇಶವೇ ಮಹಾರಾಜನಿಂದ ಹಿಡಿದು ಎಲ್ಲರೂ ಬ್ರಿಟಿಷರ ಅಡಿಯಾಳಾಗಿರುವಾಗ ಕೇವಲ ೧೩ ವರ್ಷ ವಯಸ್ಸಿನ ಆ ಹುಡುಗಿಯಿಂದ ಫ್ರಾನ್ಸ್ ಗೆ ಸ್ವಾತಂತ್ರ ಕೊಡಿಸಲಾದೀತೇ? ಆದರೆ, ಆ ಬಾಲಕಿ ಧೃತಿಗೆಡದೆ ಸಂತವಾಣಿಯಿಂದ ಪ್ರಭಾವಿತಳಾದವಳಂತೆ ನೇರವಾಗಿ ಸೇನಾ …
ಪೂರ್ತಿ ಓದಿ...ಅಪ್ರತಿಮ ವೀರ ಏಕಲವ್ಯನ ಸಾವಿಗೆ ಶ್ರೀಕೃಷ್ಣ ಕಾರಣನೇ?
ಮಹಾಭಾರತವನ್ನು ಆಧರಿಸಿದ ಕಥೆಗಳು ಜನರಿಂದ ಜನರಿಗೆ ದಾಟುತ್ತಾ ಹೋದಂತೆ ಮೂಲಕಥೆಯಿಂದ ಸ್ವಲ್ಪಸ್ವಲ್ಪವಾಗಿ ಬದಲಾವಣೆ ಪಡೆಯುತ್ತಾ ಇಂದು ಮೂಲಕಥೆಗೂ ಭಿನ್ನವಾಗಿ ಮೂಲಕಥೆಯ ಸತ್ಯತೆಯನ್ನೇ ಪ್ರಶ್ನಿಸುವಂತಾಗಿದೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಮತ್ತು ಕೆಟ್ಟ ಮುಖಗಳಿವೆ. ಇದಕ್ಕೆ ಭಗವಾನ್ ಕೃಷ್ಣನೂ ಹೊರತಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ಉದಾಹರಣೆಗೆ ಗಾಂಧಾರಿಗೆ ಕಣ್ಣಿದ್ದೂ ಗಂಡನಿಗೆ ಕಣ್ಣಿಲ್ಲದ ಕಾರಣ ಕಣ್ಣಿಗೆ ಪಟ್ಟಿಕಟ್ಟಿ ಗಂಡನ ಕುರುಡಿನಲ್ಲಿ ಭಾಗಿಯಾಗುವ ಮೂಲಕ ಪಾತಿವ್ರತೆಯ ಮಹತ್ವವನ್ನು ಕೊಂಡಾಡಿದರೆ ಮಗ ದುರ್ಯೋಧನ ಮಾಡುತ್ತಿರುವುದು ತಪ್ಪು ಎಂದು ತಿಳಿದೂ ತನ್ನ ಕಣ್ಣಿನ …
ಪೂರ್ತಿ ಓದಿ...