ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ ಸುಪ್ರಭಾತದಿಂದ ಹಿಡಿದು ಶಯನ ಗೃಹಕ್ಕೆ ದೊರೆ ಹೋಗುವವರೆಗೂ ಅವನ ಎಲ್ಲ ಬೇಕು ಬೇಡಗಳನ್ನು ಇವನೇ ನೋಡಿಕೊಳ್ಳುವನು. ಒಂದು ದಿನ ಅವನಿಗೊಂದು ಕೆಟ್ಟ ಆಲೋಚನೆ ಬಂತು. ಯಾರದೋ ದುರ್ಬೋಧನೆ. ” ಎಷ್ಟು ದಿನ ಈ ಊಳಿಗ! ಇನ್ನಾದರೂ ನೆಮ್ಮದಿ ಬೇಡವೇ ” ಎಂದೆಲ್ಲ. ದೊರೆ ಮಲಗುವ ಮುನ್ನ ತನ್ನೆಲ್ಲ ಆಭರಣಗಳನ್ನೂ ಕಳಚಿ ಇವನ ಕೈಗೇ ಕೊಡುತ್ತಿದ್ದ. ಈ ವೃದ್ಧ ಸೇವಕ ಅವನ್ನೆಲ್ಲಾ ಒಪ್ಪವಾಗಿ ತೆಗೆದಿಟ್ಟು …
ಪೂರ್ತಿ ಓದಿ...3 ಸಹೋದರರು ಹಾಗೂ ಒಂದು ಸಹೋದರಿ
ಒಂದು ಮನೆಯಲ್ಲಿ 3 ಸಹೋದರರು ಹಾಗೂ ಒಂದು ಸಹೋದರಿ ಇದ್ದಳು, ದೊಡ್ಡವನು ಮತ್ತು ಕಿರಿಯವನು ಓದುವುದರಲ್ಲಿ ತುಂಬಾ ಜಾಣರು ಆದರೆ ಎರಡನೆಯವನು ಓದುವುದರಲ್ಲಿ ದಡ್ಡನಾಗಿದ್ದ. ತಂದೆ – ತಾಯಿ ತನ್ನ ನಾಲ್ಕು ಮಕ್ಕಳನ್ನು ತುಂಬಾ ಪ್ರೀತಿ ಮಾಡುತಿದ್ದರು. ದೊಡ್ಡ ಮಗ ಚೆನ್ನಾಗಿ ಓದಿಕೊಂಡು ಡಾಕ್ಟರ್ ಆದನು ಹಾಗೆ ಕಿರಿಯವನು ಇಂಜಿನಿಯರ್ ಆದನು ಎರಡನೆಯವನು ದಡ್ಡನಾಗಿಯೇ ಉಳಿದು ಬಿಟ್ಟ, ಮೊದಲನೆಯವನು ಹಾಗೂ ಕಿರಿಯವನು ಹುಡುಗಿಯನ್ನು ಪ್ರೀತಿಸಿ ಅವರೊಟ್ಟಿಗೆ ಮದುವೆ ಆಗುತ್ತಾರೆ, ಜೊತೆಗೆ ತಂಗಿಯನ್ನು ಸಹ ಒಂದು ಒಳ್ಳೆ ಮನೆಯಲ್ಲಿ ಮದುವೆ ಮಾಡಿ ಕೊಡುತ್ತಾರೆ. ತಂಗಿ ತಾಯಿ …
ಪೂರ್ತಿ ಓದಿ...ಸ್ವರ್ಗ
ಅಂದು ತರಗತಿಗೆ ಬಂದ ಶಿಕ್ಷಕಿ, ಮಕ್ಕಳ ಸಂಸ್ಕಾರವನ್ನ ಪರೀಕ್ಷೆ ಮಾಡಬೇಕೆಂದು ಕೊಂಡರು..!! ತರಗತಿಯಲ್ಲಿದ್ದ ಮಕ್ಕಳಿಗೆ ನಾಳೆ ಬರುವಾಗ *ಸ್ವರ್ಗದಿಂದ ಮಣ್ಣು* ತರಬೇಕೆಂದು ಹೇಳಿದರು. ಹಲವಾರು ಮಕ್ಕಳಿಗೆ ಸ್ವರ್ಗ ಎಂದರೆ ಏನು ಎಂದೇ ತಿಳಿದಿರಲಿಲ್ಲ, ಮನೆಗೆ ಹೋದ ಮಕ್ಕಳು ತಮ್ಮ ಪೋಷಕರ ಬಳಿ ಶಿಕ್ಷಕಿ ಹೇಳಿದ ಮಾತು ಹೇಳಿದರು.. ಪೋಷಕರು “ನಿಮ್ಮ ಶಿಕ್ಷಕಿಗೆ ತಲೆ ಕೆಟ್ಟಿದೆ, ಸ್ವರ್ಗದಿಂದ ಮಣ್ಣು ತರಲು ಸಾಧ್ಯವೇ ಇಲ್ಲಾ..! ಪುರಾಣಗಳ ಪ್ರಕಾರ ನಾವು ಸತ್ತ ನಂತರವಷ್ಟೇ ಸ್ವರ್ಗಕ್ಕೆ ಹೋಗಲು ಸಾಧ್ಯ, ಬೇಕಾದಾಗೆಲ್ಲ ಹೋಗಿ ಬರಲು ಅದೇನು ಪಕ್ಕದ ಊರೇ” ಎಂದು ಕೋಪದಿಂದ ಉತ್ತರ ನೀಡಿದರು……!! …
ಪೂರ್ತಿ ಓದಿ...ಜೀವನ ಚೈತ್ರ
ಜೀವನ ಚೈತ್ರ – ೧೯೯೨ರಲ್ಲಿ ಬಿಡುಗಡೆಯಾದ, ದೊರೈ- ಭಗವಾನ್ ನಿರ್ದೇಶಿಸಿರುವ ಕನ್ನಡ ಚಲನಚಿತ್ರ. ಈ ಚಿತ್ರದಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ. ಈ ಚಿತ್ರ ೩ ವರ್ಷಗಳ ನಂತರ ಚಿತ್ರರಂಗಕ್ಕೆ ರಾಜ್ ಕುಮಾರ್ರವರ ಮರುಪ್ರವೇಶವಾಗಿತ್ತು. ಇದೊಂದು ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ. ಪ್ರಾರಂಭದಲ್ಲಿ ಈ ಚಿತ್ರವನ್ನು ಸಿಂಹಾದ್ರಿಯ ಸಿಂಹ ಎಂದು ಹೆಸರಿಸಲಾಗಿತ್ತು. ಈ ಚಿತ್ರದಿಂದ ರಾಜ್ ಕುಮಾರ್ ಕನ್ನಡ ಪ್ರೇಕ್ಷಕರ ಮೇಲಿನ ತಮ್ಮ …
ಪೂರ್ತಿ ಓದಿ...ಗೋಪಾಲ ಕೃಷ್ಣ ಗೋಖಲೆ – ಜೀವನ ಬರಹ
ಗೋಪಾಲ ಕೃಷ್ಣ ಗೋಖಲೆ ಜನನ ದಿನಾಂಕ:- ಮೇ ೯, ೧೮೬೬ ನಿಧನ ದಿನಾಂಕ:- ಫೆಬ್ರುವರಿ ೧೯, ೧೯೧೫ ಗೋಪಾಲ ಕೃಷ್ಣ ಗೋಖಲೆ (ಮೇ ೯, ೧೮೬೬) ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವಹಿಸುವುದರ ಜೊತೆಗೆ ಬ್ರಿಟಿಷರ ಆಡಳಿತ ಕಾಲದಲ್ಲಿ ಭಾರತದಲ್ಲಿ ಮಹತ್ವದ ಸುಧಾರಣೆಗಳನ್ನು ತಂದವರಾಗಿದ್ದಾರೆ. ಜೀವನ ಸ್ವಾತಂತ್ರ್ಯಪೂರ್ವ ಭಾರತದ ಮಹಾನ್ ರಾಜಕೀಯ ನಾಯಕರೂ ಮತ್ತು ಸಮಾಜ ಸುಧಾರಕರಾಗಿ ಭಾರತೀಯರಿಗೆ ಗೌರವಯುತವಾದ ಉತ್ತಮ ಬದುಕನ್ನು ತಂದುಕೊಡಲು ಶ್ರಮಿಸಿದ ಗೋಪಾಲಕೃಷ್ಣ ಗೋಖಲೆಯವರು ಮೇ ೯, ೧೮೬೬ರಂದು ಕೊಲ್ಹಾಪುರದಲ್ಲಿ ಜನಿಸಿದರು. ಗೋಖಲೆಯವರು ಸಾಮಾನ್ಯ ಕುಟುಂಬಕ್ಕೆ ಸೇರಿದವರಾಗಿದ್ದರೂ ಅವರ ಹಿರಿಯರು …
ಪೂರ್ತಿ ಓದಿ...ಅಧಿಕಾರದ ಮದದಲ್ಲಿ ತೇಲಬೇಡ
ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ ಈ ಊರಿಗೆ ರಾಮಪುರ ಎಂಬ ಹೆಸರು ಬಂತೆಂದೂ, ಕಾಲಕ್ರಮೇಣ ಜನರ ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತೆಂದೂ ಜನ ಈಗಲೂ ಮಾತಾಡುತ್ತಾರೆ. ಊರ ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರ ಶಿವನನ್ನು ಪೂಜಿಸಿದನಂತೆ ಎಂದು ಇನ್ನೊಂದು ಕತೆಯನ್ನು ಹೇಳುತ್ತಾರೆ. ಈಗ ಹೇಳಲಿರುವ ಕಥೆ ಅದೆಷ್ಟೋ ವರ್ಷಗಳ ಹಿಂದೆ ನಡೆದದ್ದು. ಅಂದರೆ, ರಾಜರ ಆಡಳಿತವಿತ್ತಲ್ಲ? ಆಗ ನಡೆದದ್ದು. ರಾಂಪುರದಲ್ಲಿ ಆಗ ಒಬ್ಬ ಭಿಕ್ಷುಕನಿದ್ದ. …
ಪೂರ್ತಿ ಓದಿ...ವಾಟ್ಸಪ್ ಕಥೆ: ಹೆಣ್ಣಿನ ಸಮಾನತೆ
ಹೆಂಗಸಿನ ಬುದ್ಧಿ ಮೊಳಕಾಲು ಕೆಳಗೆ ಎಂಬ ಗಾದೆಯನ್ನೂ ಸಹ ದೂಷಿಸುತ್ತ, ‘ಹೆಣ್ಣು ಹೆರಲಿಕ್ಕೆಂದೇ ಇರುವ ಯಂತ್ರವಲ್ಲ, ಅಡುಗೆ ಮನೆಗೆ ಸೀಮಿತಳಲ್ಲ. ಗಂಡಿಲ್ಲದೆಯೂ ಹೆಣ್ಣು ಪರಿಪೂರ್ಣಳು. ಪುರುಷನೆಂಬ ವೃಕ್ಷ ಕ್ಕೆ ಹಬ್ಬುವ ಬಳ್ಳಿಯಲ್ಲ ಹೆಣ್ಣು, ಅವನ ಅಸ್ತಿತ್ವವನ್ನು ಹಿಡಿದು ಭದ್ರಗೊಳಿಸುವ ಬೇರು ಹೆಣ್ಣು. ಹೆಣ್ಣು ಗಂಡು ಪ್ರಕೃತಿಯ ದೃಷ್ಟಿಯಲ್ಲಿ ಸರಿ ಸಮಾನರಾಗಿರುವಾಗ ಸಾಮಾಜಿಕವಾಗಿ ಸಮಾನತೆ ಹೆಣ್ಣಿಗೇಕೆ ದೊರೆಯುತ್ತಿಲ್ಲ’ ಎಂದೆಲ್ಲ ಭಯಂಕರ ಭಾಷಣಕ್ಕೆ ನಿಂತರೆ ಅವಳನ್ನು ಮೀರಿಸಲು ಯಾರಿಂದಲೂ ಶಕ್ಯವಿಲ್ಲ. ಮರುದಿನ ಪ್ರತಿಷ್ಠಿತ ಕಾಲೇಜಿನಲ್ಲಿ ‘ಹೆಣ್ಣಿಗೆ ಸಮಾನತೆ ಬೇಕೇ ಬೇಡವೇ’ ಎಂಬ ವಿಷಯದ ಮೇಲಿನ ಚರ್ಚಾಸ್ಪರ್ಧೆಯಲ್ಲಿ ವಿಷಯದ …
ಪೂರ್ತಿ ಓದಿ...ಆದರ್ಶ ರಾಜಕಾರಣಿ – ಭೀಮಸೇನ
ಮಹಾಭಾರತದ ಯುದ್ಧಾನಂತರ ಧರ್ಮರಾಜನು ಪಟ್ಟಾಭಿಷಿಕ್ತನಾಗಿ ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಭೀಮಾರ್ಜುನರ ಸಹಾಯದಿಂದ ರಾಜ್ಯಭಾರವನ್ನು ನಡೆಸುತ್ತಿದ್ದನು. ಕ್ಷತ್ರಿಯ ಸಂಪ್ರದಾಯದಂತೆ ಧೃತರಾಷ್ಟ್ರನು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಅರಣ್ಯಕ್ಕೆ ಹೋಗಬೇಕಾಗಿತ್ತು. ಅದರಲ್ಲೂ ತನ್ನ ಪುತ್ರವ್ಯಾಮೋಹದ ತಪ್ಪಿನಿಂದ ಕುರುಕ್ಷೇತ್ರದಲ್ಲಿ ಘೋರವಾದ ಯುದ್ಧವು ನಡೆದು, ಎಲ್ಲ ಮಕ್ಕಳನ್ನೂ ಕಳೆದುಕೊಂಡ ದುರಂತವು ನಡೆದ ಬಳಿಕವೂ ಧೃತರಾಷ್ಟ್ರನಲ್ಲಿ ವೈರಾಗ್ಯವಾಗಲೀ, ಪಶ್ಚಾತ್ತಾಪಗಳಿಂದ ರಾಜ್ಯದ ವೈಭವವನ್ನು ತ್ಯಜಿಸುವ ಮನೋಭಾವನೆಯಾಗಲಿ ಉಂಟಾಗಲಿಲ್ಲ. ಧರ್ಮರಾಜನ ರಾಜೋಪಚಾರವನ್ನು ಪಡೆಯುತ್ತಾ ರಾಜ್ಯದ ಸುಖಭೋಗಗಳಲ್ಲಿಯೇ ಮಗ್ನನಾಗಿದ್ದ. ಭೀಮಸೇನನ ಮತ್ತು ವಿದುರನ ಉಪದೇಶದ ಪರಿಣಾಮವಾಗಿ ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಅರಣ್ಯಕ್ಕೆ ಹೋಗಲು ಸಿದ್ಧನಾದನು. ಯುದ್ಧದಲ್ಲಿ ಮಡಿದ ತನ್ನ ಮಕ್ಕಳಾದ …
ಪೂರ್ತಿ ಓದಿ...ಗಂಗಾಸ್ನಾನದಿಂದ ಪಾವನರಾಗಲು ಯಾತ್ರಿಕರಲ್ಲಿ ನಿಜವಾದ ಭಾವವಿರುವುದು ಅವಶ್ಯಕ !
ಒಮ್ಮೆ ಕಾಶಿಯಲ್ಲಿ ಮಹಾನ ತಪಸ್ವಿಗಳಾದ ಶಾಂತಾಶ್ರಮಸ್ವಾಮಿ ಹಾಗೂ ಬ್ರಹ್ಮಚೈತನ್ಯ ಗೋಂದವಲೇಕರ ಮಹಾರಾಜರ ನಡುವೆ ಮುಂದಿನ ಸಂಭಾಷಣೆ ನಡೆಯಿತು. ಸ್ವಾಮಿ : ಮಹಾರಾಜರೇ, ಇಷ್ಟೊಂದು ಜನರು ಕಾಶಿಯಲ್ಲಿ ಗಂಗಾಸ್ನಾನವನ್ನು ಮಾಡಿದರೂ ಅವರು ಏಕೆ ಪಾವನರಾಗುವುದಿಲ್ಲ ? ಗೋಂದವಲೇಕರ ಮಹಾರಾಜರು : ಏಕೆಂದರೆ ಅವರಲ್ಲಿ ನಿಜವಾದ ಭಾವವಿಲ್ಲ ! ಸ್ವಾಮಿ (ಉತ್ತರ ತಿಳಿಯದಿರುವುದರಿಂದ) : ಅವರಲ್ಲಿ ನಿಜವಾದ ಭಾವವಿಲ್ಲದಿದ್ದರೆ ಅವರು ಇಲ್ಲಿಗೆ ಏಕೆ ಬರುತ್ತಿದ್ದರು ? ಗೋಂದವಲೇಕರ ಮಹಾರಾಜರು : ಅದನ್ನು ಆದಷ್ಟು ಬೇಗ ತೋರಿಸುತ್ತೇನೆ. ೪ ದಿನಗಳ ನಂತರ ಗೋಂದವಲೇಕರ ಮಹಾರಾಜರು ಶಾಂತಾಶ್ರಮಸ್ವಾಮಿಗಳ ಕೈ ಕಾಲುಗಳಿಗೆ …
ಪೂರ್ತಿ ಓದಿ...