ಇತರೆ

ನೇರಳೆ ಹಣ್ಣು | ನೀರ್ಲಣ್ಣು

jamun fruit

ನೀರ್ಲಣ್ಣು ಎಂದೇ ಆಡು ಭಾಷೆಯಲ್ಲಿ ಪರಿಚಿತವಾಗಿರುವ ‘ನೇರಳೆ ಹಣ್ಣು‘ ಬಲು ರುಚಿ. ನಿಸರ್ಗದ ನೀಲ ಸುಂದರಿ ಅಂತಲೇ ಇದು ಖ್ಯಾತಿ. ಒಗರಿದ್ದರೂ ಬಾಯಲ್ಲೇನೋ ಮಜಾದ ರುಚಿ. ಬಾಯೆಲ್ಲಾ ನೀಲಿಯಾಗುವುದನ್ನು ನೋಡಿ ನಲಿಯುವ ಮಕ್ಕಳ ಆನಂದಕ್ಕೆ ಸರಿಸಾಟಿ ಯಾವುದು? ಮದ್ಯಪ್ರಿಯರಿಗೂ ಇದು ಅಚ್ಚು ಮೆಚ್ಚು. ಏಕೆಂದರೆ ಇದರ ತಿರುಳನ್ನು ವೈನ್ನಲ್ಲೂ ಬಳಸಲಾಗುತ್ತದೆ. ರೋಗ ನಿಯಂತ್ರಕ: ವಿನೆಗರ್, ಜೆಲ್ಲಿ ಜಾಮ್ ತಯಾರಿಕೆಗೆ ಇದನ್ನು ಬಳಸುತ್ತಾರೆ. ಬೀಜಗಳನ್ನು ಆಯುರ್ವೇದ, ಯುನಾನಿ, ಚೀನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎನ್ನುತ್ತಾರೆ ವೈದ್ಯರು. ನೇರಳೆಹಣ್ಣಿನ ಪಾನೀಯ ಪಚನಕ್ರಿಯೆಗೆ …

ಪೂರ್ತಿ ಓದಿ...

ಬಿಲ್ವ ಪತ್ರೆ | Bilva Patra

ಬಿಲ್ವದ (ಬಿಲ್ವ ಪತ್ರೆ) ಔಷಧೀಯ ಗುಣಗಳು: ಬಿಲ್ವ ಮರದಲ್ಲಿನ ಬೇರು, ತೊಗಟೆ, ಪತ್ರೆ, ಹೂ, ಕಾಯಿ, ಹಣ್ಣು ಎಲ್ಲವೂ ಔಷಧೀಯ ಗುಣ ಹೊಂದಿರುತ್ತದೆ. ಇದು ವಾತಹರ, ಅತಿಸಾರ, ಜ್ವರ, ಮೂತ್ರ ಸಂಬಂಧಿತ ರೋಗಗಳಿಗೆ ಸಿದ್ಧೌಷಧಿ. ಉಷ್ಣಗುಣ ಹೊಂದಿದ ಈ ಹಣ್ಣು ಜೀರ್ಣಕ್ರಿಯೆ ಮತ್ತು ಹಸಿವು ಹೆಚ್ಚು ಮಾಡುತ್ತದೆ…. ರಕ್ತಭೇದಿ, ಹೊಟ್ಟೆ ನೋವು ಉಪಶಮನ – ಹೀಗೆ ದೇಹದ ಒಳ ಮತ್ತು ಬಾಹ್ಯ ರೋಗಕ್ಕೆ ಮದ್ದಾಗಿ ಬಳಸುತ್ತಾರೆ. ಒಸಡಿನಲ್ಲಿನ ರಕ್ತಶ್ರಾವ. ಕೆಮ್ಮು, ನೆಗಡಿ, ಹೊಟ್ಟೆಯ ತೊಂದರೆಗಳು, ಗರ್ಭಿಣಿಯರಲ್ಲಾಗುವ ವಾಕರಿಕೆಗಳಿಗೆ ಬಿಲ್ವ ಹಣ್ಣು ಬಹಳಷ್ಟು ಔಷಧಿಯ ಗುಣವನ್ನು …

ಪೂರ್ತಿ ಓದಿ...

ಆರೋಗ್ಯಕ್ಕೆ ಮಜ್ಜಿಗೆ

ಆರೋಗ್ಯಕ್ಕೆ ಮಜ್ಜಿಗೆ

ಆರೋಗ್ಯಕ್ಕೆ ಮಜ್ಜಿಗೆ: ನಿಮಗೆ ನೀರು ಪದೇ ಪದೇ ಕುಡಿಯಲು ಬೇಜಾರೆನಿಸಿದರೆ ಗಂಟೆಗೊಮ್ಮೆ ಮಜ್ಜಿಗೆ ಕುಡಿದು ನೋಡಿ, ದೇಹ ಉಲ್ಲಸಿತವಾಗುತ್ತದೆ. ಅಜೀರ್ಣ, ಹೊಟ್ಟೆನೋವು ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿದರೆ ಕೆಲವೇ ಹೊತ್ತಿನಲ್ಲಿ ಹೊಟ್ಟೆನೋವು ಉಪಶಮನವಾಗುತ್ತದೆ. ಮಜ್ಜಿಗೆ ಉತ್ತಮ ಜೀರ್ಣಕಾರಿ ದ್ರವ ಪದಾರ್ಥ. ಯಾವುದೋ ಸಮಾರಂಭಕ್ಕೆ ಹೋಗಿ ಊಟ ಮಾಡಿ ಹೊಟ್ಟೆ ಭಾರವೆನಿಸುತ್ತಿದ್ದರೆ ಮಜ್ಜಿಗೆಗೆ ಉಪ್ಪು, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿದರೆ ತಿಂದ ಆಹಾರ ಜೀರ್ಣವಾಗುತ್ತದೆ. ಮಜ್ಜಿಗೆ ದೇಹದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡಿ ತಂಪು ನೀಡುತ್ತದೆ. ಅದಕ್ಕೆ ಬೇಸಿಗೆ …

ಪೂರ್ತಿ ಓದಿ...