19ನೇ ಶತಮಾನದಲ್ಲಿ ಬ್ರಿಟೀಷರ ಮತ್ತು ಬಾಲ್ಯ ವಿವಾಹದ ವಿರುದ್ಧ ಧ್ವನಿ ಎತ್ತಿದ ಹಾಗೂ ಅಂದಿನ ಕಾಲದಲ್ಲೇ ವೈದ್ಯಕೀಯ ವೃತ್ತಿಯಲ್ಲಿ ತೊಡಿಗಿಸಿಕೊಂಡು ಬಡವರ ಪರ ನಿಂತಿದ್ದ ಡಾ.ರುಕ್ಮಾಬಾಯಿಗೆ ಗೂಗಲ್ ಡೂಡಲ್ ಶುಭಾಶಯ ಕೋರಿದೆ. ಹಿರಿಯರು 11ನೇ ವಯಸ್ಸಿಗೆ ಮದುವೆ ಮಾಡಿಸಿದ ಬಳಿಕ, ಗಂಡನೊಡನೆ ಬಾಳಲು ಇಚ್ಛಿಸದೆ ಸಿಡಿದೆದ್ದ ಧೀರ ವನಿತೆ ಈ ರುಖ್ಮಾಬಾಯಿ, ನುರಿತ ವೈದ್ಯೆ ಮತ್ತು ತಮ್ಮ ರೋಗಿಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿರುವ ವೈದ್ಯೆಯಾಗಿದ್ದಾರೆ ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ. ಆದರೆ ಇದಕ್ಕೂ ಮಿಗಿಲಾಗಿ 11ನೇ ವಯಸ್ಸಿಗೆ ತನ್ನಿಚ್ಛೆಗೆ ವಿರುದ್ಧವಾಗಿ ಪೋಷಕರು ಮದುವೆ …
ಪೂರ್ತಿ ಓದಿ...ಹಳ್ಳಿ ಆಟಗಳಿಗೆ ಮಾರು ಹೋದ ಸಿಟಿಗರು
ಕ್ಯಾಂಡಿಕ್ರಶ್‌ನಂಥ ವಿಡಿಯೋ ಗೇಮ್ ಹಾಗೂ ಮೊಬೈಲ್‌ನಲ್ಲಿ ಸಿಗುವ ಗೇಮ್‌ಗಳು ನಗರಕ್ಕೆ ಮಾತ್ರ ಸೀಮಿತ. ಹಳ್ಳಿಯಲ್ಲಿ ಏನಿದ್ದರೂ ಚೌಕಾಬಾರ, ಪಗಡೆ, ಹಾವು ಏಣಿ ಆಟ ರೂಢಿ ಅನ್ನುವ ಕಾಲ ಈಗಿಲ್ಲ. ಕಾಲಚಕ್ರ ಉರುಳಿದೆ. ಹಳ್ಳಿ ಆಟಗಳಿಗೂ ಸಿಟಿಗಳಲ್ಲಿ ವಿಪರೀತ ಡಿಮಾಂಡ್ ಕ್ರಿಯೇಟ್ ಆಗುತ್ತಿದೆ. ಹಳ್ಳಿ ಸೊಗಡಿನ ಸಾಂಪ್ರದಾಯಿಕ ಆಟಗಳು ಸಿಟಿಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿವೆಯಲ್ಲದೆ, ಅದೇ ಟ್ರೆಂಡ್ ಆಗಿ ಹವಾ ಆಗಿಬ್ಟಿಟಿದೆ. ಅದಕ್ಕಾಗಿಯೇ ಅನೇಕ ಹಳ್ಳಿ ಆಟಗಳನ್ನು ಕಲಿಸುವ, ಆಡಿಸುವ ಗೇಮ್ ಸೆಂಟರ್‌ಗಳು ನಗರದಲ್ಲಿ ತಲೆ ಎತ್ತಿವೆ. ಅಷ್ಟೇ ಅಲ್ಲ, ಮಕ್ಕಳಿಗೆ ಇಂಥ ಆಟಗಳನ್ನು ಕಲಿಸುವ, …
ಪೂರ್ತಿ ಓದಿ...ರಕ್ತದಾನ ಮಾಡುವುದು ಹೀಗೆ..
ಆಪತ್ಕಾಲದಲ್ಲಿ ಜೀವರಕ್ಷಕ ಪಾತ್ರವನ್ನು ವಹಿಸುವ ರಕ್ತದ ನೀಡುವಿಕೆಗೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಹಾಗೂ ಯುವ ಸಮುದಾಯದಲ್ಲಿ ಸೂಕ್ತ ಅರಿವನ್ನು ಮೂಡಿಸುವ ಸದುದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಿಕೊಂಡು ಬರುತ್ತಿದೆ. ಈ ದಿನದ ವಿಶೇಷವಾಗಿ ನಾವಿಂದು ಬ್ಲಡ್ ಬ್ಯಾಂಕ್ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ರಕ್ತದಾನ ಮಾಡುವ ಸಂದರ್ಭದಲ್ಲಿ ಅನುಸರಿಸಲಾಗುವ ವಿಧಾನಗಳ ಕುರಿತಾಗಿ ತಯಾರಿಸಿರುವ ಒಂದು ವಿಶೇಷ ವಿಡಿಯೋವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. https://www.udayavani.com/kannada/video/how-donate-blood-special-video
ಪೂರ್ತಿ ಓದಿ...ಅಮೇರಿಕನ್ ಡಾಲರ್ ಹೇಗೆ ತಯಾರಿಸುತ್ತಾರೆ ಗೊತ್ತಾ? ಇಲ್ಲಿದೆ ಅದ್ಭುತ ದೃಶ್ಯ
ಇನ್ಸ್ಟ್ರಾಗ್ರಾಮ್ ಮೂಲಕ ಮನೆಯಲ್ಲೇ ಕುಳಿತು ಹಣ ಗಳಿಸಿ
ಇನ್ಸ್ಟ್ರಾಗ್ರಾಮ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳನ್ನು ಎಲ್ಲರೂ ಬಳಸ್ತಾರೆ. ಅದ್ರಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಆದ್ರೆ ಅನೇಕರಿಗೆ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ ಮೂಲಕವೂ ಹಣ ಗಳಿಸಬಹುದು ಎಂಬುದು ಗೊತ್ತಿಲ್ಲ. ನಿಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿದ್ದರೆ ನೀವು ಸುಲಭವಾಗಿ ಇನ್ಸ್ಟ್ರಾಗ್ರಾಮ್ ನಲ್ಲಿ ಹಣ ಗಳಿಸಬಹುದು. ಆದ್ರೆ ಇನ್ಸ್ಟ್ರಾಗ್ರಾಮ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದೋದು ಸುಲಭದ ಮಾತಲ್ಲ. ಕೆಲವೊಂದು ಸುಲಭ ಟ್ರಿಕ್ಸ್ ನಿಂದ ನೀವೂ ಸಾವಿರಗಟ್ಟಲೆ ಫಾಲೋವರ್ಸ್ ಹೊಂದಬಹುದು. ಇನ್ಸ್ಟ್ರಾಗ್ರಾಮ್ ಅಕೌಂಟ್ ನ ಡಿಪಿ ಚೆನ್ನಾಗಿರುವಂತೆ ನೋಡಿಕೊಳ್ಳಿ. ಸಾಮಾನ್ಯವಾಗಿ ನಿಮ್ಮನ್ನು ಫಾಲೋ ಮಾಡಬಯಸುವವರು ಮೊದಲು ಡಿಪಿ …
ಪೂರ್ತಿ ಓದಿ...ಪರೀಕ್ಷಾ ಫಲಿತಾಂಶ ಮತ್ತು ನಮ್ಮ ಹೊಣೆಗಾರಿಕೆ
ಫಲಿತಾಂಶ ಹೂಮಳೆಯಾಗಲಿ ??? ಫಲಿತಾಂಶ ಸ್ಪೋಟವಾಗದಿರಲಿ ??? ಪರೀಕ್ಷಾ ಫಲಿತಾಂಶದ ಸುಗ್ಗಿಯ ಸಮಯ. ನಿನ್ನೆ PUC ಆಯ್ತು , ಇಂದು SSLC ಫಲಿತಾಂಶ ಬಂದುಬಿಟ್ಟಿದೆ. ಹೀಗೆ ಒಂದರ ಹಿಂದೊಂದು ಫಲಿತಾಂಶಗಳ ಜಾತ್ರೆ. ನಿರೀಕ್ಷಿಸಿದಷ್ಟು ಅಂಕ ಬಂದಿಲ್ಲವೆಂದೋ ಅಥವಾ ತನ್ನ ವಾರಗೆಯವರಿಗಿಂತ ತಾನು ಕಡಿಮೆ ಅಂಕ ಪಡೆದೆನೆಂದೋ , ಹೆತ್ತವರ ನಿರೀಕ್ಷೆ ಈಡೇರಿಸಲಾಗಲಿಲ್ಲವೆಂದೋ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗೋದೂ ಮತ್ತೆ ಕೆಲವರು ಜೀವವನ್ನೇ ತೆಗೆದುಕೊಳ್ಳುವಂತಹಾ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದೂ ಇತ್ತೀಚಿಗೆ ಕಂಡು ಬರುತ್ತಿರುವಂತಹಾ ಆತಂಕದ ಬೆಳವಣಿಗೆ. ಇದರ ಹಿಂದಿನ ಕಾರಣಗಳೇನೂ ? ಮಕ್ಕಳು ಏಕೆ ಇಂತಹಾ ಸಂಧಿಗ್ಧತೆಗೆ …
ಪೂರ್ತಿ ಓದಿ...ಆಯುರ್ವೇದದಿಂದ ಹೇಗೆ ಮೊಣಕಾಲು ನೋವು ಗುಣಪಡಿಸಬಹುದು (ವಿಡಿಯೋ)
ಕೆಲವು ಸರಳ ಮತ್ತು ಸುಲಭವಾದ ಮನೆಯ ಪರಿಹಾರಗಳೊಂದಿಗೆ ನೀವು ನಿಮ್ಮ ಮೊಣಕಾಲು ನೋವಿನ ಆರೈಕೆಯನ್ನು ಮಾಡಬಹುದು. ಮಿತಿಮೀರಿದ ಬಳಕೆ, ಬಳಕೆಯ ಕೊರತೆ ಅಥವಾ ಅಸಮರ್ಪಕ ತರಬೇತಿಯಿಂದ ಉಂಟಾಗುವ ಸೌಮ್ಯವಾದ ಮಧ್ಯಮ ನೋವಿಗೆ ಈ ಪರಿಹಾರಗಳು ಅತ್ಯಂತ ಸಹಾಯಕವಾಗಿವೆ. ವಯಸ್ಸಾದ ಮತ್ತು ಸಂಧಿವಾತದಂತಹ ಪರಿಸ್ಥಿತಿಗಳಿಗೆ ಸಂಬಂಧಿಸಿದ ಮೊಣಕಾಲಿನ ನೋವಿಗೆ ಸಹ ಸಹಾಯ ಮಾಡಬಹುದು ಆದರೆ ನೀವು ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ.
ಪೂರ್ತಿ ಓದಿ...ಬೆಂಕಿ ಕಡ್ಡಿಗಳನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ? ಇಲ್ಲಿದೆ ಅದ್ಭುತ ದೃಶ್ಯ
ಚಿಕ್ಕದಾದ ಬೆಂಕಿ ಪೊಟ್ಟಣಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ತಲೆಗೆ ಕಪ್ಪು/ ಕೆಂಪು ಟೋಪಿ ಇಟ್ಟ ಮನುಷ್ಯನಂತಿರುವ ಪುಟ್ಟ ಬೆಂಕಿ ಕಡ್ಡಿಗಳನ್ನು (Matches | How It’s Made) ನೋಡಿದರೆ ಇದನ್ನು ಹೇಗೆ ತಯಾರಿಸುತ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಸದ್ಯ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಬೆಂಕಿಕಡ್ಡಿಗಳನ್ನು ತಯಾರಿಸುವ ದೃಶ್ಯವನ್ನೊಳಗೊಂಡ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಲಾರಂಭಿಸಿದೆ. http://www.suvarnanews.tv/life/this-is-how-match-sticks-made
ಪೂರ್ತಿ ಓದಿ...ಮೈಸೂರು ಸ್ಯಾಂಡಲ್ ಸೋಪ್ ಹುಟ್ಟಿದ ಕಥೆ
ಇಪ್ಪತ್ತನೇ ಶತಮಾನದಲ್ಲಿ, ಕರ್ನಾಟಕ ಏಕೀಕರಣದ ಮುನ್ನ ವಡೆಯರ್ಮನೆತನವೂ ಮೈಸೂರು ರಾಜ್ಯವನ್ನು ಆಳುತ್ತಿತ್ತು, ಜಗತ್ತಿನಲ್ಲಿ ಅತಿ ಹೆಚ್ಚು ಗಂಧದ ಮರ ಉತ್ಪಾದಕರಲ್ಲಿ ಒಂದಾಗಿತ್ತು. ಮರವನ್ನುರಫ್ತು ಮಾಡುತ್ತಿತ್ತು. ಹೀಗೆ ಉಳಿದಿದ್ದ ಗಂಧದ ಕಚ್ಚಾವಸ್ತುವನ್ನು ಸದುಪಯೋಗಪಡಿಸಿಕೊಳ್ಳಲು, 1918 ರಲ್ಲಿ ಫ್ರಾನ್ಸ್ನಿಂದ ಬಂದ ಓರ್ವ ವಿದೇಶಿ ಅತಿಥಿ ಭಾರತೀಯ ಶ್ರೀಗಂಧದ ತೈಲದಿಂದ ತಯಾರಿಸಲ್ಪಟ್ಟ ವಿದೇಶಿ ಸಾಬೂನುಗಳ ಅಪರೂಪದ ಉಡುಗೊರೆಯನ್ನು ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ರವರಿಗೆನೀಡಿದ್ದನ್ನು ನೆನೆದ ಒಡೆಯರು ನಮ್ಮಲ್ಲೇ ಈ ಕಾರ್ಖಾನೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿ ಸರ್ಕಾರಿ ಸಾಬೂನು ಕಾರ್ಖಾನೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಅದೇ ವರ್ಷ ಮೈಸೂರಿನಲ್ಲಿ ಗಂಧದ ಮರದಿಂದ ಎಣ್ಣೆ ತೆಗೆಯುವಂತಹ …
ಪೂರ್ತಿ ಓದಿ...ಅಪರೂಪವಾಗುತ್ತಿದೆ ಯಕ್ಷಗಾನದಲ್ಲಿ ತಟ್ಟಿ ವೀರಭದ್ರ ಪಾತ್ರ
ಅವಿನಾಶ್ ಬೈಪಾಡಿತ್ತಾಯ: ಬಡಾಬಡಗು ತಿಟ್ಟಿನಲ್ಲಿ ಕಂಡು ಬರುವ ಮತ್ತು ಅಪರೂಪವಾಗಿರುವ ತಟ್ಟಿ ವೀರಭದ್ರ ವೇಷ ಮತ್ತೆ ಈಗ ಪಾಪ್ಯುಲರ್ ಆಗುತ್ತಿದೆ. ರಂಗದಲ್ಲಿ ಕೆಲವೇ ಹೊತ್ತು ರಾರಾಜಿಸಿ, ಅಚ್ಚಳಿಯದ ದೈವಿಲೋಕವನ್ನೇ ಸೃಷ್ಟಿಸಬಲ್ಲ ಮತ್ತು ರೌದ್ರದಿಂದಲೇ ರಮಣೀಯತೆಯನ್ನು ಸೃಜಿಸಬಲ್ಲ ಪಾತ್ರ ಇದಾಗಿದೆ. ತಟ್ಟಿ ವೀರಭದ್ರನ ಅಬ್ಬರದ ಪ್ರವೇಶ, ಆರ್ಭಟದೊಂದಿಗೆ ಸಭೆಯ ಮಧ್ಯೆಯೇ ನಡೆದು ಬರುವ ದೃಶ್ಯ, ದೊಂದಿ ಬೀಸುತ್ತಾ ರಂಗಸ್ಥಳ ಪ್ರವೇಶಿಸುವ ವೈಖರಿ, ವೀರ ರಸದ ಪದ್ಯಗಳಿಂದೊಡಗೂಡಿದ ಹಿಮ್ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಇಡೀ ರಂಗಸ್ಥಳವನ್ನು ಆವರಿಸುವ ದೃಶ್ಯ ಕಣ್ಮನ ಸೆಳೆಯತ್ತದೆ. ಇಷ್ಟೆಲ್ಲ ರಂಗವೈಭವವನ್ನು ನೋಡಿ ಪ್ರೇಕ್ಷ …
ಪೂರ್ತಿ ಓದಿ...