ಆಧ್ಯಾತ್ಮ

ಆಷಾಢ ಏಕಾದಶಿ

ashadha ekadashi

ಆಷಾಢ ಏಕಾದಶಿ ಪ್ರಕಾರ: ಆಷಾಢ ಮಾಸದ ಶುಕ್ಲ ಪಕ್ಷದಲ್ಲಿನ ಏಕಾದಶಿಯನ್ನು ‘ದೇವಶಯನಿ (ದೇವರ ನಿದ್ರೆಯ) ಏಕಾದಶಿ’ ಎನ್ನುತ್ತಾರೆ ಮತ್ತು ಕೃಷ್ಣ ಪಕ್ಷದಲ್ಲಿನ ಏಕಾದಶಿಯನ್ನು ‘ಕಾಮಿಕಾ ಏಕಾದಶಿ’ ಎನ್ನುತ್ತಾರೆ. ಇತಿಹಾಸ: ಹಿಂದೆ ದೇವ ಮತ್ತು ದಾನವರಲ್ಲಿ ಯುದ್ಧ ಪ್ರಾರಂಭವಾಯಿತು. ಕುಂಭದೈತ್ಯನ ಮಗನಾದ ಮೃದುಮಾನ್ಯನು ತಪಸ್ಸು ಮಾಡಿ ಶಂಕರನಿಂದ ಅಮರತ್ವವನ್ನು ಪಡೆದನು. ಆದ್ದರಿಂದ ಅವನು ಬ್ರಹ್ಮದೇವ, ವಿಷ್ಣು, ಶಿವರಂತಹ ಎಲ್ಲ ದೇವತೆಗಳಿಗೆ ಅಜೇಯ ನಾದನು. ದೇವತೆಗಳು ಅವನ ಭಯದಿಂದ ತ್ರಿಕುಟ ಪರ್ವತದ ಮೇಲೆ ಧಾತ್ರಿ (ನೆಲ್ಲಿಕಾಯಿ) ವೃಕ್ಷದ ಕೆಳಗೆ ಒಂದು ಗುಹೆಯಲ್ಲಿ ಅಡಗಿ ಕುಳಿತರು. ಆ ಆಷಾಢ …

ಪೂರ್ತಿ ಓದಿ...

ಶ್ರಾದ್ಧದಲ್ಲಿ ಪಿತೃಗಳಿಗೆ ನೀಡಿದ ಅನ್ನವು ಅವರಿಗೆ ಹೇಗೆ ತಲುಪುತ್ತದೆ?

gaya pind daan process

ಅ.ಮತ್ಸ್ಯಪುರಾಣದಲ್ಲಿ ಶ್ರಾದ್ಧಕ್ಕೆ ಸಂಬಂಧಿಸಿದ ಒಂದು ಪ್ರಶ್ನೆಯನ್ನು ಕೇಳಲಾಗಿದೆ, ಅದು ಹೀಗಿದೆ – ಬ್ರಾಹ್ಮಣರು ಸೇವಿಸಿದ ಅಥವಾ ಹೋಮಾಗ್ನಿಯಲ್ಲಿ ಸಮರ್ಪಿಸಿದ ಅನ್ನವು ಲಿಂಗದೇಹಗಳಿಗೆ ಹೇಗೆ ತಲುಪುತ್ತದೆ? ಏಕೆಂದರೆ ಮೃತ್ಯುವಿನ ನಂತರ ಆ ಆತ್ಮಗಳು ಪುನರ್ಜನ್ಮ ವನ್ನು ಪಡೆದುಕೊಂಡು ಇನ್ನೊಂದು ದೇಹದ ಆಶ್ರಯವನ್ನು ಪಡೆದುಕೊಂಡಿರುತ್ತವೆ. ಈ ಪ್ರಶ್ನೆಗೆ ಉತ್ತರವನ್ನೂ ಅಲ್ಲಿಯೇ ನೀಡಲಾಗಿದೆ. ಅದು ಹೀಗಿದೆ – ವಸು, ರುದ್ರ ಮತ್ತು ಆದಿತ್ಯ ಈ ಪಿತೃದೇವತೆಗಳ ಮೂಲಕ ಆ ಆಹಾರವು ಪಿತೃಗಳಿಗೆ ತಲುಪುತ್ತದೆ ಅಥವಾ ಆ ಅನ್ನವು ಬೇರೆ ರೂಪದಲ್ಲಿ ಅಂದರೆ ಅಮೃತ, ತೃಣ, ಭೋಗ, ಗಾಳಿ ಮುಂತಾದ …

ಪೂರ್ತಿ ಓದಿ...

ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಪ್ರ್ಯಾಂಕ್ಲಿನ್ ಎಂದು ಹೇಳುತ್ತೇವೆ

electric

ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಪ್ರ್ಯಾಂಕ್ಲಿನ್ ಎಂದು ಹೇಳುತ್ತೇವೆ…. ಇದೇ ಬೆಂಜಮಿನ್ ತಾವು ಬರೆದ ಒಂದು ಪುಸ್ತಕದಲ್ಲಿ ಹೇಳುತ್ತಾರೆ.. “ಒಂದು ರಾತ್ರಿ ನಾನು ಭಾರತದ ಪ್ರಾಚೀನವಾದ ಒಂದು ಗ್ರಂಥವನ್ನು ಓದಿದೆ. ಅದರಲ್ಲಿನ ಒಂದು ವಾಕ್ಯ ರಾತ್ರಿಯಿಡೀ ನನ್ನನ್ನು ಕಾಡುತ್ತಿತ್ತು. ಯೋಚಿಸಿ ಯೋಚಿಸಿ ಆ ವಾಕ್ಯದ ಅರ್ಥವನ್ನು ಗ್ರಹಿಸಿದೆ. ಅದು ನನಗೆ ವಿದ್ಯುತ್ತನ್ನು ಕಂಡು ಹಿಡಿಯಲು ನೆರವಾಯಿತು“ ಹಾಗಾದರೆ ಆ ವಾಕ್ಯ ಯಾವುದು…? ಅದು ಅಗಸ್ತ್ಯಮುನಿಗಳು ಬರೆದ “ಅಗಸ್ತ್ಯ ಸಂಹಿತೆ” ಯಲ್ಲಿನ ಒಂದು ವಾಕ್ಯವಾಗಿತ್ತು…!!! ಮಹರ್ಷಿ ಅಗಸ್ತ್ಯರು, ಮಹಾರಾಜ ದಶರಥನ ರಾಜಗುರುವಾಗಿದ್ದರು. ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಅವರು “ಅಗಸ್ತ್ಯ ಸಂಹಿತಾ” ಎಂಬ …

ಪೂರ್ತಿ ಓದಿ...

ಹೋಳಿ

holi

ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನಹಬ್ಬವನ್ನು ಆಚರಿಸುತ್ತೇವೆ. ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಹೆಚ್ಚು ಮಹತ್ವವಿದೆ. ಪುರಾಣ ಕಾರಣ ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದುಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ …

ಪೂರ್ತಿ ಓದಿ...

ವಾಸ್ತುಶಾಸ್ತ್ರದ ಪ್ರಕಾರ ಪೂಜಾ ಗೃಹದಲ್ಲಿ ದೇವರ ಪ್ರತಿಮೆ ಹೇಗಿರಬೇಕು?

ಭಾರತೀಯ ಸ೦ಸ್ಕೃತಿ, ಸ೦ಪ್ರದಾಯಗಳ ಪ್ರಕಾರ, ಪೂಜಾಗೃಹವು ಮನೆಯೊ೦ದರ ಅವಿಭಾಜ್ಯ ಅ೦ಗವೇ ಸರಿ. ಪ್ರಾರ್ಥನೆಯು ಒ೦ದು ವಿಧವಾದ ಧ್ಯಾನವೇ ಆಗಿದ್ದು, ಈ ಪ್ರಕ್ರಿಯೆಯು ನಮಗೆ ಮಾನಸಿಕ ಚೈತನ್ಯವನ್ನು ಒದಗಿಸುವುದಷ್ಟೇ ಅಲ್ಲ, ಜೊತೆಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ನೆಮ್ಮದಿಗಾಗಿಯೂ ಕೂಡ ಪ್ರಾರ್ಥನೆಯ ಅವಶ್ಯಕತೆ ಇದೆ. ಎಲ್ಲಾ ಹಿ೦ದೂ ಧರ್ಮೀಯರ ಮನೆಗಳಲ್ಲಿಯೂ ಸಹ, ಪೂಜಾಗೃಹ ಅಥವಾ ಪೂಜಾಕೊಠಡಿಯು ಇರಲೇಬೇಕು. ಪೂಜಾಗೃಹದಲ್ಲಿ ದೇವರ ಮೂರ್ತಿಗಳನ್ನು ಇಲ್ಲವೇ ಫೋಟೋಗಳನ್ನು ಇರಿಸುವಾಗ ಕೆಲವೊ೦ದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪೂಜಾಗೃಹದಲ್ಲಿ ದೇವರ ಪ್ರತಿಮೆಗಳನ್ನು ಯಾವ ರೀತಿ ಇರಿಸಬೇಕೆ೦ಬುದರ ಕುರಿತ೦ತೆ ಚರ್ಚಿಸುವುದಕ್ಕೆ ಮೊದಲು, ವಾಸ್ತುಶಾಸ್ತ್ರದ ಎಲ್ಲಾ ನಿಯಮಗಳಿಗೆ …

ಪೂರ್ತಿ ಓದಿ...

ನವಗ್ರಹ ಮತ್ತು ದೀಪರಾಧನೆ

Navgrah

ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುದಾಯಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ಈ ಮಂತ್ರವನ್ನು ಪಠಿಸಿ ಬೆಳ್ಳಿ ದೀಪವನ್ನು ಹಚ್ಚುವುದರಿಂದ ನವಗ್ರಹ ಶಾಂತಿಯ ಫಲಪ್ರಾಪ್ತಿಯಾಗುತ್ತದೆ. ಸೂರ್ಯ ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ | ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ || ಈ ಮಂತ್ರದೊಂದಿಗೆ ಸೂರ್ಯ ದೇವರಿಗೆ ಬೆಳ್ಳಿಯ ನಿರಾಜನ ಬೆಳಗುವುದರಿಂದ ಸೂರ್ಯ ಸಂಪ್ರೀತನಾಗುತ್ತಾನೆ, ಸೂರ್ಯನಿಗೆ ಬೆಳ್ಳಿ ದೀಪ ಬೆಳಗುವುದರಿಂದ ಬಡತನ ನಿವಾರಣೆಯಾಗುತ್ತದೆ, ಆರೋಗ್ಯ ಪ್ರಾಪ್ತಿಯಾಗುತ್ತದೆ, ಶತ್ರು ದಮನವಾಗುತ್ತದೆ. ದೀಪ ಬೆಳಗಿದವನು ತೇಜೋವಂತನಾಗುತ್ತಾನೆ. ಆದಿತ್ಯ ಹೃದಯ ವನ್ನು ಪಠಿಸಿ ಬೆಳ್ಳಿ …

ಪೂರ್ತಿ ಓದಿ...

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ ಅಧ್ಯಾಯ. ಈ ಹಿಂದಿನ ಹನ್ನೆರಡು ಅಧ್ಯಾಯಗಳಲ್ಲಿ ಏನು ಹೇಳಲಾಗಿದೆ ಅವೆಲ್ಲವನ್ನು ಸಂಗ್ರಹ ಮಾಡಿ ಈ ಅಧ್ಯಾಯದಲ್ಲಿ ಹೇಳಲಾಗಿದೆ. ಆದ್ದರಿಂದ ಹಿಂದಿನ ಎರಡು ಷಟ್ಕಗಳಲ್ಲಿ ಕಂಡ ವಿಷಯಗಳ ಪೂರ್ಣ ವಿಶ್ಲೇಷಣೆ ಈ ಅಧ್ಯಾಯ. ಜಡಪ್ರಪಂಚ, ಅದರಲ್ಲಿ ಪ್ರಕೃತಿಯಲ್ಲಿ ಬದ್ಧನಾಗಿ, ಪ್ರಕೃತಿಯಿಂದ ಪಾರಾಗಲು ಬಯಸುವ ಜೀವ. ಪಾರಾಗುವುದಕ್ಕೊಸ್ಕರ ಜ್ಞಾನದ ಅನುಸಂಧಾನ ಮತ್ತು ಸಾಧನೆ- ಈ ಎಲ್ಲಾ ವಿಷಯಗಳನ್ನು ನಾವು ಹಿಂದಿನ ಅಧ್ಯಾಯಗಳಲ್ಲಿ ವಿಕ್ಷಿಪ್ತವಾಗಿ ನೋಡಿದ್ದೇವೆ. ಅದೆಲ್ಲವುದರ …

ಪೂರ್ತಿ ಓದಿ...

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 01 ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ “ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯ” ಎಂದು ಹೇಳಿದ. ಹೀಗೆ ಹೇಳಿದಾಗ-ಯಾವ ರೀತಿ ಭಗವಂತನಲ್ಲಿ ನಾವು ಭಕ್ತಿ ಮಾಡಬೇಕು, ಯಾವುದು ನಿಜವಾದ ಭಕ್ತಿ, ಭಕ್ತನಲ್ಲಿರಬೇಕಾದ ಗುಣಗಳೇನು, ಇತ್ಯಾದಿ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಪ್ರಶ್ನೋಪನಿಷತ್ತಿನಲ್ಲಿ ಹೇಳುವಂತೆ: ಸ ಪ್ರಾಣಮಸೃಜತ ಪ್ರಾಣಾಚ್ಛ್ರದ್ಧಾಂ ಖಂ ವಾಯುರ್ಜ್ಯೋತಿರಾಪಃ ಪೃಥಿವೀಂದ್ರಿಯಂ ಮನಃ | ಅನ್ನಮನ್ನಾದ್ವೀರ್ಯಂ ತಪೋ ಮಂತ್ರಾಃ ಕರ್ಮ ಲೋಕಾ ಲೋಕೇಷು ಚ ನಾಮ ಚ || ೪|| ಭಗವಂತ ಈ ಪ್ರಪಂಚವನ್ನು ಸೃಷ್ಟಿ ಮಾಡಿ, ಹದಿನೈದು ಬೇಲಿಗಳ ಈ …

ಪೂರ್ತಿ ಓದಿ...

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 11

ಶ್ಲೋಕ – 01 ಈ ಅಧ್ಯಾಯ ಭಗವಂತನ ಉಪಾಸನೆ ಮಾಡುವಾಗ ಆತನನ್ನು ಹೇಗೆ ಚಿಂತನೆ ಮಾಡಬೇಕು ಎಂದು ಹೇಳುವ ಅಧ್ಯಾಯ. ಇದು ಭಗವಂತನ ವಿಶ್ವರೂಪ ದರ್ಶನ ಅಧ್ಯಾಯ. ಕೃಷ್ಣ ಅರ್ಜುನನಿಗೆ ದಿವ್ಯನೇತ್ರವನ್ನು ಕರುಣಿಸಿ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಆ ವಿಶ್ವರೂಪದ ವರ್ಣನೆ ಇಲ್ಲಿದೆ. ಇಲ್ಲಿ ಸರ್ವವ್ಯಾಪ್ತ, ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಮಾರ್ಗದರ್ಶನವಿದೆ. ಭಗವಂತನ ರೂಪವನ್ನು ಯಾವುದೋ ಒಂದು ಲೌಕಿಕ ಅನುಭವದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಅದು ಲೋಕಾತೀತ ಅನುಭವ. ಆ ಅದ್ಭುತ ಅನುಭವದ ಚಿತ್ರಣ ಈ ಅಧ್ಯಾಯ. ಭಗವಂತನ …

ಪೂರ್ತಿ ಓದಿ...

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 01 ನಾವು ಉಪಾಸನೆ ಮಾಡಬೇಕಾದ ಭಗವಂತನ ಗುಣವನ್ನು, ಜ್ಞಾನ ವಿಜ್ಞಾನವನ್ನು ಅರ್ಜುನನಿಗೆ ವಿವರಿಸಿದ ಕೃಷ್ಣ, ಆತನಲ್ಲಿ ಅರಳಿದ ಜ್ಞಾನ ತೃಷೆಯನ್ನು, ಪೂರ್ಣ ನಿಷ್ಠೆಯನ್ನು ಗುರುತಿಸಿ-ವಿಶೇಷವಾಗಿ ಉಪಾಸನೆಯಲ್ಲಿ ಅಳವಡಿಸಿಕೊಳ್ಳಬೇಕಾದ ಅನುಸಂಧಾನವನ್ನು, ಭಗವಂತನ ವಿಭೂತಿಯನ್ನು ಈ ಅಧ್ಯಾಯದಲ್ಲಿ ವಿವರಿಸುತ್ತಾನೆ. ಸಾಮಾನ್ಯವಾಗಿ ಅಮೂಲ್ಯ ವಿದ್ಯೆಯನ್ನು ಗುರು ಸುಲಭವಾಗಿ ಬಹಿರಂಗಗೊಳಿಸುವುದಿಲ್ಲ. ಶಿಷ್ಯ ಗುರುವಿನಲ್ಲಿ ಪೂರ್ಣ ನಿಷ್ಠೆ ತೋರಿದಾಗ, ಆತನಲ್ಲಿ ಯೋಗ್ಯತೆ ಇದ್ದಾಗ ಮಾತ್ರ ಅಂತಹ ವಿಚಾರವನ್ನು ಬಿಚ್ಚಬೇಕು ಎನ್ನುತ್ತದೆ ಶಾಸ್ತ್ರ. ಹೀಗಾಗಿ ಗುರು ತನ್ನ ಶಿಷ್ಯನನ್ನು ಪರೀಕ್ಷೆ ಮಾಡದೆ ಅಮೂಲ್ಯ ವಿಚಾರವನ್ನು ಆತನಿಗೆ ಹೇಳುವುದಿಲ್ಲ. ಇದಕ್ಕೆ ಉತ್ತಮ …

ಪೂರ್ತಿ ಓದಿ...