ಆಧ್ಯಾತ್ಮ

ಲವ ಕುಶ

ಶ್ರೀರಾಮಚ೦ದ್ರ, ಸೀತಾದೇವಿ – ನಮ್ಮ ದೇಶದಲ್ಲಿ ಈ ಹೆಸರುಗಳನ್ನು ಕೇಳದವರಾರು? ತ೦ದೆಯ ಮಾತನ್ನು ಉಳಿಸುವುದಕ್ಕಾಗಿ ಶ್ರೀರಾಮಚ೦ದ್ರನು ರಾಜಪದವಿಯನ್ನು ಸಹ ತೊರೆದು ವನವಾಸವನ್ನು ಕೈಗೊ೦ಡ. ಹೂವಿನ೦ತೆ ಕೋಮಲೆಯಾದ ಸೀತಾದೇವಿ ತನ್ನ ಗ೦ಡನನ್ನು ನೆರಳಿನ೦ತೆ ಅನುಸರಿಸಿ ಅರಣ್ಯಕ್ಕೆ ಹೋದಳು. ಈ ಗ೦ಡ – ಹೆ೦ಡತಿಯರು ಬಾಳಿನ ಉದ್ದಕ್ಕೂ ಪಡಬಾರದ ಕಷ್ಟ ಸ೦ಕಟಗಳಿಗೆ ತುತ್ತಾದರು. ಆದರೂ ಅವರು ಧರ್ಮವನ್ನು ಬಿಡಲಿಲ್ಲ. ಇದರಿ೦ದಲೇ ಅವರು ನಮಗೆ ಆದರ್ಶರಾಗಿದ್ದಾರೆ. ಆ ಶ್ರೀರಾಮ – ಸೀತಾದೇವಿಯರ ಜೀವನ ಕಥೆಯೇ ‘ರಾಮಾಯಣ’, ಅದನ್ನು ‘ಸೀತಾಚರಿತ್ರೆ’ ಎ೦ದೂ ಕರೆಯುತ್ತಾರೆ. ರಾಮಾಯಣವನ್ನು ಮೊಟ್ಟಮೊದಲು ರಚಿಸಿದ ಕವಿ ವಾಲ್ಮೀಕಿ. …

ಪೂರ್ತಿ ಓದಿ...

ರಕ್ಷಾ ಬಂಧನ

Raksha Bandhan

ರಕ್ಷಾ ಬಂಧನ ಹಬ್ಬ: ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ. ಇತಿವೃತ್ತ ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ‘ ಅಥವಾ ‘ರಾಖಿ‘ ಹಬ್ಬವನ್ನು …

ಪೂರ್ತಿ ಓದಿ...

ವಾಲ್ಮೀಕಿ

valmiki

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ. ಶ್ರೀರಾಮ, ಸೀತಾದೇವಿ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶದಲ್ಲಿ ಈ ಹೆಸರುಗಳನ್ನು ಯಾರು ಕೇಳಿಲ್ಲ? ಶ್ರೀರಾಮನವಮಿ ದೊಡ್ಡ ಹಬ್ಬ. ರಾಮೋತ್ಸವಗಳನ್ನು ನಡೆಸಿ ಶ್ರೀರಾಮ ಮತ್ತು ಸೀತೆಯರ ಕಥೆಯನ್ನು ಜನ ಮತ್ತೆ ಮತ್ತೆ ಕೇಳುತ್ತಾರೆ. ಅವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ಶ್ರೀರಾಮ ಮತ್ತು ಸೀತಾದೇವಿಯರ ಕಥೆಯೇ ರಾಮಾಯಣ. ಸ್ವಾರಸ್ಯವಾದ ಒಂದು ಸಂಗತಿ ಎಂದರೆ ಶ್ರೀ ರಾಮನೇ ರಾಮಾಯಣದ ಕಥೆಯನ್ನು ಕೇಳಿ ಸಂತೋಷಪಟ್ಟನು. ಅವನ ಮುಂದೆ ಆ ಕಥೆಯನ್ನು ಪದ್ಯರೂಪದಲ್ಲಿ ಇಂಪಾಗಿ ಹಾಡಿದವರು ಇಬ್ಬರು ಹುಡುಗರು …

ಪೂರ್ತಿ ಓದಿ...

ಭೀಮನ ಅಮಾವಾಸ್ಯೆ ವ್ರತ ವಿಚಾರ ಧಾರೆ

bheemana amavase

ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. ಯಾವುದೇ ಹಬ್ಬ, ವ್ರತ ಕೈಗೊಳ್ಳುವ …

ಪೂರ್ತಿ ಓದಿ...

ಪಂಚಾಮೃತ

panchamruta

ಹಾಲು, ಮೊಸರು, ತುಪ್ಪ , ಜೇನುತುಪ್ಪ, ಸಕ್ಕರೆ, ಬಾಳೆಹಣ್ಣು, ಎಳನೀರು, ನೀರು ಮುಂತಾದ ವಸ್ತುಗಳಿಂದ ದೇವರ ವಿಗ್ರಹಕ್ಕೆ ಅಭಿಷೇಕವನ್ನು ಮಾಡುತ್ತೇವೆ, ತದನಂತರ ತೀರ್ಥವೆಂದು ಸೇವಿಸುತ್ತೇವೆ. ಇದಕ್ಕೆ ಪಂಚಾಮೃತವೆಂದೂ ಕರೆಯುತ್ತಾರೆ. ಬಾಳೆಹಣ್ಣು ಹಾಗೂ ಎಳನೀರಿನಲ್ಲಿ ಇರುವ ಪೊಟ್ಯಾಶಿಯಂ ಹೃದಯ ಸಂಬಂಧಿ ಖಾಯಿಲೆಗಳು ಬರದಂತೇ ತಡೆಯುತ್ತದೆ. ಅಭಿಷೇಕವನ್ನು ಸಾಮಾನ್ಯವಾಗಿ ಸಾಲಿಗ್ರಾಮ ಶಿವಲಿಂಗ ಅಥವಾ ಕಂಚು, ತಾಮ್ರ, ಕಬ್ಬಿಣ, ಚಿನ್ನ ಮುಂತಾದ ಪಂಚಲೋಹಗಳಿಂದ ಮಾಡಿದ ವಿಗ್ರಹಗಳ ಮೇಲೆ ಮಾಡುತ್ತಾರೆ. ಇವುಗಳಲ್ಲಿರುವ ಔಷಧೀಯ ಗುಣಗಳು ನೀರಿನೊಂದಿಗೆ ಸೇರುತ್ತವೆ. ಶುದ್ಧ ಸಾಲಿಗ್ರಾಮ ಹಾಗೂ ಶಿವಲಿಂಗಗಳು ಸಿಗುವುದು ಗಂಡಕಿ ಹಾಗೂ ನರ್ಮದಾ ನದಿಗಳಲ್ಲಿ. …

ಪೂರ್ತಿ ಓದಿ...

ಬ್ರಹ್ಮಾಂಡ ಪುರಾಣ | ಬ್ರಹ್ಮ – Brahma | ವಿಷ್ಣು – Vishnu | ಶಿವ – Shiva

ಬ್ರಹ್ಮಾಂಡ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು.ಈ ಪ್ರಪಂಚದ ಸೃಷ್ಟಿಯ ವಿಚಾರ ಬ್ರಹ್ಮನಿಂದ ಹೇಳಲ್ಪಟ್ಟಂತೆ ಇದರಲ್ಲಿ ವಿವರಿಸಲಾಗಿದೆ.ಸಕಲ ಲೋಕಗಳ ವಿಚಾರವಾಗಿ ಈ ಪುರಾಣದಲ್ಲಿ ವಿಸ್ತಾರವಾದ ವಿವರಗಳಿವೆ. ಬ್ರಹ್ಮ – ಹಿಂದೂ ಧರ್ಮದಲ್ಲಿನ ತ್ರಿಮೂರ್ತಿ ದೇವತೆಗಳಲ್ಲೊಬ್ಬರು. ಬ್ರಹ್ಮನನ್ನು ಸೃಷ್ಟಿಕರ್ತ ಎನ್ನಲಾಗುತ್ತದೆ. ಸರಸ್ವತಿಯು ಬ್ರಹ್ಮನ ಹೆಂಡತಿ, ಮತ್ತು ನಾರದರು ಬ್ರಹ್ಮನ ಮಾನಸ ಪುತ್ರರು. ಚತುರ್ಮುಖ ಬ್ರಹ್ಮ ವಿಷ್ಣುವಿನ ಹೊಕ್ಕಳಿನಿಂದ ಹುಟ್ಟಿದ ಕಮಲದಲ್ಲಿ ಜನಿಸಿದನೆಂದು ಪ್ರತೀತಿ. ಹಾಗಾಗಿ ಬ್ರಹ್ಮನಿಗೆ ಜಡಜಜ ಎಂಬ ಹೆಸರು ಉಂಟು. ಬ್ರಹ್ಮವೆಂದರೆ ಏನೆಂದು ಇಲ್ಲಿಯವರೆಗೂ ಯಾರಿಗೂ ತಿಳಿದಂತಿಲ್ಲ. ಬ್ರಹ್ಮವೆಂದರೆ ಏನೆಂಬ ಜಿಜ್ಞಾಸೆ ಬಹು ಹಿಂದಿನಿಂದಲೂ ಇದೆ. …

ಪೂರ್ತಿ ಓದಿ...

ಶ್ರಾವಣ ಮಾಸ ಹಬ್ಬಗಳ ಮಾಸ

Shravana Maasa

ಶ್ರಾವಣ ಮಾಸದ ಹಬ್ಬಗಳು: ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕ್ಕತಿಯ ದೇಶ. ಇಲ್ಲಿ ತನ್ನದೇ ಆದ ಧಾರ್ಮಿಕ ಆಚರಣೆಗಳು ವೃತ ನೇಮಾದಿಗಳು ಜರುಗುವ ಮೂಲಕ ದೈವೀ ಆರಾಧನೆ ಜರುಗುತ್ತಿದ್ದು ಇಲ್ಲಿನ ಧರ್ಮಕ್ಕೆ ಮೂರು ನೆಲೆಗಳು 1) ಮೂಲಭೂತ ತತ್ವಗಳ ಅಥವ ಸಿದ್ದಾಂತದ ನೆಲೆ 2) ಆ ತತ್ವಗಳನ್ನು ಜನಸಾಮಾನ್ಯಕ್ಕೆ ನಿರೂಪಿಸುವ ಪೌರಾಣಿಕ ನೆಲೆ. 3) ಆ ತತ್ವ ಸಿದ್ದಿಗಾಗಿ ಕಲ್ಪ ಅಂದರೆ ವಿಧಿ=ನಿಷೇಧಗಳನ್ನೊಳಗೊಂಡ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ದಾಪೂರ್ಣ ಆಚರಣೆ. ವ್ರತಗಳು ಉತ್ಸವಗಳು ಎಂಬ ಉಭಯ ಅಂಗಗಳನ್ನೊಳಗೊಂಡ ಹಿಂದೂ ಹಬ್ಬಗಳ ಮತ್ತು ಪವಿತ್ರ ದಿನಗಳ …

ಪೂರ್ತಿ ಓದಿ...

ಯಾವ ದಿನ ಕೂದಲುಗಳನ್ನು ಕತ್ತರಿಸಬಾರದು? ಏಕೆ ಕತ್ತರಿಸಬಾರದು?

Hair Cut

ಅ. ಆದಷ್ಟು ಅಶುಭ ದಿನ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ, ಹಾಗೆಯೇ ಸುಡುಬಿಸಿಲಿರುವ ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿಯ ಹೊತ್ತು ಕೂದಲುಗಳನ್ನು ಕತ್ತರಿಸದಿರುವುದರ ಹಿಂದಿನ ಶಾಸ್ತ್ರ ೧. ಆದಷ್ಟು ಅಶುಭ ದಿನಗಳಂದು, ಅಮಾವಾಸ್ಯೆ ಮತ್ತು ಹುಣ್ಣಿಮೆ ಈ ತಿಥಿಗಳಂದು ಕೂದಲುಗಳನ್ನು ಕತ್ತರಿಸಬಾರದು; ಏಕೆಂದರೆ ಈ ದಿನಗಳಂದು ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಕಾರ್ಯದ ಪ್ರಮಾಣವು ಹೆಚ್ಚಿರುತ್ತದೆ. ೨. ಕೂದಲುಗಳನ್ನು ಕತ್ತರಿಸಿದ ನಂತರ ಅವುಗಳ ತುದಿಗಳು ತೆರೆಯಲ್ಪಡುವುದರಿಂದ ಕೇಶನಳಿಕೆಗಳಿಂದ ರಜ-ತಮಾತ್ಮಕ ಲಹರಿಗಳು ಕೂದಲುಗಳಲ್ಲಿ ಸೇರಿಕೊಂಡು ಕೂದಲುಗಳ ಬುಡದಲ್ಲಿ ಘನೀಭವಿಸುತ್ತವೆ. ೩. ಇದರಿಂದ ಕೂದಲುಗಳ ಬುಡದಲ್ಲಿ ಕೆಟ್ಟ ಶಕ್ತಿಗಳ …

ಪೂರ್ತಿ ಓದಿ...

ನಾಗದೇವತೆಗೆ ಪ್ರಿಯವಾದ ಆಶ್ಲೇಷಾ ಬಲಿ

Ashlesha Bali

ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನಿ ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ ಬಲಿ ಎಂಬುದು ನಾಗ ದೇವತೆಗೆ, ಸರ್ಪ ಸಂಕುಲಕ್ಕೆ …

ಪೂರ್ತಿ ಓದಿ...

ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಏಕೆ ಹಾಕಬೇಕು?

salt water

ಸ್ನಾನದ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪನ್ನು ಹಾಕಬೇಕು ಮತ್ತು ನಾಮಜಪ ಮಾಡುತ್ತಾ ಸ್ನಾನ ಮಾಡಬೇಕು ಕೃತಿ ಸ್ನಾನದ ಪ್ರಾರಂಭದಲ್ಲಿ ಇನ್ನೊಂದು ಚಿಕ್ಕ ಬಾಲ್ದಿಯಲ್ಲಿ ಎರಡು-ಮೂರು ತಂಬಿಗೆ ಬಿಸಿ ಅಥವಾ ತಣ್ಣೀರನ್ನು ತೆಗೆದುಕೊಂಡು ಆ ನೀರಿನಲ್ಲಿ ೨ ಚಹಾ ಚಮಚ (ಟೇಬಲ್ ಸ್ಪೂನ್) ಕಲ್ಲುಪ್ಪನ್ನು ಹಾಕಬೇಕು. ಉಪಾಸ್ಯ ದೇವತೆಗೆ ‘ನನ್ನ ಶರೀರದಲ್ಲಿನ ತೊಂದರೆದಾಯಕ ಶಕ್ತಿಯು ಉಪ್ಪುನೀರಿನಲ್ಲಿ ಸೆಳೆಯಲ್ಪಟ್ಟು ನಾಶವಾಗಲಿ’ ಎಂದು ಪ್ರಾರ್ಥನೆ ಮಾಡಬೇಕು. ನಾಮಜಪ ಮಾಡುತ್ತಾ ಆ ಕಲ್ಲುಪ್ಪಿನ ನೀರನ್ನು ತಂಬಿಗೆಯಿಂದ ಮೈಮೇಲೆ ಸುರಿಯಬೇಕು. ಅನಂತರ ನಿತ್ಯದಂತೆ ಸ್ನಾನ ಮಾಡಬೇಕು. ಸ್ನಾನದ ನೀರಿನಲ್ಲಿ ಉಪ್ಪು ಹಾಕುವುದರ …

ಪೂರ್ತಿ ಓದಿ...