ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ ನಿಖಿಲಗುಣಭರಿತ | ಭಾವಜಾರಿಪ್ರಿಯ ನಿರಾಮಯ ರಾವಣಾಂತಕ ರಘುಕುಲಾನ್ವಯ ದೇವ ಅಸುರವಿರೋಧಿ ರಕ್ಷಿಸು ನಮ್ಮನನವರತ ॥ ೨ ॥ (ಹಿಂದಿನ ಲೇಖನದಿಂದ ಮುಂದುವರೆದ ಭಾಗ) ಭಗವಂತನ ಯಾವುದೇ ಅವತಾರರೂಪದಲ್ಲಿ ನಾವು ಮೊಟ್ಟಮೊದಲಿಗೆ ಮಾಡಬೇಕಾದ ಚಿಂತನೆ ಅದು ಮೂಲರೂಪದಿಂದ ಮತ್ತು ಉಳಿದ ಯಾವುದೇ ಅವತಾರರೂಪದಿಂದ ಪೂರ್ಣವಾಗಿ ಅಭಿನ್ನ ಎಂದು. ಮೂಲರೂಪ ಹಿರಿದಾದದ್ದು ಅವತಾರರೂಪಗಳು ಕಡಿಮೆಗುಣಗಳದ್ದು, ಅಥವಾ ಶ್ರೀಕೃಷ್ಣ ಪರಮಪರಿಪೂರ್ಣನಾದವನು, ಉಳಿದ ರೂಪವೆಲ್ಲವೂ ಆ ರೂಪಕ್ಕಿಂತ ಕಡಿಮೆಯಾದದ್ದು …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 019
(ವೈಷ್ಣವಬಾಂಧವರೇ, ಶ್ರೀ ಹರಿಭಕ್ತಿಸಾರ ಭಗವಂತನ ಮುಂದೆ ಭಕ್ತವರೇಣ್ಯರಾದ ಶ್ರೀ ಕನಕದಾಸರ ಮಾಡಿಕೊಂಡ ನಿವೇದನೆ ಎಂದು ಹಿಂದೆಯೇ ತಿಳಿಸಿದೆ. ಇದನ್ನು ಉಳಿದ ವಿಶ್ವನಂದಿನಿಯ ಲೇಖನಗಳಂತೆ ಓದಬೇಡಿ. ನಿಮ್ಮ ಕೊಠಡಿಯ ಕದವಿಕ್ಕಿಕೊಂಡು, ಅಥವಾ ಸಾಧ್ಯವಾದರೆ ದೇವರ ಮುಂದೆ ಕುಳಿತು ಸುತ್ತಲಿನ ಪ್ರಪಂಚವನ್ನು ಮರೆತು ಓದುತ್ತ ಹೋಗಿ. ಎದುರಿನಲ್ಲಿ ನಿಮ್ಮೊಡೆಯ ಕುಳಿತಿದ್ದಾನೆ, ನಿಮ್ಮ ಭಕ್ತಿಯ ಮಾತನ್ನು ಕೇಳುತ್ತಿದ್ದಾನೆ ಎನ್ನುವ ನಿಶ್ಚಯದಿಂದ ಓದುತ್ತ ಹೋಗಿ, ಶ್ರೀ ಕನಕದಾಸರ ದಿವ್ಯವಾದ ಮಾತುಗಳಲ್ಲಿ ತತ್ವಾಭಿಮಾನಿದೇವತೆಗಳ ಸನ್ನಿಧಾನವಿದೆ, ಶ್ರೀಮದಾಚಾರ್ಯರ ಸಿದ್ಧಾಂತದ ಸಾರವಿದೆ ಹೀಗಾಗಿ ಪರಮಾತ್ಮ ಪ್ರೀತಿಯಿಂದ ಅದನ್ನು ಕೇಳುತ್ತಾನೆ. ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ. ನಿಮ್ಮೊಳಗಿನ …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 018
ದಾಸಸುರಭಿ (ದಾಸಸಾಹಿತ್ಯದ ಕೃತಿಗಳ ಅರ್ಥವನ್ನು ವಿವರಿಸುವ ವಿಶ್ವನಂದಿನಿಯ ಭಾಗ) ಶ್ರೀ ಹರಿಭಕ್ತಿಸಾರ- ಪದ್ಯ – 1 ಶ್ರೀ ಕನಕದಾಸರಿಂದ ವಿರಚಿತವಾದ ಶ್ರೀಹರಿಭಕ್ತಿಸಾರದ ವ್ಯಾಖ್ಯಾನ ಶ್ರೀ ವಿಷ್ಣುದಾಸರಿಂದ ರಚಿತವಾದ ಸಾರಾಮೃತ ಪಾದಕೆರಗುವ ಭಕ್ತಜನರ ಬಾಧೆಗಳ ಕಳೆಯುತ್ತ ನಿತ್ಯದಿ ಮೋದ ನೀಡುವ ಗುರುಗಳಂತರ್ಯಾಮಿಗೊಂದಿಸುತ | ಆದಿಕೇಶವದಾಸರೊರಿದಿಹ ಮಾಧವಪ್ರಿಯವಾದ ಕೃತಿಯನು ಆದರದಿ ವಿವರಿಸುವೆ ಶ್ರೀಹರಿಭಕ್ತಿಸಾರವನು ॥ ನಿರಂತರ ಭಗವತ್ಸ್ಮರಣಶೀಲರಾದ ದಾಸವರ್ಯ ಶ್ರೀಕನಕದಾಸರು ಭವಬಂಧಮೋಚಕವಾದ ಭಗವನ್ನಾಮಸ್ಮರಣೆ, ಗುಣಮಾಹಾತ್ಮ್ಯಚಿಂತನ ಮತ್ತು ಸರ್ವಾತ್ಮನಾ ಶರಣಾಗತಿ ಎಂಬ ಮೂರು ಸಾಧನಗಳನ್ನು ಕಲಿಕಾಲದಿಂದ ಕಲುಷಿತರಾದ ಜನರಿಗೆ ಮೋಕ್ಷಮಾರ್ಗವನ್ನಾಗಿ ತಿಳಿಸಲೋಸುಗ ಶ್ರೀಹರಿಭಕ್ತಿಸಾರ ಎಂಬ ಶ್ರೇಷ್ಠಕೃತಿಯನ್ನು ರಚನೆ ಮಾಡಲು …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 016
ತತ್ವಸುರಭಿ (ಶ್ರೀಮನ್ ಮಧ್ವಸಿದ್ಧಾಂತದ ಮಹೋನ್ನತತತ್ವಗಳನ್ನು ತಿಳಿಸುವ ವಿಶ್ವನಂದಿನಿಯ ಭಾಗ) ಹದಿನಾರು ಕಲೆಗಳು ಸಂಸಾರದಲ್ಲಿ ಬಿದ್ದಿರುವ ಜೀವನನ್ನು ಉದ್ದರಿಸಿ ಅವನಿಗೆ ಮೋಕ್ಷ ನೀಡುವ ಅಂತರ್ಯಾಮಿಯ ಹದಿನಾರು ಕಾರುಣ್ಯದ ಮುಖಗಳು. ಬನ್ನಂಜೆ ಈ ಹದಿನಾರು ಕಲೆಗಳನ್ನು ಬೇಲಿಗಳು ಎಂದು ಕರೆಯುತ್ತಾರೆ, ಮತ್ತು ಅವನ್ನು ದಾಟಿದಾಗ ಹದಿನೇಳನೆಯ ಲಕ್ಷ್ಮೀದೇವಿ ಸಿಗುತ್ತಾಳೆ, ಹದಿನೆಂಟನೆಯವನು ಭಗವಂತ ಎಂದು ಹೇಳುತ್ತಾರೆ. ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಸಿದ್ಧಾಂತಕ್ಕೆ ವಿರುದ್ಧವಾದ ಮಾತುಗಳಿವು, ನಮ್ಮನ್ನು ತಮಸ್ಸಿಗೆ ಕರೆದೊಯ್ಯುವಂತಹ ಅಪಸಿದ್ಧಾಂತಗಳು. ಈ ಷೋಡಶಕಲೆಗಳ ಬಗ್ಗೆ ಷಟ್ಪ್ರಶ್ನ ಉಪನಿಷತ್ತು, ಅದರ ಭಾಷ್ಯ ಮತ್ತು ಟೀಕಾಗ್ರಂಥಗಳಲ್ಲಿ ನಮಗೆ ನಿಖರವಾದ ಮಾಹಿತಿ ದೊರೆಯುತ್ತದೆ. ಷೋಡಶಕಲಃ ಪುರುಷಃ …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 015
ಗುರುಕಥಾಸುರಭಿ (ನಮ್ಮ ಭವ್ಯ ಮಾಧ್ವಪರಂಪರೆಯ ಮಹೋನ್ನತ ಜ್ಞಾನಿಗಳ ಚರಿತ್ರಚಿತ್ರಣ ಮಾಡುವ ವಿಶ್ವನಂದಿನಿಯ ಭಾಗ) ಗುರುಭಕ್ತಿ ಎಂದರೆ ಹೀಗಿರಬೇಕು… ನಮ್ಮ ಮಾಧ್ವಪರಂಪರೆಯ ಜ್ಞಾನಿವರೇಣ್ಯರು ಶಾಸ್ತ್ರ ಹೇಳುವ ಮಹೋನ್ನತ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವರು. ಶ್ರೀಮದಾಚಾರ್ಯರು ತಮ್ಮ ಗ್ರಂಥಗಳಲ್ಲಿ ಹೇಳಿದ ಸೂಕ್ಷ್ಮ ವಿಷಯಗಳನ್ನೂ, ಎಷ್ಟೋ ಬಾರಿ ಸಾಮಾನ್ಯರಿಗೆ ಮಾಡಲು ಸಾಧ್ಯವೇ ಇಲ್ಲದ ಆಚರಣೆಗಳನ್ನು ಲೀಲೆಯಿಂದ ಮಾಡಿದವರು. ಅದಕ್ಕಾಗಿಯೇ ಅವರ ಜೀವನಚರಿತ್ರೆಯೂ ಪರಮಾದ್ಭುತವಾಗುತ್ತದೆ. ಸಾಧನಮಾರ್ಗದಲ್ಲಿ ಗುರುಗಳಿಗಿರುವ ಸ್ಥಾನ ಮತ್ತ್ಯಾರಿಗೂ ಇಲ್ಲ. ನಮಗೆ ಗುರುವೇ ಪರದೈವ. ಗುರುವಿನಲ್ಲಿಯೇ ಪರದೈವ. ಇದೊಂದು ಮಹೋನ್ನತ ಸಿದ್ಧಾಂತ. ಶ್ರೀಮದಾಚಾರ್ಯರು ನಮಗೆ ಗೀತಾಭಾಷ್ಯದ ಏಳನೆಯ …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 014
ದಾಸಸುರಭಿ ಶ್ರೀ ಪುರಂದರದಾಸರ “ಮೂರ್ಖರಾದರು ಲೋಕದೊಳಗೆ” ಎಂಬ ಹಾಡಿನ ಅರ್ಥ – ಭಾಗ – ೩ ಹಿಂದಿನ ಎರಡು ಪದ್ಯಗಳಲ್ಲಿ ಎರಡು ರೀತಿಯ ಮೂರ್ಖರನ್ನು ಉಲ್ಲೇಖಿಸಿದ ಶ್ರೀ ಪುರಂದರದಾಸರು ಈ ಮೂರನೆಯ ಪದ್ಯದಲ್ಲಿ ಮತ್ತೆ ಎರಡು ರೀತಿಯ ಮೂರ್ಖರನ್ನು ಉಲ್ಲೇಖಿಸುತ್ತಾರೆ. ಮಾಡಲಿಕ್ಕಾಗದ ಕೆಲಸವನ್ನು ಮಾಡುವವನು ಮೂರ್ಖ, ಮಾಡಬೇಕಾದ ಕೆಲಸವನ್ನು ಮಾಡಿದಿರುವವನೂ ಮೂರ್ಖ ಎನ್ನುತ್ತಾರೆ, ಪುರಂದರದಾಸರು. ಮುಪ್ಪಿನಲಿ ಮದುವೆ ಮಾಡಿ ಮಾಡಿಕೊಂಬುವ ಮೂರ್ಖ ಸರ್ಪದಲಿ ಸರಸವಾಡುವನೇ ಮೂರ್ಖ ಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖ ಅಪ್ಪರಂಗಯ್ಯ ಭಜಿಸದವ ಮೂರ್ಖನಯ್ಯ ।। ೩ ।। “ಮುಪ್ಪಿನಲಿ ಮದುವೆ …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 013
ಅನುಷ್ಠಾನ ಸುರಭಿ (ವಿಷ್ಣುಭಕ್ತರು ಮಾಡಬೇಕಾದ ಅನುಷ್ಠಾನ, ಅನುಸಂಧಾನಗಳ ಕುರಿತು ತಿಳಿಸುವ ವಿಶ್ವನಂದಿನಿಯ ಭಾಗ) ಪ್ರತೀ ಸತ್ಕರ್ಮದ ಆರಂಭದಲ್ಲಿ ಮಾಡಬೇಕಾದ ಸಂಕಲ್ಪದ ಅರ್ಥ ಪ್ರತಿಯೊಂದು ಕರ್ಮದ ಆರಂಭದಲ್ಲಿ ಸಂಕಲ್ಪವನ್ನು ಮಾಡಬೇಕು. ಅಂತ್ಯದಲ್ಲಿ ಅದನ್ನು ಸಮರ್ಪಣೆ ಮಾಡಬೇಕು. ಇದನ್ನು ಸಾಮಾನ್ಯವಾಗಿ ಎಲ್ಲ ವೈದಿಕ ಮತಗಳ ಧಾರ್ಮಿಕರೂ ಆಚರಿಸುವ ಕರ್ಮ. ಆರಂಭದಲ್ಲಿ ದೇಶ-ಕಾಲಗಳನ್ನು ಹೇಳಿ, ಇಂಥಹ ಪ್ರದೇಶದಲ್ಲಿ, ಇಂತಹ ಸಮಯದಲ್ಲಿ ಇಂತಹ ಪ್ರಯೋಜನಕ್ಕಾಗಿ ಇಂತಹ ಸತ್ಕರ್ಮವನ್ನು ಅನುಷ್ಠಾನ ಮಾಡುತ್ತಿದ್ದೇನೆ, ಎನ್ನುವದು ಸಂಕಲ್ಪ. ಇಂತಹ ಸತ್ಕರ್ಮವನ್ನು ಮಾಡಿದ್ದೇನೆ, ಅದರ ಫಲ ನನಗೆ ದೊರೆಯಲಿ ಎನ್ನುವದು ಅಂತ್ಯದಲ್ಲಿ ಮಾಡುವ ಸಮರ್ಪಣೆ. ಮೊದಲಿಗೆ …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 012
ಜೀವನಸುರಭಿ ನಮ್ಮ ಮಕ್ಕಳ ಪ್ರತಿಭೆಯನ್ನು ಇನ್ನೊಬ್ಬರ ಮುಂದೆ ಜಾಹೀರು ಪಡಿಸುವದಕ್ಕಿಂತ ಮುಂಚೆ ನನಗೆ ಈ ಜಗತ್ತಿನಲ್ಲಿ ತುಂಬ ಆಶ್ಚರ್ಯವಾಗಿ ತೋರುವ ವಸ್ತು ಎಂದರೆ ಮನುಷ್ಯನ ದಡ್ಡತನ. ಮನುಷ್ಯ ಯಾಕಿಷ್ಟು ಮೂರ್ಖನಂತೆ ವರ್ತಿಸುತ್ತಾನೆ, ಇನ್ನೊಬ್ಬ ಮೂರ್ಖನನ್ನು ಅನುಸರಿಸುತ್ತಾನೆ ಎನ್ನುವದು ನನಗಿನ್ನೂ ಅರ್ಥವಾಗದ ವಿಷಯ. ಒಂದು ಕಥೆ ಇದೆ, ಅದರಲ್ಲೊಂದು ತತ್ವ, ಅದರಲ್ಲಿ ಕೆಲವು ಬದುಕಿನ ಪಾಠಗಳಿವೆ, ಓದಿ. ಶ್ರೀಮದಾಚಾರ್ಯರು ಇನ್ನೂ ಪುಟ್ಟ ಕೂಸು. ಶ್ರೀ ಮಧ್ಯಗೇಹಾರ್ಯರು ಅಕ್ಷರಾಭ್ಯಾಸ ಮಾಡಿಸುತ್ತಾರೆ. ಮೊದಲ ದಿವಸ ಅ ಆ ಇ ಈ ಎಂದು ತಿದ್ದಿ ಹೇಳಿಕೊಡುತ್ತಾರೆ. ಮಾರನೆಯ ದಿವಸ ಮನೆಯ …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 011
ಜೀವನಸುರಭಿ ನಮ್ಮ ಮಧ್ವಶಾಸ್ತ್ರದಂತಹ ಶಾಸ್ತ್ರ ಮತ್ತೊಂದಿದ್ದರೆ ತೋರಿಸಿ ದೇವರಲ್ಲಿ ಭಕ್ತಿ ಕೊಡು ಎಂದು ಪ್ರಾರ್ಥನೆ ಮಾಡಬೇಕು, ನಮಗೆ ಗೊತ್ತಿದೆ, ಜ್ಞಾನ ಕೊಡು ಎಂದು ಪ್ರಾರ್ಥನೆ ಮಾಡಬೇಕು ನಮಗೆ ಗೊತ್ತಿದೆ. ವೈರಾಗ್ಯವನ್ನು ಬೇಡಲೇಬೇಕು, ನಮಗೆ ಗೊತ್ತಿದೆ. ಕಷ್ಟಬಂದಾಗ ಭಗವಂತನನ್ನೇ ಬೇಡಬೇಕು, ವಿಧಿಯಿಲ್ಲ. ಕಾಮ್ಯಕರ್ಮವಾದರೂ ನಿಷಿದ್ಧವಲ್ಲ. ಬೇಡಿದರೆ ಅವನನ್ನು ಬೇಡೋಣ, ಆದರೆ, ಏನು ಮಾಡಿದರೂ ಸ್ವಾರ್ಥಕ್ಕೆ ಮಾಡುತ್ತಾನೆ ಎಂದು ಹೀಯಾಳಿಸುವ ಮಂದಿಯನ್ನಲ್ಲ. ಆದರೆ, ಸ್ವಾಮಿ, ನನ್ನ ಹೆಂಡತಿಯಲ್ಲಿ ನನಗೆ ಸದಾ ಪ್ರೀತಿಯಿರುವಂತೆ ಮಾಡು, ಆ ಪ್ರೀತಿಯನ್ನು ಅಭಿವೃದ್ಧಗೊಳಿಸುವಂತೆ ಮಾಡು ಎಂದು ಪ್ರಾರ್ಥನೆ ಮಾಡಬಹುದೇ ಎಂದರೆ ಮಾಡಬಹುದು ಅಲ್ಲ, …
ಪೂರ್ತಿ ಓದಿ...ವಿಶ್ವನಂದಿನಿ ಲೇಖನ ಮಾಲೆ – 010
ತೀರ್ಥಯಾತ್ರಾಸುರಭಿ (ಈ ಸುರಭಿಯಲ್ಲಿ ಎಲ್ಲ ತೀರ್ಥಕ್ಷೇತ್ರಗಳ ಮಾಹಾತ್ಮ್ಯವನ್ನು ಗುರ್ವನುಗ್ರಹದಿಂದ ನನಗೆ ತಿಳಿದಷ್ಟು ನೀಡುತ್ತೇನೆ) ಶ್ರೀ ನಾಮಗಿರಿ ಕ್ಷೇತ್ರ ಶ್ರೀಲಕ್ಷ್ಮೀನರಸಿಂಹಮಾಹಾತ್ಮ್ಯಮ್ ನಾಮಗಿರಿ ಅಥವಾ ನಾಮಕಲ್ಲು (ನಾಮಕ್ಕಲ್ ಎಂದು ತಮಿಳಿನಲ್ಲಿ) ಎಂದು ಹೆಸರಾದ ತಮಿಳುನಾಡಿನ ಕ್ಷೇತ್ರ ಪರಮಪವಿತ್ರವಾದ ಶ್ರೀಲಕ್ಷ್ಮೀನರಸಿಂಹಕ್ಷೇತ್ರ. ಈ ಕ್ಷೇತ್ರದ ಕುರಿತು ಉಳಿದೆಲ್ಲ ಮಾಹಿತಿಗಳನ್ನು ನೀಡುವದಕ್ಕಿಂತ ಮೊದಲು ಈ ಕ್ಷೇತ್ರದಲ್ಲಿನ ಶ್ರೀ ನರಸಿಂಹದೇವರ ಜಾಗೃತ ಸನ್ನಿಧಾನದ ಕುರಿತು ಬರೆಯಬೇಕು. ಈ ಕ್ಷೇತ್ರದಲ್ಲಿ ಮುಖ್ಯಪ್ರಾಣದೇವರ, ಮಹಾಲಕ್ಷ್ಮೀದೇವಿಯ ಮತ್ತು ಶ್ರೀ ನರಸಿಂಹದೇವರ ಮೂರು ದೇವಾಲಯಗಳಿವೆ. ದೇವಸ್ಥಾನವನ್ನು ಪ್ರವೇಶಿಸಿದ ಪ್ರತಿಯೊಬ್ಬ ಭಕ್ತನಿಗೆ ದೇವರ ಸನ್ನಿಧಾನದ ಅನುಭವವಾಗುತ್ತದೆ. ನಾಮಗಿರಿಯಲ್ಲಿರುವ ವಿಗ್ರಹಗಳು ಬರಿಯ …
ಪೂರ್ತಿ ಓದಿ...