Friday , 16 October 2026

Rajeshwari

ಜೇನು ತಂದ ಸೌಭಾಗ್ಯ

honey

ಬೀಳಿಗಿಯ ಯಂಕಪ್ಪ, ದಿನಾಲೂ ಊರಿನ ದನಗಾಹಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿ ತುಂಬಾ ಬಡತನ. ಹೆಂಡತಿ ಹಾಗೂ ಬೆಳೆದು ನಿಂತ ಮಗಳೊಂದಿಗೆ ಜೀವನ ನಡೆಸುತ್ತಿದ್ದ. ಊರಿನ ಜನ ವರ್ಷಕ್ಕೊಮ್ಮೆ ನೀಡುತ್ತಿದ್ದ ಜೋಳ, ಕಾಳುಕಡಿ, ಅಲ್ಪ ಮೊತ್ತದ ಹಣ, ಜೀವನಕ್ಕೆ ಸಾಲುತ್ತಿರಲಿಲ್ಲ. ದನಗಳು ಹಾಕಿದ ಸೆಗಣಿಯ ಸಂಗ್ರಹದ ಮಾರಾಟದಿಂದ ಬಂದ ಅಲ್ಪಸ್ವಲ್ಪ ಹಣದಿಂದ ಹೊಟ್ಟೆ ಹೊರೆಯಲು ಅನುಕೂಲವಾಗುತ್ತಿತ್ತು. ಬೆಳಗಿನ ಜಾವ ಊರ ಹೊರ ಬಯಲಿನಲ್ಲಿ ಎಲ್ಲಾ ದನಗಳನ್ನು ನಿಲ್ಲಿಸಿ ನಂತರ ಸಮೀಪದ ಸಿದ್ಧೇಶ್ವರ ದೇವಸ್ಥಾನದ ಕಾಡಿಗೆ ಮೇಯಿಸಲು ತೆರಳುತ್ತಿದ್ದ. ಮಧ್ಯಾಹ್ನ ಸಮಯದಲ್ಲಿ, ಹಸಿರು ಮೇಯಿಸಿದ ದನಗಳು ಗಿಡಗಳ …

ಪೂರ್ತಿ ಓದಿ...

ನಾಯಿಯ ಬುದ್ಧಿ

ಒಂದು ಊರಿನಲ್ಲಿ ಎರಡು ನಾಯಿಗಳು ಇದ್ದವು. ಅವು ತಾವು ಒಳ್ಳೆಯ ಗೆಳೆಯರೆಂದು ಅಂದುಕೊಂಡಿದ್ದವು. ಒಂದು ಬಿಳಿ ಬಣ್ಣದ್ದು ಬಿಳಿಯ, ಇನ್ನೊಂದು ಕಪ್ಪು ಬಣ್ಣದ ಕರಿಯ. ಒಂದು ದಿನ ಕರಿಯ ಮತ್ತು ಬಿಳಿಯ ಎರಡೂ ಸೇರಿ ಊರ ಹೊರತನಕ ಬಂದು ಬಿಟ್ಟವು. ಚೆಂದವಾಗಿ ಆಟವಾಡುತ್ತಾ ಮೈಮರೆತಿದ್ದವು. ಆಗ ಹತ್ತಿರದ ಪೊದೆಯಲ್ಲಿ ಸದ್ದಾಗಿ ಅವುಗಳಲ್ಲಿನ ಬೇಟೆಗಾರ ಜಾಗ್ರತನಾದ. ಒಮ್ಮೆಲೇ ಪೊದೆಯತ್ತ ದಾಳಿ ಮಾಡಿದರೆ ಸಿಕ್ಕಿತೊಂದು ಕಾಡುಕೋಳಿ. ಒಂದೇ ಹಕ್ಕಿ ಎರಡೂ ನಾಯಿಗಳ ಬಾಯಿಯಲ್ಲಿ. ಅದು ತನ್ನ ಬೇಟೆ ಎಂದು ಎರಡೂ ಕಿತ್ತಾಡುತ್ತಿದ್ದಾಗ ನಡುವೆ ಬಂತೊಂದು ಚಿರತೆ! ಇವುಗಳು …

ಪೂರ್ತಿ ಓದಿ...

ಭದ್ರಾಚಲ ರಾಮದಾಸರು

ರಾಮಾಯಣದ ಕಾಲದಿಂದಲೂ ನಮ್ಮ ಜನ ಶ್ರೀರಾಮನನ್ನು ದೇವರೆಂದು ನಂಬಿದ್ದಾರೆ. ಹಾಗೆ ನಂಬಿ ಆತನನ್ನು ಪೂಜಿಸುವ ರಾಮಭಕ್ತರನ್ನು ನಾವು ನಮ್ಮ ದೇಶದ ಎಲ್ಲ ಕಡೆಯಲ್ಲಿಯೂ ಕಾಣಬಹುದು. ನಂಬಿ ಕರೆದರೆ ದೇವರು ಬಂದೇ ಬರುತ್ತಾನೆ ಎಂದು ಸಾರುವ ಕಷ್ಟದಲ್ಲಿದ್ದ ಭಕ್ತರನ್ನು ಶ್ರೀರಾಮನು ಉದ್ಧಾರ ಮಾಡಿದ ಎಷ್ಟೋ ಕಥೆಗಳು ಪ್ರಚಾರದಲ್ಲಿವೆ. ಅಂತಹ ಕಥೆಗಳಲ್ಲಿ ಭದ್ರಾಚಲ ರಾಮದಾಸರ ಕಥೆಯೂ ಒಂದು. ಶ್ರೀ ರಾಮನ ಆಶಿರ್ವಾದ: “ಭದ್ರಾಚಲ” ಎಂದರೆ ಭದ್ರ, ಎಂಬ ಹೆಸರಿನ ಒಂದು ಪರ್ವತ ಎಂದು ಅರ್ಥ. ಈ ಪರ್ವತ ಆಂಧ್ರಪ್ರದೇಶದ ಖಮ್ಮಮ್ಮ ಜಿಲ್ಲೆಯಲ್ಲಿದೆ. ಅದರ ಪಕ್ಕದಲ್ಲಿ ಗೋದಾವರಿ ನದಿ ಹರಿಯುತ್ತದೆ. …

ಪೂರ್ತಿ ಓದಿ...

ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?

Lord Ganesh

ಗಣೇಶ ಚತುರ್ಥಿಯನ್ನು ಕುಟುಂಬದಲ್ಲಿ ಯಾರು ಆಚರಿಸಬೇಕು, ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ಗಣೇಶ ಚತುರ್ಥಿಯಂದು ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ. ಕುಟುಂಬದಲ್ಲಿ ಯಾರು ಆಚರಿಸಬೇಕು? ಗಣೇಶ ಚತುರ್ಥಿಯಂದು ಆಚರಿಸಲಾಗುವ ವ್ರತವನ್ನು ‘ಸಿದ್ಧಿವಿನಾಯಕ ವ್ರತ’ ಎನ್ನುತ್ತಾರೆ. ವಾಸ್ತವದಲ್ಲಿ ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣ ತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿ (ಒಲೆ) ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂರ್ತಿಯ ಪೂಜೆಯನ್ನು ಮಾಡಬೇಕು; ಆದರೆ …

ಪೂರ್ತಿ ಓದಿ...

ಗ್ರಹಣಕಾಲದಲ್ಲಿ ಆಹಾರವನ್ನು ಏಕೆ ಸೇವಿಸಬಾರದು?

ಅ. ಆರೋಗ್ಯದ ದೃಷ್ಟಿಯಿಂದ: ಸೂರ್ಯ-ಚಂದ್ರರು ಅನ್ನರಸದ ಪೋಷಣೆಯನ್ನು ಮಾಡುವ ದೇವತೆಗಳಾಗಿದ್ದಾರೆ. ಗ್ರಹಣದ ಸಮಯದಲ್ಲಿ ಅವರ ಶಕ್ತಿಯು ಕಡಿಮೆಯಾಗಿರುವುದರಿಂದ ಭೋಜನವು ವರ್ಜ್ಯವಾಗಿದೆ. [signinlocker] ಆ. ಅಧ್ಯಾತ್ಮದ ದೃಷ್ಟಿಯಿಂದ: ಆಧುನಿಕ ವಿಜ್ಞಾನವು ಗ್ರಹಣದ ವಿಚಾರವನ್ನು ಕೇವಲ ಸ್ಥೂಲ, ಅಂದರೆ ಭೌಗೋಳಿಕ ದೃಷ್ಟಿಯಿಂದ ನೋಡುತ್ತದೆ; ಆದರೆ ನಮ್ಮ ಋಷಿಮುನಿಗಳು ಗ್ರಹಣದ ಸೂಕ್ಷ್ಮಪರಿಣಾಮ, ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ದುಷ್ಪರಿಣಾಮಗಳ ವಿಚಾರವನ್ನೂ ಮಾಡಿದ್ದಾರೆ. ಗ್ರಹಣಕಾಲದಲ್ಲಿ ವಾಯುಮಂಡಲವು ರಜತಮಾತ್ಮಕ (ತೊಂದರೆದಾಯಕ) ಲಹರಿಗಳಿಂದ ತುಂಬಿಕೊಂಡಿರುತ್ತದೆ. ಈ ಕಾಲದಲ್ಲಿ ಆಹಾರವನ್ನು ಸೇವಿಸುವುದು ನಿಷಿದ್ಧವಾಗಿದೆ. ರಜ-ತಮಾತ್ಮಕ ಲಹರಿಗಳಿಂದ ಕೂಡಿದ ವಾಯುಮಂಡಲದಿಂದ ಅನ್ನವು ದೂಷಿತವಾಗಿರುತ್ತದೆ. ಇಂತಹ ಅನ್ನವನ್ನು ಸೇವಿಸುವುದರಿಂದ …

ಪೂರ್ತಿ ಓದಿ...

ಲವ ಕುಶ

ಶ್ರೀರಾಮಚ೦ದ್ರ, ಸೀತಾದೇವಿ – ನಮ್ಮ ದೇಶದಲ್ಲಿ ಈ ಹೆಸರುಗಳನ್ನು ಕೇಳದವರಾರು? ತ೦ದೆಯ ಮಾತನ್ನು ಉಳಿಸುವುದಕ್ಕಾಗಿ ಶ್ರೀರಾಮಚ೦ದ್ರನು ರಾಜಪದವಿಯನ್ನು ಸಹ ತೊರೆದು ವನವಾಸವನ್ನು ಕೈಗೊ೦ಡ. ಹೂವಿನ೦ತೆ ಕೋಮಲೆಯಾದ ಸೀತಾದೇವಿ ತನ್ನ ಗ೦ಡನನ್ನು ನೆರಳಿನ೦ತೆ ಅನುಸರಿಸಿ ಅರಣ್ಯಕ್ಕೆ ಹೋದಳು. ಈ ಗ೦ಡ – ಹೆ೦ಡತಿಯರು ಬಾಳಿನ ಉದ್ದಕ್ಕೂ ಪಡಬಾರದ ಕಷ್ಟ ಸ೦ಕಟಗಳಿಗೆ ತುತ್ತಾದರು. ಆದರೂ ಅವರು ಧರ್ಮವನ್ನು ಬಿಡಲಿಲ್ಲ. ಇದರಿ೦ದಲೇ ಅವರು ನಮಗೆ ಆದರ್ಶರಾಗಿದ್ದಾರೆ. ಆ ಶ್ರೀರಾಮ – ಸೀತಾದೇವಿಯರ ಜೀವನ ಕಥೆಯೇ ‘ರಾಮಾಯಣ’, ಅದನ್ನು ‘ಸೀತಾಚರಿತ್ರೆ’ ಎ೦ದೂ ಕರೆಯುತ್ತಾರೆ. ರಾಮಾಯಣವನ್ನು ಮೊಟ್ಟಮೊದಲು ರಚಿಸಿದ ಕವಿ ವಾಲ್ಮೀಕಿ. …

ಪೂರ್ತಿ ಓದಿ...

ವಾಲ್ಮೀಕಿ

valmiki

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ. ಶ್ರೀರಾಮ, ಸೀತಾದೇವಿ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ನಮ್ಮ ದೇಶದಲ್ಲಿ ಈ ಹೆಸರುಗಳನ್ನು ಯಾರು ಕೇಳಿಲ್ಲ? ಶ್ರೀರಾಮನವಮಿ ದೊಡ್ಡ ಹಬ್ಬ. ರಾಮೋತ್ಸವಗಳನ್ನು ನಡೆಸಿ ಶ್ರೀರಾಮ ಮತ್ತು ಸೀತೆಯರ ಕಥೆಯನ್ನು ಜನ ಮತ್ತೆ ಮತ್ತೆ ಕೇಳುತ್ತಾರೆ. ಅವರನ್ನು ಭಕ್ತಿಯಿಂದ ಪೂಜಿಸುತ್ತಾರೆ. ಶ್ರೀರಾಮ ಮತ್ತು ಸೀತಾದೇವಿಯರ ಕಥೆಯೇ ರಾಮಾಯಣ. ಸ್ವಾರಸ್ಯವಾದ ಒಂದು ಸಂಗತಿ ಎಂದರೆ ಶ್ರೀ ರಾಮನೇ ರಾಮಾಯಣದ ಕಥೆಯನ್ನು ಕೇಳಿ ಸಂತೋಷಪಟ್ಟನು. ಅವನ ಮುಂದೆ ಆ ಕಥೆಯನ್ನು ಪದ್ಯರೂಪದಲ್ಲಿ ಇಂಪಾಗಿ ಹಾಡಿದವರು ಇಬ್ಬರು ಹುಡುಗರು …

ಪೂರ್ತಿ ಓದಿ...

ಕರ್ನಾಟಕದ ಭಾಷಾ ಪರಿಸ್ಥಿತಿ

ಭಾರತವು ಅನೇಕ ಭಾಷೆಗಳನ್ನು ಹೊಂದಿರುವ ರಾಷ್ಟ್ರ. 1961ರ ಜನಗಣತಿಯ ಮಾಹಿತಿಯ ಮೇರೆಗೆ ಮಾತೃಭಾಷೆಗಳಾಗಿ ನಮೂದಿಸಿರುವ ಭಾಷೆಗಳ ಸಂಖ್ಯೆ 1652. ಕರ್ನಾಟಕವನ್ನು ತೆಗೆದುಕೊಂಡರೆ ಇಲ್ಲಿ 177 ಭಾಷೆಗಳನ್ನು ಮಾತೃಭಾಷೆಗಳನ್ನಾಗಿ ಹೊಂದಿರುವ ಜನರು ವಾಸಿಸುತ್ತಿದ್ದಾರೆ. ಕರ್ನಾಟಕದ ಪ್ರತಿಯೊಂದು ಊರೂ, ಪ್ರದೇಶವೂ ಅನೇಕ ಭಾಷೆಗಳನ್ನು ಆಡುವ ಜನರಿಂದಕೂಡಿದ್ದಾಗಿದೆ ಎಂದು ಹೇಳಬಹುದು. ಕರ್ನಾಟಕದಲ್ಲಿ ಕನ್ನಡ, ಉರ್ದು, ತೆಲುಗು, ಮರಾಠಿ, ತಮಿಳು, ಮಲಯಾಳಂ, ಹಿಂದಿ, ತುಳು, ಕೊಂಕಣಿ, ಲಮಾಣಿ ಭಾಷೆಗಳನ್ನು ಮಾತೃಭಾಷೆಗಳನ್ನಾಗಿ ಹೊಂದಿರುವ ಜನರಿದ್ದಾರೆ. ಕನ್ನಡವನ್ನು ಮಾತೃಭಾಷೆ ಯನ್ನಾಗಿ ಬಳಸುವ ಜನರ ಸಂಖ್ಯೆ ಶೇ.65.94. ಉರ್ದು ತೆಲುಗು ನಂತರದ ಸ್ಥಾನಗಳನ್ನು ಪಡೆದಿವೆ. …

ಪೂರ್ತಿ ಓದಿ...

ಭೀಮನ ಅಮಾವಾಸ್ಯೆ ವ್ರತ ವಿಚಾರ ಧಾರೆ

bheemana amavase

ಸಾಮಾನ್ಯವಾಗಿ ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲವಾದರೂ, ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತ ಎಂದು ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. ಇದಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಹೆಸರುಂಟು. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ. ಆಷಾಢ ಬಹುಳ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಪತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುವುದುಂಟು. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ. ಯಾವುದೇ ಹಬ್ಬ, ವ್ರತ ಕೈಗೊಳ್ಳುವ …

ಪೂರ್ತಿ ಓದಿ...

ಖುದಿರಾಮ್ ಭೋಸ್

Khudiram Bose

‘ಕಿಂಗ್ಸ್ ಫೊರ್ಡ್’ ಎಂಬ ಬ್ರಿಟೀಷ್ ನ್ಯಾಯಧೀಶ ಕಲ್ಕತ್ತಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ ಆನಂದವನ್ನು ಅನುಭವಿಸುತ್ತಿರುತ್ತಾನೆ. ಬಿಳಿ ಚರ್ಮದ ನಾಯಿಗೆ ಸರಿಯಾದ ಪಾಠ ಕಲಿಸಬೇಕೆಂದು ನಿಶ್ಚಯಿಸಿದ ಅಂದಿನ ಕ್ರಾಂತಿಕಾರಿಗಳು ಅವನನ್ನು ಕೊಲ್ಲಲು ನಿರ್ಧರಿಸುತ್ತಾರೆ. ಆದರೆ ಇದರ ಸುಳಿವು ಪಡೆದ ಬ್ರಿಟೀಷ್ ಸರ್ಕಾರ ಕಿಂಗ್ಸ್ ಫೊರ್ಡ್ ನನ್ನು ಮುಜಾಫರಪುರಕ್ಕೆ ವರ್ಗಾಯಿಸುತ್ತದೆ. ಕಿಂಗ್ಸ್ ಫೊರ್ಡನ ರಕ್ತದಾಹದಿಂದ ಬೇಸತ್ತಿದ್ದ ಕ್ರಾಂತಿಕಾರರಿಗೆ ವರ್ಗಾವಣೆಯ ಸುದ್ದಿ ಅಡ್ದಿಯಾಗಲಿಲ್ಲ. ಅವನನ್ನು ಕೊಲ್ಲುವ ಅವಕಾಶವನ್ನು ಹದಿನೆಂಟು ವರ್ಷದ ಸಿಡಿಲ ಮರಿಗೆ ವಹಿಸಲಾಯಿತು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿ ಕಿಂಗ್ಸ್ ಫೋರ್ಡನ ಚಲನವಲನಗಳನ್ನು …

ಪೂರ್ತಿ ಓದಿ...