Rajeshwari

ಬೆಂಕಿ ಕಡ್ಡಿಗಳನ್ನು ಹೇಗೆ ತಯಾರಿಸುತ್ತಾರೆ ಗೊತ್ತಾ? ಇಲ್ಲಿದೆ ಅದ್ಭುತ ದೃಶ್ಯ

stick

ಚಿಕ್ಕದಾದ ಬೆಂಕಿ ಪೊಟ್ಟಣಗಳಲ್ಲಿ ಶಿಸ್ತಿನ ಸಿಪಾಯಿಗಳಂತೆ ತಲೆಗೆ ಕಪ್ಪು/ ಕೆಂಪು ಟೋಪಿ ಇಟ್ಟ ಮನುಷ್ಯನಂತಿರುವ ಪುಟ್ಟ ಬೆಂಕಿ ಕಡ್ಡಿಗಳನ್ನು (Matches | How It’s Made) ನೋಡಿದರೆ ಇದನ್ನು ಹೇಗೆ ತಯಾರಿಸುತ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮೂಡುತ್ತದೆ. ಸದ್ಯ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಬೆಂಕಿಕಡ್ಡಿಗಳನ್ನು ತಯಾರಿಸುವ ದೃಶ್ಯವನ್ನೊಳಗೊಂಡ ವಿಡಿಯೋವೊಂದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಲಾರಂಭಿಸಿದೆ. http://www.suvarnanews.tv/life/this-is-how-match-sticks-made

ಪೂರ್ತಿ ಓದಿ...

ಕೋಳಿ ಅಂಕ

ಕೋಳಿ ಅಂಕ

ಕೋಳಿ ಅಂಕ ಕೋಳಿಗಳ ಕಾದಾಟದ ಆಟ. ಎರಡು ಬಲಿತ, ಬಲಿಷ್ಠ ಹುಂಜಗಳ ಕಾಲಿಗೆ ಹರಿತವಾದ ಸಣ್ಣ ಕತ್ತಿ(ಬಾಲು)ಗಳನ್ನು ಕಟ್ಟಿ ಅವುಗಳನ್ನು ಹೋರಾಟಕ್ಕೆ ಬಿಡುವರು. ಹುಂಜಗಳು ಪರಸ್ಪರ ಕಾದಾಡುವಾಗ ಯಾವ ಹುಂಜವುೆದುರಾಳಿಯನ್ನು ಗಾಯಗೊಳಿಸಿ ಹೈರಾಣಾಗಿಸುವುದೋ ಆ ಹುಂಜವು ವಿಜಯಿಯಾದಂತೆ. ಅದರ ಯಜಮಾನನಿಗೆ ಬಹುಮಾನ ಸಲ್ಲುವುದು. ಅಂತೆಯೇ ಕೋಳಿ ಅಂಕದಲ್ಲಿ ಗೆಲ್ಲಲೆಂದು ಮುತುವರ್ಜಿವಹಿಸಿ ಕೋಳಿ ಸಾಕುವುದೂ ಸಹಜ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಆಟವು ಕೋಳಿ ಕಟ್ಟ ಎಂದು ಪ್ರಸಿದ್ಧಿ. ಕಂಬಳದಂತೆಯೇ ಕೋಳಿ ಕಟ್ಟವೂ ಸ್ಥಳೀಯರಲ್ಲಿ ಜನಪ್ರಿಯ. ಗೆಲ್ಲಬಹುದಾದ ಕೋಳಿಯ ಮೇಲೆ ಬಾಜಿ ಕಟ್ಟುವುದರಿಂದ ಇದನ್ನು ಜೂಜಾಟ …

ಪೂರ್ತಿ ಓದಿ...

ವಿಜಯ ದಶಮಿ

ವಿಜಯ ದಶಮಿ – ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ – ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. ‘ದಶ ಅಹರ್’ -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. ‘ದಶಹರ’ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರಭಾರತದ …

ಪೂರ್ತಿ ಓದಿ...

ನವರಾತ್ರಿ

ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬವನ್ನು ದುರ್ಗಾ ಪೂಜಾ ಎಂದು ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಓಮ್ಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ ‘ವಿಜಯ ದಶಮಿ‘, ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೂರ್ತಿಯ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಈ …

ಪೂರ್ತಿ ಓದಿ...

ಪಂಢರಾಪುರದಲ್ಲಿ ಪಾಂಡುರಂಗ ಮೂರ್ತಿಯ ಸ್ಥಾಪನೆ

ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರು ತಮ್ಮ ಸಾಮ್ರಾಜ್ಯಕ್ಕೆ ಪಾಂಡುರಂಗನ ಮೂರ್ತಿಯನ್ನು ತಂದರು ಮತ್ತು ತುಂಗಭದ್ರೆಯ ತೀರದಲ್ಲಿ ಸ್ಥಾಪಿಸಿದರು. ಏಕನಾಥ ಮಹಾರಾಜರ ಅಜ್ಜ ಭಾನುದಾಸ ಇವರು ಪಾಂಡುರಂಗನ ಭಕ್ತರಾಗಿದ್ದರು. ಅವರು ಆಧ್ಯಾತ್ಮದ ದೊಡ್ಡ ಅಧಿಕಾರಿಯಾಗಿದ್ದರು. ಅವರಿಗೆ ಪಾಂಡುರಂಗನು ಪ್ರಸನ್ನರಾಗಿ “ನಾನು ಕರ್ನಾಟಕದಲ್ಲಿ ಇದ್ದೀನಿ, ನೀನು ನನ್ನನ್ನು ಪಂಢರಪುರಕ್ಕೆ ಕರೆದುಕೊಂಡು ಹೋಗಿ ನನ್ನ ಸ್ಥಾಪನೆಯನ್ನು ಮಾಡು” ಎಂದು ಹೇಳಿದರು. ಹಾಗೆ ಭಾನುದಾಸನು ರಾಜನ ಬಳಿಗೆ ಹೋಗಿ ಮೂರ್ತಿಯನ್ನು ನೀಡಬೇಕೆಂದು ಬೇಡಿದನು. ರಾಜನಿಗೂ ಪಾಂಡುರಂಗನಿದ್ದ ದೃಷ್ಟಾಂತ ಸಿಕ್ಕಿತ್ತು. ಭಾನುದಾಸನ ಭಕ್ತಿಯನ್ನು ನೋಡಿ ಅವರಿಗೆ ಮೂರ್ತಿಯನ್ನು ನೀಡಿದರು. ಭಾನುದಾಸನು ಆ …

ಪೂರ್ತಿ ಓದಿ...

ಸುದಾಮನ ಕಥೆ

ಸುದಾಮನು ಒಬ್ಬ ಬಡ ಬ್ರಾಹ್ಮಣನಾಗಿದ್ದನು. ಭಗವಂತನಾದ ಶ್ರೀಕೃಷ್ಣನು ಸುದಾಮನ ಸ್ನೇಹಿತನಾಗಿದ್ದನು. ಸುದಾಮನ ಹೆಂಡತಿಯು ಸುದಾಮನಿಗೆ ಯಾವಾಗಲೂ “ನೀವು ಶ್ರೀಕೃಷ್ಣ ನಿಮ್ಮ ಸ್ನೇಹಿತನೆಂದು ಹೇಳುತ್ತಿರುತ್ತೀರಿ, ನೀವು ಯಾಕೆ ಅವನಲ್ಲಿ ನಮ್ಮ ಬಡತನವನ್ನು ಹೋಗಲಾಡಿಸು ಎಂದು ಹೇಳಬಾರದು? ಹೇಗಿದ್ದರು ಶ್ರೀಕೃಷ್ಣನು ಒಬ್ಬ ರಾಜನಾಗಿದ್ದಾನೆ. ಶ್ರೀಕೃಷ್ಣ ನಿಮಗೆ ಕೆಲವು ಸಹಸ್ರ ಬಂಗಾರದ ವರಹಗಳನ್ನು ನೀಡಿದರೆ, ಅವನ ಖಜಾನೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ”, ಎಂದು ಹೇಳುತ್ತಿದ್ದಳು. ಆದರೆ ಸುದಾಮನು ಇದಕ್ಕೆ ಒಪ್ಪುತ್ತಿರಲಿಲ್ಲ. ಒಂದು ದಿನ ಸುದಾಮನು ಹೆಂಡತಿಯ ಒತ್ತಾಯದ ಮೇರೆಗೆ ಶ್ರೀಕೃಷ್ಣನಲ್ಲಿ ತನ್ನ ಬಡತನದ ಬಗ್ಗೆ ಹೇಳಿ, ಧನ ಸಹಾಯ ಪಡೆಯಲು …

ಪೂರ್ತಿ ಓದಿ...

ಭಕ್ತ ಪ್ರಹ್ಲಾದ

ಹಿರಣ್ಯಕಶ್ಯಪೂಗೆ ದೊರೆತ ವರ ಹಿರಣ್ಯಕಶ್ಯಪೂ ಎಂಬ ರಾಜನಿಗೆ ಪ್ರಹ್ಲಾದನೆಂಬ ಮಗನಿದ್ದನು. ಹಿರಣ್ಯಕಶ್ಯಪೂವು ಘೋರ ತಪಸ್ಸನ್ನು ಆಚರಿಸಿ ದೇವರನ್ನು ಪ್ರಸನ್ನಗೊಳಿಸಿ ’ತನ್ನ ಮರಣವು ಮನುಷ್ಯನಿಂದಾಗಲಿ ಪ್ರಾಣಿಗಳಿಂದಾಗಲಿ ಬರಕೂಡದು, ಹಗಲು ಅಥವಾ ರಾತ್ರಿ ಬರಬಾರದು, ಮನೆಯಲ್ಲಿ ಅಥವಾ ಮನೆಯ ಹೊರಗೆ ಬರಬಾರದು.’ ಎಂದು ವರ ಪಡೆದುಕೊಂಡಿದ್ದನು. ಈ ವರದಿಂದ ಅವನಿಗೆ ತನ್ನನ್ನು ಯಾರೂ ಕೊಲ್ಲಲಾರರು ಎಂದು ಅನಿಸಿತು. ಇದರಿಂದ ರಾಜನಿಗೆ ಅಹಂಕಾರ ಬಂದಿತು. ಅವನಿಗೆ ‘ದೇವರಿಗಿಂತ ತಾನೇ ದೊಡ್ಡವನು’, ಎಂದು ಅನಿಸತೊಡಗಿತು. ಯಾರಾದರೂ ದೇವರ, ಅದರಲ್ಲಿಯೂ ವಿಷ್ಣುವಿನ ಹೆಸರುಹೇಳಿದರೆ ಅವನಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ರಹ್ಲಾದನ ದೇವ ಭಕ್ತಿ …

ಪೂರ್ತಿ ಓದಿ...

ದುಷ್ಟ ವಾಲಿಯ ವಧೆ

ಬಾಲಮಿತ್ರರೇ, ರಾಮನವಮಿಯಂದು ಪ್ರಭು ಶ್ರೀರಾಮನ ಜನನವಾಯಿತು. ನಾವು ಎಲ್ಲೆಡೆ ಶ್ರೀರಾಮನನ್ನು ಆದರ್ಶ ರಾಜನೆಂದು ಉಲ್ಲೇಖಿಸುತ್ತೇವೆ. ರಾಮನು ವಾಲಿಯನ್ನು ವಧಿಸಿ ಸುಗ್ರೀವನಿಗೆ ಅವನ ರಾಜ್ಯವನ್ನು ಹೇಗೆ ದೊರಕಿಸಿಕೊಟ್ಟನು, ಎಂಬುದನ್ನು ರಾಮಾಯಣದ ಘಟನೆಯಿಂದ ನಾವು ನೋಡೋಣ. ಅಣ್ಣ ತಮ್ಮಂದಿರಾದ ವಾಲಿ ಮತ್ತು ಸುಗ್ರೀವರು ಕಿಶ್ಕಿಂದಾ ನಗರದಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಪರಸ್ಪರರ ಬಗ್ಗೆ ಬಹಳ ಪ್ರೇಮವಿತ್ತು. ಅವರಿಬ್ಬರಲ್ಲಿ ವಾಲಿಯು ಹಿರಿಯವನಾಗಿದ್ದರಿಂದ ಅವನು ಆ ನಗರದ ರಾಜನಾಗಿದ್ದನು. ಒಮ್ಮೆ ಆ ನಗರಕ್ಕೆ ಮಾಯಾವಿ ಎಂಬ ಓರ್ವ ಬಲಾಢ್ಯ ರಾಕ್ಷಸ ಬಂದನು. ವಾಲಿ ಹಾಗೂ ಆ ರಾಕ್ಷಸನ ನಡುವೆ ಭಯಂಕರ ಯುದ್ಧವಾಯಿತು. …

ಪೂರ್ತಿ ಓದಿ...

ಸೀತಾ ಸ್ವಯಂವರದಲ್ಲಿ ಭಗ್ನಗೊಂಡ ಧನಸ್ಸಿನೊಂದಿಗೆ ಶ್ರೀರಾಮನ ಸಂಭಾಷಣೆ !

ಶ್ರೀರಾಮನು ಭಗ್ನವಾದ ಶಿವಧನಸ್ಸನ್ನು ಭೂಮಿಯ ಮೇಲಿಟ್ಟನು. ಆಗ ಆ ಧನಸ್ಸಿನೊಂದಿಗೆ ಮುಂದಿನಂತೆ ಸಂಭಾಷಣೆಯಾಯಿತು. ಶ್ರೀರಾಮ : ಏನು ಅನಿಸುತ್ತಿದೆ ? ಧನಸ್ಸು : ಅಪಾರ ಆನಂದ ! ನನ್ನನ್ನು ಯಾವುದೇ ರಾಕ್ಷಸನು ಎತ್ತಿದ್ದರೆ ಜನ್ಮಪೂರ್ತಿ ಧನಸ್ಸು-ಬಾಣದ ಬಂಧನದಲ್ಲಿ ಸಿಲುಕಿರುತ್ತಿದ್ದೆ. ಶ್ರೀರಾಮನು ನನ್ನನ್ನು ಮುಕ್ತಗೊಳಿಸಿದನು. ಶ್ರೀರಾಮ :ಆದರೆ ರಾಮನು ನಿನ್ನನ್ನು ಭೂಮಿಯ ಮೇಲಿಟ್ಟನು, ಅದಕ್ಕೆ ಏನು ಹೇಳುವೆ ? ಧನಸ್ಸು :ರಾಮನ ಕಾಲುಗಳ ಬಳಿಯೇ ಹಾಕಿದನು ಹಾಗೂ ನನಗೆ ರಾಮನ ಪಾದಸೇವೆ ಮಾಡುವ ಅವಕಾಶ ಲಭಿಸಿತು. ಶ್ರೀರಾಮ :ಆದರೆ ನೀನು ೨ ತುಂಡಾದೆಯಲ್ಲವೇ ? ಧನಸ್ಸು …

ಪೂರ್ತಿ ಓದಿ...

ನೀವು ಕೊಟ್ಟದ್ದು ನಿಮಗೇ

ಬಹಳ ಹಿಂದೆ ಶಿವಪುರವೆಂಬ ಊರಿತ್ತು. ಆ ಊರಿನಲ್ಲಿ ರಾಮಪ್ಪನೆಂಬ ಶ್ರೀಮಂತನಿದ್ದ. ಅವನು ಬಡವರಿಗೆ ಸಹಾಯ ಮಾಡದೆ ಬರೀ ತನ್ನ ದೊಡ್ಡಸ್ತಿಕೆಯನ್ನು ಎಲ್ಲರಿಗೆ ಹೇಳಿಕೊಳ್ಳುತ್ತಿದ್ದ. ಇತರರು ಮಾಡಿದ ಸಹಾಯವನ್ನು ತನ್ನದೆಂದೇ ಹೇಳುತ್ತಿದ್ದ. ಅವನ ಮನೆಯ ಸಮೀಪದಲ್ಲಿ ಧರ್ಮಯ್ಯನೆಂಬ ಬಡವನಿದ್ದ. ಅವನು ಇತರರಿಗೆ ತನ್ನ ಕೈಲಾದ ನೆರವು ನೀಡುತ್ತಿದ್ದ. ಆಗ ಶ್ರೀಮಂತ ರಾಮಪ್ಪ ಆ ಕೆಲಸದ ಸಹಾಯವನ್ನು ಧರ್ಮಯ್ಯನ ಮೂಲಕ ತಾನೇ ಮಾಡಿಸಿರುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಧರ್ಮಯ್ಯ ನಕ್ಕು ಸುಮ್ಮನಾಗುತ್ತಿದ್ದ. ಶಿವಪುರ ಊರಿನ ಹತ್ತಿರ ಒಂದು ಗುಡ್ಡವಿತ್ತು. ಆ ಗುಡ್ಡದಲ್ಲಿ ಒಬ್ಬ ಸಾಧು ವಾಸವಾಗಿದ್ದ. ಅವನು ಜನರ …

ಪೂರ್ತಿ ಓದಿ...