Jootoor

Providing Graphic Design, Website Design & Development, SEO services at affordable rate.

ನಮ್ಮ ತಪ್ಪಿಗೆ ನಾವೇ ಜವಾಬ್ದಾರರು

mistakes

ಬಜಗನ್ ಎಂಬ ಸೂಫೀ ಸಂಪ್ರದಾಯ ಮಧ್ಯ ಏಷ್ಯಾದಲ್ಲಿ ಬೆಳೆದು ಭಾರತ ಉಪಖಂಡದಲ್ಲಿ ತನ್ನ ಪ್ರಭಾವವನ್ನು ಬೀರಿತು. ಹದಿನಾಲ್ಕನೇ ಶತಮಾನದ ಅಂತ್ಯಭಾಗದಲ್ಲಿದ್ದ ಖಾಜಾ ಬಹಾ­ವುದ್ದೀನ್ ನಕ್ಷಾಬಂದ್ ಈ ಪಂಥದ ಒಬ್ಬ ಮಹಾನ್ ವ್ಯಕ್ತಿ. ಅವನ ಕಾಲಾನಂತರ ಈ ಪಂಥವನ್ನು ನಕ್ಷಾಬಂದೀ ಪಂಥ ಎಂದೇ ಕರೆಯಲಾಯಿತು. ನಕ್ಷಾಬಂದೀ ಪರಂಪರೆಯ ಸೂಫೀ ಸಂತರ ಕಥನ ಕಲೆ ವಿಶೇಷವಾದದ್ದು. ಆ ಕಥೆಯ ಕೊನೆಗೆ ಒಂದು ಸಂದೇಶವನ್ನು ನೀಡುವುದು ಅವರ ಕಲೆ. ಇಂಥ ಒಂದು ಪುಟ್ಟ ಕಥೆ ಹೀಗಿದೆ. ಒಂದು ರಾತ್ರಿ ಒಬ್ಬ ಕಳ್ಳ ಹೊಂಚುಹಾಕಿ ಒಂದು ಮನೆಯಲ್ಲಿ ಕಳ್ಳತನ ಮಾಡಲು …

ಪೂರ್ತಿ ಓದಿ...

ಸುಖೀ ದಾಂಪತ್ಯದ ಗುಟ್ಟು

old couple

ನಾನೊಮ್ಮೆ ಪಾಶ್ಚಾತ್ಯ ದೇಶದಲ್ಲಿದ್ದಾಗ ಒಬ್ಬರು “ನಿಮಗೆ ಮದುವೆಯಾಗಿ ಎಷ್ಟು ವರ್ಷವಾಯಿತು” ? ಎಂದು ಕೇಳಿದರು. ನಾನು “ಇಪ್ಪತ್ತೆಂಟು ವರ್ಷ” ಎಂದೆ, ಆವರು, ” ಒಬ್ಬಳೇ ಹೆಂಡತಿಯೊಂದಿಗೆ ಅಷ್ಟು ವರ್ಷ ಹೇಗಿದ್ದೀರಿ ?” ಎಂದು ಆಶ್ಚರ್ಯ ಪಟ್ಟರು. ನಾನು ಅವರಿಗೆ ಹೇಳಿದೆ, ” ನನ್ನದೇನೂ ವಿಶೇಷವಲ್ಲ, ನನ್ನ ಅಜ್ಜ, ಅಜ್ಜಿ ದಂಪತಿಗಳಾಗಿ ಎಪ್ಪತ್ತು ವರ್ಷಗಳ ಕಾಲ ಇದ್ದರು ” ಅವರಿಗೆ ನಂಬಲಾಗಲಿಲ್ಲ. ನನ್ನಜ್ಜ, ಅಜ್ಜಿ ಚೆನ್ನಾಗಿಯೇ ಬದುಕಿದರು. ಅಂದರೆ ಅವರಲ್ಲಿ ಜಗಳ, ಮನಸ್ತಾಪ , ವಿಚಾರ ಭೇದ ಇರಲಿಲ್ಲವೆಂದಲ್ಲ. ಒಂದೊಂದು ಬಾರಿ ಜಗಳವಾಡುತ್ತಿದ್ದರೆ ಏಳೇಳು ಜನ್ಮದಲ್ಲಿ …

ಪೂರ್ತಿ ಓದಿ...

ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಪ್ರ್ಯಾಂಕ್ಲಿನ್ ಎಂದು ಹೇಳುತ್ತೇವೆ

electric

ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಪ್ರ್ಯಾಂಕ್ಲಿನ್ ಎಂದು ಹೇಳುತ್ತೇವೆ…. ಇದೇ ಬೆಂಜಮಿನ್ ತಾವು ಬರೆದ ಒಂದು ಪುಸ್ತಕದಲ್ಲಿ ಹೇಳುತ್ತಾರೆ.. “ಒಂದು ರಾತ್ರಿ ನಾನು ಭಾರತದ ಪ್ರಾಚೀನವಾದ ಒಂದು ಗ್ರಂಥವನ್ನು ಓದಿದೆ. ಅದರಲ್ಲಿನ ಒಂದು ವಾಕ್ಯ ರಾತ್ರಿಯಿಡೀ ನನ್ನನ್ನು ಕಾಡುತ್ತಿತ್ತು. ಯೋಚಿಸಿ ಯೋಚಿಸಿ ಆ ವಾಕ್ಯದ ಅರ್ಥವನ್ನು ಗ್ರಹಿಸಿದೆ. ಅದು ನನಗೆ ವಿದ್ಯುತ್ತನ್ನು ಕಂಡು ಹಿಡಿಯಲು ನೆರವಾಯಿತು“ ಹಾಗಾದರೆ ಆ ವಾಕ್ಯ ಯಾವುದು…? ಅದು ಅಗಸ್ತ್ಯಮುನಿಗಳು ಬರೆದ “ಅಗಸ್ತ್ಯ ಸಂಹಿತೆ” ಯಲ್ಲಿನ ಒಂದು ವಾಕ್ಯವಾಗಿತ್ತು…!!! ಮಹರ್ಷಿ ಅಗಸ್ತ್ಯರು, ಮಹಾರಾಜ ದಶರಥನ ರಾಜಗುರುವಾಗಿದ್ದರು. ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಅವರು “ಅಗಸ್ತ್ಯ ಸಂಹಿತಾ” ಎಂಬ …

ಪೂರ್ತಿ ಓದಿ...

ಶಿವಲಿಂಗಗಳ ಸಹಸ್ರಲಿಂಗ ದರ್ಶನ

sahasralinga

ಶಿವಲಿಂಗ: ಕರ್ನಾಟಕದ ಪಶ್ಚಿಮ ಘಟ್ಟಗಳು ತನ್ನ ನಯನ ಮನೋಹರ ಪ್ರಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಂಡುಬರುವ ದಟ್ಟ ಹಸಿರಿನಿಂದ ಕೂಡಿದ ಕಾಡು-ಮೇಡುಗಳು, ಜುಳು ಜುಳು ನಾದ ಮಾಡುತ್ತ ಹರಿಯುವ ಕೆರೆ-ತೊರೆಗಳು, ಗಾಳಿಯೊಂದಿಗೆ ಸರಸವಾಡುತ್ತಿರುವ ಬೆಟ್ಟ-ಗುಡ್ಡಗಳು ಒಂದು ರೀತಿಯ ಉತ್ಸಾಹವನ್ನು ಮೂಡಿಸುತ್ತದೆ. ಮನಸೂರೆಗೊಳ್ಳುವ ಕೋಟಿಲಿಂಗೇಶ್ವರನ ದರ್ಶನ ಮಾಡಿ ಆದರೆ ಪಶ್ಚಿಮ ಘಟ್ಟಗಳು ಕೇವಲ ತನ್ನ ಶ್ರೀಮಂತ ವನ್ಯಸಿರಿಯಿಂದ ಮಾತ್ರವಲ್ಲದೆ ಅದ್ಭುತ ಕಥೆ ಸಾರುವ, ಕುತೂಹಲ ಕೆರಳಿಸುವ ಧಾರ್ಮಿಕ ಸ್ಥಳಗಳಿಗೂ ಹೆಸರುವಾಸಿಯಾಗಿದೆ. ಅಂತಹ ಸ್ಥಳಗಳ ಪೈಕಿ ಒಂದಾಗಿದೆ ಕರ್ನಾಟಕ ದಲ್ಲಿರುವ ಸಹಸ್ರಲಿಂಗ ತಾಣ. ಉತ್ತರ ಕನ್ನಡ ಜಿಲ್ಲೆಯ ಶಿರಸಿ …

ಪೂರ್ತಿ ಓದಿ...

ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ

home

ಓದಿ ಮತ್ತೆ ಚಿಂತಿಸಿ ಸುಮ್ಮನೆ ಕೊರಗಬೇಡಿ ಜೀವನದಲ್ಲಿ ಅಳವಡಿಸಿ ಗಂಡ ಹೆಂಡತಿ ಎರಡು ಮಕ್ಕಳಿರುವ ಕುಟುಂಬ… ಒಂದು ದಿವಸ ದುಬೈ ಪೆಸ್ಟಿವಲ್ ಗೆ ಸುತ್ತಲು ಹೋದ ಈ ಕುಟುಂಬ ಗಂಟೆಗಟ್ಟಲೆ ಸುತ್ತಿ ಸಂತೋಷಿಸಿದರು… ಅದರೆಡೆಯಲ್ಲಿ ಅಲ್ಲಿನ ನೂಕುನುಗ್ಗಲಿಗೆ ಅವರ ಮಗನನ್ನು ಕಾಣುವುದಿಲ್ಲ… ಅವರು ಅವನನ್ನು ಹುಡುಕಿ ಹುಡುಕಿ ಸಿಗದಾದಾಗ ಅವನ ತಾಯಿ ಬೊಬ್ಬೆ ಹಾಕಲು ಸುರುಮಾಡಿದರು…. ಬೊಬ್ಬೆ ಕೇಳಿ ಸಾರ್ವಜನಿಕರು ಒಟ್ಟು ಗೂಡಿದರು ಪೋಲಿಸರಿಗೆ ತಿಳಿಸಿದರು ಪೋಲಿಸರು ಗಂಟೆಗಟ್ಟಲೆ ಹುಡುಕಿ ಹೇಗಾದರೂ ಮಗನನ್ನು ಕಂಡುಹಿಡಿದರು ಅವನನ್ನು ತಂದೆ ತಾಯಿಗೆ ಮುಟ್ಟಿಸಿದರು ಮಗನು ಸಿಕ್ಕಿದ ಕೂಡಲೇ …

ಪೂರ್ತಿ ಓದಿ...

ಆಸೆಯೇ ಅಧಃಪತನಕ್ಕೆ ಕಾರಣ

ase

ಮೋಕ್ಷಪುರ ಎಂಬ ಊರಲ್ಲಿ ರಾಮಯ್ಯಶೆಟ್ಟಿ ಎಂಬ ದುರಾಸೆಯ ವ್ಯಕ್ತಿ ಕಿರಾಣಿ ವ್ಯಾಪಾರ ಮಾಡುತ್ತಿದ್ದನು. ತಾನು ಮಾಡುವ ಸರಕಿನ ಮೇಲೆ ವಿಪರೀತವಾಗಿ ಲಾಭಗಳನ್ನು ಆಶಿಸುತ್ತಾ. ತನಗೆ ಮಾರುವವರಿಗೆ ನಷ್ಟ ಮಾಡಿ ಆನಂದಿಸುವ ಮನಸ್ಸು ಆತನದು. ರಾಮಯ್ಯ ಪಟ್ಟಣದಿಂದ ಸರಕುಗಳನ್ನು ತರುವಾಗ ದಾರಿ ಮಧ್ಯದಲ್ಲಿರುವ ಒಂದು ನದಿಯನ್ನು ತೆಪ್ಪದ ಮೂಲಕ ದಾಟಬೇಕಾಗಿತ್ತು. ತೆಪ್ಪದಲ್ಲಿ ಒಬ್ಬ ಮನುಷ್ಯ ಏರಿದಾಗ ತನ್ನೊಂದಿಗೆ ಒಂದು ಮೂಟೆಯನ್ನು ತೆಗೆದುಕೊಂಡು ಹೋದರೆ ಅದಕ್ಕೆ ಪ್ರತ್ಯೇಕ್ಷ ಹಣ ಸಲ್ಲಿಸುವ ಅವಶ್ಯಕತೆ ಇಲ್ಲ. ಈ ಪದ್ಧತಿ ಬಂಡವಾಳ ಮಾಡಿಕೊಂಡು ರಾಮಯ್ಯಶೆಟ್ಟಿ ಅದರಲ್ಲೆಲ್ಲಾ ಕಿರಾಣಿ ಮೂಟೆಗಳನ್ನು ತುಂಬುತ್ತಿದ್ದನು. ತಾನು …

ಪೂರ್ತಿ ಓದಿ...

ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ

mother and son

ಒಂದೂರಿನಲ್ಲಿ ಒಕ್ಕಣ್ಣ ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳು. ಪ್ರತೀ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು. ಹೀಗೆ ಕಾಲಚಕ್ರ ಉರುಳುತಿತ್ತು. ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯ‌ಬಳಿ “ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು” ಕೇಳಿದಾಗ, ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆ ತಾಯಿಗೆ ತನ್ನ ಮಗ ತಾನು ಪಟ್ಟ ಕಷ್ಟ ಪಡದೆ, ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು.ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು. ಮಗು ಹಠ …

ಪೂರ್ತಿ ಓದಿ...

ಅರಿಷಿಣದ ಅರಿವು

ಅರಿಷಿಣದ ಅರಿವು

ಅರಿಷಿಣದ ಅರಿವು: ಹೆಣ್ಣಿನ ಅಂದ ಹೆಚ್ಚಿಸತ್ತೆ ಅರಿಷಿಣ. ಅಡುಗೆಯ ರುಚಿ ಹೆಚ್ಚಿಸುವುದೂ ಕೂಡ ಇದೇ ಹಳದಿ. ನಮ್ಮ ಪ್ರಕೃತಿಯ ಕೊಡುಗೆಯಲ್ಲಿ ಆರೋಗ್ಯ ಕಾಪಾಡುವಲ್ಲಿ ಅರಿಷಿಣ ಕೂಡ ಒಂದು. ಇದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಬಳಕೆಯಾಗುತ್ತಿದ್ದ ಒಂದು ಪ್ರಮುಖ ಮಸಾಲೆಯ ವಸ್ತು ಮತ್ತು ಔಷಧ ಸಸ್ಯ. ಆಹಾರ ಮತ್ತು ಆರೋಗ್ಯದಲ್ಲಷ್ಟೆ ಅಲ್ಲ, ಧಾರ್ಮಿಕವಾಗಿಯೂ ಪೂಜಾ ಸಾಮಗ್ರಿಗಾಗಿ ಹಾಗೂ ಸೌಂದರ್ಯವರ್ಧಕವಾಗಿಯೂ ಇದನ್ನು ನಿತ್ಯ ಪ್ರತಿ ರುಚಿಯಲ್ಲಿ ಕಹಿಯಾಗಿರುವ ಇದು ಅನೇಕ ಉಪಯುಕ್ತ ಗುಣವನ್ನು ಹೊಂದಿ ದೇಹದ ಅಂಗಾಗಗಳ ಆರೋಗ್ಯ ಹಾಗೂ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ …

ಪೂರ್ತಿ ಓದಿ...

ಗುರು ಪೂರ್ಣಿಮೆಯ ಮಹತ್ವವೇನು ಗೊತ್ತೇ?

guru purnima

ಗುರು ಪೂರ್ಣಿಮೆ: ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಗುರು ಪೂರ್ಣಿಮೆಯನ್ನು ನಮ್ಮ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಗುರುಗಳಿಗೆ ಅರ್ಪಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಗುರು ಅಥವಾ ಶಿಕ್ಷಕರನ್ನು ದೇವರಿಗೆ ಹೋಲಿಸಲಾಗುತ್ತದೆ. ನಿಜವಾದ …

ಪೂರ್ತಿ ಓದಿ...