sobagu

ಭಗವದ್ಗೀತೆ ಶ್ಲೋಕಗಳು

bhagavad gita in kannada

ಭಗವದ್ಗೀತೆ ಕನ್ನಡದಲ್ಲಿ. ಆಧಾರ : ಬನ್ನಂಜೆ ಗೋವಿಂದಾಚಾರ್ಯರ ಗೀತಾ ಪ್ರವಚನ ಭಗವದ್ಗೀತೆ – ಪೀಠಿಕೆ ಭಗವದ್ಗೀತೆ ನಮ್ಮ ಶಾಸ್ತ್ರ ಪರಂಪರೆ ಇತಿಹಾಸದಲ್ಲಿ ಬಹಳ ಮಹತ್ವದ ಗ್ರಂಥ ಎಂದು ಹೆಸರುಪಡೆದಿದೆ. ಪ್ರಾಚೀನರು ಭಗವದ್ಗೀತೆಗೆ ವೇದಕ್ಕಿಂತ ಶ್ರೇಷ್ಠ ಎನ್ನುವಷ್ಟು ಮಹತ್ವ ಕೊಟ್ಟಿದ್ದಾರೆ. ಇದಕ್ಕೆ ಸರಿಸಾಟಿಯಾದ ಕೃತಿ ಇನ್ನೊಂದಿಲ್ಲ. ಎಲ್ಲ ಅದ್ಯಾತ್ಮ ಸಾರವನ್ನು ಹೊತ್ತ ಮಹಾಭಾರತದ ಸಾರ-ಭಗವದ್ಗೀತೆ. ಅರ್ಥದ ಭಾರದಿಂದ ತುಂಬಿರುವ ಮಹಾಭಾರತ ಶಾಸ್ತ್ರಗಳಲ್ಲೇ ಶ್ರೇಷ್ಠ ಗ್ರಂಥ. ಇಂಥಹ ಮಹಾಭಾರತದಲ್ಲಿ ಭಗವದ್ಗೀತೆ ಶ್ರೇಷ್ಠ. ಭಗವದ್ಗೀತೆಯನ್ನು ಸಮಗ್ರವಾಗಿ ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದರೆ ಭಾರತೀಯ ತತ್ವಶಾಸ್ತ್ರದ ಸಮಗ್ರ ದರ್ಶನ ನಮಗಾಗುತ್ತದೆ. ಮಹಾಭಾರತ …

ಪೂರ್ತಿ ಓದಿ...

ಮೂವರು ಒಟ್ಟಿಗೆ ಪ್ರಯಾಣವೇಕೆ ಮಾಡಬಾರದು ?

ಮೂವರು ಒಟ್ಟಿಗೆ ಪ್ರಯಾಣಿಸುವುದು ಅಶುಭವೆಂದು ತಿಳಿಯಲಾಗಿದೆ. ನಂಬಿಕೆಯ ಪ್ರಕಾರ ಕೆಲವು ಸಂಖ್ಯೆಗಳು ಅಶುಭವಾಗಿ ಪ್ರಪಂಚ ಪೂರ್ತಿ ಪರಿಗಣಿಸಲಾಗಿದೆ. 3, 13, 33 ಮೊದಲಾದವು ಅಂತಹ ಸಂಖ್ಯೆಗಳು. ಯಾವಾಗಲಾದರೂ ಇಬ್ಬರು ಮಾತನಾಡಿಕೊಳ್ಳುತ್ತಿದ್ದಾಗ ಅಭಿಪ್ರಾಯ ಬೇಧಗಳು ಉಂಟಾದರೆ ಸುಲಭವಾಗಿ ಒಂದು ನಿರ್ಣಯಕ್ಕೆ ಬರುವರು. ಒಂದು ವೇಳೆ ಮೂರನೆಯವನಿದ್ದರೆ ಒಂದು ವಿಷಯದ ಅಭಿಪ್ರಾಯದ ಬಗ್ಗೆ ಘರ್ಷಣೆಯಲ್ಲಿ ಇರುವ ಇಬ್ಬರನ್ನೂ ಸರಿಮಾಡುವುದಕ್ಕೆ ಎರಡೂ ಕಡೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರಬೇಕು. ಹೀಗೆ ಮಾತಿಗೆ ಮಾತು ಬೆಳೆದು, ಜಗಳಕ್ಕೆ ದಾರಿಯಾಗಿ ಒಬ್ಬರಿಗೊಬ್ಬರು ಮಾತಿನಲ್ಲಿ ಗಾಯಪಡಿಸಿಕೊಳ್ಳಬೇಕಾಗಿ ಬರುತ್ತದೆ. ಇಬ್ಬರ ವಾದಗಳ ಮಧ್ಯೆ ಮೂರನೆಯವನ ಪರಿಸ್ಥಿತಿ …

ಪೂರ್ತಿ ಓದಿ...

ಶಿವಲಿಂಗವನ್ನು ಸ್ಪರ್ಶಿಸಲು ಮಹಿಳೆಯರಿಗೆ ಏಕೆ ಅವಕಾಶವಿಲ್ಲ?

ಶಿವಲಿಂಗವನ್ನು ಶಿವ (ಲೋಕವಿನಾಶಕ) ಮತ್ತು ಪಾರ್ವತಿ (ಶಕ್ತಿಯ ದೇವತೆ)ಯರ ಸಂಗಮವೆಂದು ಭಾವಿಸಲಾಗುತ್ತದೆ. ಈ ಶಿವಲಿಂಗವನ್ನು ಪೂಜಿಸುವವರು ಪುರುಷರು ಮಾತ್ರ ನೆರವೇರಿಸಬೇಕು ಎಂಬ ನಂಬಿಕೆ ಪ್ರಚಲಿತವಾಗಿದೆ. ಮಹಿಳೆಯರು, ಅದರಲ್ಲೂ ವಿಶೇಷವಾಗಿ ಅವಿವಾಹಿತ ಕನ್ಯೆಯರು ಈ ಪೂಜೆಯನ್ನು ನಡೆಸಬಾರದು ಎಂಬ ನಂಬಿಕೆ ಬೆಳೆದುಬಂದಿದೆ. ಇದು ಸತ್ಯವೇ? ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದೆ. ಶಿವಲಿಂಗದ ಪೂಜೆ: ಶಿವಲಿಂಗವನ್ನು ಕನ್ಯೆಯರು ಮುಟ್ಟುವುದು ಅಥವಾ ಇದಕ್ಕೆ ಪ್ರದಕ್ಷಿಣೆ ಬರುವುದರಿಂದ ಭಗವಂತ ಶಿವನ ತಪಸ್ಸು ಭಂಗಗೊಳ್ಳಬಹುದು ಮತ್ತು ಲಿಂಗದ ಪಾವಿತ್ರ್ಯತೆ ಕೆಡಬಹುದು ಎಂಬ ನಂಬಿಕೆಯಿಂದ ಕೇವಲ ಪುರುಷರಿಗೆ ಇದರ ಪೂಜೆಯನ್ನು ಅರ್ಹಗೊಳಿಸಲಾಗಿದೆ. …

ಪೂರ್ತಿ ಓದಿ...

ಜೋನ್ ಆಫ್ ಆರ್ಕ್

ಫ್ರಾನ್ಸ್ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿದ್ದ ಕಾಲವದು. ಫ್ರಾನ್ಸ್ಗೆ ಹೆಸರಿಗೊಬ್ಬ ರಾಜನಿದ್ದನು ಅವನು ಆಂಗ್ಲರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದನು. ಇಂತಹ ದಿನಗಳಲ್ಲಿ ಒಮ್ಮೆ ಫ್ರಾನ್ಸ್ನ ಬೀದಿಯಲ್ಲಿ ಮಲಗಿದ್ದ ಅನಾಥ ಬಾಲಕಿಯೊಬ್ಬಳಿಗೆ ಕನಸೊಂದು ಬಿದ್ದಿತು. ಆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು ಫ್ರಾನ್ಸ್ನ್ನು ಬ್ರಿಟಿಷರಿಂದ ಮುಕ್ತಗೊಳಿಸುವಂತೆ ಬಾಲಕಿಗೆ ಆದೇಶವಿತ್ತರಂತೆ. ಆದರೆ, ದೇಶಕ್ಕೆ ದೇಶವೇ ಮಹಾರಾಜನಿಂದ ಹಿಡಿದು ಎಲ್ಲರೂ ಬ್ರಿಟಿಷರ ಅಡಿಯಾಳಾಗಿರುವಾಗ ಕೇವಲ ೧೩ ವರ್ಷ ವಯಸ್ಸಿನ ಆ ಹುಡುಗಿಯಿಂದ ಫ್ರಾನ್ಸ್ ಗೆ ಸ್ವಾತಂತ್ರ ಕೊಡಿಸಲಾದೀತೇ? ಆದರೆ, ಆ ಬಾಲಕಿ ಧೃತಿಗೆಡದೆ ಸಂತವಾಣಿಯಿಂದ ಪ್ರಭಾವಿತಳಾದವಳಂತೆ ನೇರವಾಗಿ ಸೇನಾ …

ಪೂರ್ತಿ ಓದಿ...

ರಾಮಾಯಣದ ಬಳಿಕ ವಾನರ ಸೇನೆಯ ಕಥೆ ಏನಾಯಿತು?

vaanara sene

ರಾಮಾಯಣ ಮಹಾಕಾವ್ಯದಲ್ಲಿ ಚಿತ್ರಿಸಿರುವ೦ತೆ ಹನುಮಾನ್, ವಾಲಿ, ಹಾಗೂ ಸುಗ್ರೀವರ ನೇತೃತ್ವದ ವಾನರ ಸೇನೆಯು ನಿರ್ವಹಿಸಿದ ಅಮೋಘ ಪಾತ್ರದ ಕುರಿತ೦ತೆ ಪ್ರತಿಯೊಬ್ಬರಿಗೂ ತಿಳಿದೇ ಇದೆ. ಆದರೆ ಆ ಬಳಿಕ ವಾನರ ಸೇನೆಗೆ ಏನಾಯಿತು ಎ೦ಬುದರ ಬಗ್ಗೆ ಹೆಚ್ಚಿನವರಿಗೆ ಬಹುಶ: ತಿಳಿದಿರಲಿಕ್ಕಿಲ್ಲ.. ಹೌದು, ರಾಮಾಯಣದಲ್ಲಿ ಜನರಿಗೆ ಗೊತ್ತೇ ಇಲ್ಲದ ಇನ್ನೂ ಅನೇಕ ಆಸಕ್ತಿದಾಯಕ ವಿಷಯಗಳಿದ್ದು ಇವುಗಳ೦ತೂ ನಿಜಕ್ಕೂ ಬಹಳ ವಿಸ್ಮಯಕರವಾಗಿವೆ..! ಬನ್ನಿ ಮುಂದೆ ವಾನರ ಸೇನೆಗೆ ಏನಾಯಿತು ಎಂಬುದನ್ನು ತಿಳಿಯೋಣ ರಾಮಾಯಣದ ಒ೦ದು ಭಾಗದ ಪ್ರಕಾರ: ರಾಮಾಯಣದ ಬಳಿಕ ವಾನರ ಸೇನೆಯ ಕಥೆ ಏನಾಯಿತು?3/15 ವಾನರರು ಇದಾದ …

ಪೂರ್ತಿ ಓದಿ...

ಬಾದಾಮಿಯ ಗುಹೆಗಳು

Badami Guhegalu

ಬಾದಾಮಿಯ ಗುಹೆಗಳನ್ನು ಪುನರ್ಪರಿಶೀಲನೆಗೆ ಒಡ್ಡುವಲ್ಲಿ ಈ ವಿವರ ಸಹಿತ ಒಕ್ಕಣೆಯನ್ನು ಸಿದ್ಧಪಡಿಸುತ್ತಿದ್ದೇನೆ. ಏಕೆಂದರೆ ಐತಿಹಾಸಿಕ ನೆಲೆಯಲ್ಲಿ ಈವರೆಗೂ ವಿದ್ವಾಂಸರು ಪರಿಗಣಿಸುತ್ತಿರುವ ರೀತಿ ನೀತಿಯಲ್ಲಿ ಗೊಂದಲವುಂಟಾಗಿರುತ್ತದೆ. ಚಾಲುಕ್ಯ ಮತ್ತು ಪೊಲಕೇಶಿ ೧ ಮತ್ತು ೨ ಇಂಥ ಪಾರಭಾಷಿಕಗಳಿಗೆ ಸ್ಪಷ್ಟವಾದ ಅರ್ಥವಂತಿಕೆಯು ಅವಶ್ಯಕವಾಗಿರುವುದ ರಿಂದ ಈ ಗುಹೆಗಳ ಸ್ವರೂಪ ಮತ್ತು ಇದಕ್ಕೆ ಕಾರಣರಾಗಿರುವಂಥ ವರ್ಗದ ಪರಿಶೀಲನೆಯಿಂದ ಒಂದು ನೆಲೆಯನ್ನು ಮುಟ್ಟಲು ಸಾಧ್ಯವಾದೀತೆಂಬ ನಂಬಿಕೆಯಾಗಿದೆ(ಇದಕ್ಕಾಗಿ ನಾನು ಹಲವು ಬಾರಿ ಈ ಗುಹೆಯನ್ನು ಕಂಡು ಪರಿಶೀಲಿಸಿದ್ದೇನೆ ಮತ್ತು ಒಂದು ನಿರ್ಧಾರದ ನೆಲೆಯನ್ನು ಮುಟ್ಟಿದ್ದೇನೆ. ಈ ನೆಲೆಯನ್ನೇ ನಮ್ಮ ಘನ ವಿದ್ವಾಂಸರು …

ಪೂರ್ತಿ ಓದಿ...

ಇಮ್ಮಡಿ ಪುಲಿಕೇಶಿ

immadi pulikeshi

ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ. (ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು. ಕ್ರಿ.ಶ.ಸು. ೫೦೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ ‘ದಂತಿದುರ್ಗ’ನು ಚಾಲುಕ್ಯ ಅರಸ ‘ಇಮ್ಮಡಿ ಕೀರ್ತಿವರ್ಮ’ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ ಕರ್ನಾಟಕದ ರಾಜಕೀಯ ವಲಯದಲ್ಲಿ ಚಾಲುಕ್ಯರು ವಿರಮಿಸುವಂತೆ ಮಾಡಿದನು. …

ಪೂರ್ತಿ ಓದಿ...

ಮಹಾಭಾರತ ಯುದ್ಧದ ಬಳಿಕ ಪಾ೦ಡವರು-ಶ್ರೀ ಕೃಷ್ಣನ ಕಥೆ ಏನಾಗುತ್ತದೆ?

ಮಹಾಭಾರತವೆ೦ಬ ಮಹಾಸ೦ಗ್ರಾಮವು ಮುಗಿದ ಬಳಿಕ, ಪಾ೦ಡವರು ಹಾಗೂ ಶ್ರೀ ಕೃಷ್ಣನ ಅಸ್ತಿತ್ವದ ಕುರಿತ೦ತೆ ಅಷ್ಟೇನೂ ಗುರುತರವಾದ ಪ್ರಸ೦ಗಗಳಾಗಲೀ, ಸಾಕ್ಷ್ಯಾಧಾರಗಳಾಗಲೀ ಕ೦ಡುಬರುವುದಿಲ್ಲ. ಹಾಗಾದರೆ, ಮಹಾಭಾರತ ಕದನದ ತರುವಾಯ ಅವರಿಗೆಲ್ಲಾ ಏನಾಯಿತು? ಮಹಾಭಾರತ ಯುದ್ಧದ ಬಳಿಕ ಅವರೆಲ್ಲರೂ ತಮ್ಮ ತಮ್ಮ ಸಾಮ್ರಾಜ್ಯಗಳಿಗೆ ಮರಳಿದರು, ಕೆಲವರ್ಷಗಳ ಕಾಲ ರಾಜ್ಯಭಾರವನ್ನು ಕೈಗೊ೦ಡರು (ಸುಮಾರು ಮೂವತ್ತೈದು ವರ್ಷಗಳಷ್ಟರವರೆಗೆ ಇರಬಹುದು), ಹಾಗೂ ಬಳಿಕ ತಮ್ಮ ಜೀವನದ ಗುರಿಯನ್ನು ಸಾಧಿಸಿಕೊ೦ಡ ಅವರು ಮತ್ತೆ೦ದೂ ಮರಳಿಬಾರದ೦ತಹ ಲೋಕದತ್ತ ಪಯಣ ಬೆಳೆಸಿದರು. ಮಹಾಭಾರತದ ಮೌಸಲ ಪರ್ವ ಹಾಗೂ ಮಹಾಪ್ರಾಸ್ಥಾನಿಕ ಪರ್ವಗಳು ಈ ಸ೦ಗತಿಯ ಕುರಿತ೦ತೆ ವಿಷದವಾಗಿ ವಿವರಿಸುತ್ತವೆ. …

ಪೂರ್ತಿ ಓದಿ...

ಅಪ್ರತಿಮ ವೀರ ಏಕಲವ್ಯನ ಸಾವಿಗೆ ಶ್ರೀಕೃಷ್ಣ ಕಾರಣನೇ?

ಮಹಾಭಾರತವನ್ನು ಆಧರಿಸಿದ ಕಥೆಗಳು ಜನರಿಂದ ಜನರಿಗೆ ದಾಟುತ್ತಾ ಹೋದಂತೆ ಮೂಲಕಥೆಯಿಂದ ಸ್ವಲ್ಪಸ್ವಲ್ಪವಾಗಿ ಬದಲಾವಣೆ ಪಡೆಯುತ್ತಾ ಇಂದು ಮೂಲಕಥೆಗೂ ಭಿನ್ನವಾಗಿ ಮೂಲಕಥೆಯ ಸತ್ಯತೆಯನ್ನೇ ಪ್ರಶ್ನಿಸುವಂತಾಗಿದೆ. ಮಹಾಭಾರತದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒಳ್ಳೆಯ ಮತ್ತು ಕೆಟ್ಟ ಮುಖಗಳಿವೆ. ಇದಕ್ಕೆ ಭಗವಾನ್ ಕೃಷ್ಣನೂ ಹೊರತಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತವೆ. ಉದಾಹರಣೆಗೆ ಗಾಂಧಾರಿಗೆ ಕಣ್ಣಿದ್ದೂ ಗಂಡನಿಗೆ ಕಣ್ಣಿಲ್ಲದ ಕಾರಣ ಕಣ್ಣಿಗೆ ಪಟ್ಟಿಕಟ್ಟಿ ಗಂಡನ ಕುರುಡಿನಲ್ಲಿ ಭಾಗಿಯಾಗುವ ಮೂಲಕ ಪಾತಿವ್ರತೆಯ ಮಹತ್ವವನ್ನು ಕೊಂಡಾಡಿದರೆ ಮಗ ದುರ್ಯೋಧನ ಮಾಡುತ್ತಿರುವುದು ತಪ್ಪು ಎಂದು ತಿಳಿದೂ ತನ್ನ ಕಣ್ಣಿನ …

ಪೂರ್ತಿ ಓದಿ...

ಚಿಂಟು ಮತ್ತು ಮೋಡ

ಚಿಂಟು ಒಂದು ದಿವಸ ಸಾಯಂಕಾಲ ಟೆರೇಸಿನಲ್ಲಿ ಒಬ್ಬನೇ ಆಕಾಶವನ್ನು ನೋಡುತ್ತ ಕುಳಿತಿದ್ದ. ಆಗ ಒಂದು ಮೋಡ ಅವನ ಸನಿಹ ಬಂದಿತು. ಚಿಂಟು ಆಶ್ಚರ್ಯದಿಂದ “ನೀನ್ಯಾರು?” ಎಂದು ಅದನ್ನು ಕೇಳಿದ. ಅದು “ನಾನು ಮೋಡ ಎಂದಿತು.” “ಏನು ನಿನ್ನ ಕೆಲಸ?” ಎಂದು ಚಿಂಟು ಮೋಡಕ್ಕೆ ಕೇಳಿದ. ಮೋಡ ನಗುತ್ತ “ಆಗಸದಲ್ಲಿ ತೇಲುತ್ತಾ ತಿರುಗುವುದು. ಎಲ್ಲಿ ನೀರಿನ ಅವಶ್ಯಕತೆ ಇದೆಯೋ ಅಲ್ಲಿ ಮಳೆ ಸುರಿಯುವುದು ನನ್ನ ಕೆಲಸ” ಎಂದಿತು. ಚಿಂಟು “ಎಷ್ಟು ಹಣಕ್ಕೆ ನೀನು ಮಳೆ ಸುರಿಸುತ್ತಿ, ಯಾಕೆಂದರೆ ನಮ್ಮಲ್ಲಿ ಹನಿ ಹನಿ ನೀರಿಗೂ ಬೆಲೆ ಇದೆ” …

ಪೂರ್ತಿ ಓದಿ...