sobagu

ಗೀತಾ ನಾಗಭೂಷಣ

Geethanagabhushana

ಗೀತಾ ನಾಗಭೂಷಣ (೨೫.೦೩.೧೯೪೨): ಕೆಳಸ್ತರದ ಸಮುದಾಯದ ಮೇಲಿನ ದೌರ್ಜನ್ಯ, ಮೇಲ್ವರ್ಗದ ಗೌಡ, ಕುಲಕರ್ಣಿ, ಸಾಹುಕಾರರಿಂದ ನಿರ್ಗತಿಕ ಹೆಂಗಸರ ಮೇಲೆ ನಡೆಯುತ್ತಿದ್ದ ಲೈಂಗಿಕ ಶೋಷಣೆ, ಮೂಢ ನಂಬಿಕೆಗಳು- ಇವುಗಳ ವಿರುದ್ಧ ಆಡುನುಡಿಗಳ ಅಸಲೀ ಜವಾರಿ ಭಾಷೆಯಲ್ಲಿ ದಿಟ್ಟತನದಿಂದ ಬರೆದ ಗೀತಾ ನಾಗಭೂಷಣರವರು ಹುಟ್ಟಿದ್ದು ತೀರಾ ಕೆಳವರ್ಗದ ಅನಕ್ಷರಸ್ಥ ಬಡ ಕುಟುಂದಲ್ಲಿ. ತಂದೆ ಶಾಂತಪ್ಪ, ಕಲಬುರ್ಗಿಯ ಬಟ್ಟೆ ಗಿರಣಿಯಲ್ಲಿ ಕಾರ್ಮಿಕನಾಗಿದ್ದರೆ ತಾಯಿ ಶಾಂತವ್ವ ಎಮ್ಮೆ ಕಟ್ಟಿಕೊಂಡು ಹಾಲು ಮಾರಿ ಜೀವಿಸುತ್ತಿದ್ದ ಬಡ ಹೆಣ್ನು ಮಗಳು. ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದಾಗಲೇ ಅಪ್ಪ ಹೇಳುತ್ತಿದ್ದ ಕಥೆಗಳನ್ನು ಕೇಳಿ ತಾನೂ ಕೂಡಾ …

ಪೂರ್ತಿ ಓದಿ...

ಅನಂತ ಕಲ್ಲೋಳ

Anantha Kallola

ಅನಂತ ಕಲ್ಲೋಳ (೨೪-೩-೧೯೩೭): ಪ್ರಖ್ಯಾತ ನಗೆಲೇಖನಗಳ ಬರಹಗಾರರಾದ ಅನಂತಕಲ್ಲೋಳರವರು ಹುಟ್ಟಿದ್ದು ಕೊಲ್ಲಾಫುರ (ಮಹಾರಾಷ್ಟ್ರ)ದಲ್ಲಿ. ತಂದೆ ಅಣ್ಣಾಜಿ ಕಲ್ಲೋಳ, ತಾಯಿ ರಮಾಬಾಯಿ. ಕನ್ನಡ ಗಂಡು ಮಕ್ಕಳ ಶಾಲೆ ಕ್ರಮಾಂಕ-೧ರಲ್ಲಿ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲು ವಿದ್ಯಾಭ್ಯಾಸ ನಡೆದುದು ಬೆಳಗಾವಿಯಲ್ಲಿ. ನಂತರ ಫಿಲಾಸಫಿ ಮತ್ತು ಸೈಕಾಲಜಿ ವಿಷಯಗಳಲ್ಲಿ ಬಿ.ಎ. ಆನರ್ಸ್ ಪದವಿ ಪಡೆದದ್ದು ಬೆಳಗಾವಿಯ ಲಿಂಗರಾಜ ಕಾಲೇಜು ಮತ್ತು ವಿಜಾಪುರದ ವಿಜಯ ಕಾಲೇಜಿನಿಂದ. ಉದ್ಯೋಗದ ಹುಡುಕಾಟ ಪ್ರಾರಂಭಿಸಿ ಸೇರಿದ್ದು ಕೇಂದ್ರೀಯ ಅಬಕಾರಿ ಮತ್ತು ಸುಂಕದ ಇಲಾಖೆಯಲ್ಲಿ. ಓದಿನಂತೆಯೇ ಅವರು ಹಚ್ಚಿಕೊಂಡದ್ದು ಸಾಹಿತ್ಯದ ಗೀಳು. ಅದರಲ್ಲೂ ಆಯ್ದುಕೊಂಡದ್ದು ಹಾಸ್ಯಪ್ರಕಾರ. ಇವರ …

ಪೂರ್ತಿ ಓದಿ...

ಲಲಿತಾ ಶ್ರೀನಿವಾಸನ್

Lalitha Sreenivaasan

ಲಲಿತಾ ಶ್ರೀನಿವಾಸನ್ (೨೪.೦೩.೧೯೪೩): ಸುಳಾದಿ ನೃತ್ಯ ಪ್ರಕಾರದಲ್ಲಿ ಪರಿಣತಿ ಪಡೆದಿರುವ ಲಲಿತಾ ಶ್ರೀನಿವಾಸನ್ ರವರು ಹುಟ್ಟಿದ್ದು ಶಿವಸಮುದ್ರ. ಓದಿದ್ದು ಬೆಂಗಳೂರು. ಎಂ.ಎ. (ಚರಿತ್ರೆ) ಪದವಿ. ಸಂಸ್ಕೃತ ಕೋವಿದ ಪರೀಕ್ಷೆಯಲ್ಲಿ ವಿದ್ವತ್ ಹಾಗೂ ಭರತನಾಟ್ಯದಲ್ಲಿ ಪಡೆದ ಪ್ರಥಮ ರ್ಯಾಂಕ್. ನೃತ್ಯಾಭ್ಯಾಸ ಮಾಡಿದ್ದು ಎಚ್.ಆರ್. ಕೇಶವಮೂರ್ತಿ ಮತ್ತು ಆಸ್ಥಾನ ನೃತ್ಯಗಾರ್ತಿಯಾಗಿದ್ದ ಮೈಸೂರಿನ ಕೆ. ವೆಂಕಟಲಕ್ಷ್ಮಮ್ಮ ಮತ್ತು ಜೇಜಮ್ಮನವರಿಂದ. ನೃತ್ಯಾಭಿನಯದಲ್ಲಿ ಪಡೆದ ವಿಶೇಷ ಪರಿಣತಿ. ಶ್ರೀಮತಿ ನರ್ಮದಾ ರವರಿಂದ ದೊರೆತ ಮಾರ್ಗದರ್ಶನ. ಸೃಜನಶೀಲ ನೃತ್ಯ ಸಂಯೋಜ ರೆನಿಸಿದ ಇವರ ನವ್ಯ ಪ್ರಯೋಗಗಳು ಅಂಗಭಾವ, ಕಾವ್ಯ ನೃತ್ಯ, ಸುಲಲಿತ ನೃತ್ಯಗಳು …

ಪೂರ್ತಿ ಓದಿ...

ಅರಳುಮಲ್ಲಿಗೆ ಪಾರ್ಥಸಾರಥಿ

Aralumallige Parthasarathi

ಅರಳುಮಲ್ಲಿಗೆ ಪಾರ್ಥಸಾರಥಿ (೨೨-೩-೧೯೪೮): ಹರಿದಾಸ ಸಾಹಿತ್ಯವನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಜೀವನ: ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಅರಳುಮಲ್ಲಿಗೆ ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಮಾರ್ಚ್ ೨೨, ೧೯೪೮ರಂದು ಜನಿಸಿದರು. ಅವರ ತಂದೆ ಕೃಷ್ಣಮೂರ್ತಿರಾವ್ ಮತ್ತು ತಾಯಿ ರಂಗಮ್ಮನವರು. ಪಾರ್ಥಸಾರಥಿಯವರ ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಅರಳು ಮಲ್ಲಿಗೆಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ದೊಡ್ಡಬಳ್ಳಾಪುರದ ಹೈಸ್ಕೂಲಿಗೆ. ಮುಂದೆ ಅವರು ಬೆಂಗಳೂರಿನ ಆರ್.ಸಿ. ಕಾಲೇಜಿನಿಂದ ಬಿ.ಕಾಂ., ಸೆಂಟ್ರಲ್ ಕಾಲೇಜಿನಿಂದ ಎಂ.ಕಾಂ ಪದವಿಗಳಲ್ಲದೆ, ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗೌರವವನ್ನು ಗಳಿಸಿದರು. ಅಧ್ಯಾಪನ: ತಮ್ಮ ಓದು …

ಪೂರ್ತಿ ಓದಿ...

ಗುರುದಾಸ

March Gurudaasa

ಗುರುದಾಸ (೨೨.೦೩.೧೯೭೧): ವಾಗ್ಗೇಯಕಾರರ ಸಂತತಿ ಕ್ಷೀಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕೀರ್ತನೆ, ದೇವರ ನಾಮ, ಉಗಾಭೋಗ, ಶ್ಲೋಕಗಳನ್ನು ರಚಿಸುತ್ತಿರುವ ಸಂಪತ್ ಜಯಾರವರು ಹುಟ್ಟಿದ್ದು ಬೆಂಗಳೂರು. ತಂದೆ ಜಯ ರಾಘವನ್, ತಾಯಿ ಅಲಮೇಲ, ನರ್ತನ ಹಾಗು ಗಾಯನದಲ್ಲಿ ಪರಿಣತರು. ಬೆಳೆದದ್ದು ಸಂಗೀತದ ವಾತಾವರಣದಲ್ಲಿ, ಕಾಲೇಜಿಗೆ ಬರುವಷ್ಟರಲ್ಲಿ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದು ಕಲಿತದ್ದು ಶಾಸ್ತ್ರೀಯ ಸಂಗೀತ. ಬಿ.ಕಾಂ. ಪದವಿಯ ಜೊತೆಗೆ ಸಂಗೀತದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕೋತ್ತರ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಜೀವ ವಿಮಾ ನಿಗಮ. ರಚಿಸಿರುವ ಗೀತ ಸಾಹಿತ್ಯವೇ ೪೫೦೦ ಕ್ಕೂ ಹೆಚ್ಚು. ಸ್ವರಸಂಯೋಜನೆ, ಹರಿಕಥೆ, …

ಪೂರ್ತಿ ಓದಿ...

ಪಂ. ಆರ್.ವಿ. ಶೇಷಾದ್ರಿ ಗವಾಯಿ

Sheshadri Gavayi

ಪಂ. ಆರ್.ವಿ. ಶೇಷಾದ್ರಿ ಗವಾಯಿ (೨೧-೩-೧೯೨೪ – ೧೯-೩-೨೦೦೩): ಅವರು ಪ್ರಸಿದ್ಧ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರು. ಜೀವನ: ಸಂಗೀತ ಶಿಕ್ಷಕ, ಪ್ರಸಾರಕ, ಗಾಯಕ, ವಾಗ್ಗೇಯಕಾರರಾದ ಶೇಷಾದ್ರಿ ಗವಾಯಿಗಳು ದಾವಣಗೆರೆಯಲ್ಲಿ ಮಾರ್ಚ್ ೨೧, ೧೯೨೪ರಲ್ಲಿ ಜನಿಸಿದರು. ಅವರ ತಂದೆ ರಾಜಾಪುರ ವೆಂಕಟಸುಬ್ಬರಾವ್ ಮತ್ತು ತಾಯಿ ತಿಮ್ಮಮ್ಮನವರು. ರಂಗಭೂಮಿಯಲ್ಲಿ: ಶೇಷಾದ್ರಿ ಗವಾಯಿಗಳು ಒಂಬತ್ತರ ಬಾಲ್ಯದಿಂದಲೇ ರಂಗಭೂಮಿ ಬಾಲನಟನಾಗಿ, ಬಾಲಕೃಷ್ಣ, ಪ್ರಹ್ಲಾದನಾಗಿ, ವಾಮನರಾವ್ ಮಾಸ್ತರ ಕಂಪನಿ, ತಳಕಲ್ ವೆಂಕಟರೆಡ್ಡಿ ಕಂಪನಿ, ಹಂದಿಗನೂರು ಸಿದ್ಧರಾಮಪ್ಪ ಕಂಪನಿ, ಕಲ್ಕೋಟಿ ಚನ್ನಬಸವಯ್ಯನವರ ಅರವಿಂದ ನಾಟಕ ಕಂಪನಿಯ ನಟನಾಗಿ ಖ್ಯಾತಿ ಪಡೆದಿದ್ದರು. ಸಂಗೀತ ಲೋಕದಲ್ಲಿ: …

ಪೂರ್ತಿ ಓದಿ...

ಬಿ.ಎಸ್. ಚಂದ್ರಕಲಾ

BS Chandrakala

ಬಿ.ಎಸ್. ಚಂದ್ರಕಲಾ (೨೧.೩.೧೯೩೧ – ೪.೩.೨೦೦೫): ಸಾಹಿತಿ, ಸಂಗೀತರತ್ನ ಬಿರುದಾಂಕಿತೆ ಚಂದ್ರಕಲಾರವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಜಿ.ಆರ್. ಸಿದ್ದಪ್ಪ, ತಾಯಿ ಭದ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಇಂಟರ್ ಮೀಡಿಯೇಟ್‌ವರೆಗೆ ಓದಿದ್ದು ಬೆಂಗಳೂರಿನಲ್ಲಿ . ಬಾಲ್ಯದಿಂದಲೇ ಹತ್ತಿದ ಸಂಗೀತದ ಗೀಳು, ಬಾಲಕಿಗೆ ಶ್ರೀಮತಿ ಪದ್ಮಾವತಮ್ಮನವರಲ್ಲಿ ಸಂಗೀತ ಪಾಠ. ಶಂಭುಲಿಂಗಪ್ಪನವರಿಂದ ರೇಣುಕ ಗೀತೆ ಪಾಠ. ಏಳನೇ ವರ್ಷದಲ್ಲೇ ರೇಣುಕ ಗೀತೆಗಳ ಕಛೇರಿ ನಡೆಸಿದ್ದರು. ಹಾರ‍್ಮೋನಿಯಂ ನುಡಿಸಿ ಸಂಗೀತ ಕಲಿಯುತ್ತಿದ್ದವಳಿಗೆ ಸಂಬಂಯೊಬ್ಬರು ಪಿಟೀಲು ಕೈಲಿ ಹಾಕಿದರು. ಹತ್ತೊಂಬತ್ತನೇ ವಯಸ್ಸಿಗೆ ವೈಧವ್ಯ. ದುಃಖ ಮರೆಯಲು ಮೊರೆ ಹೋದದ್ದು ಸಂಗೀತಕ್ಕೆ. ಸಂಗೀತದ …

ಪೂರ್ತಿ ಓದಿ...

ದೇವಲಕುಂದ ವಾದಿರಾಜ್

Devalakunda Vaadiraj

ದೇವಲಕುಂದ ವಾದಿರಾಜ್ (೨೦-೩-೧೯೨೦ – ೨೨-೨-೧೯೯೩): ನಾಡುಕಂಡ ಶ್ರೇಷ್ಠ ಶಿಲ್ಪಿಗಳಲ್ಲಿ ಒಬ್ಬರೆನಿಸಿದ್ದಾರೆ. ಜೀವನ: ಸಾಂಪ್ರದಾಯಕ ಶಿಲ್ಪಕಲೆಗೆ ಅಂತರರಾಷ್ಟ್ರೀಯಮಟ್ಟದಲ್ಲಿ ಗೌರವ ತಂದುಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ವಾದಿರಾಜರು ಕುಂದಾಪುರ ತಾಲ್ಲೂಕಿನ ದೇವಲಕುಂದದಲ್ಲಿ ಮಾರ್ಚ್ ೨೦, ೧೯೨೦ರಂದು ಜನಿಸಿದರು. ತಂದೆ ಸುಬ್ಬರಾಯಭಟ್ಟರದು ಅರ್ಚಕ ವೃತ್ತಿ, ತಾಯಿ ಲಕ್ಷ್ಮಮ್ಮನವರು. ತಂದೆಯ ಅಕಾಲ ಮರಣದಿಂದಾಗಿ. ಹರಿದು ತಿನ್ನುವ ಬಡತನ ಅವರ ಕುಟುಂಬಕ್ಕೆ ಪ್ರಾಪ್ತವಾಯಿತು. ತಾಯಿ ಲಕ್ಷಮ್ಮನವರು ಮಗ ವಾದಿರಾಜನೊಡನೆ ಮೈಸೂರು ಸೇರಿದರು. ಶಾಲೆಗೆ ಚಕ್ಕರ್ ಚಿತ್ರಕೆ ಹಾಜರ್: ಹುಡುಗನಿಗೋ ಶಾಲೆಗೆ ಚಕ್ಕರ್ ಹಾಕಿ ಚಿತ್ರ ಬಿಡಿಸುವಲ್ಲಿ ಆಸಕ್ತಿ. ಮುಂದೆ ತಾಯಿ ಮಗ …

ಪೂರ್ತಿ ಓದಿ...

ಸೋಸಲೆ ಅಯ್ಯಾಶಾಸ್ತ್ರಿಗಳು

Sosale Ayyashastrigalu

ಸೋಸಲೆ ಅಯ್ಯಾಶಾಸ್ತ್ರಿಗಳು (೨೦.೩.೧೮೫೪ – ೧೭.೫.೧೯೩೪): ಕನ್ನಡ ರಂಗಭೂಮಿ ಮತ್ತು ಸಾಹಿತ್ಯದಲ್ಲಿ ಪ್ರಸಿದ್ಧಹೆಸರಾಗಿದ್ದಾರೆ. ಅವರ ‘ಸ್ವಾಮಿ ದೇವನೆ ಲೋಕಪಾಲನೆ ಗೀತೆ’ ನಾಡಿನ ಅತ್ಯಂತ ಪ್ರಸಿದ್ಧಿ ಪಡೆದ ಪ್ರಾರ್ಥನಾ ಗೀತೆಯಾಗಿದೆ. ಜೀವನ: “ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತು ನಮೋಸ್ತುತೆ” ಎಂಬ ಗೀತೆ ಶಾಲೆಯಿಂದ ಮೊದಲ್ಗೊಂಡು ಪ್ರಸಿದ್ಧ ಚಲನಚಿತ್ರಗಳವರೆಗೆ ಕನ್ನಡ ನಾಡಿನಲ್ಲಿ ವ್ಯಾಪಿಸಿರುವ ಪ್ರಸಿದ್ಧ ಹಾಡು. ಈ ಗೀತೆಯ ರಚನೆಕಾರರು ಸೋಸಲೆ ಅಯ್ಯಾ ಶಾಸ್ತ್ರಿಗಳು. ಅಯ್ಯಾ ಶಾಸ್ತ್ರಿಗಳು ಸುಸಂಸ್ಕೃತ ಮನೆತನದ ತಿರುಮಕೂಡಲು ನರಸೀಪುರದ ಸೋಸಲೆ ಎಂಬ ಹಳ್ಳಿಯಲ್ಲಿ ಮಾರ್ಚ್ ೨೦, ೧೮೫೪ರ ವರ್ಷದಲ್ಲಿ ಜನಿಸಿದರು. …

ಪೂರ್ತಿ ಓದಿ...