sobagu

ಅರ್ಕಾವತಿ ನದಿ

Arkavati River

ಅರ್ಕಾವತಿ ನದಿ ಭಾರತದ ನದಿಗಳಲ್ಲೊಂದು. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮಿಸುವ ಇದು ಕಾವೇರಿ ನದಿಯ ಉಪನದಿಯಾಗಿದೆ. ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಗಳ ಮೂಲಕ ಹರಿದು ಇದು ಕನಕಪುರದಿಂದ ಸುಮಾರು ೪೫ ಕಿ.ಮೀ ದೂರವಿರುವ ಸಂಗಮದಲ್ಲಿ ಕಾವೇರಿ ನದಿಯನ್ನು ಸಂಗಮಿಸುತ್ತದೆ. [SBMAP ID=”4″]

ಪೂರ್ತಿ ಓದಿ...

ಡಾ. ಎಸ್. ರಾಮಸ್ವಾಮಿ

S Ramaswamy

ಡಾ. ಎಸ್. ರಾಮಸ್ವಾಮಿ (೨೭.೦೩.೧೯೩೨): ಅಲೆಮಾರಿ ರಾಮಸ್ವಾಮಿ ಎಂದು ಕರೆದುಕೊಂಡಂತೆ ಸುತ್ತದ ದೇಶವಿಲ್ಲ, ಪ್ರಬಂಧ ಮಂಡಿಸಿದ ಸಮ್ಮೇಳನಗಳಿಲ್ಲ, ಸಂದರ್ಶಕ ಪ್ರಾಧ್ಯಾಪಕರಾಗಿ ಪಾಠ ಹೇಳದ ವಿಶ್ವವಿದ್ಯಾಲಯಗಳಿಲ್ಲ. ಸದಾ ಒಂದಿಲ್ಲೊಂದು ದೇಶ ಸುತ್ತುತ್ತಾ ಇರುವ ರಾಮಸ್ವಾಮಿಯವರು ಹುಟ್ಟಿದ್ದು ಬೆಂಗಳೂರಿನಲ್ಲಿ ೧೯೩೨ರ ಮಾರ್ಚ್‌೨೭ ರಂದು. ತಂದೆ ಎಸ್.ಹನುಮಂತರಾವ್, ತಾಯಿ ನಾಗಮ್ಮ. ಬಿ.ಎ. ಆನರ್ಸ್ ಸೆಂಟ್ರಲ್ ಕಾಲೇಜು, ಬೆಂಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಮತ್ತು ಪೂರ್ಣಾ ಕೃಷ್ಣರಾವ್ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿ ಎನಿಸಿ, ಪಡೆದ ಎಂ.ಎ. ಪದವಿ (೧೯೫೪). ಫುಲ್‌ಬ್ರೈಟ್ ಸ್ಕಾಲರ್ ಶಿಪ್ ದೊರೆತು ಫೈ ಬೀಟಾ …

ಪೂರ್ತಿ ಓದಿ...

ಎಂ.ಆರ್. ಕಮಲ

MR Kamala

ಎಂ.ಆರ್. ಕಮಲ (೨೭-೩-೧೯೫೯): ಭರತನಾಟ್ಯ ಪ್ರವೀಣೆ, ವೀಣಾವಾದಕಿ, ಕವಯಿತ್ರಿ ಶ್ರೀಮತಿ ಎಂ.ಆರ್. ಕಮಲರವರದ್ದು ಬಹುಮುಖ ಪ್ರತಿಭೆ. ಹುಟ್ಟಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ, ಮೇಟಿ ಕುರ್ಕೆಗ್ರಾಮದಲ್ಲಿ. ಶ್ಯಾನುಭೋಗರು ಕೃಷಿಕರಾದ ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಪ್ರಾಥಮಿಕದಿಂದ ಪ್ರೌಢಶಾಲೆಯವರೆವಿಗೂ ಮೇಟಿ ಕುರ್ಕೆಯಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಿಂದ ಪದವಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ. ನಂತರ ರಾಜಾಜಿನಗರದ ಶಿವನ ಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಉದ್ಯೋಗ ಆರಂಭ. ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಇವರು ಆಯ್ದುಕೊಂಡಿರುವ ಕ್ಷೇತ್ರವು ಬಹು ವಿಶಿಷ್ಟವಾದುದು. ಐತಿಹಾಸಿಕ …

ಪೂರ್ತಿ ಓದಿ...

ಯೋಗ

Yoga Meditation

ಯೋಗ (ಸಂಸ್ಕೃತ, ಪಾಲಿ: योग yóga ) ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ. ಜೈನ ಧರ್ಮದಲ್ಲಿ —ಮಾನಸಿಕ,ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗಳಿಗೆ ಇಡಿಯಾಗಿ ಈ ಪದವನ್ನು ಬಳಸುತ್ತಾರೆ. ಹಿಂದೂ …

ಪೂರ್ತಿ ಓದಿ...

ಪಂಚತಂತ್ರ

Panchatantra | ಪಂಚತಂತ್ರ

ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ ಸಂಸ್ಕೃತ:पञ्चतन्त्र(IAST: ಪಂಚತಂತ್ರ, ‘ಐದು ಮೂಲತತ್ವಗಳು’) ಕ್ರಿಸ್ತ ಪೂರ್ವ 3 ರನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ. ಆದಾಗ್ಯೂ, “ನಾವು ಊಹಿಸಲೂ ಸಾಧ್ಯವಾದಷ್ಟು ಹಳೆಯದಾದ ಪ್ರಾಣಿಗಳ ಸಣ್ಣ ನೀತಿಯ ಕಥೆಗಳನ್ನು” ಒಳಗೊಂಡಿರುವ, ಪುರಾತನ ಮೌಖಿಕ ಪರಂಪರೆಗಳ ಮೇಲೆ ಅದು ಆಧರಿಸಲ್ಪಟ್ಟಿದೆ. ಅದು “ಖಂಡಿತವಾಗಿಯೂ ಭಾರತದ ಅತ್ಯಂತ ಹೆಚ್ಚು ಬಾರಿ ಮತ್ತೆ ಮತ್ತೆ ಭಾಷಾಂತರಿಸಲ್ಪಟ್ಟಿರುವ ಸಾಹಿತ್ಯಿಕ ಉತ್ಪನ್ನ” …

ಪೂರ್ತಿ ಓದಿ...

ಎಸ್. ನಂಜುಂಡಸ್ವಾಮಿ

S Nanjunda Swamy

ಎಸ್. ನಂಜುಂಡಸ್ವಾಮಿ (೨೬-೩-೧೯೦೬ – ೨೭-೧೨-೧೯೬೯): ವರ್ಣಚಿತ್ರ, ಶಿಲ್ಪಕಲೆಯಲ್ಲಿ ಅಗ್ರಗಣ್ಯರೆನಿಸಿದ್ದ ಎಸ್.ಎನ್. ಸ್ವಾಮಿಯವರು ಹುಟ್ಟಿದ್ದು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಯರಗಂಬಳ್ಳಿ. ತಂದೆ ಶಿಲ್ಪ ಸಿದ್ಧಾಂತಿ ವೀರತ್ತಸ್ವಾಮಿಗಳು, ಶಿಲ್ಪಕಲೆ ಮತ್ತು ಚಿತ್ರಕಲೆ ವಂಶಪಾರಂಪರ್ಯವಾಗಿ ಬಂದ ವಿದ್ಯೆ. ಮೈಸೂರಿನ ಶ್ರೀ ಜಯಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ಚಿತ್ರಾಭ್ಯಾಸ, ಮುಂಬಯಿ ಜೆ.ಜೆ. ಕಲಾಶಾಲೆಯಿಂದ ಹೆಚ್ಚಿನ ವಿದ್ಯಾಭ್ಯಾಸ. ಜಯಚಾಮರಾಜೇಂದ್ರ ಕಲಾಶಾಲೆಯಲ್ಲಿ ಅಧ್ಯಾಪಕ ವೃತ್ತಿ. ರೇಖಾಚಿತ್ರ, ತೈಲಚಿತ್ರ, ವರ್ಣಚಿತ್ರಗಳಲ್ಲಿ ಸಾಧಿಸಿದ ಅದ್ವಿತೀಯ ಸಾಧನೆ. ಪ್ರಕೃತಿ ಚಿತ್ರಗಳು, ಭೂ ದೃಶ್ಯಗಳಲ್ಲಿ ನೆರಳು-ಬೆಳಕಿನಾಟಗಳ ಸೌಂದರ್ಯವನ್ನು ಯಥಾವತ್ ಚಿತ್ರಿಸುವ ಕಲೆ ಕರಗತ, ಸಂಯೋಜನೆಯಲ್ಲಿ …

ಪೂರ್ತಿ ಓದಿ...

ಬ.ನ. ಸುಂದರರಾವ್

BN Sundararao

ಬ.ನ. ಸುಂದರರಾವ್ (೨೬.೩.೧೯೧೮ – ೮.೧೦.೧೯೮೬): ವನವಿಹಾರಿ ಕಾವ್ಯನಾಮದ ಬ.ನ.ಸುಂದರರಾವ್ ಹುಟ್ಟಿದ್ದು ಬೆಂಗಳೂರು ದಕ್ಷಿಣ ತಾಲ್ಲೂಕಿನ ವರ್ತೂರಿನಲ್ಲಿ. ತಂದೆ ನರಸಿಂಹ ಮೂರ್ತಿಯವರು, ತಾಯಿ ವಸಂತ ಲಕ್ಷ್ಮಮ್ಮ. ಇವರ ತಾತ ರಾಮಣ್ಣನವರು ಸಂಸ್ಕೃತ, ಕನ್ನಡ, ತೆಲುಗು ಭಾಷೆಯಲ್ಲಿ ಪ್ರಕಾಂಡ ಪಂಡಿತರು. ಅವರ ಮಗ ನರಸಿಂಹ ಮೂರ‍್ತಿಯವರಿಗೆ ಈ ಪರಂಪರೆಯ ಜ್ಞಾನ ಹರಿದು ಬಂದುದಲ್ಲದೆ ಮಾಸ್ತಿಯವರ ಪರಮ ಶಿಷ್ಯರು. ಇವರ ಮಗನಾದ ಬ.ನ. ಸುಂದರ ರಾಯರಿಗೆ ಕನ್ನಡ ಸಾಹಿತ್ಯ ಒಲಿದು ಬರಲು ಇದೊಂದು ವಂಶ ಪಾರಂಪರ‍್ಯ ವರದಾನ. ವರ್ತೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಾಲೆಯಲ್ಲಿ ಇಂಗ್ಲಿಷ್ ಓದಿದ್ದು …

ಪೂರ್ತಿ ಓದಿ...

ನಾಡಿಗೇರ್‌ ಕೃಷ್ಣರಾವ್

Nadigar Krishna Rao

ನಾಡಿಗೇರ್‌ ಕೃಷ್ಣರಾವ್ (೨೫.೦೩.೧೯೦೮ – ೦೩.೦೩.೧೯೯೨): “ನೋವನ್ನು ನಗೆಯಾಗಿ ಪರಿವರ್ತಿಸಿಕೊಳ್ಳಬೇಕು, ನೋವಿನ ಕಾಯಿಲೆಗೆ ನಗೆಯ ಇಂಜಕ್ಷನ್‌ಕೊಟ್ಟು ರೋಗ ಪರಿಹರಿಸಬೇಕು” ಎಂಬ ಸಿದ್ಧಾಂತವನ್ನು ರೂಪಿಸಿದ್ದಷ್ಟೇ ಅಲ್ಲದೆ ಬದುಕಿನಲ್ಲೂ ಅಳವಡಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಹಾಸ್ಯ ಲೇಪನ ಮಾಡಿ, ತಮ್ಮದೇ ಲಘು ಧಾಟಿಯಲ್ಲಿ ಹಾಸ್ಯಬರಹಗಳನ್ನು ನೀಡಿ ಕನ್ನಡಿಗರನ್ನು ಸುಮಾರು ಆರು ದಶಕಗಳ ಕಾಲ ರಂಜಿಸಿದ ಪತ್ರಕರ್ತ, ಕಾದಂಬರಿಕಾರ, ಕಥೆಗಾರ, ವಿಮರ್ಶಕ, ಸಿನಿಮಾಸಾಹಿತಿ, ಕನ್ನಡಪರ ಹೋರಾಟಗಾರ ನಾಡಿಗೇರ್ ಕೃಷ್ಣರಾಯರು ಹುಟ್ಟಿದ್ದು ಹರಿಹರದಲ್ಲಿ ೧೯೦೮ರ ಮಾರ್ಚ್ ೨೫ರ ಯುಗಾದಿ ಹಬ್ಬದ ದಿನ. ತಂದೆ ದತ್ತಾತ್ರೇಯ ರಾಯರು, ತಾಯಿ ಕಾಂಚಮ್ಮ. ತಂದೆಗೆ ನಾಟಕದ …

ಪೂರ್ತಿ ಓದಿ...

ಎಂ.ಎಸ್. ಪಂಡಿತ್

SM Pandit

ಎಂ.ಎಸ್. ಪಂಡಿತ್ (೨೫-೩-೧೯೧೬ – ೩೦-೩-೧೯೯೩): ರೊಮ್ಯಾಂಟಿಕ್ ಕಲೆಯ ರಸಋಷಿ ಎನಿಸಿದ್ದ ಎಂ.ಎಸ್. ಪಂಡಿತ್‌ರವರು ಹುಟ್ಟಿದ್ದು ಗುಲಬರ್ಗಾದಲ್ಲಿ. ತಂದೆ ಮೋನಪ್ಪ, ತಾಯಿ ಕಲ್ಲಮ್ಮ. ವೃತ್ತಿಯಲ್ಲಿ ಕಂಚುಗಾರ ಕುಟುಂಬದವರು. ಪ್ರಾರಂಭಿಕ ಶಿಕ್ಷಣ ಪಡೆದದ್ದು ಬೀದರಿನ ಭಾಸ್ಕರರಾವ್. ನಂತರ ಗುಲಬರ್ಗಾದ ಪ್ರಸಿದ್ಧ ಕಲಾವಿದರಾದ ಶಂಕರರಾವ್ ಆಳಂದಕರ್‌ರವರಲ್ಲಿ. ೧೯೩೬ರಲ್ಲಿ ಮದರಾಸಿನ ಕಲಾಶಾಲೆಯಿಂದ ಪಡೆದ ಡಿಪ್ಲೊಮ, ಮುಂಬಯಿಯ ಜೆ.ಜೆ. ಕಲಾಶಾಲೆಯಲ್ಲಿ ಗ್ಲಾಡ್‌ಸ್ಟನ್, ಭೋಂಸ್ಲೆ, ಚೂಡೇಕರ್, ದುರಂಧರ್ ಮುಂತಾದವರಿಂದ ಉಚ್ಛ ಶಿಕ್ಷಣ. ಮುಂಬಯಿಯಲ್ಲಿ ಪೋಸ್ಟರ್ ಬರೆದುಕೊಂಡು ಆರಂಭಿಸಿದ ಬದುಕು. ಜಲವರ್ಣ ಬಳಸಿ ಪೋಸ್ಟರ್ ಕಲೆಯಲ್ಲಿ ಸಾಧಿಸಿದ ಅದ್ವಿತೀಯ ಸಾಧನೆ. ಹಾಲಿವುಡ್‌ನ ಖ್ಯಾತ …

ಪೂರ್ತಿ ಓದಿ...

ತಿರುಮಲಾಂಬ

Thirumalamba

ತಿರುಮಲಾಂಬ (೨೫-೩-೧೮೮೭ – ೧-೯-೧೯೮೨): ಕನ್ನಡದ ಮೊದಲ ಪತ್ರಕರ್ತೆ, ಪ್ರಕಾಶಕಿ, ಮುದ್ರಕಿ ಎಂಬ ಕೀರ್ತಿಗಳಿಸಿದ ತಿರುಮಲಾಂಬರವರು ಹುಟ್ಟಿದ್ದು ನಂಜನಗೂಡಿನಲ್ಲಿ. ತಂದೆ ವೆಂಕಟಕೃಷ್ಣ ಅಯ್ಯಂಗಾರ್, ತಾಯಿ ಅಲಮೇಲಮ್ಮ. ವೃತ್ತಿಯಲ್ಲಿ ತಂದೆ ವಕೀಲರು. ಪ್ರಾಥಮಿಕ ಶಾಲೆ ಮುಗಿಸಿದ್ದ ಮಗಳಿಗೆ ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಬೇಕೆಂಬುದು ತಂದೆಯ ಆಸೆ. ಆದರೆ ಹತ್ತನೇ ವಯಸ್ಸಿಗೆ ಮದುವೆ. ಗಂಡನನ್ನು ನೋಡಿದ್ದು ಒಂದೇ ಬಾರಿ. ಪ್ಲೇಗಿಗೆ ಬಲಿಯಾಗಿ ಪತಿಯ ಮರಣ, ವೈಧವ್ಯ ಪ್ರಾಪ್ತಿ. ವಿಧವೆ ಮನೆದಾಟಿ ಹೊರಹೋಗಬಾರದೆಂಬ ಕಟ್ಟುಪಾಡಿನ ಕಾಲ. ಕಟ್ಟುಪಾಡು ಮುರಿದರೆ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ. ಕಡೆಗೆ ಮನೆಯಲ್ಲಿಯೇ ತಂದೆ ಮಗಳಿಗೆ …

ಪೂರ್ತಿ ಓದಿ...