ಅನಾದಿ ಕಾಲದಿಂದಲು ಮದ್ಯಪಾನವು ಕುತೂಹಲ ಕೆರಳಿಸುವ ವಿಷಯವಾಗಿಯೇ ಉಳಿದುಕೊಂಡಿದೆ. ಯಾರು ಕುಡಿಯುತ್ತಾರೋ, ಅವರೆಲ್ಲರೂ ಕುಡಿಯೋದಕ್ಕಾಗಿ ಒಂದು ಕಾರಣವನ್ನು ಇಟ್ಟುಕೊಂಡೇ ಕುಡಿಯುತ್ತಾರೆ. ಇಡೀ ವಿಶ್ವದಲ್ಲಿ ಎಲ್ಲಾ ಕಡೆಗಳಲ್ಲಿ ಆಲ್ಕೋಹಾಲ್ ಅಥವಾ ಮದ್ಯಪಾನವನ್ನು ಮತ್ತು ಬರುವಂತೆ ಅಂದರೆ ಅಮಲು ಬರಿಸಿಕೊಳ್ಳಲು, ವಿಶ್ರಾಂತಿ ಪಡೆಯಲು ಅಥವಾ ನಶೆಗಾಗಿ ಸೇವಿಸಲಾಗುತ್ತದೆ. ಕೆಲವೊಂದು ದೇಶಗಳಲ್ಲಿ ಮದ್ಯಪಾನವನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳಲಾಗಿದೆ. ಆದರೆ ಭಾರತದಂತಹ ಕೆಲವೊಂದು ದೇಶಗಳಲ್ಲಿ ದಶಕಗಳವರೆಗೂ ಮದ್ಯಪಾನದ ಮೇಲೆ ನಿಷೇಧವಿತ್ತು. ಈಗಲೂ ಸಹ ಕೆಲವೊಂದು ಪ್ರಾಂತ್ಯಗಳಲ್ಲಿ ಮದ್ಯಪಾನದ ಮೇಲೆ ನಿಷೇಧ ಇಂದಿಗು ಮುಂದುವರಿದಿದೆ. ಇದನ್ನು ಸೇವಿಸುವ ಅಭ್ಯಾಸವು ಕೆಲವೆಡೆ ಈಗಲೂ ಸಮ್ಮತವಲ್ಲ. …
ಪೂರ್ತಿ ಓದಿ...ರಾಮಾಯಣದಲ್ಲಿ ಬಚ್ಚಿಟ್ಟ ಸತ್ಯ; ಸೀತಾದೇವಿ ರಾವಣನ ಪುತ್ರಿ?
ಅರೆ ಬಹುಶಃ ನಾನು ಈ ಶೀರ್ಷಿಕೆಯನ್ನು ತಪ್ಪಾಗಿ ಓದಿರಬಹುದು ಎಂಬ ಸಂಶಯಬೇಡ. ನೀವು ಓದಿರುವುದು ಸರಿಯಾಗಿಯೇ ಇದೆ. ನಾವೆಲ್ಲರು ಓದಿರುವಂತೆ ರಾಮಾಯಣದ ಕಥೆಯಲ್ಲಿ ರಾವಣನು ತನ್ನ ತಂಗಿಗಾದ ಅಪಮಾನದ ಸೇಡನ್ನು ತೀರಿಸಿಕೊಳ್ಳಲು, ಸೀತಾದೇವಿಯನ್ನು ಅಪಹರಿಸಿದನು ಮತ್ತು ಆಕೆಯನ್ನು ಬಂಧಿಸಿ, ಮುಂದೆ ರಾಮನಿಂದ ಹತನಾದನು. ಆದರೆ ಇದಕ್ಕೆ ಸಂಪೂರ್ಣವಾಗಿ ವಿಭಿನ್ನವಾದ ಕಥೆ ಏನು ಹೇಳುತ್ತದೆ? ಭಾರತದ ಪುರಾಣಗಳೇ ಹಾಗೆ ವಿಶ್ವದಲ್ಲಿಯೇ ಅತ್ಯಂತ ಕುತೂಹಲ ಕೆರಳಿಸುವ, ಬಗೆದಷ್ಟು ಹೊರ ಬರುವ ರೋಚಕ ಕಥೆಗಳ ಆಗರ. ಬಹುಶಃ ರಾಮಾಯಣ ಮತ್ತು ಮಹಾಭಾರತಗಳು ಕವಿಗಳಿಗೆ ನೀಡಿದಷ್ಟು ಸ್ಫೂರ್ತಿಯನ್ನು ಪ್ರಪಂಚದ ಬೇರೆ …
ಪೂರ್ತಿ ಓದಿ...ಅಯ್ಯಪ್ಪ ಸ್ವಾಮಿ ದೇವರ ಜನ್ಮದ ಹಿಂದಿರುವ ರಹಸ್ಯವೇನು?
ಅಯ್ಯಪ್ಪ ಸ್ವಾಮಿ: ಶಿವ ಮತ್ತು ವಿಷ್ಣು ದೇವರ ನಿಗೂಢ ದೈವಿಕ ಮಗನ ಬಗ್ಗೆ ನೀವು ಯಾವತ್ತಾದರೂ ಕೇಳಿದ್ದೀರಾ? ಹೌದು, ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯನೀಯವಾಗಿರುವ ಭಗವಾನ್ ವಿಷ್ಣುವಿನ ಮಗುವಿಗೆ ಶಿವನು ತಂದೆಯಾಗುತ್ತಾನೆ. ಪ್ರತೀ ವರ್ಷ ಭಕ್ತರು ಇವರಿಬ್ಬರ ಮಗನಿರುವ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಪವಿತ್ರ ಸ್ಥಳವು ಕೇರಳದಲ್ಲಿದೆ ಮತ್ತು 41 ದಿನಗಳ ಉಪವಾಸದ ಬಳಿಕ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಹೌದು, ನೀವು ಸರಿಯಾಗಿ ಊಹಿಸಿದ್ದೀರಿ. ನಾವು ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವರ ಬಗ್ಗೆ ಮಾತನಾಡುತ್ತಿದ್ದೇವೆ. ಅಯ್ಯಪ್ಪ ದೇವರು …
ಪೂರ್ತಿ ಓದಿ...ಪುರಾಣದಲ್ಲಿ ಬಚ್ಚಿಟ್ಟ ಸತ್ಯ-ಶಿವನಿಗೆ ಏಳು ಗಂಡುಮಕ್ಕಳಿದ್ದರಂತೆ!
ಶಿವನ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಶಿವನಿಗೆ ಇವರಿಬ್ಬರೇ ಗಂಡು ಮಕ್ಕಳಾಗಿರಲಿಲ್ಲ, ಬದಲಿಗೆ ಒಟ್ಟು ಏಳು ಗಂಡು ಮಕ್ಕಳಿದ್ದರು. ಆದರೆ ಉಳಿದ ಐವರು ಯಾವಾಗ ಜನಿಸಿದರು? ಇದರ ಬಗ್ಗೆ ಏಕೆ ಹೆಚ್ಚಿನವರಿಗೆ ಯಾವುದೇ ಮಾಹಿತಿ ಇಲ್ಲ? ಪುರಾಣಗಳಲ್ಲಿಯೂ ಇದನ್ನು ಏಕೆ ಪ್ರಸ್ತಾಪಿಸಲಾಗಿಲ್ಲ? ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡ್ ಶೋ ತಕ್ಕ ಉತ್ತರ ನೀಡುತ್ತದೆ, ಮುಂದೆ ಓದಿ.. ಅಯ್ಯಪ್ಪ: ಪುರಾಣಗಳಲ್ಲಿ ತಿಳಿಸಿರುವಂತೆ ಅತ್ಯಂತ ಬಲಶಾಲಿಯಾದ ದೇವರುಗಳಲ್ಲಿ ಅಯ್ಯಪ್ಪ ಒಬ್ಬನಾಗಿದ್ದಾನೆ. ಏಕೆಂದರೆ ಮೋಹಿನಿಯ ರೂಪದಲ್ಲಿ ಬಂದ ವಿಷ್ಣು ಮತ್ತು …
ಪೂರ್ತಿ ಓದಿ...Mission Netaji: Help us expose Nehru’s dirty tricks; sign this petition!
Please accept the report of the Justice Mukherjee Commission of Inquiry (1999-2005), declassify all Netaji-related files, ask other countries to do the same, and set up a special investigation team to resolve Netaji’s disappearance mystery [emailpetition id=”1″]
ಪೂರ್ತಿ ಓದಿ...ತರ್ಕಕ್ಕೆ ನಿಲುಕದ್ದು: ಯಕ್ಷ ಪ್ರಶ್ನೆಯಂತೆ ಕಾಡುವ ‘ಆಭರಣಗಳ’ ರಹಸ್ಯ
ಭಾರತೀಯ ನಾರಿಯರನ್ನು ಆಭರಣಗಳ ಹೊರತಾಗಿ ನೋಡುವುದು ಅತಿ ಅಪರೂಪ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅದರಲ್ಲೂ ಕೆಲವು ಆಭರಣಗಳು ನಾರಿಯ ಸಾಮಾಜಿಕ ಸ್ಥಾನವನ್ನು ಪ್ರಕಟಿಸುತ್ತದೆ. ಉದಾಹರಣೆಗೆ ತಾಳಿ ಅಥವಾ ಮಂಗಳಸೂತ್ರ. ಇದು ಆಕೆ ವಿವಾಹಿತೆ ಎಂಬುದನ್ನು ಸಮಾಜಕ್ಕೆ ತಿಳಿಸುತ್ತದೆ. ಅಂತೆಯೇ ಬೆಳ್ಳಿಯ ಕಾಲುಂಗುರ ವಿವಾಹಿತ ಮಹಿಳೆ ಹಿಂದೂ ಧರ್ಮಕ್ಕೆ ಸೇರಿದವಳು ಎಂಬುದನ್ನು ತೋರಿಸುತ್ತದೆ. ನಿಮ್ಮ ಆಭರಣಗಳ ಜೋಪಾನಕ್ಕಾಗಿ 6 ಸಲಹೆಗಳು ಆಕೆ ಎಷ್ಟು ಬಡವಳೇ ಇರಲಿ, ಆಕೆಯ ತಂದೆ ಅಥವಾ ಪತಿಯ ಸಾಮರ್ಥ್ಯಕ್ಕೆ ಅನುಗುಣವಾದ ಒಂದೆರಡಾದರೂ ಬೆಲೆಬಾಳುವ ಆಭರಣಗಳು ಆಕೆಯ ಶರೀರದ ಮೇಲಿದ್ದು ಒಂದು …
ಪೂರ್ತಿ ಓದಿ...ರಕ್ಷಾ ಬಂಧನ
ರಕ್ಷಾ ಬಂಧನ ಹಬ್ಬ: ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ. ಇತಿವೃತ್ತ ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ‘ ಅಥವಾ ‘ರಾಖಿ‘ ಹಬ್ಬವನ್ನು …
ಪೂರ್ತಿ ಓದಿ...ವಾಸ್ತು ಶಾಸ್ತ್ರದಲ್ಲಿ ದಿಕ್ಕಿನ ಪ್ರಾಮುಖ್ಯತೆ
ವಾಸ್ತು ಶಾಸ್ತ್ರವು ವೇದದ ಒಂದು ಅಂಗ. ವಾಸ್ತು ಸೂತ್ರದ ಉಪನಿಷತ್ತು ಅಥರ್ವಣ ವೇದದಲ್ಲಿದೆ. ವಾಸ್ತು, ವಾಸ್ತವ ಶಕ್ತಿಯನ್ನು ಸಾಮರ್ಥ್ಯವನ್ನು ಚೈತನ್ಯಗೊಳಿಸುವ ತಂತ್ರ ಕೌಶಲವಾಗಿದೆ. ಪ್ರಕೃತಿ ಜನ್ಯವಾಗಿದೆ. ಈ ಶಾಸ್ತ್ರವು ಪ್ರಕೃತಿಗೆ ಅನುಗುಣವಾಗಿ ಪ್ರಕೃತಿ ನಿಯಮದಂತೆ ಹೇಳುವ ಶಾಸ್ತ್ರವಾಗಿದೆ. ವೇದದಲ್ಲಿ ಒಂದು ಅಂಗವಾದ ವಾಸ್ತುಶಾಸ್ತ್ರದಲ್ಲಿ ಈಶಾನ್ಯ ದಿಕ್ಕು (ನಾರ್ತ್ ಈಸ್ಟ್) ಅತ್ಯಂತ ಮಂಗಳಕರವಾದುದು ಎಂದು ಗುರುತಿಸಲಾಗಿದೆ. ಈಶಾನ್ಯ ಎಂಬ ದಿಕ್ಪಾಲಕನು ಇದನ್ನು ಪ್ರವರ್ತಿಸುತ್ತಾನೆ. ಗ್ರಹಗಳಲ್ಲಿ ಶ್ರೇಷ್ಠನಾದ ಗುರು ಈ ದಿಕ್ಕನ್ನು ಪ್ರತಿನಿಧಿಸುತ್ತಾನೆ. ವಾಸ್ತು ಪುರುಷನ ಶಿರಸು ಈ ದಿಕ್ಕಿಗೇ ಇರುತ್ತದೆ. ಆದ್ದರಿಂದ ಈ ದಿಕ್ಕನ್ನು ದೇವಮೂಲೆ …
ಪೂರ್ತಿ ಓದಿ...ವ್ಯಕ್ತಿತ್ವ ನಿರ್ಣಯ ಕಲೆ
ನಾವು ಅನೇಕ ವಿಧಾನಗಳಿಂದ ಮಾನವನ ಸ್ವಭಾವದ ನಿರ್ಣಯ ಮಾಡಬಹುದು. ಕೆಲವು ಜನಪ್ರಿಯ ವಿಧಾನಗಳು ಹೀಗೆ ಇವೆ. ಈಗ ನಾವು ವಿದ್ಯಾರ್ಥಿಗಳ ವರ್ತನೆಯನ್ನು ಮತ್ತು ವ್ಯಕ್ತಿತ್ವವನ್ನು ನಿರ್ಣಯಿಸಲು ಸಹಾಯ ಮಾಡುವ ಕೆಲವು ಅಂಶಗಳನ್ನು ನೋಡೋಣ. ನಮಗೆ ತಿಳಿದಿರುವಂತೆ ವಿದ್ಯಾರ್ಥಿಗಳು ತಮ್ಮ ಸಮಯ ಸಿಕ್ಕಾಗ ತಮ್ಮ ಟಿಪ್ಪಣಿ ಪುಸ್ತಕದ ಕೊನೇ ಹಾಳೆಯಲ್ಲಿ ಏನನ್ನಾದರೂ ಬರೆಯುತ್ತಾರೆ. ನಾವು ಈ ಕೊನೆಯ ಪುಟ ಓದುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ನಿರ್ಣಯ ಮಾಡಬಹುದು ಮತ್ತು ಇದು ಪೋಷಕರಿಗೆ ಬಹಳ ಸಹಾಯಕವಾಗಿದೆ. ಮಕ್ಕಳ ಬಗ್ಗೆ ತಿಳಿಯಲು ಮತ್ತು ಅವರ ಅನಿಸಿಕೆಗಳನ್ನು ತಿಳಿಯಲು ಕೊನೆಯ …
ಪೂರ್ತಿ ಓದಿ...ಮಾತೃತ್ವದ ಮೇಲೆ ಚಂದ್ರನ ಚಲನೆಯ ಪ್ರಭಾವ
‘ಚಂದ್ರಮಾ ಮನಸೋ ಜಾತಹ‘ ಚಂದ್ರನು ಮನಸ್ಸಿಗೆ ಕಾರಕನಾಗಿದ್ದಾನೆ. ಹಾಗೆಯೇ, ಚಂದ್ರನು ಮಾತೃಕಾರಕನಾಗಿದ್ದಾನೆ. ಮತ್ತು ಸ್ತ್ರೀಯರ ಋತುಚಕ್ರ ಕಾರಕನೂ ಆಗಿದ್ದಾನೆ. ಕೆಲವು ವರ್ಷಗಳ ಹಿಂದೆ, ಪ್ರಾಚೀನ ಗ್ರಂಥಗಳ ಶೋಧನೆ ಪ್ರವೃತ್ತಿಯುಳ್ಳವರಾಗಿದ್ದ ಜಕೋಸ್ಲೊವಾಕಿಯ ದೇಶದ ಮನಃಶಾಸ್ತ್ರಜ್ಞರಾದ ಡಾ|| ಯುಜನ್ ಜೋನಸ್ ಎಂಬುವವರು, ಪ್ರಾಚೀನ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದ್ದರು. ಅವರಿಗೆ ಬೆಬಿಲೋನಿಯಾದಲ್ಲಿ ದೊರೆತ ಕೆಲವು ಪ್ರಾಚೀನ ಹಸ್ತ ಪ್ರತಿಗಳಲ್ಲಿ, ಚಂದ್ರನ ಕಾಲಚಕ್ರದ ಗತಿಯಿಂದ ಸ್ತ್ರೀಯರು ಗರ್ಭ ಧರಿಸುತ್ತಾರೆ ಎಂದು ಬರೆದಿದ್ದನ್ನು ಇವರು ಪುನಃ ಸಂಶೋಧನೆ ನಡೆಸಿ, ಚಂದ್ರನ ಕಾಲಚಕ್ರದ ಮೇಲೆ ಕೆಲವು ಅಂಶಗಳನ್ನು ಕಂಡುಹಿಡಿದರು. ಶೇಕಡ 70ರಿಂದ 85 …
ಪೂರ್ತಿ ಓದಿ...