ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು…..
ಊಟಕ್ಕೆ ಎಷ್ಟಾಗುತ್ತದೆ?
ಮಾಲಿಕ ಉತ್ತರಿಸಿದರು….
ಮೀನು ಬೇಕಿದ್ದರೆ 50 ರೂಪಾಯಿ, ಮೀನು ಬೇಡವಾದರೆ 20 ರೂಪಾಯಿ….
ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ ಚಾಚುತ್ತಾ…
ನನ್ನ ಕೈಯಲ್ಲಿ ಇದುವೇ ಇರೋದು..
ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು…. ಬರೀ ಅನ್ನವಾದರೂ ಸಾಕು..
ಹಸಿವು ನೀಗಿದರೆ ಸಾಕು..
ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ….
ಅದು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು….
ಹೋಟೆಲ್ ಮಾಲಿಕ ಮೀನು ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು….
ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ… ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಳ ಜಾರುತಿತ್ತು.ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು…
ನೀವ್ಯಾಕೆ ಅಳುತಿದ್ದೀರಾ?
ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು….
ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು, ಒಂದು ಹೆಣ್ಣು…
ಮೂರು ಜನರಿಗೂ ಒಳ್ಳೆಯ ಕೆಲಸವಿದೆ… ನನಗೆ ಸಿಕ್ಕಿದ ಎಲ್ಲಾ ಸೌಭಾಗ್ಯ ವನ್ನು ನಾನು ಅವರಿಗೆ ನೀಡಿದೆ…. ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನ ವನ್ನು…. ಇಪ್ಪತ್ತೆಂಟು ವರುಷದ ಪ್ರವಾಸ ಜೀವನ…..
ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ಅವಳು ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು ಹೋದಳು…. ಆಸ್ತಿ ಪಾಲು ಮಾಡುವ ಸಂಧರ್ಭ ಎದುರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ…. ಮುಟ್ಟಿದ್ದಕ್ಕೆಲ್ಲಾ ನನ್ನನ್ನು ದೂರಲಾರಂಭಿಸಿದರು… ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರು ಕೊಡಬಹುದಿತ್ತಲ್ಲಾ? ಅದೂ ಇಲ್ಲ… ಅವರ ಅಹಾರ ಸೇವನೆಯ ನಂತರವೇ ನಾನು ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು.. ಆಹಾರವೆಲ್ಲಾ ಕಣ್ಣೀರು ಬಿದ್ದು ಉಪ್ಪುರಸವಾಗುತಿತ್ತು ತಿನ್ನುವಾಗ..ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತ್ತಿ ರಲಿಲ್ಲ… ಕಾರಣ ಮಾತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು… ಯಾವಾಗಲು ಅವರದು ಒಂದೇ ಮಾತು ಎಲ್ಲಿಗಾದರು ಹೊರಟು ಹೋಗಬಾರದೇ ಎಂದು…ಈ ಕಲ್ಲು ಭೂಮಿಯಲ್ಲಿ ರಾತ್ರಿ ಹಗಲು ಎನ್ನದೆ ಬೆವರು ಸುರಿಸಿ ದುಡಿದು ಉಂಟುಮಾಡಿದ ಹಣದಲ್ಲಿ , ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ ಹಣದಲ್ಲಿ ಕಟ್ಟಿದ ಈ ಮನೆ… ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿಯೇ. ಆ ಮನೆ ಬಿಟ್ಟು ಹೋಗಲು ಮನಸ್ಸು ಕೇಳಲಿಲ್ಲ.
ಅದರೇ ಏನು ಮಾಡಲಿ ನಿನ್ನೆ ಹೊರಟು ಬಿಟ್ಟೆ… ಸೊಸೆಯ ಒಡವೆ ಕದ್ದೆ ಎಂದು ಕಳ್ಳನ ಪಟ್ಟ ಕಟ್ಟಿ ಮಗ ನನ್ನಲ್ಲಿ ಸಿಟ್ಟುಗೊಂಡ. ಆದರೆ ಹೊಡೆದಿಲ್ಲ ಅದೇ ನನ್ನ ಭಾಗ್ಯ. … ಇನ್ನೂ ಮತ್ತೆ ಅಲ್ಲಿ ನಿಂತರೆ ಅದೂ ನಡೆಯಬಹುದು.. “ಅಪ್ಪನಿಗೆ ಹೊಡೆದ ಮಗ” ಎಂಬ ಹೆಸರು ಬರಬಾರದಲ್ಲ.,.. ನನಗೆ ಸಾಯಲು ಭಯವಿಲ್ಲ ಅಲ್ಲದೆ ಇನ್ನು ನಾನು ಯಾರಿಗಾಗಿ ಬದುಕಬೇಕು.
ಅವರು ಪೂರ್ತಿ ಊಟ ಮಾಡದೆ ಎದ್ದರು.. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ ಚಾಚಿದರು.. ಮಾಲಿಕರೆಂದರು ಬೇಡ ಕೈಯಲ್ಲಿ ಇರಲಿ….
ಯಾವಾಗ ಬೇಕಿದ್ದರು ನೀವು ಇಲ್ಲಿಗೆ ಬರಬಹುದು…
ನಿಮಗಿರುವ ಊಟ ಇಲ್ಲಿ ಇರುತ್ತದೆ.
ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು, ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ.. . ಏನೂ ತಿಳಿಯದಿರಿ..ಸ್ವಾಭಿಮಾನ ನನ್ನನ್ನು ಬಿಡುತ್ತಿಲ್ಲ.
ಬರ್ತೀನಿ ಇನ್ನೊಮ್ಮೆ ಕಾಣುವಾ ಎಂದು ಅವರ ಗಂಟನ್ನು ಎತ್ತಿಕೊಂಡು ಎಲ್ಲಿಗೆಂದಿಲ್ಲದೆ ಅವರಷ್ಟಕೆ ನಡೆದು ಹೋದರು…
ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ.
ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತ್ತೆಂದು ಯಾರು ಚಿಂತಿಸುತ್ತಿಲ್ಲ.???
ಬೇಡದ್ದು ,ಬೇಕಾದದ್ದು ಕಳುಹಿಸಿ MB ಮುಗಿಸುವಾಗಲೂಇಂತಹ ಒಂದು ಕೂಡಾ ಷೇರು ಮಾಡಿ. ಯಾರಾದರು ಒಬ್ಬರ ಮನಸು ಬದಲಾದರೆ…..
ಸಾಕು.
ಬದಲಾವಣೆ ನಮ್ಮಿಂದಲೇ ಆಗಲಿ
source: whattsapp