new note

ಹೊಸದಾಗಿ ಬಂದಿರುವ ಎರಡು ಸಾವಿರ ಮತ್ತು ಐನೂರು ರೂ. ನೋಟು ಶುಭದಾಯಕವೇ?

ಆರ್ಥಿಕತೆಗೆ ಅದು ಚೇತರಿಕೆ ನೀಡಲಿದೆಯೇ? ಹೀಗೆ ಪ್ರಶ್ನೆಗಳು ಹಲವರನ್ನು ಕಾಡುತ್ತಿರಬಹುದು. ಖಚಿತವಾಗಿಯೂ ಹೊಸ ನೋಟು ಶ್ರೇಯಸ್ಕರ ಎಂದು ಫೆಂಗ್‌ ಶೂ ಜ್ಯೋತಿಷಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಹಸಿರು ಮತ್ತು ನೇರಳೆ ಬಣ್ಣಗಳನ್ನು ಹೊಂದಿರುವ ಹೊಸ ನೋಟು ದೇಶದ ಆರ್ಥಿಕತೆಗೆ ಶ್ರೇಯಸ್ಕರ ಎಂದು ಫೆಂಗ್‌ ಶೂ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಸಿರು ಮತ್ತು ನೇರಳೆಯನ್ನು ಪ್ರಧಾನವಾಗಿ ಹೊಂದಿರುವ ಹೊಸ ನೋಟುಗಳು ಯಾವ ರೀತಿ ದೇಶಕ್ಕೆ ಮತ್ತು ವ್ಯಕ್ತಿಗತವಾಗಿ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬುದನ್ನು ನೋಡೋಣ.

ಹಸಿರು ಬಣ್ಣ

ಹಸಿರು ಬಣ್ಣ ಸಾಮರಸ್ಯ ಮತ್ತು ಹೊಂದಾಣಿಕೆಯನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣ ಜೀವನದಲ್ಲಿ ಸಂತಸವನ್ನು ತುಂಬುತ್ತದೆ. ಆದರೆ ಅತಿಯಾಗಿ ಈ ನೋಟುಗಳ ಬಳಕೆ ಮಾಡಬಾರದು ಎಂದು ಅವರು ಎಚ್ಚರಿಸುತ್ತಾರೆ. ಇನ್ನು ಹಸಿರು ಯಾವಾಗಲೂ ದಾನಕ್ಕೆ ಹೆಸರುವಾಸಿ. ಹೀಗಾಗಿ ಸಾಕಷ್ಟು ಹಣವಿದ್ದರೆ ಹಾಗೆ ಮನೆಯಲ್ಲಿ ಕೊಳೆಯಲು ಬಿಡದೆ ಒಂದಿಷ್ಟು ದಾನ-ಧರ್ಮ ಮಾಡಬೇಕು.

ಹಸಿರು ಸ್ಪಷ್ಟತೆಯ ಸಂಕೇತವೂ ಹೌದು. ಹೀಗಾಗಿ ಈ ಬಣ್ಣದಲ್ಲಿರುವ ನೋಟು ಹೊಂದಿದವರು ಜೀವನದ ಗುರಿಯ ಸ್ಪಷ್ಟತೆಯನ್ನು ಹೊಂದುವಂತಾಗುತ್ತದೆ. ಪ್ರೀತಿಗೆ ಉತ್ತೇಜನವನ್ನು ಹಸಿರು ನೀಡುತ್ತದೆ. ಹೀಗಾಗಿ ಈ ಬಣ್ಣ ಹೊಂದಿರುವ ಹಣವನ್ನು ಇಟ್ಟುಕೊಳ್ಳುವುದರಿಂದ ಪರಸ್ಪರ ಸಾಮರಸ್ಯ ಬೆಳೆಯುತ್ತದೆ. ಇದು ಕೇವಲ ಕುಟುಂಬ, ಗೆಳೆಯರು ಮಾತ್ರವಲ್ಲ ಇಡೀ ಸಮಾಜವನ್ನು ಇನ್ನಷ್ಟು ಹತ್ತಿರಕ್ಕೆ ಬೆಸೆಯಲು ನೆರವಾಗುತ್ತದೆ.

ನೇರಳೆ ಬಣ್ಣ

ನೇರಳೆ ಬಣ್ಣವು ಲಕ್ಷ್ಮೇಯ ಸಂಕೇತ. ಆದ್ದರಿಂದ ಈ ಬಣ್ಣವನ್ನು ಹೊಂದಿರುವ ನೋಟು ಆರ್ಥಿಕತೆಯನ್ನು ಸುಧಾರಿಸಲು ನೆರವಾಗುತ್ತದೆ ಎಂದು ಫೆಂಗ್‌ ಶೂ ತಜ್ಞರು ಅಭಿಪ್ರಾಯ ಪಡುತ್ತಾರೆ. ನೇರಳೆ ಬಣ್ಣವು ಜೀವನದಲ್ಲಿ ನೀವು ಹೆಚ್ಚು ಹೆಚ್ಚು ಗುರುತಿಸಿಕೊಳ್ಳಲು ನೆರವಾಗುತ್ತದೆ. ಜೊತೆಗೆ ಫೆಂಗ್‌ ಶೂ ಪ್ರಕಾರ ನೇರಳೆ ಯಶಸ್ಸಿನ ಪ್ರತೀಕ. ಆಸಕ್ತಿದಾಯಕ ಅಂಶವೆಂದರೆ ಈ ಬಣ್ಣವು ಹೆಚ್ಚು ಸಂಪಾದನೆಗೆ ನೆರವಾಗುತ್ತದೆ ಎಂದವರು ಹೇಳುತ್ತಾರೆ. ಅಂದರೆ ಹೆಚ್ಚು ಹೆಚ್ಚು 2000 ನೋಟುಗಳಿದ್ದರೆ, ಇನ್ನಷ್ಟು ಹೆಚ್ಚು ಸಂಪಾದನೆ ಸಾಧ್ಯವಂತೆ. ಇದು ಅದೃಷ್ಟದಾಯಕ ಎಂದೇ ಪರಿಗಣಿಸಲ್ಪಟ್ಟಿದೆ. ಹೀಗಾಗಿ ಕೇವಲ ಇದನ್ನು ಇಟ್ಟುಕೊಂಡವರು ಮಾತ್ರವಲ್ಲ ಇಡೀ ದೇಶಕ್ಕೂ ಅದೃಷ್ಟ ಒಲಿದು ಬರಲಿದೆ ಎಂದವರು ವಿವರಿಸುತ್ತಾರೆ.

2000 ರೂ ನೋಟಿನಲ್ಲಿರುವ ತಿಳಿ ನೇರಳೆ ಬಣ್ಣ ಕುಜನಿಗೂ ಅನ್ವಯವಾಗುತ್ತದೆ. ಅದು ಶಾಂತಿಯನ್ನು ಸೃಷ್ಟಿಮಾಡೋಲ್ಲ. ಮಂಗಳನನ್ನು ಇದು ಸಂಕೇತಿಸುತ್ತದೆ. ಇದರ ಚಲಾವಣೆಯಿಂದ ಸ್ವಲ್ಪ ಅಶಾಂತಿ ಸೃಷ್ಟಿಯಾಗುತ್ತದೆ. ಸಮಾಜದ ಶಾಂತಿ ಕದಡುತ್ತದೆ. ನಮ್ಮ ರಾಷ್ಟ್ರಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಈ ಮೂರೂ ಬಣ್ಣಗಳು ಇರುವುದರಿಂದ ಎಲ್ಲಾ ಗುಣಗಳೂ ಬ್ಯಾಲೆನ್ಸ್‌ ಆಗುತ್ತವೆ. ಆದರೆ, ಈ ಹೊಸ ನೋಟಿನಲ್ಲಿ ಇದೊಂದೇ ಬಣ್ಣವಿದೆ. ಬೇರೆ ಬಣ್ಣಗಳು ಇಲ್ಲದೇ ಇರುವುದರಿಂದ ಶಾಂತಿ ಇಲ್ಲ. ಈ ದುಡ್ಡನ್ನು ತಮ್ಮಲ್ಲಿ ಇಟ್ಟುಕೊಂಡವರಿಗೂ ತಗೊಳ್ಳೋರಿಗೂ ಶಾಂತಿಯಿಲ್ಲ.

2000 ರೂ ನೋಟಿಗೆ ಹೋಲಿಸಿದರೆ 500 ರೂಪಾಯಿ ನೋಟು ಪರವಾಗಿಲ್ಲ. ಇದರಲ್ಲಿರುವ ಹಸಿರು ಬಣ್ಣ ಇದು ಬುಧನ ಸಂಕೇತ. ಇದಕ್ಕಾಗಿ ಜನರು ಬುದ್ಧಿ ಉಪಯೋಗಿಸಿ ಪಡೆದುಕೊಳ್ಳಲು ನೋಡುತ್ತಾರೆ. ಇದನ್ನು ಹೊಂದಿರುವವರಲ್ಲಿ ಕ್ರಿಯಾಶೀಲತೆ ಇರುತ್ತದೆ.

-ಡಾ. ಬಸವರಾಜ್‌, ಜ್ಯೋತಿಷಿ
http://vijaykarnataka.indiatimes.com/religion/astro/new-note-is-good-feng-shui/articleshow/55494827.cms

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 5 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಗೌತಮ ಬುದ್ಧನ ನುಡಿಮುತ್ತುಗಳು

ಗೌತಮ ಬುದ್ಧನ ಅರ್ಥಪೂರ್ಣ ನುಡಿಮುತ್ತುಗಳು.

Leave a Reply

Your email address will not be published. Required fields are marked *