ಹೀಗೊಂದು ಜನ್ಮದಿನದ ಹಾರೈಕೆ

ಆತ್ಮೀಯರೇ, ಈ ಕವನವನ್ನು ತಮ್ಮ ತಮ್ಮ ಜನ್ಮದಿನದಂದು ನೆನಪಿಸಿಕೊಳ್ಳಿ ?

“ಹೀಗೊಂದು ಜನ್ಮದಿನದ ಹಾರೈಕೆ”?

ಹುಟ್ಟು ಹಬ್ಬ, ಹುಟ್ಟು ಹಬ್ಬ?
ಎಂದೋ ಒಮ್ಮೆ ಹುಟ್ಟಿದ್ದಕ್ಕೆ
ಪ್ರತೀ ವರ್ಷ ಹುಟ್ಟು ಹಬ್ಬ?

ಆ ನೆಪದಲ್ಲಿ ಮೂಡಿದೆ
ಇಂದು ನಾನೆಲ್ಲರ ನೆನಪಲ್ಲಿ ??
ಶುಭ ಹಾರೈಕೆಗಳು ಎಲ್ಲರ ಬಾಯಲ್ಲಿ ?

ಆದರೇಕೋ ಕಣ್ಣಂಚಲ್ಲಿ ಅವಡುಗಟ್ಟಿದೆ ನೀರು ?
ನೆನಪಾಗಿ ಅಂದು ಹಡೆದಾಕೆ ಹರಿಸಿದ ಬೆವರು ?
ಕೊಡಿಸಲು ನನಗೆ ಸ್ವಂತ ಉಸಿರು ?

ಅಂದು ಹುಟ್ಟಿದ್ದು ನಾನಾದರೂ ?
ಮರುಹುಟ್ಟು ಪಡೆದವಳು ಅವಳಲ್ಲವೇ ?
ಈ ಸಂಭ್ರಮಕ್ಕೆ ಕಾರಣ ಕೊಟ್ಟವಳಲ್ಲವೇ ?

ಹುಟ್ಟುಹಬ್ಬದಂದು ಎಲ್ಲರ
ಶುಭಹಾರೈಕೆ ನನಗಿದ್ದರೂ?
ಧನ್ಯವಾದಗಳು ಅವಳಿಗೆ ಮೀಸಲಿರಲಿ?

ಕೆ ?ಬಿ ?ಬಿ ?
(ಕಾಮನ ಬಿಲ್ಲಿನ ಬತ್ತಳಿಕೆಯಿಂದಾ)
೨೭೦೫೨೦೧೭ – Bhaskar K B

Here is a collection of places you can buy bitcoin online right now.

ಇವುಗಳೂ ನಿಮಗಿಷ್ಟವಾಗಬಹುದು

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ …

Leave a Reply

Your email address will not be published. Required fields are marked *