ಹಿಂದೂ ಧರ್ಮವು ಮದ್ಯಪಾನವನ್ನು ನಿಷೇಧಿಸುತ್ತದೆಯೇ?

ಅನಾದಿ ಕಾಲದಿಂದಲು ಮದ್ಯಪಾನವು ಕುತೂಹಲ ಕೆರಳಿಸುವ ವಿಷಯವಾಗಿಯೇ ಉಳಿದುಕೊಂಡಿದೆ. ಯಾರು ಕುಡಿಯುತ್ತಾರೋ, ಅವರೆಲ್ಲರೂ ಕುಡಿಯೋದಕ್ಕಾಗಿ ಒಂದು ಕಾರಣವನ್ನು ಇಟ್ಟುಕೊಂಡೇ ಕುಡಿಯುತ್ತಾರೆ. ಇಡೀ ವಿಶ್ವದಲ್ಲಿ ಎಲ್ಲಾ ಕಡೆಗಳಲ್ಲಿ ಆಲ್ಕೋಹಾಲ್ ಅಥವಾ ಮದ್ಯಪಾನವನ್ನು ಮತ್ತು ಬರುವಂತೆ ಅಂದರೆ ಅಮಲು ಬರಿಸಿಕೊಳ್ಳಲು, ವಿಶ್ರಾಂತಿ ಪಡೆಯಲು ಅಥವಾ ನಶೆಗಾಗಿ ಸೇವಿಸಲಾಗುತ್ತದೆ. ಕೆಲವೊಂದು ದೇಶಗಳಲ್ಲಿ ಮದ್ಯಪಾನವನ್ನು ಸಾಮಾಜಿಕವಾಗಿ ಒಪ್ಪಿಕೊಳ್ಳಲಾಗಿದೆ.

ಆದರೆ ಭಾರತದಂತಹ ಕೆಲವೊಂದು ದೇಶಗಳಲ್ಲಿ ದಶಕಗಳವರೆಗೂ ಮದ್ಯಪಾನದ ಮೇಲೆ ನಿಷೇಧವಿತ್ತು. ಈಗಲೂ ಸಹ ಕೆಲವೊಂದು ಪ್ರಾಂತ್ಯಗಳಲ್ಲಿ ಮದ್ಯಪಾನದ ಮೇಲೆ ನಿಷೇಧ ಇಂದಿಗು ಮುಂದುವರಿದಿದೆ. ಇದನ್ನು ಸೇವಿಸುವ ಅಭ್ಯಾಸವು ಕೆಲವೆಡೆ ಈಗಲೂ ಸಮ್ಮತವಲ್ಲ.

ಮದ್ಯಪಾನ ನಿಷೇಧವು ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ಸಂಬಂಧಪಟ್ಟಿದೆ. ಉದಾಹರಣೆಗೆ ಇಸ್ಲಾಂ ಧರ್ಮವು ಮದ್ಯಪಾನ ಸೇವನೆಯನ್ನು ನಿಷೇಧಿಸಿದೆ. ಅದನ್ನು ಸೇವಿಸುವವರನ್ನು ಸಹ. ಆದರೆ ನಮ್ಮ ಪ್ರಶ್ನೆಯು ಭಾರತದಲ್ಲಿ ಮದ್ಯಪಾನದ ಬಗ್ಗೆ ನಿಷೇಧ ವ್ಯಕ್ತಪಡಿಸುವುದು ಧಾರ್ಮಿಕ ಕಾರಣಕ್ಕಾಗಿಯೋ, ಅಥವಾ ಅಲ್ಲವೋ? ಎಂದು.

ಹಾಗಾದರೆ ಭಾರತದಲ್ಲಿ ಮದ್ಯಪಾನವನ್ನು ಒಪ್ಪಿಕೊಳ್ಳದೆ ಇರಲು ಇರುವ ಕಾರಣಗಳು ಯಾವುವು? ಹಲವಾರು ಧಾರ್ಮಿಕ ಗುಂಪುಗಳು ಕಟ್ಟುನಿಟ್ಟಾಗಿ ಮದ್ಯಪಾನವನ್ನು ನಿಷೇಧಿಸಿವೆ. ಜೊತೆಗೆ ಇದರಿಂದ ಉಂಟಾಗುವ ಆರೋಗ್ಯದ ಮತ್ತು ಹಣಕಾಸಿನ ಹಾನಿಯ ಬಗ್ಗೆಯು ತಿಳಿಸುತ್ತವೆ. ಹಾಗಾದರೆ ಬನ್ನಿ ಹಿಂದೂ ಧರ್ಮವು ಮದ್ಯಪಾನವನ್ನು ನಿಷೇಧಿಸಿದೆಯೇ? ಎಂಬುದರ ಬಗ್ಗೆ ವಿಶ್ಲೇಷಣೆ ಮಾಡೋಣ.

ಸೋಮ ರಸ: ಪುರಾಣ ಕಥೆಗಳು ಸೋಮರಸದ ಬಗ್ಗೆ ಉಲ್ಲೇಖಗಳನ್ನು ಮಾಡುತ್ತವೆ. ನಶೆ ತರಿಸುವ ಈ ಪಾನೀಯವನ್ನು ಯಜ್ಞ ಮಾಡುವಾಗ ದೇವರುಗಳಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತಿತ್ತು. ಸ್ವರ್ಗಾಧಿಪತಿ ಇಂದ್ರನು ಯಾವಾಗಲು ಈ ರಸವನ್ನು ಸೇವಿಸಿ ನಶೆಯಲ್ಲಿ ಇರುತ್ತಿದ್ದನು ಎಂದು ನಾವು ಪುರಾಣಗಳಲ್ಲಿ ಓದಿದ್ದೇವೆ ಮತ್ತು ಕೇಳಿದ್ದೇವೆ.

ಆಯುರ್ವೇದದಲ್ಲಿ ಮದ್ಯಪಾನ: ಹಿಂದೂ ಧರ್ಮದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡುವ ಸಮಯದಲ್ಲಿ ದ್ರಾಕ್ಷಿ ಹಣ್ಣಿನ ರಸಗಳನ್ನು ಬಳಸುತ್ತಿದ್ದ ಬಗ್ಗೆ ವಿವರಣೆಗಳು ಬಂದಿವೆ. ಆದರೆ ಮದ್ಯಪಾನವನ್ನು ಹೆಚ್ಚು ಸೇವಿಸುವುದನ್ನು ಆಯುರ್ವೇದವು ಸಹ ಒಪ್ಪುವುದಿಲ್ಲ. ಹಲವಾರು ಗಿಡ ಮೂಲಿಕೆಗಳಿಂದ ಮದ್ಯಪಾನವನ್ನು ತಯಾರಿಸಲಾಗುತ್ತಿತ್ತಾದರು, ಅದು ಕೇವಲ ಔಷಧೀಯ ಉದ್ದೇಶಗಳಿಗಾಗಿ ಮಾತ್ರ ಬಳಕೆಯಾಗುತ್ತಿತ್ತು. ಕೆಮ್ಮು ಮತ್ತು ನೆಗಡಿಗಳನ್ನು ಪರಿಣಾಮಕಾರಿಯಾಗಿ ನಿವಾರಿಸಲು ದ್ರಾಕ್ಷಾರಸವನ್ನು ಬಳಸಲಾಗುತ್ತಿತ್ತು. ಹಾಗೆಂದು ಇದನ್ನು ಸಹ ಹೆಚ್ಚಿಗೆ ಸೇವಿಸಲು ನೀಡದೆ, ಹಿತ ಮಿತವಾಗಿ ಔಷಧಿಯಂತೆ ನೀಡಲಾಗುತ್ತಿತ್ತು.

ಮದ್ಯಪಾನ ಮತ್ತು ಹಿಂದೂ ಧರ್ಮ: ಹಲವಾರು ಹಿಂದೂ ಸಮುದಾಯಗಳು ಬ್ರಹ್ಮಚರ್ಯೆಯನ್ನು ಮತ್ತು ಮದ್ಯಪಾನದಂತಹ ನಶೆ ತರಿಸುವ ಪಾನೀಯಗಳನ್ನು ಸೇವಿಸುವುದರಿಂದ ದೂರವುಳಿಯುವಂತಹ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿವೆ. ಈ ನಿಟ್ಟಿನಲ್ಲಿ ನೋಡಿದರೆ ಮದ್ಯಪಾನ ಸೇವನೆಯು ನಿಷೇಧ ಸಮ್ಮತ್ತಿಸಿವೆ. ಆದರೆ ಅಘೋರಿಗಳು ಮತ್ತು ತಾಂತ್ರಿಕರಂತಹ ಪಂಥಗಳು ಮದ್ಯಪಾನವನ್ನು ತಮ್ಮ ಪೂಜೆಯ ಒಂದು ಅಂಗವಾಗಿಯೇ ಪರಿಗಣಿಸಿ, ಪ್ರತಿನಿತ್ಯ ಅದನ್ನು ಸೇವಿಸುತ್ತಾರೆ.

ಮದ್ಯಪಾನವನ್ನು ನಿಷೇಧಿಸಿದೆಯೇ?

ಹಿಂದೂ ಧರ್ಮವು ಇಸ್ಲಾಂ ಧರ್ಮದಂತೆ ಅಧಿಕೃತವಾಗಿ ಮದ್ಯಪಾನವನ್ನು ನಿಷೇಧಿಸಿಲ್ಲ. ಏಕೆಂದರೆ ಕೆಲವೊಂದು ಗಿಡ ಮೂಲಿಕೆಗಳಿಂದ ತಯಾರಿಸಿದ ವೈನ್ ಅಥವಾ ದ್ರಾಕ್ಷಾರಸವು ನಿಗದಿತ ಮಟ್ಟದಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಔಷಧಿಯಾಗಿ ಸಹ ಆಯುರ್ವೇದದಲ್ಲಿ ಪರಿಗಣಿಸಿರುವುದರಿಂದ ಹಿಂದೂ ಧರ್ಮವು ಮದ್ಯಪಾನಕ್ಕೆ ನಿಷೇಧ ಹೇರಿಲ್ಲ. ಆದರೆ ಅದು ಇತಿ-ಮಿತಿಯಲ್ಲಿರಬೇಕು ಅಷ್ಟೇ. ಅದು ಅವನ ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಸೇವಿಸಬೇಕೆ ಹೊರತು, ಮತ್ತಿಗಾಗಿ, ನಶೆ ಏರಿಸಿಕೊಳ್ಳಲು ಮತ್ತು ಮೋಜಿಗಾಗಿ ಸೇವಿಸಲು ಅಲ್ಲ. ಮದ್ಯಪಾನ ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಅರಿತು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದಷ್ಟೆ.

ಅಸಲಿಗೆ ಮದ್ಯಪಾನದ ಬಗ್ಗೆ ಹಿಂದೂ ಧರ್ಮ ಏನು ಹೇಳುತ್ತದೆ?

ಅಸಲಿಗೆ ಹಿಂದೂ ಧರ್ಮವು ಮದ್ಯಪಾನದ ಕುರಿತು ಮಾಡಬೇಕಾದ ಮತ್ತು ಮಾಡಬಾರದಂತಹ ಕೆಲಸಗಳ ಪಟ್ಟಿಯನ್ನೇನು ಇಟ್ಟಿಲ್ಲ. ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ತಿಳಿದು ಮುಂದುವರಿಯಬೇಕು ಎಂದು ಹೇಳುತ್ತದೆ. ಇಲ್ಲಿ ಅವರವರ ವೈಯುಕ್ತಿಕ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವವನ್ನು ಧರ್ಮವು ನೀಡಿದೆ. ಯಾವುದೇ ಕಂದಾಚಾರಗಳಿಗೆ ಗುರಿಯಾಗದೆ ಅವರಿಗೆ ಸರಿ ಎನ್ನಿಸುವಂತಹ ದಾರಿಯಲ್ಲಿ, ನಡೆಯಲು ಧರ್ಮವು ಸಹ ಒಪ್ಪಿಗೆ ನೀಡುತ್ತದೆ. ಇದು ಅವರ ಸ್ವಂತ ನಿರ್ಧಾರವಾಗಿದ್ದರೆ ಒಳ್ಳೆಯದು ಎಂದು ಇದರ ಅಭಿಪ್ರಾಯ.

ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾದ ಅಂಶವೇನೆಂದರೆ, ಮದ್ಯಪಾನವನ್ನು ದುರ್ಬಳಕೆ ಮಾಡಿಕೊಂಡರೆ, ಯಾರಿಗಾದರು ಸರಿ ಅಪಾಯ ಕಟ್ಟಿಟ್ಟ ಬುತ್ತಿ. ಇಷ್ಟು ತಿಳಿದು ಆ ವ್ಯಕ್ತಿಯು ಮದ್ಯಪಾನಕ್ಕೆ ತನ್ನನ್ನು ದಾಸನನ್ನಾಗಿ ಮಾಡಿಕೊಂಡರೆ ಅದು ಆ ವ್ಯಕ್ತಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಲ್ಲಿನ ಲೋಪ ದೋಷ ಎಂದೇ ಹೇಳಬಹುದು. ಯಾರು ಮದ್ಯಪಾನ ಮಾಡುತ್ತಾನೋ, ಆತನು ಜೀವನದಲ್ಲಿ ಎಲ್ಲವನ್ನು ಕಳೆದುಕೊಳ್ಳುತ್ತಾನೆ. ಅದು ಪ್ರಜ್ಞೆಯಿಂದ ಹಿಡಿದು ಮನೆ-ಮಠದವರೆಗೆ ಎಲ್ಲಾ ಆಗಬಹುದು. ಹಾಗಾಗಿ ನಮ್ಮ ದೇಶದಲ್ಲಿ ಧರ್ಮಕ್ಕಿಂತ ಹೆಚ್ಚಾಗಿ ಸಾಮಾಜಿಕ ಕಟ್ಟುಪಾಡುಗಳ ಸಲುವಾಗಿ ಮದ್ಯಪಾನವನ್ನು ನಿಷೇಧ ಮಾಡಲಾಗಿದೆ. ಅದರ ಕುರಿತು ಅವಹೇಳನ ಮಾಡಲಾಗುತ್ತದೆ ಎಂದು ಹೇಳಬಹುದು.

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *