Wednesday , 24 April 2024
1-2

ಹಳ್ಳಿ ಆಟಗಳಿಗೆ ಮಾರು ಹೋದ ಸಿಟಿಗರು

ಕ್ಯಾಂಡಿಕ್ರಶ್‌ನಂಥ ವಿಡಿಯೋ ಗೇಮ್‌ ಹಾಗೂ ಮೊಬೈಲ್‌ನಲ್ಲಿ ಸಿಗುವ ಗೇಮ್‌ಗಳು ನಗರಕ್ಕೆ ಮಾತ್ರ ಸೀಮಿತ.

ಹಳ್ಳಿಯಲ್ಲಿ ಏನಿದ್ದರೂ ಚೌಕಾಬಾರ, ಪಗಡೆ, ಹಾವು ಏಣಿ ಆಟ ರೂಢಿ ಅನ್ನುವ ಕಾಲ ಈಗಿಲ್ಲ.

ಕಾಲಚಕ್ರ ಉರುಳಿದೆ. ಹಳ್ಳಿ ಆಟಗಳಿಗೂ ಸಿಟಿಗಳಲ್ಲಿ ವಿಪರೀತ ಡಿಮಾಂಡ್‌ ಕ್ರಿಯೇಟ್‌ ಆಗುತ್ತಿದೆ. ಹಳ್ಳಿ ಸೊಗಡಿನ ಸಾಂಪ್ರದಾಯಿಕ ಆಟಗಳು ಸಿಟಿಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿವೆಯಲ್ಲದೆ, ಅದೇ ಟ್ರೆಂಡ್‌ ಆಗಿ ಹವಾ ಆಗಿಬ್ಟಿಟಿದೆ. ಅದಕ್ಕಾಗಿಯೇ ಅನೇಕ ಹಳ್ಳಿ ಆಟಗಳನ್ನು ಕಲಿಸುವ, ಆಡಿಸುವ ಗೇಮ್‌ ಸೆಂಟರ್‌ಗಳು ನಗರದಲ್ಲಿ ತಲೆ ಎತ್ತಿವೆ.

ಅಷ್ಟೇ ಅಲ್ಲ, ಮಕ್ಕಳಿಗೆ ಇಂಥ ಆಟಗಳನ್ನು ಕಲಿಸುವ, ಗ್ರಾಮೀಣ ಸೊಗಡಿನ ಹಾವಭಾವಗಳನ್ನು ಉದ್ದೀಪನಗೊಳಿಸಲು ಪೋಷಕರು ಕೂಡ ಪ್ರಯತ್ನಿಸುತ್ತಿದ್ದಾರೆ.

ಹಳ್ಳಿ ಕಟ್ಟೆಯ ನೆನಪು

ಇಂಥ ಸಂಸ್ಥೆಗಳಲ್ಲಿ ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೂ ತಮ್ಮಿಷ್ಟದ ಆಟಗಳನ್ನು ಆಡಿ ನಲಿಯಬಹುದು. ಚಿನ್ನಿದಾಂಡು, ಬುಗುರಿ, ಲಗೋರಿ, ಅಳಗುಳಿ ಮನೆ, ಕವಡೆ, ಚನ್ನಮಣೆ, ಹಾವು ಏಣಿ, ಹುಲಿ-ಕುರಿ, ಆಡು-ಕುರಿ, ಮರಕೋತಿಯಾಟ ಮೊದಲಾದ ಹಳ್ಳಿ ಹೈಕಳ ಜನಪ್ರಿಯ ಆಟಗಳನ್ನು ಆಡಿ ಖುಷಿಪಡಬಹುದು. ಅಲ್ಲದೆ, ಕೇರಳ, ತಮಿಳುನಾಡಿನ ಪ್ರಮುಖ ದೇಸಿ ಆಟಗಳನ್ನು ಎಂಜಾಯ್‌ ಮಾಡಬಹುದು.

‘ರಜೆಯ ದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶುಕ್ರವಾರದವರೆಗೆ ಅಂಥ ಸಂಸ್ಥೆಗಳಿಗೆ ಹೋಗಿ ದೇಸಿ ಆಟಗಳನ್ನು ಆಡಬಹುಡು. ತಮ್ಮ ಜತೆ ತಮಗೆ ಬೇಕಾದ ಆಪ್ತರನ್ನು, ಮಕ್ಕಳನ್ನು ಕರೆದುಕೊಂಡು ಹೋಗಿ ಆಡಬಹುದು. ಮಕ್ಕಳಿಗಂತೂ ಹಳ್ಳಿ ಆಟಗಳು ಹೆಚ್ಚು ಉಲ್ಲಾಸ ಮೂಡಿಸುತ್ತದೆ ಎನ್ನುತ್ತಾರೆ ಕವಡೆ ಸಂಸ್ಥೆಯ ಸಂಸ್ಥಾಪಕಿ ಶ್ರೀರಂಜನಿ.

ಬಾಲ್ಯ ಹಾಗೂ ಹಳ್ಳಿಯ ನೆನಪುಗಳನ್ನು ನೆನಪಿಸುವ ದೇಸಿ ಆಟಗಳನ್ನು ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ವೈದ್ಯರು, ಐಟಿ ಉದ್ಯೋಗಿಗಳು, ಗೃಹಿಣಿಯರು, ವ್ಯಾಪಾರಸ್ಥರು ಹೀಗೆ ವಿವಿಧ ಕ್ಷೇತ್ರದವರು ಬಿಡುವಿನ ಸಮಯದಲ್ಲಿ ಬಂದು ಅವರಿಷ್ಟದ ಆಟವನ್ನು ಆಡಿ ತಮ್ಮ ಹಳ್ಳಿಯನ್ನು ನೆನಪಿಮಾಡಿಕೊಳ್ಳುತ್ತಾರೆ. ಶಿವಾಜಿನಗರ, ರಾಜಾಜಿನಗರ, ಶೇಷಾದ್ರಿಪುರಂ ಸೇರಿ ವಿವಿದೆಡೆ ಇಂಥ ಆಟಗಳನ್ನು ಆಡಲು ಜನರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಕೆಲವೊಮ್ಮೆ ಒಳಾಂಗಣ ಆಟಗಳಾದ ಚೌಕಾಬಾರ, ಚನ್ನಮಣೆ ಆಡಲು ಒಂದೆಡೆ ಸೇರಿದರೆ, ಮತ್ತೊಮ್ಮೆ ಹೊರಾಂಗಣ ಆಟಗಳಾದ ಲಗೋರಿ, ಗೋಲಿ, ಬುಗುರಿ ಆಡಲು ನಗರದ ಸಮೀಪದಲ್ಲಿರುವ ಖಾಲಿ ಸೈಟ್‌ಗಳ ಜಾಗವನ್ನು ಆಯ್ಕೆ ಮಾಡಿಕೊಂಡು ಸ್ನೇಹಿತರ ಜತೆ ಸೇರಿ ಎಂಜಾಯ್‌ ಮಾಡುತ್ತೇವೆ ಎನ್ನುತ್ತಾರೆ ಐಟಿ ಉದ್ಯೋಗಿ ರವಿ.

ಅಂತಾರಾಷ್ಟ್ರೀಯ ದೇಸಿ ಆಟದ ಪರಿಚಯ

ಇಂಥ ಸಂಸ್ಥೆಗಳಲ್ಲಿ ವಿದೇಶಿ ಆಟಗಳನ್ನೂ ಆಡಿ ಸಂತೋಷಿಸಬಹುದು. ಜಪಾನ್‌, ಆಫ್ರಿಕಾ, ಇಟಲಿ, ದಕ್ಷಿಣ ಕೊರಿಯಾ ಮೊದಲಾದ ದೇಶಗಳ ಸಾಂಪ್ರದಾಯಿಕ ಆಟಗಳನ್ನು ಕಲಿಯಬಹುದು. ಅಲ್ಲದೆ ಪದಬಂಧ, ಒಗಟು, ಗಾದೆ, ಕಥೆ ಹೇಳುವ ಆಟಗಳಲ್ಲಿ ಹೆಚ್ಚಾಗಿ ಮಹಿಳೆಯರು, ಮಕ್ಕಳು ಭಾಗಿಯಾಗುತ್ತಿದ್ದಾರೆ. ಇದರಿಂದ ಬುದ್ಧಿಶಕ್ತಿ ಸಾಮರ್ಥ್ಯ‌ ಹೆಚ್ಚುವುದಲ್ಲದೆ, ಮರೆತಿದ್ದ ದೇಸಿ ಆಟಗಳ ಪರಿಚಯವಾಗುತ್ತದೆ. ಆಟವಾಡುವುದರ ಜತೆಗೆ ಹಳ್ಳಿಯ ವಾತಾವರಣವೂ ಮುದ ನೀಡುತ್ತದೆ. ಇಂದು ಯಾಂತ್ರಕವಾಗಿ ಒಗ್ಗಿಕೊಂಡಿರುವಂತಹ ಮಕ್ಕಳಿಗೆ ಹಳ್ಳಿ ಸೊಗಡಿನ ಆಟಗಳು ಸಾಕಷ್ಟು ಮನೋರಂಜನೆ ನೀಡುವುದರ ಜತೆಗೆ ಆರೋಗ್ಯ ಹಾಗೂ ಖುಷಿಯನ್ನು ಕೊಡುತ್ತವೆ.

ಅಲ್ಲದೆ, ನಗರದ ಕೆಲವೊಂದು ರೆಸಾರ್ಟ್‌ಗಳಲ್ಲಿಯೂ ಇತ್ತೀಚೆಗೆ ದೇಸಿ ಆಟಗಳಿಗೆ ಹೆಚ್ಚು ಪ್ರೋತ್ಸಾಹ ಕೊಡಲಾಗುತ್ತಿದೆ. ಜಾನಪದ ಗೀತೆ, ಲಾವಣಿ ಪದಗಳು, ಪದ ಕಟ್ಟುವುದು, ಕವಡೆ ಆಡುವುದರಿಂದ ಹೆಚ್ಚು ಖುಷಿ ಸಿಗುತ್ತದೆ ಎನ್ನುತ್ತಾರೆ ಹೇಳುತ್ತಾರೆ ಗೃಹಿಣಿ ಸರಿತಾ ರವಿ.
ಕೋಟ್‌:

ದೇಸಿ ಆಟಗಳ ಮಹತ್ವ ತಿಳಸಿಕೊಟ್ಟಂತಾಗುವುದಲ್ಲದೇ ವಾರದ ಎಲ್ಲಾ ದಿನಗಳಲ್ಲಿಯೂ ಬೆಳಗ್ಗೆಯಿಂದ ಸಂಜೆವರೆಗೆ ಅವರಿಗೆ ಅನುಕೂಲವಾದ ಸಮಯದಲ್ಲಿ ಬಂದು ದೇಸಿ ಆಟಗಳನ್ನು ಆಡಬಹುದು. ಗೊತ್ತಿಲ್ಲದಿರುವ ಆಟಗಳ ಪರಿಚಯವನ್ನೂ ಮಾಡಿಕೊಡುತ್ತೇವೆ.
-ಶ್ರೀರಂಜನಿ,ಕವಡೆ ಟಾಯ್‌ ಹೈವಿ ಸಂಸ್ಥೆ ಸ್ಥಾಪಕಿ

ಸಾಂಪ್ರದಾಯಿಕ ದೇಸಿ ಆಟಗಳು ನಮ್ಮಲ್ಲಿ ಸಾಕಷ್ಟು ಖುಷಿ ಕೊಡುವುದರಿಂದ ವಾರಾಂತ್ಯದಲ್ಲಿ ಸ್ನೇಹಿತರೆಲ್ಲರೂ ಸೇರಿ ಹಳ್ಳಿ ಆಟಗಳನ್ನು ಆಡಿ ಮತ್ತೊಮ್ಮೆ ನಮ್ಮೂರನ್ನು ನೆನಪಿಸಿಕೊಳ್ಳುತ್ತೇವೆ.
-ಸಂಧ್ಯಾ, ಎಂಜಿನಿಯರ್‌
https://vijaykarnataka.indiatimes.com/lavalavk/culture/halli-games/articleshow/60730817.cms

ಇವುಗಳೂ ನಿಮಗಿಷ್ಟವಾಗಬಹುದು

How to make money on YouTube

ಯೂಟ್ಯೂಬ್ನಲ್ಲಿ ಹಣ ಗಳಿಸುವುದು ಹೇಗೆ?

ಯೂಟ್ಯೂಬ್ನಲ್ಲಿ ಹಣ ಗಳಿಸುವುದು ಹೇಗೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದೀರಾ? ಯೂಟ್ಯೂಬ್ನಲ್ಲಿ ವೀಡಿಯೊಗಳಿಂದ ಹಣಗಳಿಸಲು ದೊಡ್ಡ ಅವಕಾಶವಿದೆ. ಯುಟ್ಯೂಬ್ಗೆ ಅಪಾರ ಸಂಖ್ಯೆಯ …

Leave a Reply

Your email address will not be published. Required fields are marked *