ನಮ್ಮ ಹಿಂದೂ ಸಂಪ್ರದಾಯದಲ್ಲಿ ಗಂಡು ಮಕ್ಕಳಿಗೆ ಸೊಂಟಕ್ಕೆ ಉಡುದಾರ ಕಟ್ಟುವುದು ಪದ್ದತಿ. ಇದನ್ನು ಕೆಲವರು ಮೂಢನಂಬಿಕೆ ನೀವು ಹಳೆ ಜೇನೇರೇಷನ್ 21 ನೇ ಶತಮಾನಕ್ಕೆ ಕಾಲು ಇಟ್ಟಿಲ್ಲ ಅಂತೆಲ್ಲಾ ಅನ್ನುತ್ತಾರೆ ಆದರೆ ಉಡುದಾರ ವನ್ನು ಕಟ್ಟುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಅದರ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರೆ ಹಿಂದಿನ ಕಾಲದಲ್ಲಿ ಮಾಡಿದ ಯಾವುದೇ ರೀತಿಯ ಆಚಾರ ವಿಚಾರಗಳು ಸುಮ್ಮ ಸುಮ್ಮನೆ ಮಾಡಿರುವುದಿಲ್ಲ. ಆ ವಿಚಾರಗಳಲ್ಲಿ ಬಹಳಷ್ಟು ಒಳ್ಳೆ ವಿಚಾರಗಳು ಹಡಗಿರುತ್ತವೆ ಹಾಗೂ ವೈಜ್ಞಾನಿಕ ಕಾರಣಗಳು ಇರುತ್ತದೆ. ಹಾಗಾಗಿ ನಾವು ಹಿಂದಿನ ಕಾಲದವರು ಮಾಡಿರುವ ಯಾವುದೇ ವಿಚಾರಗಳನ್ನು ಅಲ್ಲ ಗಳಿಯುವಂತಿಲ್ಲ. ಉಡುದಾರ ಕಟ್ಟುವುದರ ಹಿಂದೆಯೂ ಅದೇ ರೀತಿಯಾಗಿ ಒಂದು ಒಳ್ಳೆಯ ಉದ್ದೇಶ ಇದೆ ಹಾಗೂ ಇದರ ಹಿಂದೆ ವೈಜ್ಞಾನಿಕ ಕಾರಣವೂ ಕೂಡ ಇದೆ.
ಹಿಂದೂ ಸಂಪ್ರದಾಯ ದಲ್ಲಿ ಪುರುಷ ಅಂದರೆ ಗಂಡು ಮಕ್ಕಳಿಗೆ ಉಡುದಾರ ಕಟ್ಟುವುದು ಪದ್ದತಿ. ಹೀಗೆ ಉಡುದಾರವನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಕಟ್ಟುವುದರಿಂದ ಮಕ್ಕಳ ಮೂಳೆಗಳು ಹಾಗೂ ಖಂಡಗಳು ಸರಿಯಾಗಿ ಬೆಳವಣಿಗೆ ಹಾಗುತ್ತದೆ ಮತ್ತು ಗಂಡು ಮಕ್ಕಳು ಬೆಳೆಯುವಾಗ ಅವರ ಪುರುಷ ಅಂಗವೂ ಯಾವುದೇ ರೀತಿಯ ಅಸಮತೋಲನಗೆ ಒಳಗಾಗದೆ ಸರಿಯಾದ ರೀತಿಯಲ್ಲಿ ಬೆಳೆಯಲು ಸಹಾಯಕ ವಾಗುತ್ತದೆ. ಉಡುದಾರ ವನ್ನು ಕಟ್ಟುವಾಗ ಮಕ್ಕಳಿಗೆ ತಾಮ್ರದ ಉಡುದಾರ ವನ್ನು ಕಟ್ಟುತ್ತಾರೆ. ಹೀಗೆ ತಾಮ್ರದ ಉಡುದಾರವನ್ನು ಕಟ್ಟುವುದರಿಂದ ಮಕ್ಕಳಿಗೆ ಯಾವುದೇ ರೀತಿಯ ನೆಗಟಿವ್ ಎನೆರ್ಜಿ ತಾಗುವುದಿಲ್ಲ.
ಮತ್ತು ಉಡುದಾರವನ್ನು ಕಟ್ಟುವುದರಿಂದ ಮಕ್ಕಳಲ್ಲಿ ರಕ್ತ ಪ್ರಸಾರಣವು ಚೆನ್ನಾಗಿ ಆಗುತ್ತದೆ. ಹಾಗೂ ಹಾರ್ನಿಯ ತರಹದ ಸಮಸ್ಯೆಗಳು ಬರುವುದಿಲ್ಲ ಹಾಗೂ ಇನ್ನೂ ಅನೇಕ ವೈಜ್ಞಾನಿಕ ಕಾರಣಗಳು ಇವೆ. ಉಡುದಾರದ ಬಗ್ಗೆ ಸ್ವಲ್ಪ ತಮಾಷೆ ಯಾಗಿ ಹೇಳುವುದಾದರೇ ಉಡುದಾರವನ್ನು ಕಟ್ಟುವುದರಿಂದ ನಮ್ಮ ಪ್ಯಾಂಟ್ ಬಿಗಿ ಆಗಿ ಇಲ್ಲದಿದ್ದಲ್ಲಿ ಉಡುದಾರಕೆ ಸಿಗಿಸಿಕೊಳ್ಳಬಹುದು. ತಮಾಷೆ ಹಾಗೂ ವೈಜ್ಞಾನಿಕ ಕಾರಣ ಗಳನ್ನು ಹೊರತು ಪಡಿಸಿ ಸಾಂಪ್ರದಾಯಿಕ ವಿಚಾರಕ್ಕೆ ಬರುವುದಾದರೆ ಉಡುದಾರವನ್ನು ತಾಮ್ರದಲ್ಲಿ ಮಾಡಿಸಿ ಕಟ್ಟುತ್ತಾರೆ. ಹೀಗೆ ತಾಮ್ರದಲ್ಲಿ ಮಾಡಿಸಿ ಕಟ್ಟುವ ಮುಂಚೆ ಅದಕ್ಕೆ ಯಂತ್ರ ವನ್ನು ಬರೆಸಿ ನಂತರ ಕಟ್ಟುತ್ತಾರೆ.
ಹೀಗೆ ಕಟ್ಟುವುದರಿಂದ ಮಕ್ಕಳಿಗೆ ಒಳ್ಳೆಯದು ಆಗುತ್ತದೆ ಎಂಬುದು ನಂಬಿಕೆ ಹಾಗೂ ಹೆಣ್ಣು ಮಕ್ಕಳಿಗೆ ದೃಷ್ಟಿ ಆಗದಂತೆ ಹೇಗೆ ಅವರ ಕಾಲಿಗೆ ಒಂದು ಕಪ್ಪು ದಾರವನ್ನು ಕಟ್ಟುತ್ತಾರೆಯೋ ಅದೇ ರೀತಿ ಗಂಡು ಮಕ್ಕಳಿಗೆ ಕಪ್ಪು ಉಡುದಾರವನ್ನು ಕಟ್ಟುತ್ತಾರೆ. ಹಾಗಾಗಿ ನಾವು ನಮ್ಮ ಹಿರಿಕರು ಮಾಡಿದ ಯಾವುದೇ ಆಚಾರ ವಿಚಾರಗಳನ್ನು ಅಲ್ಲ ಗಳಿಯದೆ ಪಾಲಿಸಿ ಕೊಂಡು ಹೋಗಬೇಕು. ಈ ಉಡದಾರದ ಮಹತ್ವ ತಪ್ಪದೇ ತಪ್ಪದೇ ಎಲ್ಲ ಕಡೆ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.