ಪೂರ್ವ ಕಾಲದಲ್ಲಿ ಈ ಪ್ರಶ್ನೆಗೆ ಉತ್ತರ ಖಂಡಿತವಾಗಿ ಪ್ರವೇಶ ಮಾಡಬಾರದು ಎಂದು ಬರುವುದು. ಈ ಕಾಲದಲ್ಲಿ ಕೆಲವರು ಇದನ್ನು ವಿಮರ್ಶೆ ಮಾಡುತ್ತಾರೆ.
ಅಂತ್ಯಕ್ರಿಯೆಗೆ ಹೋಗಿ ಬಂದವರು ಇಲ್ಲವೇ ಸ್ಮಶಾನದಿಂದ ಹಿಂತಿರುಗಿ ಬಂದವರು ಶರೀರದ ಮೇಲೆ ಹಾಗೆಯೇ ಬಟ್ಟೆಗಳೊಂದಿಗೆ ಸ್ನಾನ ಮಾಡಬೇಕೆಂದು ಸಂಪ್ರದಾಯದ ನಂಬಿಕೆ. ಇಲ್ಲದಿದ್ದರೆ ಮರಣ ಹೊಂದಿದ ಆತ್ಮ ಅವನನ್ನು ಹಿಂಬಾಲಿಸುತ್ತದೆಂದು ಹೇಳುತ್ತಾರೆ. ಆತ್ಮ ಹಿಂಬಾಲಿಸುವುದು ಮೂರ್ಖತ್ವವೆ ಆಗಬಹುದು. ಆದರೆ ಈ ನಂಬಿಕೆಯ ಹಿಂದೆ ಒಂದು ಖಚಿತವಾದ ವಿಷಯ ಅಡಗಿದೆ.
ಅದೇನೆಂದರೆ ಒಬ್ಬ ವ್ಯಕ್ತಿ ಮರಣಿಸಿದ ನಂತರ ಮೃತ ಶರೀರದಿಂದ ಅನೇಕ ರೀತಿಯ ವಿಷಕ್ರಿಮಿಗಳು ಹೊರಗೆ ಬರುತ್ತಿರುತ್ತವೆ. ಅವು ಆ ದೇಹದ ಸುತ್ತ ಆವರಿಸಿರುತ್ತವೆ. ಯಾರು ಶವವನ್ನು ಮುಟ್ಟುತ್ತಾರೋ ಅವರ ಮೇಲೆ ಈ ವಿಷಕ್ರಿಮಿಗಳು ಮುತ್ತುತ್ತವೆ. ಈ ವಿಷಕ್ರಿಮಿಗಳನ್ನು ಹೋಗಲಾಡಿಸಲು ಹಾಕಿಕೊಂಡಿರುವ ಬಟ್ಟೆ ಸಹಿತ ಸ್ನಾನ ಮಾಡಬೇಕೆಂದು ಹೇಳಲಾಗಿದೆ. ಇಲ್ಲದಿದ್ದರೆ ಈ ಕ್ರಿಮಿಗಳು ಖಾಯಿಲೆಗಳನ್ನು ಉಂಟು ಮಾಡುತ್ತವೆ. ತಲೆಯ ಮೇಲಿಂದ ತಣ್ಣೀರನ್ನು ಹಾಕಿಕೊಳ್ಳುವುದರಿಂದ ಮೆದುಳಿನಿಂದ ಉತ್ಪತ್ತಿಯಾದ ಶಕ್ತಿ ತರಂಗಗಳು ಪೂರ್ತಿ ಶರೀರವನ್ನು ವ್ಯಾಪಿಸಿ ವಿಷಕ್ರಿಮಿಗಳನ್ನು ನಾಶಪಡಿಸುತ್ತವೆ. ಈ ಕ್ರಿಮಿಗಳು ಬಟ್ಟೆಗಳ ಮೇಲೆಯೂ ಇರುತ್ತದೆ. ಆದ್ದರಿಂದ ಅವನ್ನೂ ಸಹ ಒದ್ದೆ ಮಾಡಿಕೊಂಡು ಸ್ನಾನ ಮಾಡಬೇಕೆಂದು ಹೇಳಲಾಗಿದೆ.
ಈ ರೀತಿಯಾಗಿ ಹೀಗೆ ಈ ನಂಬಿಕೆಯಲ್ಲಿ ಪರಿಶುಭ್ರತೆ ಮತ್ತು ಖಾಯಿಲೆಗಳಿಂದ ರಕ್ಷಿಸುವ ವಿಜ್ಞಾನದಾಯಕವಾದ ಸತ್ಯ ಅಡಗಿದೆ.
ಶ್ರೇಯಾಂಕ
ಮತ ನೀಡಿ ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.