sister

3 ಸಹೋದರರು ಹಾಗೂ ಒಂದು ಸಹೋದರಿ

ಒಂದು ಮನೆಯಲ್ಲಿ 3 ಸಹೋದರರು ಹಾಗೂ ಒಂದು ಸಹೋದರಿ ಇದ್ದಳು, ದೊಡ್ಡವನು ಮತ್ತು ಕಿರಿಯವನು ಓದುವುದರಲ್ಲಿ ತುಂಬಾ ಜಾಣರು ಆದರೆ ಎರಡನೆಯವನು ಓದುವುದರಲ್ಲಿ ದಡ್ಡನಾಗಿದ್ದ. ತಂದೆ – ತಾಯಿ ತನ್ನ ನಾಲ್ಕು ಮಕ್ಕಳನ್ನು ತುಂಬಾ ಪ್ರೀತಿ ಮಾಡುತಿದ್ದರು.

ದೊಡ್ಡ ಮಗ ಚೆನ್ನಾಗಿ ಓದಿಕೊಂಡು ಡಾಕ್ಟರ್ ಆದನು ಹಾಗೆ ಕಿರಿಯವನು ಇಂಜಿನಿಯರ್ ಆದನು ಎರಡನೆಯವನು ದಡ್ಡನಾಗಿಯೇ ಉಳಿದು ಬಿಟ್ಟ, ಮೊದಲನೆಯವನು ಹಾಗೂ ಕಿರಿಯವನು ಹುಡುಗಿಯನ್ನು ಪ್ರೀತಿಸಿ ಅವರೊಟ್ಟಿಗೆ ಮದುವೆ ಆಗುತ್ತಾರೆ, ಜೊತೆಗೆ ತಂಗಿಯನ್ನು ಸಹ ಒಂದು ಒಳ್ಳೆ ಮನೆಯಲ್ಲಿ ಮದುವೆ ಮಾಡಿ ಕೊಡುತ್ತಾರೆ.

ತಂಗಿ ತಾಯಿ ಮನೆಗೆ ಎಂದು ಬಂದಾಗ ಕೇವಲ ತನ್ನ ದೊಡ್ಡ ಅಣ್ಣ ಹಾಗೂ ಕಿರಿಯವನ ಜೊತೆ ಹೆಚ್ಚು ಬೆರೆಯುತ್ತಿದ್ದಳು ಎರಡನೇ ಅಣ್ಣ ದಡ್ಡ ಅವನಿಂದ ಅವಳಿಗೆ ಏನು ಸಹ ಸಿಗುತ್ತಿರಲಿಲ್ಲ, ಆದರಿಂದ ಅವಳು ಅವನನ್ನು ಹೆಚ್ಚು ಇಷ್ಟ ಪಡುತಿರಲಿಲ್ಲ. ಎರಡನೆಯವನು ಮದುವೆ ಆಗದೆ ಹಾಗೆ ಇರುತ್ತಾನೆ, ಯಾಕೆಂದರೆ ಓದಿಲ್ಲ ಕಲಿತಿಲ್ಲ ಯಾರು ಹುಡುಗಿಯನ್ನು ಕೊಡಲು ಮುಂದಾಗಿರಲಿಲ್ಲ.

ತಂದೆ – ತಾಯಿಯೇ ಎರಡನೇ ಮಗನ ತುಂಬಾ ಚಿಂತೆಯಾಯಿತು, ಹೇಗಾದರೂ ಮಾಡಿ ಇವನ ಮದುವೆ ಮಾಡಬೇಕೆಂದು, ಹಾಗೆ ಕೆಲವು ದಿನದ ನಂತರ ತಂದೆ ತಿರುಕೊಳ್ಳುತ್ತಾರೆ ಎಡರನೇ ಮಗನ ಮದುವೆ ನೋಡಲು ಅವನಿಗೆ ಭಾಗ್ಯ ಇರಲಿಲ್ಲ.
ತಾಯಿ ತುಂಬಾ ದುಃಖಿಯಾದಳು ತಂದೆ ತೀರಿ ಕೊಂಡ ಮೇಲೆ ಮಕ್ಕಳು ಆಸ್ತಿಪಾಲನ್ನು ಕೇಳದಿದ್ದರೆ ಸಾಕು, ನನ್ನ ಎರಡನೇ ಮಗನ ಮದುವೆ ಇನ್ನು ಆಗಿಲ್ಲವೆಂದು. ಹಾಗೋ ಹೀಗೋ ಮಾಡಿ ತಾಯಿ ಪಕ್ಕದ ಊರಿನ ಒಂದು ಬಡ ಮನೆತನದ ಹುಡುಗಿಯನ್ನು ನೋಡಿ ತನ್ನ ಎರಡನೇ ಮಗನ ಜೊತೆ ಮದುವೆ ಮಾಡುತ್ತಾಳೆ. ಮದುವೆ ಆದ ನಂತರ (ಎರಡನೇ ಮಗ) ರಾಜು ಏನೋ ತುಂಬಾ ಕಷ್ಟಪಟ್ಟು ಊರಲ್ಲಿ ಕೆಲಸ ಮಾಡಲು ಆರಂಭಿಸುತ್ತಾನೆ.

ಗೆಳೆಯರು ಬಾರೋ ನಮ್ಮ ಅಡ್ಡೆಯ ಮೇಲೆ ಕುಳಿತು ಹರಟೆ ಹೊಡೆಯುವ ಎಂದರು ಸಹ ಹೋಗುತ್ತಿರಲಿಲ್ಲ, ಆಗ ಗೆಳೆಯರು ಅವನನ್ನು ಹಿಯಾಳಿಸಲು ಸುರು ಮಾಡುತ್ತಾರೆ ಮದುವೆ ಆದದ್ದೇ ತಡ ಹೆಂಡತಿಯ ಗುಲಾಮನಾದೇ ಎಂದು ಅದಕ್ಕೆ ರಾಜು ಅವರಿಗೆ ತಕ್ಕ ಉತ್ತರ ನೀಡುತ್ತಾನೆ….. ಅರೇ ಗೆಳೆಯರೇ ಹಾಗೇನೂ ಇಲ್ಲ ನಿನ್ನೆ ಒಂದೇ ಹೊಟ್ಟೆ ಮಾತ್ರ ಇತ್ತು, ನನ್ನ ಹೊಟ್ಟೆಗೆ ರೊಟ್ಟಿ ಹೇಗೋ ಮಾಡಿ ತಿನ್ನುತ್ತಿದ್ದೆ ಆದರೆ ಇವತ್ತು ನನಗೆ ಇನ್ನೊಂದು ಹೊಟ್ಟೆಯು ಇದೆ, ನಾಳೆ ಮತ್ತೊಂದು ಸಹ ಬರಬಹುದು.

ಮನೆಯವರು ನನಗೆ ದಡ್ಡ ಮೂರ್ಖ ಎನ್ನುತ್ತಾರೆ ಅದು ನನಗೆ ಪರವಾಗಿಲ್ಲ ಆದರೆ ನನ್ನ ಹೆಂಡತಿ ನನ್ನನ್ನು ಮೂರ್ಖ, ದಡ್ಡ ಎಂದರೆ ನನ್ನ ಗಂಡಸ್ತನಕ್ಕೆ ಮರಿಯಾದೆ. ಯಾಕೆಂದರೆ ಒಂದು ಹೆಣ್ಣಿಗೆ ತನ್ನ ಗಂಡನ ಮೇಲೆ ಗೌರವ , ಅಹಂ ಮತ್ತು ಅವನ ಮೇಲೆ ಸಾವಿರ ಆಶೆಗಳನ್ನೇ ಕಟ್ಟಿಕೊಂಡಿರುತ್ತಾಳೆ. ಅದರಂತೆ ಅವಳ ಮನೆಯವರು ನನ್ನ ಮೇಲೆ ನಂಬಿಕೆ ಇಟ್ಟು ಅವಳನ್ನು ನನಗೆ ಮದುವೆ ಮಾಡಿ ಕೊಟ್ಟಿದ್ದಾರೆ, ಅವರ ನಂಬಿಕೆ ನಾನು ಹೇಗೆ ಒಡೆಯಲಿ.

ಮನೆಯಲ್ಲಿ ದೊಡ್ಡ ಮಗ ಹಾಗೂ ಚಿಕ್ಕ ಮಗ ಜೊತೆಗೆ ಅವರ ಹೆಂಡತಿಯಂದಿರು ಮಾತನಾಡಲು ಸುರು ಮಾಡುತ್ತಾರೆ ಅವನ ಸಂಬಳ ತುಂಬಾ ಕಡಿಮೆ, ನಾವು ಲಕ್ಷ-ಲಕ್ಷ ದುಡಿಯುತ್ತೇವೆ ನಮಗೆ ಅವರೊಟ್ಟಿಗೆ ಇರೋದು ಬೆಡ ಬೇರೆ ಮನೆ ಮಾಡಿ ಇರೋಣ ಅಂತಾ ಮಾತು ಕತೆ ನಡೆಯುತ್ತೆ. ಮನೆಯ ಪಾಲು ಮಾಡಬೇಕು ಎಂದು ತಾಯಿಯ ಹತ್ತಿರ ದೊಡ್ಡ ಮತ್ತು ಚಿಕ್ಕ ಮಗ ಹೋಗಿ ಹೇಳಿದಾಗ ತಾಯಿ ಹೇಳುತ್ತಾಳೆ ಬೇಡ ಮಕ್ಕಳೇ ಜೊತೆಯಲ್ಲೇ ಇರೋಣ ಎಂದು ಹೇಳಿದರು ಸಹ ಮಕ್ಕಳು ಕೇಳಲೇ ಇಲ್ಲ. ಮನೆಯ ಪಾಲು ಮಾಡುವ ದಿನಾಂಕ ಇಡುತ್ತಾರೆ, ತನ್ನ ತಂಗಿಯನ್ನು ಸಹ ಕರೆಯುತ್ತಾರೆ, ರಾಜು ಎಂದಿನಂತೆ ಆ ದಿನವೂ ಕೆಲಸಕ್ಕೆ ಹೋಗಲು ಮುಂದಾಗುತ್ತಾನೆ ಆಗ ಅಣ್ಣ ಮತ್ತು ತಮ್ಮ ನೀನು ಇವತ್ತು ಕೆಲಸಕ್ಕೆ ಹೋಗುವುದು ಬೇಡ ನಾಳೆ ಹೋಗು ಎನ್ನುತ್ತಾರೆ, ಆಗ ರಾಜು ಇಲ್ಲ ಅಣ್ಣ ನಾನು ಹೋಗುತ್ತೇನೆ ಎಂದಾಗ ಲಾಯೆರ್ ಸಾಹೇಬರು ಹೇಳ್ತಾರೆ ನೀನು ಹೋಗಲು ಆಗುವುದಿಲ್ಲ ನಿನ್ನ ಸಿಗ್ನೇಚರ್ ಬೇಕು ಇಲ್ಲಿ ಎಂದಾಗ ರಾಜು ಹೇಳುತ್ತಾನೆ , ಅಣ್ಣಾ ನೀವು ಪಾಲು ಮಾಡಿ ನನ್ನ ಪಾಲು ನನಗೆ ಇಡೀ ಸಾಕು ನಾನು ಸಾಂಕಾಲ ಬಂದು ಹೆಬ್ಬಟ್ಟು ಒತ್ತುವೇನು ಎನ್ನುತ್ತಾನೆ, ಆಗ ತಾಯಿ.. ಬೇಡ ಮಗ ನಾಳೆ ಹೋಗುವಂತೆ ಕೆಲಸಕ್ಕೆ ಇವತ್ತು ಬೇಡ ಎಂದಾಗ ರಾಜು ಮನೆಯಲ್ಲೇ ಇರುತ್ತಾನೆ.

ಮನೆಯ ಜಮೀನಿನ ಪಾಲು ಆಗುತ್ತೆ 5 ಗುಂಟೆ ದೊಡ್ಡ ಮಗ ಹಾಗೂ ಇನ್ನು 5 ಗುಂಟೆ ಕಿರಿಯ ಮಗ ತೆಗೆದು ಕೊಳ್ಳುತ್ತಾರೆ ರಾಜುವಿಗೆ ಹಳೆಯ ಮನೆಯನ್ನು ಕೊಡುತ್ತಾರೆ, ಇದನ್ನು ಕಂಡ ರಾಜು ಜೋರಾಗಿ ಬೊಬ್ಬೆ ಹೊಡೆದು ಕೇಳುತ್ತಾನೆ, ನಮ್ಮ ಪುಟ್ಟಿಯ (ತಂಗಿ) ಪಾಲು ಯಾವುದು. ಇಬ್ಬರು ಅಣ್ಣ -ತಮ್ಮ ನಗುತ್ತಾ ಹೇಳುತ್ತಾರೆ ಅರೇ ಮೂರ್ಖ ತಂಗಿ ಮದುವೆ ಆದರೆ ಅವಳಿಗೆ ಪಾಲಿಲ್ಲ ಅವಳಿಗೆ ಕೇವಲ ತಾಯಿ ಮನೆ ಅಷ್ಟೇ.
ಓ… ನಾನು ಓದಿಲ್ಲ ಅಲ್ವಾ ಅದಕ್ಕೆ ನಾನು ಮೂರ್ಖನೆ. ಇದನ್ನೆಲ್ಲ ನಿಮಗೆ ಶಾಲೆಯಲ್ಲಿ ಓದಿರುವುದರಿಂದ ತಿಳಿದಿರುತ್ತೆ ನನಗೆ ಗೊತ್ತಿಲ್ಲ ಅಣ್ಣ. ಸರಿ ಹಾಗಾದ್ರೆ ಒಂದು ಕೆಲಸ ಮಾಡಿ ನನ್ನ ಪಾಲಿನ ಮನೆ ನನ್ನ ಪುಟ್ಟಿಗೆ ಕೊಡಿ..

ಅಣ್ಣ ಮತ್ತು ತಮ್ಮ ಕೇಳುತ್ತಾರೆ ಮತ್ತೆ ನಿನಗೆ ?
ನನ್ನ ಪಾಲಿಗೆ ಅಮ್ಮ ಇದ್ದಾರಲ್ಲ.

ರಾಜು ನಗು ನಗುತ್ತಾ ತನ್ನ ಹೆಂಡತಿಗೆ ಕೇಳುತ್ತಾನೆ ಏನು ಸಾವಿತ್ರಿ ನಾನು ಹೇಳಿದ್ದು ಸರಿ ಇದೆಯಾ ?
ಸಾವಿತ್ರಿ ಅತ್ತೆಯನ್ನು ತಬ್ಬಿ ಕೊಂಡು ಹೇಳುತ್ತಾಳೆ, ಇ ಆಸ್ತಿಗಿಂತ ಬೇರೆ ಆಸ್ತಿ ಏನಿದೆ ನನಗೆ ತಾಯಿಯಂತೆ ಅತ್ತೆ ಸಿಕ್ಕಿದ್ದಾರೆ ಮತ್ತು ತಂದೆಯಂತೆ ನನ್ನನ್ನು ನೋಡಿ ಕೊಳ್ಳುವ ಗಂಡ ಇದ್ದಾನೆ ಇಷ್ಟೇ ಸಾಕು ಎನ್ನುತ್ತಾಳೆ.

ಇ ಮಾತುಗಳೇ ಮನೆ ಪಾಲು ಮಾಡುವ ಮಾತುಗಳನ್ನು ಒಂದು ಕ್ಷಣ ಮೌನ ಮಾಡಿತು.

ತಂಗಿ ಓಡಿ ಬಂದು ತನ್ನ ದಡ್ಡ ಅಣ್ಣನನ್ನು ತಬ್ಬಿ ಕೊಂಡು ಹೇಳಿದಳು ಅಣ್ಣಾ…… ನಾನು ನಿನ್ನನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ ನನ್ನನ್ನು ಕ್ಷಮಿಸಿ ಬಿಡು ಎಂದು ಅತ್ತಳು.

ಆಗ ದಡ್ಡ ಅಣ್ಣ ಹೇಳುತ್ತಾನೆ.. ನಿನ್ನ ಪಾಲಿಗೆ ನನ್ನ ಮನೆ ಇದೆ ಮದುವೆ ಮಾಡಿ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ಜನರಲ್ಲಿ ಒಂದು ಕೆಟ್ಟ ಮನೆಬಾವವಿದೆ ಅದನ್ನು ನಾನು ಪಾಲಿಸುವುದಿಲ್ಲ ನನ್ನ ಪುಟ್ಟಿ ಎಂದು ಗಟ್ಟಿಯಾಗಿ ತಬ್ಬಿ ಕೊಂಡ ಮತ್ತೆ ಹೇಳಿದ ನಾನು ಅಮ್ಮಳನ್ನು ಯಾಕೆ ನನ್ನ ಪಾಲಿಗೆ ಬೇಕೆಂದು ಹೇಳಿದೆ ಎಂದರೆ :- ನೀವೆಲ್ಲರೂ ತಾಯಿಯನ್ನು ನೆನಪಿಸಿ ಕೊಳ್ಳುವಿರಿ ತಾಯಿಯ ಗರ್ಭದಲ್ಲಿ ನಾವು ಎಲ್ಲರೂ 9 – 9 ತಿಂಗಳು ಇದ್ದಿದ್ದೀವಿ , ಆ ನೆನಪುಗಳು ಸಹ ನನ್ನ ಜೊತೆಯಲ್ಲಿಯೇ ಇರಲ್ಲೆಂದು ನಾನು ನನ್ನ ತಾಯಿಯ ಜೊತೆಯಲ್ಲಿ ಇರುತ್ತೇನೆ.

ದೂರರಿಂದ ಇಬ್ಬರು ಸಹೋದರರು ಓಡಿ ಬಂದು ರಾಜುವನ್ನು ತಬ್ಬಿ ಕೊಂಡು ಅಳುತ್ತಾ ಹೇಳುತ್ತಾರೆ ನೀನೇ ನಿಜವಾದ ಗುರು ಕಣೋ ನಾವು ಎಷ್ಟು ಓದಿ ಕಲಿತರು ಇಂತಹ ವಿದ್ಯೆ ನಮಗೆ ಯಾರು ಕೊಟ್ಟಿಲ್ಲ, ಎಂದು ಹೇಳಿ ಮತ್ತೆ ಎಲ್ಲರೂ ಒಟ್ಟಿಗೆ ಜೊತೆಯಾಗಿ ಬದುಕಲು ಆರಂಭಿಸುತ್ತಾರೆ.

ನಿಜ ನನ್ನ ಪ್ರಿಯ ಗೆಳೆಯರೇ ತಂದೆ – ತಾಯಿ ಬಿಟ್ಟರ್ರೆ ಯಾರು ಸಹ ಇಂತಹ ಒಳ್ಳೆಯ ಸಂಸ್ಕಾರ ಕಲಿಸಲು ಸಾಧ್ಯವಿಲ್ಲ, ಓದು ಬರಹ ಕೇವಲ ನಮಗೆ ಜ್ಞಾನ ನೀಡುತ್ತೆ ಒಳ್ಳೆಯ ಹಣ ದುಡಿಯುವ ದಾರಿ ತೋರಿಸಿ ಕೊಡುತ್ತೆ.
ಆದರೆ ಒಳ್ಳೆಯ ಕುಟುಂಬ ನಡೆಸಿ ಮುಂದೆ ಸಾಗಬೇಕೆಂದರೆ ಮನೆಯಲ್ಲಿ ಹಿರಿಯರು ನೀಡುವ ಸಂಸ್ಕಾರವೇ ಇದಕ್ಕೆ ಕಾರಣರಾಗಿರುತ್ತಾರೆ…

ಇವುಗಳೂ ನಿಮಗಿಷ್ಟವಾಗಬಹುದು

king

ಆತ್ಮ ಚೌರ್ಯ

ಒಬ್ಬ ದೊರೆ. ಅವನಿಗೊಬ್ಬ ವೃದ್ಧ ಸೇವಕ. ಚಿಕ್ಕ ಮಗುವಾದಾಗಿನಿಂದಲೂ ಅವನನ್ನು ಎತ್ತಿ ಬೆಳೆಸಿದವನು. ಈಗ ಅವನಿಗೆ ವಯಸ್ಸಾಗಿದೆ. ಆದರೂ ಬೆಳಿಗ್ಗೆ …

Leave a Reply

Your email address will not be published. Required fields are marked *