ನಿದ್ದೆ ಬಾರದಿರಲು ಇರುವ ಕಾರಣಗಳು ಯಾವುವು? ಎಂಬುದು ನಿಮ್ಮ ಪ್ರಶ್ನೆಯಾದಲ್ಲಿ, ಅದಕ್ಕೆ ಹಲವಾರು ಕಾರಣಗಳು ಇವೆ, ಅವು ಯಾವುವು ಎಂದು ನಾವು ನಿಮಗೆ ಇಂದು ಬಿಡಿಸಿ ಹೇಳುತ್ತೇವೆ. ಕೆಲವೊಂದು ನಿರ್ದಿಷ್ಟ ಕಾರಣಗಳು ನಿಮ್ಮ ನಿದ್ದೆಯ ಮೇಲೆ ಪರಿಣಾಮವನ್ನು ಬೀರುತ್ತವೆ.
ಸಾಮಾನ್ಯವಾಗಿ ತಡ ರಾತ್ರಿಯವರೆಗೆ, ಕೆಲಸ ಮಾಡುವುದರಿಂದ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ ನಿಮಗೆ ಸ್ಲೀಪಿಂಗ್ ಡಿಸಾರ್ಡರ್ ಸಮಸ್ಯೆಯನ್ನು ನೀಡುತ್ತದೆ. ಇದರಿಂದ ನಿಮ್ಮ ಆರೋಗ್ಯವು ಸಹ ಏರು-ಪೇರಾಗುವುದರ ಜೊತೆಗೆ ನಿಮ್ಮ ದೇಹದ ಸ್ವಾಭಾವಿಕ ಪ್ರವೃತ್ತಿಯು ಇದರಿಂದ ಏರು-ಪೇರಾಗುತ್ತದೆ. ನೈಸರ್ಗಿಕವಾಗಿ ನಿದ್ರೆಗೆ ಜಾರುವ೦ತಾಗಲು 10 ಸಲಹೆಗಳು
ಸಾಮಾನ್ಯವಾಗಿ ನಿದ್ದೆಯ ಸಮಸ್ಯೆಗಳು ಪ್ರಾಕೃತಿಕ ಮತ್ತು ದೈಹಿಕ ಹಿನ್ನಲೆಗಳಿಂದ ಬರುತ್ತದೆ. ಆದರೆ ಕೆಲವೊಂದು ವೈದ್ಯಕೀಯ ಸಮಸ್ಯೆಗಳು ಸಹ ನಿಮ್ಮ ನಿದ್ದೆಯನ್ನು ಹಾಳು ಮಾಡಿ ಬಿಡುತ್ತವೆ. ಖಿನ್ನತೆಯಿಂದ ಬಳಲುತ್ತಿರುವವರು, ನಿದ್ರಾಹೀನತೆಯಿಂದ ಬಳಲುತ್ತಾರೆ. ಹೀಗೆ ಹಲವಾರು ಕಾರಣಗಳಿಂದ ನಿಮ್ಮ ನಿದ್ದೆಯು ಹಾಳಾಗುತ್ತದೆ. ನಿದ್ರಾಹೀನತೆ ತಾತ್ಕಾಲಿಕವಾಗಿ ಅಥವಾ ಗಂಭೀರವಾಗಿ ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರಬಹುದು.
ದಾಂಪತ್ಯದಲ್ಲಿ ಸಮಸ್ಯೆ, ಮದುವೆ ಮುರಿದು ಬೀಳುವುದು, ನಡೆದಾಗ ತಾತ್ಕಾಲಿಕವಾಗಿ ನೀವು ನಿದ್ರಾಹೀನತೆ ಕಾಯಿಲೆಯಲ್ಲಿ ನರಳುತ್ತೀರಿ. ಅಲ್ಲದೆ ಅಸ್ತಮಾ ಅಥವಾ ಖಿನ್ನತೆ ಕಂಡು ಬಂದಾಗ ಗಂಭೀರವಾದ ನಿದ್ರಾಹೀನತೆ ನಿಮ್ಮನ್ನು ಕಾಡಬಹುದು. ಈ ಅಂಕಣದಲ್ಲಿ ನಾವು ಇಂತಹ ನಿದ್ದೆಗೆ ಸಮಸ್ಯೆಯನ್ನು ತರುವ ಕಾರಣಗಳು ಕುರಿತು ನಿಮಗೆ ತಿಳಿಸಿಕೊಡುತ್ತೇವೆ.
[sociallocker]ಮಿತಿಮೀರಿದ ತೂಕ:ಅಧ್ಯಯನದ ಪ್ರಕಾರ ಮಿತಿ ಮೀರಿದ ತೂಕ ಹೊಂದಿದವರೂ ಕೂಡ ನಿದ್ರೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅತಿ ತೂಕ ಹೊಂದಿದವರು ಕ್ರಮೇಣ ಚಯಾಪಚಯ ಕ್ರಿಯೆ ಕಡಿಮೆ ಆಗುವುದರ ಪರಿಣಾಮವಾಗಿ ಶಕ್ತಿ ಕುಗ್ಗುತ್ತಾ ಹೋಗುತ್ತದೆ, ಪರಿಣಾಮವಾಗಿ ನಿದ್ದೆಯ ಸಮಸ್ಯೆಯಿಂದ ಬಳಲುತ್ತಾರೆ.ಆತಂಕ ಮತ್ತು ಖಿನ್ನತೆ:ದೀರ್ಘಕಾಲದ ನಿದ್ರಾಹೀನತೆಗೆ ಸಾಮಾನ್ಯವಾದ ಎರಡು ಕಾರಣಗಳು ಆತಂಕ ಮತ್ತು ಖಿನ್ನತೆಯ ಕಾಯಿಲೆಗಳಿಗೆ ಒಳಗಾಗಿರುವ ಹೆಚ್ಚಿನ ಜನರು ಈ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಾರೆ. ಅದಕ್ಕಿಂದ ಹೆಚ್ಚು ನಿದ್ರೆಯ ಅಭಾವ ಖಿನ್ನತೆಯನ್ನು ಮತ್ತು ಆತಂಕದ ಕುರುಹುಗಳನ್ನು ಇನ್ನಷ್ಟು ಬಿಗಡಾಯಿಸಬಹುದು. ನಿಮ್ಮ ನಿದ್ರಾಹೀನತೆ ಆತಂಕ ಮತ್ತು ಖಿನ್ನತೆಯಿಂದಾಗಿದ್ದರೆ ಮಾನಸಿಕ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಗುಣಪಡಿಸಿಕೊಳ್ಳಬಹುದು.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು: ಇಂದು ಬಹುತೇಕ ಜನ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಇವರು ಬೆಳಗ್ಗೆ ನಿದ್ದೆ ಮಾಡಲು ಬಯಸುತ್ತಾರೆ. ಇದರಿಂದ ಅವರ ಜೈವಿಕ ಕ್ರಮವು ಏರುಪೇರಾಗುತ್ತದೆ. ಇದರಿಂದ ಮುಂದೆ ಅವರು ನಿದ್ದೆಯ ಸಮಸ್ಯೆಯಿಂದ ಬಳಲುತ್ತಾರೆ.
ದೈಹಿಕ ಡಿಸಾರ್ಡರ್‌ಗಳು: ಅಸ್ತಮಾದಂತಹ ಕೆಲವೊಂದು ಸಮಸ್ಯೆಗಳು ನಿದ್ದೆಗೆ ಸಂಚಕಾರ ತರುತ್ತವೆ. ಹಾಗಾಗಿ ದೈಹಿಕ ಡಿಸಾರ್ಡರ್‌ಗಳನ್ನು ಹೊಂದಿರುವವರು ನಿದ್ರಾಹೀನತೆಯಿಂದ ಬಳಲುತ್ತಾರೆ.
ಅನುವಂಶೀಯತೆ: ಕೆಲವೊಮ್ಮೆ ನಿದ್ದೆಯ ಸಮಸ್ಯೆಗಳು ಅನುವಂಶೀಯವಾಗಿ ಬರುತ್ತವೆ. ನಿದ್ರಾಹೀನತೆ ಸಹ ನಿಮ್ಮ ಪೂರ್ವಿಕರಿಂದ ನಿಮಗೆ ಬಳುವಳಿಯಾಗಿ ಬರಬಹುದು. ಕೆಲವೊಂದು ನರ ಸಂಬಂಧಿ ಡಿಸಾರ್ಡರ್‌ಗಳು ಸಹ ನಿಮಗೆ ಈ ರೀತಿ ಬರಬಹುದು. ಇವೆಲ್ಲವು ನಿಮ್ಮ ನಿದ್ದೆಯ ಮೇಲೆ ಪರಿಣಾಮ ಬೀರುತ್ತವೆ.
ವಯಸ್ಸು: ವಯಸ್ಸಾದಂತೆ ಬಹುತೇಕ ಜನ ಇನ್ಸೋಮ್ನಿಯಾದಿಂದ ನರಳುತ್ತಾರೆ. ಇದಕ್ಕೆ ಸರಿಯಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ವಯಸ್ಸಾದಂತೆ ನಿದ್ದೆಯಲ್ಲಿ ಏರು ಪೇರಾಗುವುದು ಸಹಜ.
ಉದ್ವೇಗ: ಒತ್ತಡ, ಖಿನ್ನತೆ ಮತ್ತು ಉದ್ವೇಗಗಳು ನಿದ್ದೆಗೆ ಸಮಸ್ಯೆಯನ್ನುಂಟು ಮಾಡುತ್ತವೆ. ಶಾಂತವಾದ ಮನಸ್ಸಿದ್ದರೆ ಮಾತ್ರ ನಿದ್ದೆ ಸರಿಯಾಗಿ ಬರುತ್ತದೆ.
ಔಷಧಗಳು: ಗಂಭೀರವಾದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೀಡುವ ಔಷಧಗಳು ನಿದ್ದೆಗೆ ತೊಂದರೆ ಮಾಡುತ್ತವೆ. ಈ ಕಾರಣವು ಸಹ ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ವೈದ್ಯರ ಬಳಿ ನಿಮ್ಮ ಅಡ್ಡ ಪರಿಣಾಮದ ಕುರಿತು ಹೇಳಿಕೊಳ್ಳಿ.
http://kannada.boldsky.com/health/wellness/2015/causes-sleep-disorders-009755-009756.html#slide40144[/sociallocker]
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.