ಸಂಸ್ಕೃತದಲ್ಲಿನ ಸಾಹಿತ್ಯ ವೇದಗಳೊಂದಿಗೆ ಆರಂಭವಾಗುತ್ತದೆ, ಮತ್ತು ಕಬ್ಬಿಣ ಯುಗದ ಭಾರತದ ಸಂಸ್ಕೃತ ಮಹಾಕಾವ್ಯಗಳೊಂದಿಗೆ ಮುಂದುವರಿಯುತ್ತದೆ; ಶಾಸ್ತ್ರೀಯ ಸಂಸ್ಕೃತ ಸಾಹಿತ್ಯದ ಸುವರ್ಣ ಯುಗವು ಪ್ರಾಚೀನಕಾಲದ ಉತ್ತರಾರ್ಧದ ಕಾಲಮಾನದ್ದಾಗಿದೆ (ಸರಿಸುಮಾರು ಕ್ರಿ.ಪೂ. ೧ನೆಯ ಶತಮಾನದಿಂದ ಕ್ರಿ.ಶ. ೮ನೆಯ ಶತಮಾನ). ಸಾಹಿತ್ಯಕ ನಿರ್ಮಾಣವು ಕ್ರಿ.ಶ ೧೧೦೦ ನಂತರ ಕ್ಷೀಣಿಸುವ ಮೊದಲು ೧೧ನೆಯ ಶತಮಾನದಲ್ಲಿ ತಡವಾದ ಅರಳುವಿಕೆ ಕಂಡಿತು. (೨೦೦೨ರಿಂದ) “ಅಖಿಲ ಭಾರತ ಸಂಸ್ಕೃತ ಉತ್ಸವ”ದಂತಹ ಸಂದರ್ಭಗಳು ರಚನಾ ಸ್ಪರ್ಧೆಗಳನ್ನು ನಡೆಸುವುದರೊಂದಿಗೆ ಪುನರುಜ್ಜೀವನಕ್ಕೆ ಸಮಕಾಲೀನ ಪ್ರಯತ್ನಗಳು ನಡೆದಿವೆ.
