ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ

ಒಂದು ಊರಿನಲ್ಲಿ ಒಂದು ಕಾಡು ಆ ಕಾಡಿನಲ್ಲಿ ಹಲವು ಪ್ರಾಣಿಗಳಿದ್ದವು. ಆ ಕಾಡಿಗೆ ಬರ ಬಂದಿತು

ಆಮೆ: ಹೇಗೆ ಇತ್ತು ನಮ್ಮ ಕಾಡು. ಹೇಗೆ ಆಗಿ ಹೋಯಿತು. ಮಳೆ ಮುಖ ಕಂಡು ವರ್ಷದ ಮೇಲೆ ಆರು ತಿಂಗಳೇ ಆಯ್ತಲ್ಲ.

ಚಿರತೆ: ನನ್ನ ಅಪ್ಪ ಹೇಳುತಿದ್ದರು. ಆ ನೇರಳೆ ಮರದ ಮುಂದೆ ನಿಂತಿಕೊಂಡು ಅದು ಯಾವುದೋ ಮಂತ್ರ ಹೇಳಿದರೆ ಅದು ಈ ಕಾಡಿನಲ್ಲಿರುವ ಪ್ರಾಣಿಗಳಿಗೆಲ್ಲ ಬೇಕಾಗುವಷ್ಟು ಆಹಾರ ಕೊಡುವುದಂತೆ. (ಆಗ ಮೊಲ ಮೆಲ್ಲನೆ ಪುಟಿಯುತ್ತಾ ಬಂದಿತು)

ಮೊಲ:ಹೌದಾ!

ಆಮೆ: ನೀನು ಯಾವಾಗ ಬಂದೆ.

ಮೊಲ:ನಾನು ನೀವು ಮಾತನಾಡುವಾಗಲೆ ಬಂದೆ.

ಚಿರತೆ: ಆ ಮಂತ್ರ ಆ ಬೆಟ್ಟಕ್ಕೆ ಮಾತ್ರ ಗೊತ್ತು.(ಎಂದು ಕೈ ಚಾಚಿ ತೋರಿಸಿ ಹೇಳಿತು )

ಮೊಲ:ಹೌದಾ!

ಮೊಲ:ಹಾಗಾದರೆ ನಾವು ಅಲ್ಲಿಗೆ ನಾವು ಹೋಗೋಣ(ಇದನ್ನು ಎಲ್ಲರಿಗೂ ಹೇಳಿತು)

ಎಲ್ಲಾ ಪ್ರಾಣಿಗಳು: ಚಿರತೆ ಎಲ್ಲರಿಗಿಂತ ವೇಗ ಚಿರತೆಯನ್ನೆ ಕಳಿಸೋಣ.

ಚಿರತೆ: ಆಯಿತು ನಾನೆ ಹೋಗುತ್ತೇನೇ.(ಅದು ಬೆಟ್ಟದ ಹತ್ತಿರಾ ಹೋಗಿ)

ಚಿರತೆ: ಬೆಟ್ಟ ಬೆಟ್ಟ ನಮ್ಮ ಕಾಡಿಗೆ ಬರ . ಅದಕ್ಕಾಗಿ ಆ ನೇರಳೆ ಮರದ ಮುಂದೆ ನಿಂತುಕೊಂಡು ಹೇಳಬೇಕಾಗಿರುವ ಮಂತ್ರ ಹೇಳು ಅದರಿಂದ ನಮಗೆಲ್ಲರಿಗೂ ಊಟ ಸಿಗುವುದು, ಅದಕ್ಕಾಗಿ ನೀನು ಆ ಮಂತ್ರ ಹೇಳು.

ಬೆಟ್ಟ: ನಾನು ಹೇಳುವುದ್ದಿಲ್ಲ.

ಚಿರತೆ:ದಯವಿಟ್ಟು. ಹೇಳು

ಬೆಟ್ಟ:ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪಾರಳ್ಳಿ ತಿಪ್ಪ, ದೋಸೆ ಮೇಲೆ ತುಪ್ಪ, ಭೂಮಿಗೆಲ್ಲ ಬೆಪ್ಪ, ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”

(ಚಿರತೆ ಮತ್ತೇ ಕಾಡಿಗೆ ಬರುವಾಗ ಕಲ್ಲಿಗೆ ಕಾಲು ಎಡವಿ ಬಿದ್ದು ಆ ಮಂತ್ರ ಮರೆತು ಹೋಯಿತು)

ಎಲ್ಲಾ ಪ್ರಾಣಿಗಳು: ಚಿರತೆ ಹೇಳು ಆ ಮಂತ್ರ ಹೇಳು

ಚಿರತೆ: ನನಗೆ ಆ ಮಂತ್ರ ಮರೆತು ಹೋಯಿತು

ಎಲ್ಲಾ ಪ್ರಾಣಿಗಳು: ಏನುನಿನಗೆ ಆ ಮಂತ್ರ ಮರೆತು ಹೋಯಿತೆ

ಎಲ್ಲಾ ಪ್ರಾಣಿಗಳು: ಈಗ ನಾವು ಮೊಲವನ್ನು ಕಳಿಸಬೇಕು

ಮೊಲ: ಆಯಿತು ನಾನು ಅಲ್ಲಿಗೆ ಹೋಗುತ್ತೇನೆ.

ಮೊಲ: ಬೆಟ್ಟ ಬೆಟ್ಟ ಚಿರತೆ ಆ ಮಂತ್ರವನ್ನು ಮರೆತು ಹೋಯಿತು ಅದ್ದಕ್ಕಾಗಿ ಆ ಮಂತ್ರವನ್ನು ಮತ್ತೊಮ್ಮೆ ಹೇಳು

ಬೆಟ್ಟ: ನಾನು ಹೇಳುವುದ್ದಿಲ್ಲ.

ಮೊಲ:ದಯವಿಟ್ಟು. ಹೇಳು

ಬೆಟ್ಟ: ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪಾರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ

ಸಂಪಂಗಪ್ಪ”
(ಮೊಲ ಮತ್ತೇ ಕಾಡಿಗೆ ಬರುವಾಗ ಕಲ್ಲಿಗೆ ಕಾಲು ಎಡವಿ ಬಿದ್ದು ಆ ಮಂತ್ರ ಮರೆತು ಹೋಯಿತು)

ಎಲ್ಲಾ ಪ್ರಾಣಿಗಳು:ಮೊಲ ಹೇಳು ಆ ಮಂತ್ರ ಹೇಳು

ಮೊಲ: ನನಗೆ ಆ ಮಂತ್ರ ಮರೆತು ಹೋಯಿತು

ಎಲ್ಲಾ ಪ್ರಾಣಿಗಳು: ಈಗ ನಾವು ಯಾರನ್ನು ಕಳಿಸುವುದು

ಆಮೆ: ನಾನು ಹೋಗುತ್ತೇನೇ

ಎಲ್ಲಾ ಪ್ರಾಣಿಗಳು: ನೀನು ಹೋದರೆ ಒಂದು ತಿಂಗಳುಆಗುವುದು

ಆಮೆ:ಆದರೇನಂತೆ ನಾನು ಚಿರತೆ ಮತ್ತು ಮೊಲದಂತಲ್ಲ.

ಎಲ್ಲಾ ಪ್ರಾಣಿಗಳು: ಆಯಿತು ನೀನೇ ಹೋಗಿ ಬಾ ಆದರೆ ಆ ಮಂತ್ರವನ್ನು ಮಾತ್ರ ಚಿರತೆ ಮತ್ತು ಮೊಲ ತರಹ ಮರೆಯ ಬೇಡ .

ಆಮೆ:(೧೫ ದಿನಗಳ ನಂತರ) ಬೆಟ್ಟ ಬೆಟ್ಟ ಮೊಲ ಆ ಮಂತ್ರವನ್ನು ಮರೆತು ಹೋಯಿತು ಅದ್ದಕ್ಕಾಗಿ ಆ ಮಂತ್ರವನ್ನು ಮತ್ತೊಮ್ಮೆ ಹೇಳು

ಬೆಟ್ಟ: ನಾನು ಹೇಳುವುದಿಲ.

ಆಮೆ:ದಯವಿಟ್ಟು. ಹೇಳು

ಬೆಟ್ಟ: ಆಯಿತು ಆ ಮಂತ್ರ ಹೇಳುತ್ತೇನೇ ಕೇಳು. “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”

ಎಲ್ಲಾ ಪ್ರಣಿಗಳು:(೧೫ ದಿನಗಳ ನಂತರ) ಆಮೆ ಹೇಳು ಆ ಮಂತ್ರ ಹೇಳು

ಆಮೆ: ಕೇಳಿ ಆ ಮಂತ್ರವನ್ನು ಹೇಳುತ್ತೇನೆ “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ” ಈದೇ ಆ ಮಂತ್ರ

ಚಿರತೆ: ಆಯಿತು ಆ ಮಂತ್ರವನ್ನು ಆ ನೆರಳೆ ಮರದ ಮುಂದೆ ಹೇಳೋಣ ಬನ್ನಿ ಎಲ್ಲಾ ಪ್ರಣಿಗಳು (ನೆರಳೆ ಮರದ ಮುಂದೆ ನಿಂತು) “ತಿಪ್ಪರಳ್ಳಿ ತಿಪ್ಪ ದೋಸೆ ಮೇಲೆ ತುಪ್ಪ ಭೂಮಿಗೆಲ್ಲ ಬೆಪ್ಪ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ”

(ಆ ಕ್ಷಣವೇ ಆ ಕಾಡಿಗೆ ಮಳೆ ಬಂದಿತು)

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: Be the first one !

ಇವುಗಳೂ ನಿಮಗಿಷ್ಟವಾಗಬಹುದು

ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ …

Leave a Reply

Your email address will not be published. Required fields are marked *