ಒಂದು ಊರಿನಲ್ಲಿ ಒಂದು ಸುಂದರವಾದ ಹೂತೋಟವಿತ್ತು. ಆ ಹೂತೋಟದಲ್ಲಿ ಒಂದು ಗಂಡು ಮತ್ತು ಹೆಣ್ಣು ಕಪ್ಪೆಗಳು ವಾಸವಾಗಿದ್ದವು. ಒಂದು ದಿನ ಆಸರೆಗೆ ಬಂದ ಚೇಳು ಇವರನ್ನು ಕಂಡು ಮಾತಾಡಿಸಿ ಸ್ನೇಹ ಸಂಪಾದಿಸಿಕೊಂಡಿತು. ಹೀಗೆ ದಿನಗಳು ಕಳೆದವು. ಚೇಳು ಅವರ ಸ್ವಭಾವ ಗಮನಿಸಿ, “ಯಾವಾಗಲೂ” ನಿಮ್ಮದೇ ಲೋಕದಲ್ಲಿರುತ್ತೀರಲ್ಲಾ, ಹೊರ ಜಗತ್ತಿನ ಪರಿಚಯ ಬೇಡ್ವಾ ನಿಮಗೆ?” ಎಂದು ದೊಡ್ಡಸ್ತಿಕೆ ತೋರ್ಪಡಿಸಿತು.
“ಹೊರ ಜಗತ್ತಿನಲ್ಲಿ ಅಪಾಯ ಜಾಸ್ತಿ ಅಲ್ವಾ? ಅದಕ್ಕೆ ಯಾರನ್ನೂ ಪರಿಚಯ ಮಾಡಿಕೊಳ್ಳಲು ಹೋಗಿಲ್ಲ” ಎಂದು ಗಂಡು ಕಪ್ಪೆ ಹೇಳಿತು. “ಲೋಕಜ್ಞಾನವೇ ಬೇಡ ಅಂದರೆ ಹೇಗೆ? ನಮ್ಮ ಗುರುಗಳು ಇಲ್ಲಿಯೇ ಹುಟ್ತದಲ್ಲಿದ್ದಾರೆ, ಕರೆದುಕೊಂಡು ಬರಲಾ? ಒಮ್ಮೆ ಭೇಟೆ ಮಾಡಿ ನೋಡಿ” ಎಂದಿತು ಚೇಳು.
“ಹುತ್ತ ಅಂತೀರಾ! ಅದರಿಂದ ನಮಗೇನು ಅಪಾಯ ಇಲ್ಲಾ ತಾನೇ?” ಎಂದವು ಕಪ್ಪೆಗಳು. “ನೆರೆಹೊರೆಯವರು ಅಂದರೆ ಪರಿಚಯ ಇರಬೇಕಲ್ವಾ?” ಎಂದು ಚೇಳು ಮುಗುಳ್ನಕ್ಕಿತು.
[sociallocker]ಸಾಯಂಕಾಲದ ಸಮಯ. ಜನರ ಓಡಾಟವಿರಲಿಲ್ಲ. ಚೇಳು ಹಾವಿನ ಜತೆ ಕಪ್ಪೆಯ ತೋಟಕ್ಕೆ ಬಂತು. ಗಂಡು ಕಪ್ಪೆ ಹಸಿದ ಹಾವಿಗೆ ಎದುರ್ಗೊಂಡಿತು. ಅದರ ಹೆಡೆ ನೋಡಿ ಚೂರು ಅಳುಕಿತು. “ಓ! ಇವರೇನಾ ನಿಮ್ಮ ಗುರುಗಳು? ಅಬ್ಬಾ!” ಎಂದು ತಲೆ ತಗ್ಗಿಸಿತು. ಹಾವಿನ ಬಾಯಲ್ಲಿ ನೀರೂರಿತು. ತಡ ಮಾಡಿದರೆ ಬೇಟೆ ಇಲ್ಲವಾದೀತು ಎಂದುಕೊಂಡು ಅಭ್ಯಾಸ ಬಾಲದಂತೆ ಕೂಡಲೇ ಕಪ್ಪೆಯನ್ನು ತನ್ನ ಬಾಯಿಗೆ ಸೆಳೆದುಕೊಂಡು ಬಿಟ್ಟಿತು.
“ಗುರುಗಳೇ ಇದೇನು ಮಾಡಿದಿರಿ?” ಎಂದು ಚೇಳು ಗಾಬರಿಯಾಗಿ ಅಲ್ಲಿಂದ ಪಲಾಯನ ಗೈದಿತು. ಹೆಣ್ಣು ಕಪ್ಪೆ ಸಂಗಾತಿಯಿ ಕಣ್ಣಾರೆ ಕಂಡರೂ ಏನು ಮಾಡದ ಸ್ಥಿತಿಯಲ್ಲಿ ತಳಮಳಿಸಿತು. ದುಃಖಿಸಿತು. ಚಿಂತೆಗೀಡಾಯಿತು. ನೆರೆಹೊರೆಯವರ ಪರಿಚಯವಿರಬೇಕು ಎಂದು ಹೇಳಿದ ದುಷ್ಟ ಚೇಳಿನ ಸ್ನೇಹಕ್ಕೆ ಆಕ್ರೋಶಗೊಂಡು ಪ್ರತೀಕಾರಕ್ಕಾಗಿ ಯೋಚಿಸಿತು. ಭರ್ಜರಿ ಊಟವಾಯಿತು ಎಂದು ಹುತ್ತಕ್ಕೆ ಹಿಂತಿರುಗಿದ ಹಾವು ಸುಖ ನಿದ್ರೆಗೆ ಜಾರಿತು.
ನಿರ್ಗಾಲುವೆ ದಡದಲ್ಲಿದ್ದ ಮುಂಗುಸಿಯನ್ನೂ ಪತ್ತೆ ಮಾಡಿ ಹತ್ತಿರಕ್ಕೆ ಬಂದ ಹೆಣ್ಣು ಕಪ್ಪೆ ತನ್ನ ಅಳಲನು ತೋಡಿಕೊಂಡಿತು. “ಆ ಕೆಲಸ ನನಗಿರಲಿ” ಎಂದ ಮುಂಗುಸಿಯನ್ನೂ ಹುತ್ತಕ್ಕೆ ಕರೆ ತಂದಿತು. ಹೊರಗೆ ಬರುವ ಹಾವಿನ ಸೂಚನೆ ನೀಡಲು ಕಪ್ಪೆ ಪಕ್ಕದಲ್ಲಿಯೇ ಅಡಗಿಕೊಂಡಿತು.
ಇನ್ನೊಂದು ಬೇಟೆಗಾಗಿ ಹಾವು ಸಾಯಂಕಾಲ ಹೊರಗೆ ಕಾಣಿಸುತ್ತಿದ್ದಂತೆಯೇ ಕಪ್ಪೆ ವಾಟರ್ ಗುಟ್ಟಿತು. ಅಡಗಿ ಕುಳಿತಿದ್ದ ಮುಂಗುಸಿ ಹಾವಿನ ಮೇಲೆ ಎರಗಿ ಕುತ್ತಿಗೆಯನ್ನು ಬಲವಾಗಿ ಹಿಡಿದು ಬಿಟ್ಟಿತು. ಅನಿರೀಕ್ಷಿತ ದಾಳಿಗೆ ಹಾವು ವಿಲಿ ವಿಲಿ ಎಂದು ಒದ್ದಾಡಿತು.
“ಸಂಚಿನ ಬೇಟೆಯಾಡಿದರೆ ನಿನಗೂ ಎಂಥವರು ಇರುತ್ತಾರೆ ಎಂದು ತಿಳಿದುಕೋ” ಎಂದು ಕಪ್ಪೆ ಕುಣಿದಾಡಿತು. ಮುಂಗುಸಿಗೆ ಕೃತಜ್ಞತೆ ಹೇಳಿ ತನ್ನ ತೋಟದೆಡೆಗೆ ಮರಳಿತು.
ನೀತಿ
ದುಷ್ಟರನ್ನು ಕಂಡರೆ ದೂರ ಇರಬೇಕು.[/sociallocker]
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.