ಶ್ಲೋಕ – 33
ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ ।
ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ ॥೩೩॥
ಯಥಾ ಪ್ರಕಾಶಯತಿ ಏಕಃ ಕೃತ್ಸ್ನಮ್ ಲೋಕಮ್ ಇಮಮ್ ರವಿಃ ।
ಕ್ಷೇತ್ರಮ್ ಕ್ಷೇತ್ರೀ ತಥಾ ಕೃತ್ಸ್ನಮ್ ಪ್ರಕಾಶಯತಿ ಭಾರತ –ಭಾರತ, ಒಬ್ಬ ಸೂರ್ಯ ಇಡಿಯ ಈ ಭೂಮಿಯನ್ನು ಬೆಳಗುವಂತೆ ‘ಕ್ಷೇತ್ರಜ್ಞ’ನಾದ ಭಗವಂತನೊಬ್ಬನೆ ಇಡಿಯ ವಿಶ್ವವೆಂಬ ‘ಕ್ಷೇತ್ರ’ ವನ್ನು ಬೆಳಗುತ್ತಾನೆ.
ಏಕ ಸೂರ್ಯ ಹೇಗೆ ಇಡೀ ವಿಶ್ವವನ್ನು ಬೆಳಗಿಸುತ್ತಾನೋ ಹಾಗೆ, ಇಡೀ ಕ್ಷೇತ್ರವನ್ನು ಕ್ಷೇತ್ರಜ್ಞನಾದ ಭಗವಂತ ಬೆಳಗಿಸುತ್ತಾನೆ. ನಾವು ಮೊದಲು ಭಗವಂತನ ಬೆಳಕನ್ನು(ಜ್ಞಾನವನ್ನು) ತಿಳಿಯಬೇಕು. ಆಗ ನಮ್ಮೊಳಗಿನ ಬೆಳಕು ನಮಗೆ ಅರ್ಥವಾಗುತ್ತದೆ.