ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 18

ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ ।
ಮದ್ಭಕ್ತ ಏತದ್ ವಿಜ್ಞಾಯ ಮದ್ ಭಾವಾಯೋಪಪದ್ಯತೇ ॥೧೮॥

ಇತಿ ಕ್ಷೇತ್ರಮ್ ತಥಾ ಜ್ಞಾನಮ್ ಜ್ಞೇಯಮ್ ಚ ಉಕ್ತಮ್ ಸಮಾಸತಃ ।

ಮತ್ ಭಕ್ತಃ ಏತತ್ ವಿಜ್ಞಾಯ ಮತ್ ಭಾವಾಯ ಉಪದ್ಯತೇ –ಹೀಗೇ ‘ಕ್ಷೇತ್ರ’-‘ಜ್ಞಾನ’ ಮತ್ತು ‘ಜ್ಞೇಯ’ಗಳನ್ನು ಅಡಕವಾಗಿ ಹೇಳಿದಂತಾಯಿತು. ನನ್ನ ಭಕ್ತನಾದವನು ಇದನ್ನರಿತು ನನ್ನಲ್ಲೆ ನೆಲೆಸುತ್ತಾನೆ.

ಈ ಶ್ಲೋಕದಲ್ಲಿ ಕೃಷ್ಣ ಈವರೆಗೆ ಹೇಳಿದ ವಿಚಾರದ ಉಪಸಂಹಾರ ಮಾಡುತ್ತಾ ಹೇಳುತ್ತಾನೆ: “ಈ ತನಕ ಕ್ಷೇತ್ರದ ಬಗ್ಗೆ ಜ್ಞಾನಸಾಧನಗಳ ಬಗ್ಗೆ, ಈ ಜ್ಞಾನ ಸಾಧನಗಳಿಂದ ತಿಳಿದುಕೊಳ್ಳಬೇಕಾದ ಭಗವಂತನ ಬಗ್ಗೆ ಅಡಕವಾಗಿ(In a nutshell) ಹೇಳಿದ್ದಾಯಿತು. ಸೃಷ್ಟಿ, ಸೃಷ್ಟಿಯಾದ ಪ್ರಪಂಚ, ಪ್ರಪಂಚ ಸೃಷ್ಟಿಯ ಬಗೆ, ಸ್ರಷ್ಟಾರನಾದ ಭಗವಂತ- ಇದನ್ನು ತಿಳಿದರೆ ಮತ್ತೆ ತಿಳಿಯಬೇಕಾದದ್ದು ಏನೂ ಉಳಿಯುವುದಿಲ್ಲ. ಪೂರ್ಣ ನಂಬಿಕೆಯಿಂದ, ಭಕ್ತಿಯಿಂದ ಇದನ್ನು ಅರಿತ ಭಕ್ತ ನನ್ನನ್ನು ಸೇರುತ್ತಾನೆ” ಎಂದು. ಭಗವಂತನ ಬಗೆಗಿನ ಜ್ಞಾನ ಮತ್ತು ಭಕ್ತಿ ನಮ್ಮನ್ನು ಮೊಕ್ಷದತ್ತ ಕೊಂಡೊಯ್ಯಬಲ್ಲದು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 01 ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ “ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯ” ಎಂದು ಹೇಳಿದ. …

Leave a Reply

Your email address will not be published. Required fields are marked *