ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 16

ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ ।
ಭೂತಭರ್ತೃ ಚ ತಜ್ ಜ್ಞೇಯಂ ಗ್ರಸಿಷ್ಣು ಪ್ರಭವಿಷ್ಣು ಚ ॥೧೬॥

ಅವಿಭಕ್ತಮ್ ಚ ಭೂತೇಷು ವಿಭಕ್ತಮ್ ಇವ ಚ ಸ್ಥಿತಮ್ ।

ಭೂತಭರ್ತೃ ಚ ತತ್ ಜ್ಞೇಯಮ್ ಗ್ರಸಿಷ್ಣು ಪ್ರಭವಿಷ್ಣು ಚ –ಎಲ್ಲ ಜೀವಿಗಳಲ್ಲು ಏಕರೂಪವಾಗಿದೆ; ಆದರೂ ಬೇರೆಯೋ ಎನುವಂತೆ ಬಹುರೂಪದಿಂದಿದೆ. ಎಲ್ಲ ಜೀವಿಗಳನ್ನು ಪಾಲಿಸುವಂಥದು; ಕಬಳಿಸುವಂಥದು ಮತ್ತು ಹುಟ್ಟಿಸುವಥದು ಅದೇ ಎಂದು ತಿಳಿಯಬೇಕು.

ಭಗವಂತ ಈ ಪ್ರಪಂಚದಲ್ಲಿನ ಪ್ರತಿಯೊಂದು ಜೀವದಲ್ಲೂ ಬಿಂಬ ರೂಪನಾಗಿ ನೆಲೆಸಿದ್ದಾನೆ. ಒಂದೊಂದು ಜೀವದಲ್ಲೂ ಅನೇಕ ರೂಪದಲ್ಲಿ ಆತನಿದ್ದಾನೆ. ಇಲ್ಲಿ ಪ್ರತಿಯೊಂದು ಜೀವಗಳೂ ವಿಭಕ್ತಗಳು. ಆದರೆ ಭಗವಂತ ಮಾತ್ರ ಅಖಂಡ(ಅವಿಭಕ್ತ). ಎಲ್ಲಾ ಕಡೆ ಇರುವ ಭಗವಂತ ಒಬ್ಬನೆ ಆದರೆ ಬೇರೆ ಬೇರೆ ಇದ್ದಂತೆ ನಮಗೆ ಕಾಣಿಸುತ್ತಾನೆ ಅಷ್ಟೆ. ಇದಕ್ಕೆ ಉತ್ತಮ ಉದಾಹರಣೆ ಭಗವಂತನ ಅವತಾರವಾದ-ಪರಶುರಾಮ, ವೇದವ್ಯಾಸ ಮತ್ತು ಶ್ರೀಕೃಷ್ಣ. ಇಲ್ಲಿ ಭಗವಂತ ಮೂರು ರೂಪದಲ್ಲಿ ನಮಗೆ ಏಕ ಕಾಲದಲ್ಲಿ ಕಾಣಿಸಿಕೊಂಡ. ಒಂದೇ ಆದರೂ ಕೂಡ ಮೂರಾಗಿ ನಮಗೆ ಆತ ಕಾಣಿಸಿಕೊಂಡ. ಆತ ಸಮಸ್ತ ಜೀವದೊಳಗಿದ್ದಾನೆ ಆದರೆ ಸಮಸ್ತ ಜೀವವನ್ನೂ ಆತನೇ ಹೊತ್ತುಕೊಂಡಿದ್ದಾನೆ. ಎಲ್ಲರ ಸೃಷ್ಟಿಕರ್ತ ಭಗವಂತ ಹಾಗು ತನ್ನ ಸೃಷ್ಟಿಯನ್ನು ಒಂದು ದಿನ ಸಂಹಾರ ಮಾಡುವವನೂ ಆತನೆ. ಸಂಹಾರದ ನಂತರ ಸೃಷ್ಟಿಯ ಪುನರ್ನಿರ್ಮಾಣ ಮಾಡುವವನೂ ಅವನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 12

ಶ್ಲೋಕ – 01 ಹಿಂದಿನ ಅಧ್ಯಾಯದ ಕೊನೆಯಲ್ಲಿ ಭಗವಂತ “ನಿಷ್ಕಾಮ ಭಕ್ತಿಯಿಂದ ಮಾತ್ರ ನನ್ನನ್ನು ಕಾಣಲು ಸಾಧ್ಯ” ಎಂದು ಹೇಳಿದ. …

Leave a Reply

Your email address will not be published. Required fields are marked *