ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 10

ಶ್ಲೋಕ – 02

ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ ।
ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ॥೨॥

ನ ಮೇ ವಿದುಃ ಸುರ ಗಣಾಃ ಪ್ರಭವಮ್ ನ ಮಹಾ ಋಷಯಃ ।

ಅಹಮ್ ಆದಿಃ ಹಿ ದೇವಾನಾಮ್ ಮಹಾ ಋಷೀಣಾಮ್ ಚ ಸರ್ವಶಃ –ನನ್ನ ಆಳವನ್ನು, [ನಾನು ಜಗವನ್ನು ನಿರ್ಮಿಸುವ ಬಗೆಯನ್ನು] ದೇವತೆಗಳಾಗಲಿ, ಮಹರ್ಷಿಗಳಾಗಲಿ, ಅಥವಾ ಇನ್ಯಾರೂ ತಿಳಿದಿಲ್ಲ. ದೇವತೆಗಳಿಗೆ, ಹಿರಿಯ ಋಷಿಗಳಿಗೆ , ಎಲ್ಲರಿಗೂ ಮೂಲ ನಾನೆ ಅಲ್ಲವೆ?

ಕೃಷ್ಣ ಇಲ್ಲಿ ಒಂದು ಮೂಲಭೂತವಾದ ಸಂಗತಿಯನ್ನು ತಿಳಿಸುತ್ತಿದ್ದಾನೆ. ಕೃಷ್ಣ ಹೇಳುತ್ತಾನೆ: “ನನ್ನ ಪ್ರಭವವನ್ನು ಮಹರ್ಷಿಗಳಿಂದ ಹಿಡಿದು ಬ್ರಹ್ಮಾದಿ ದೇವತೆಗಳೂ ತಿಳಿದಿಲ್ಲ” ಎಂದು. ಇಲ್ಲಿ ‘ಪ್ರಭವ’ ಎನ್ನುವ ಪದವನ್ನು ಮೂರು ಅರ್ಥದಲ್ಲಿ ಬಳಸಲಾಗಿದೆ. ಪ್ರಭವ ಎಂದರೆ ಮೂಲ ಅಥವಾ ಹುಟ್ಟು; ಪ್ರಭವ ಎಂದರೆ ಸಾಮರ್ಥ್ಯ ಅಥವಾ ಹಿರಿಮೆ; ಪ್ರಭವ ಎಂದರೆ ಜಗತ್ತಿನ ಉತ್ಪತ್ತಿ. “ನನ್ನ ಮೂಲ, ನನ್ನ ಮಹಿಮೆ ಮತ್ತು ನನ್ನಿಂದಾದ ಈ ಜಗತ್ತಿನ ಹುಟ್ಟು-ನನ್ನನ್ನು ಸಾಕ್ಷಾತ್ಕರಿಸಿಕೊಂಡ ಮಹಾಜ್ಞಾನಿಗಳಿಂದ ಹಿಡಿದು, ನನ್ನ ಅಪರೋಕ್ಷ ಜ್ಞಾನ ಪಡೆದ ಬ್ರಹ್ಮಾದಿ ದೇವತೆಗಳಿಗೂ ತಿಳಿದಿಲ್ಲ” ಎನ್ನುತ್ತಾನೆ ಕೃಷ್ಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *