ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 44

ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋSಪಿ ಸಃ ।
ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮಾತಿವರ್ತತೇ ॥೪೪॥

ಪೂರ್ವ ಅಭ್ಯಾಸೇನ ತೇನ ಏವ ಹ್ರಿಯತೇ ಹಿ ಅವಶಃ ಅಪಿ ಸಃ ।

ಜಿಜ್ಞಾಸುಃ ಅಪಿ ಯೋಗಸ್ಯ ಶಬ್ದಬ್ರಹ್ಮ ಅತಿವರ್ತತೇ –ಹಿಂದಿನ ಅಭ್ಯಾಸ ಬಲದಿಂದ ಅವನಿಗರಿವಿಲ್ಲದೆಯೆ,ಅವನ ಬಗೆ ಅತ್ತ ಹರಿಯುತ್ತದೆ. ಧ್ಯಾನಯೋಗವನ್ನು ತಿಳಿಯಬಯಸಿದವನು ಕೂಡ ಶಬ್ದಬ್ರಹ್ಮದಾಚೆಗಿರುವ ಪರಬ್ರಹ್ಮನನ್ನು ಸೇರುತ್ತಾನೆ.

ಒಂದು ವೇಳೆ ವೇದಜ್ಞರ ಮನೆಯಲ್ಲಿ ಹುಟ್ಟದೇ ಇದ್ದರೂ ಕೂಡ ಹಿಂದಿನ ಜನ್ಮದ ಸಾಧನೆಯ ಫಲದಿಂದ ನಮಗರಿವಿಲ್ಲದಂತೆ ನಮ್ಮ ಮನಸ್ಸು ಸಾಧನೆಯತ್ತ ಹರಿಯುತ್ತದೆ. ಪ್ರಹಲ್ಲಾದನ ಮತ್ತು ಪಿಂಗಳೆಯ ಕಥೆ ಇದಕ್ಕೆ ಉತ್ತಮ ದೃಷ್ಟಾಂತ. ಅಂತರಂಗದಲ್ಲಿ ಸದಾ ಅಧ್ಯಾತ್ಮದ ಬಗ್ಗೆ ತುಡಿತ, ಅತ್ಯಂತ ಉತ್ಕಟವಾದ ಕಳಕಳಿ ಇದ್ದರೆ ಅವರು ಶಾಸ್ತ್ರ ಓದಿದವರನ್ನು ಮೀರಿ ಎತ್ತರಕ್ಕೆರುತ್ತಾರೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *