ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 37

ಅರ್ಜುನ ಉವಾಚ ।
ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸಃ ।
ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ ॥೩೭॥

ಅರ್ಜುನ ಉವಾಚ-ಅರ್ಜುನ ಕೇಳಿದನು :

ಅಯತಿಃ ಶ್ರದ್ಧಯಾ ಉಪೇತಃ ಯೋಗಾತ್ ಚಲಿತ ಮಾನಸಃ ।

ಅಪ್ರಾಪ್ಯ ಯೋಗಸಂಸಿದ್ಧಿಮ್ ಕಾಮ್ ಗತಿಮ್ ಕೃಷ್ಣ ಗಚ್ಛತಿ –ಕೃಷ್ಣ, ಶ್ರದ್ಧೆಯಿದೆ. ಪ್ರಯತ್ನಿಸುವುದಾಗಲಿಲ್ಲ. ಧ್ಯಾನಯೋಗದಿಂದ ಬಗೆ ಕದಲಿದೆ. ಯೋಗಸಿದ್ಧಿಯನ್ನು ಪಡೆಯಲಾಗದ ಇಂಥವನ ಪಾಡೇನು?

ಯೋಗದ ಸಾಧನೆಯಲ್ಲಿ ಸಾಧನೆ ಮಾಡಿದ, ಧ್ಯಾನ ಮಾಡುವುದಕ್ಕೂ ಪ್ರಯತ್ನ ಮಾಡಿದ, ಒಂದು ಹಂತದವರೆಗೆ ಶ್ರದ್ದೆಯಿಂದ ಏಕಾಗ್ರತೆಗೆ ಪ್ರಯತ್ನಿಸಿದ, ಯಾವುದೋ ಕಾರಣದಿಂದ ಪೂರ್ಣ ಗುರಿ ತಲುಪಲಿಲ್ಲ-ಅಂತವನ ಪಾಡೇನು? ಇಂತವರಿಗೆ ಸಿದ್ಧಿ ಲಭಿಸದೆ?

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *