ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 36

ಅಸಂಯತಾತ್ಮನಾ ಯೋಗೋ ದುಷ್ಪ್ರಾಪ ಇತಿ ಮೇ ಮತಿಃ ।
ವಶ್ಯಾತ್ಮನಾ ತು ಸತತಂ ಶಕ್ಯೋSವಾಪ್ತುಮಶೇಷತಃ ॥೩೬॥

ಅಸಂಯತ ಆತ್ಮನಾ ಯೋಗಃ ದುಷ್ಪ್ರಾಪಃ ಇತಿ ಮೇ ಮತಿಃ ।

ವಶ್ಯ ಆತ್ಮನಾ ತು ಸತತಂ ಶಕ್ಯಃ ಆವಾಪ್ತುಮ್ ಅಶೇಷತಃ –ಬಗೆ ಬಿಗಿಗೊಳಿಸದವನಿಗೆ ಸಮಾಧಿ ಸಿಗುವಂತದ್ದಲ್ಲ ಎಂದು ನನ್ನ ತೀರ್ಮಾನ.ಬಗೆಯನ್ನು ಸದಾ ಹಿಡಿತದಲ್ಲಿಟ್ಟವನು ಸಮಗ್ರವಾಗಿ ಸಮಾಧಿಯನ್ನು ಸಾಧಿಸಬಲ್ಲ.

ಯಾರು ತನ್ನ ಸೋಮಾರಿತನದಿಂದ, ಕೆಟ್ಟ ಲೌಕಿಕ ಅಭಿಲಾಷೆಯಿಂದ ಈ ರೀತಿ ಪ್ರಯತ್ನ ಮಾಡುವುದಿಲ್ಲವೋ ಅವನಿಗೆ ಸಮಾಧಿ ಎಂದೂ ದಕ್ಕುವುದಿಲ್ಲ. ವೈರಾಗ್ಯ ಮತ್ತು ಅಭ್ಯಾಸವೆಂಬ ಉಪಾಯದಿಂದ ಮನಸ್ಸನ್ನು ಮಣಿಸಿ ನಮಗೆ ಬೇಕಾದಂತೆ ಆ ಮನಸ್ಸಿನಿಂದ ಕೆಲಸವನ್ನೂ ಮಾಡಿಸಿಕೊಳ್ಳಬೇಕು. ಹೀಗೆ ಮಾಡಿದಾಗ ಸಮಾಧಿಯನ್ನು ಸಾಧಿಸಬಹುದು ಎನ್ನುವ ಭರವಸೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.

ಕೃಷ್ಣನ ಈ ಉತ್ತರದಲ್ಲಿ ನಮಗೆ ಧ್ಯಾನಕ್ಕೆ ಬೇಕಾದ ಉಪಾಯ ದೊರಕಿತು. ಆದರೆ ಈಗ ನಮ್ಮೆಲ್ಲರಿಗೆ ಇನ್ನೊಂದು ಪ್ರಶ್ನೆ ಎದುರಾಗುತ್ತದೆ. ಅದೇನೆಂದರೆ ಸಂಸಾರದಲ್ಲಿರುವ ನಾವು ಒಂದು ವೇಳೆ ಸಾಧನೆಯ ಹಾದಿಯಲ್ಲಿ ಪೂರ್ಣ ಸಮಾಧಿಯನ್ನು ಸಾಧಿಸದೆ ಮಧ್ಯದಲ್ಲೇ ನಿಂತಿದ್ದರೆ ಅಥವಾ ಅರ್ಧ ಸಾಧನೆಯ ನಂತರ ನನ್ನ ಈ ಜನ್ಮ ಕೊನೆಗೊಡರೆ ಆಗ ನನ್ನ ಪಾಡೇನು? ಈ ಜನ್ಮದ ಸಾಧನೆ ವ್ಯರ್ಥವೋ? ನಾನು ಭಗವಂತನನ್ನು ಸೇರುವುದು ಅಸಾಧ್ಯವೋ? ನಮ್ಮ ಈ ಪ್ರಶ್ನೆಯನ್ನೇ ಮುಂದಿನ ಶ್ಲೋಕದಲ್ಲಿ ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *