ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 06

ಶ್ಲೋಕ – 31

ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ ।
ಸರ್ವಥಾ ವರ್ತಮಾನೋSಪಿ ಸ ಯೋಗೀ ಮಯಿ ವರ್ತತೇ ॥೩೧॥

ಸರ್ವಭೂತಸ್ಥಿತಂ ಯಃ ಮಾಮ್ ಭಜತಿ ಏಕತ್ವಮ್ ಆಸ್ಥಿತಃ ।

ಸರ್ವಥಾ ವರ್ತಮಾನಃ ಅಪಿ ಸಃ ಯೋಗೀ ಮಯಿ ವರ್ತತೇ-ಎಲ್ಲಾ ಜೀವಿಗಳಲ್ಲಿರುವ ನನ್ನನ್ನು ಏಕರೀತಿಯಿಂದ ತಿಳಿದು ಪೂಜಿಸುವವನು ಯಾವ ಸ್ಥಿತಿಯಲ್ಲಿದ್ದರೂ ನನ್ನಲ್ಲಿ ಇರುತ್ತಾನೆ.

ಕೃಷ್ಣ ಹೇಳುತ್ತಾನೆ “ಸರ್ವಗತನಾದ ಭಗವಂತ ಎಲ್ಲ ಕಡೆ ಏಕರೂಪವಾಗಿದ್ದಾನೆ ಎನ್ನುವ ಅನುಸಂಧಾನ ಮತ್ತು ನಿರಂತರ ಭಕ್ತಿ ಇರುವ ಸಾಧಕ, ಆತ ಹೇಗೇ ಇರಲಿ, ಅವನು ನನ್ನನ್ನು ಸೇರುವುದು ನಿಶ್ಚಿತ” ಎಂದು. ಅಪರೋಕ್ಷ ಜ್ಞಾನ ಪಡೆದವ ಭಗವಂತನಿಂದ ಎಂದೂ ದೂರ ಸರಿಯುವುದಿಲ್ಲ. ಆತ ಮೋಕ್ಷವನ್ನು ಪಡೆದು ಭಗವಂತನಲ್ಲಿ ನೆಲೆಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *