ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 03

ಶ್ಲೋಕ – 42

ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ ।
ಮನಸಸ್ತು ಪರಾ ಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ ॥೪೨॥

ಇಂದ್ರಿಯಾಣಿ ಪರಾಣಿ ಆಹುಃ ಇಂದ್ರಿಯೇಭ್ಯಃ ಪರಮ್ ಮನಃ ।

ಮನಸಃ ತು ಪರಾ ಬುದ್ಧಿಃ ಯಃ ಬುದ್ಧೇಃ ಪರತಃ ತು ಸಃ-ಇಂದ್ರಿಯಗಳು[ಶರೀರಕ್ಕಿಂತ) ಹಿರಿದಾದ ತಾಣಗಳು. (ಇಂದ್ರಿಯಾಭಿಮಾನಿಗಳಾದ ಇಂದ್ರಾದಿಗಳು ಹಿರಿಯ ದೇವತೆಗಳು].ಇಂದ್ರಿಯಗಳಿಗಿಂತ ಮನಸ್ಸು ಹಿರಿಯ ತಾಣ.[ಇಂದ್ರಿಯಾಭಿಮಾನಿ ದೇವತೆಗಳಿಗಿಂತ ಮನೋಭಿಮಾನಿ ರುದ್ರ ಹಿರಿಯ ದೇವತೆ]. ಮನಸ್ಸಿಗಿಂತ ಬುದ್ಧಿ ಹಿರಿಯ ತಾಣ(ಮನೋಭಿಮಾನಿಗಿಂತ ಬುದ್ಧಿಮಾನಿನಿ ಸರಸ್ವತಿ ಹಿರಿಯ ದೇವತೆ) ಬುದ್ಧಿಗಿಂತಲು ಆಚೆಗಿರುವಂಥದು ಆ ಪರತತ್ವ(ಬುದ್ಧಿ ಮಾನಿನಿಗಿಂತಲೂ ಬುದ್ಧಿಗೋಚರನಾಗದ ಭಗವಂತ ಹಿರಿಯತತ್ವ).

ಹೇಗೆ ದುಷ್ಟ ಶಕ್ತಿಗಳಿವೆಯೋ ಹಾಗೇ ನಮ್ಮ ಒಳಿತನ್ನು ಬಯಸುವ ದೇವತಾಶಕ್ತಿಗಳು ನಮ್ಮ ರಕ್ಷಣೆಗೆ ನಿಂತಿರುತ್ತಾರೆ. ಪ್ರತಿಯೊಂದು ಇಂದ್ರಿಯಗಳಿಗೂ ಒಬ್ಬ ದೇವತೆ ಅಭಿಮಾನಿ. ನಮ್ಮ ಇಂದ್ರಿಯದ ಅಭಿಮಾನಿದೇವತೆ ಇಂದ್ರ. ಮನಸ್ಸಿನ ಅಭಿಮಾನಿ ಶಿವ-ಪಾರ್ವತಿಯರು, ಬುದ್ಧಿಯ ಅಭಿಮಾನಿ ಸರಸ್ವತಿ. ಬುದ್ಧಿಯಿಂದಾಚೆಗಿರುವುದು ಆತ್ಮ-ಅದುವೇ ಆ ಭಗವಂತನ ಸ್ಥಾನ.

ನಾವು ನಮ್ಮ ಇಂದ್ರಿಯ ಮನಸ್ಸು ಬುದ್ಧಿಯನ್ನು ನಿಯಂತ್ರಿಸುವ ದೇವತಾ ಶಕ್ತಿಗೆ ಶರಣಾಗಬೇಕು. ಆಗ ಆ ದೇವತಾ ಶಕ್ತಿಗಳ ಸಹಾಯದಿಂದ ನಾವು ಜ್ಞಾನವನ್ನು ಪಡೆದು ಭಗವಂತನನ್ನು ಕಾಣಬಹುದು. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಕಣ್ಣಿಗೆ ಸೂರ್ಯ, ಕಿವಿಗೆ ಚಂದ್ರ, ಬಾಯಿಗೆ ಅಗ್ನಿ, ನಾಲಿಗೆ-ವರುಣ, ಮೂಗು-ಅಶ್ವಿದೇವತೆಗಳು ,ಕೈ-ಇಂದ್ರ(ಈತ ಸರ್ವೇಂದ್ರಿಯದ ಒಡೆಯ ಕೂಡಾ ಹೌದು), ಕಾಲು-ಇಂದ್ರ ಪುತ್ರ ಉಪೇಂದ್ರ, ಯಮ-ಮಲಮೂತ್ರ ವಿಸರ್ಜನಾಂಗದ ಮತ್ತು ದಕ್ಷ ಸಂತಾನಕ್ಕೆ ಸಂಭಂದಪಟ್ಟ ಅಂಗದ ದೇವತೆ. ಹೀಗೆ ಪ್ರತಿಯೊಂದು ದೇವತೆಗಳೂ ನಮಗೆ ನಮ್ಮ ಶತ್ರುವಿನಿಂದ ಪಾರಾಗಲು ಸಹಾಯ ಮಾಡುತ್ತಾರೆ. ಹೀಗೆ ದೇವತೆಗಳನ್ನು ಪ್ರಾರ್ಥಿಸಿ ಅವರ ಸಹಾಯ ಪಡೆದು ದುಷ್ಟ ಶಕ್ತಿಯಿಂದ ದೂರ ಸರಿದು ಎಲ್ಲಕ್ಕೂ ಮಿಗಿಲಾದ ಆ ಪರತತ್ವವನ್ನು ಸೇರಬೇಕು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *