ಶ್ಲೋಕ – 41
ತಸ್ಮಾತ್ ತ್ವಮಿಂದ್ರಿಯಾಣ್ಯಾದೌ ನಿಯಮ್ಯ ಭರತರ್ಷಭ ।
ಪಾಪ್ಮಾನಂ ಪ್ರಜಹಿ ಹ್ಯೇನಂ ಜ್ಞಾನವಿಜ್ಞಾನನಾಶನಮ್ ॥೪೧॥
ತಸ್ಮಾತ್ ತ್ವಮ್ ಇಂದ್ರಿಯಾಣಿ ಆದೌ ನಿಯಮ್ಯ ಭರತ ಋಷಭ
ಪಾಪ್ಮಾನಮ್ ಪ್ರಜಹಿ ಹಿ ಏನಮ್ ಜ್ಞಾನ ವಿಜ್ಞಾನ ನಾಶನಮ್-ಅದರಿಂದ , ಓ ಭರತವಂಶದ ವೀರ, ಮೊದಲು ನೀನು ಇಂದ್ರಿಯಗಳನ್ನು ಹದ್ದಿನಲ್ಲಿರಿಸಿಕೊಂಡು, ಅರಿವನ್ನೂ ಆಳವಾದ ಚಿಂತನ ಶಕ್ತಿಯನ್ನೂ ಹಾಳು ಗೆಡವಬಲ್ಲ ಈ ಪಾಪಿಯನ್ನು ಒದ್ದೋಡಿಸು.
ಇಂತಹ ಮಹಾ ವೈರಿಯನ್ನು ನಾವು ಮೊದಲ ಹಂತದಲ್ಲೇ ನಿಯಂತ್ರಿಸಬೇಕು. ಈ ಶತ್ರುವಿನ ಮೊದಲ ಪ್ರವೇಶ ದ್ವಾರವಾದ ಇಂದ್ರಿಯದಲ್ಲೇ ಅದರ ನಿಯಂತ್ರಣ ಮಾಡಬೇಕು. ನಮ್ಮ ಜ್ಞಾನ(ಶ್ರವಣ)ವನ್ನು, ವಿಜ್ಞಾನ(ಮನನ-ನಿಧಿಧ್ಯಾಸನ)ವನ್ನು ಹಾಳುಗೆಡವಿ, ನಮ್ಮ ಚಿಂತನಾ ಶಕ್ತಿಯನ್ನು ನಾಶಮಾಡಬಲ್ಲ ಈ ಮಹಾ ಪಾಪಿಯನ್ನು ಓದ್ದೊಡಿಸು ಎನ್ನುತ್ತಾನೆ ಕೃಷ್ಣ. ಆದರೆ ಹೇಗೆ? ಇದಕ್ಕೆ ಯಾರು ಸಹಾಯ ಮಾಡುತ್ತಾರೆ ? ಮುಂದೆ ಕೇಳಿ!