ಶ್ಲೋಕ – 34
ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ ।
ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಸ್ತಥಾ ॥೩೪॥
ಆಚಾರ್ಯಾಃ ಪಿತರಃ ಪುತ್ರಾಃ ತಥಾ ಏವ ಚ ಪಿತಾಮಹಾಃ ಮಾತುಲಾಃ ಶ್ವಶುರಾಃ ಪೌತ್ರಾಃ ಸ್ಯಾಲಾಃ ಸಂಬಂಧಿನಃ ತಥಾ-ಗುರುಗಳು, ತಂದೆ ತಾಯಿಯಂತಿರುವವರು, ಮಕ್ಕಳು. ಅಂತೆಯೇ ಅಜ್ಜಂದಿರು, ಮಾವಂದಿರು, ಸೋದರ ಮಾವಂದಿರು, ಮೊಮ್ಮಕ್ಕಳು, ಮೈದುನಂದಿರು ಮತ್ತು ನೆಂಟರಿಷ್ಟರು.
ಅರ್ಜುನ ತನ್ನ ಬಂಧುಗಳನ್ನು, ಕುಟುಂಬದ ಸದಸ್ಯರ ಪಟ್ಟಿಯನ್ನು ಕೃಷ್ಣನ ಮುಂದೆ ಹೇಳಿಕೊಳ್ಳುತ್ತಾನೆ. ಗುರುಗಳು, ಪಿತೃಸಮಾನರು, ಮಕ್ಕಳು, ಅಜ್ಜಂದಿರು, ಮಾವಂದಿರು, ಹೆಣ್ಣು ಕೊಟ್ಟ ಮಾವಂದಿರು, ಮೊಮ್ಮಕ್ಕಳು, ಹೆಂಡತಿಯ ಅಣ್ಣ-ತಮ್ಮಂದಿರು ಮತ್ತು ನೆಂಟರಿಷ್ಟರು. ಹೀಗೆ ಕೇವಲ ತನ್ನ ಸಂಬಂಧಿಗಳ ಪಟ್ಟಿ ಕೊಡುತ್ತಿರುವ ಅರ್ಜುನ ತನ್ನ ಸಾಮಾಜಿಕ ಕರ್ತವ್ಯ ಮರೆತು ವೈಯಕ್ತಿಕವಾಗಿ ಮಾತನಾಡುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ.
ಸೊಬಗು – Sobagu ಕರ್ನಾಟಕದ ಗತವೈಭವ ಸಾರುತ್ತಿರುವ ತಾಣ – ನಮ್ಮ ಕನ್ನಡ ನಾಡು
ಜೈ ಶ್ರೀ ರಾಮ್
ನೀವು ಭಗವದ್ಗೀತೆಯನ್ನು ವಿಶ್ಲೇಷಿಸಿದ ರೀತಿ ತುಂಬಾ ಹಿಡಿಸಿತು. ಇದನ್ನು ಎಲ್ಲರಿಗೂ ತಲುಪಿಸುವ ಉದ್ದೇಶ ನನ್ನದು. ನಿಮ್ಮ ವೆಬ್ ಪೇಜಿನ ಲಿಂಕನ್ನೂ ನನ್ನ ಪ್ರತೀ ಪೋಸ್ಟಿನಲ್ಲೂ ಹಾಕಿರುತ್ತೇನೆ. ಇದು ನಿಮ್ಮ ಕಾಪಿರೈಟಿಗೆ ನನಗೆ ಯಾವುದೇ ತೊಂದರೆ ಆಗುವುದಿಲ್ಲ ಅಂದುಕೆಳ್ಳುತ್ತೇನೆ. ಹಾಗೇನಾದರೂ ಇದ್ದರೆ ತಿಳಿಸಿ. ನನ್ನ ಉದ್ದೇಶ ಹೆಚ್ಚಿನ ಜನರಿಗೆ ಗೀತೆಯ ತಾತ್ಪರ್ಯ ತಿಳಿಸುವುದೇ ಆಗಿರುತ್ತದೆ. ಇದರಲ್ಲಿ ಯಾವುದೇ ಆರ್ಥಿಕ ದೃಷ್ಟಿ ಇಲ್ಲ. ನಿಮ್ಮ ಉತ್ತರಕ್ಕೆ ಕಾಯುತ್ತೇನೆ