ಶ್ಲೋಕ – 22
ಯಾವದೇತಾನ್ ನಿರೀಕ್ಷೇsಹಂ ಯೋದ್ಧುಕಾಮಾನವಸ್ಥಿತಾನ್ ।
ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ ॥೨೨॥
ಯಾವತ್ ಏತಾನ್ ನಿರೀಕ್ಷೇ ಅಹಮ್ ಯೋದ್ಧುಕಾಮಾನ್ ಅವಸ್ಥಿತಾನ್ ಕೈಃ ಮಯಾ ಸಹ ಯೋದ್ಧವ್ಯಮ್ ಅಸ್ಮಿನ್ ರಣ ಸಮುದ್ಯಮೇ–ಕಾದ ಬಯಸಿ ನೆರೆದ ಇವರತ್ತ ನಾನೊಮ್ಮೆ ಕಣ್ಣು ಹಾಯಿಸುತ್ತೇನೆ. ಈ ಕದನದ ಕಾಯಕದಲ್ಲಿ ಯಾರು ನನ್ನ ಜೊತೆ ಹಾಗು ಯಾರ ಜೊತೆ ನಾನು ಕಾದಬೇಕು ಎಂದು?
ಮಹಾಭಾರತ ಯುದ್ಧ ಇತಿಹಾಸದಲ್ಲಿ ದಾಖಲೆಯಾದ ಮೊದಲ ಜಾಗತಿಕ ಯುದ್ಧ. ಇಂತಹ ಯುದ್ಧದ ಮಂಚೂಣಿಯಲ್ಲಿ ನಿಂತ ಅರ್ಜುನ ಅಹಂಕಾರದಿಂದ ಮಾತನಾಡುತ್ತಿದ್ದಾನೆ. ಆತ ಶ್ರೀಕೃಷ್ಣನಲ್ಲಿ “ಇಲ್ಲಿ ನೆರೆದ ಇವರತ್ತ ನಾನೊಮ್ಮೆ ಕಣ್ಣು ಹಾಯಿಸಬೇಕು. ನನ್ನ ವಿರುದ್ಧ ಯುದ್ಧ ಮಾಡಲು ಬಂದವರು ಯಾರು, ಹಾಗು ನನ್ನ ಕಡೆಯಿಂದ ನನ್ನ ಸಹ ಯುದ್ಧ ಮಾಡಲು ಬಂದವರು ಯಾರು ಎಂದು ನಾನೊಮ್ಮೆ ನೋಡಬೇಕು” ಎನ್ನುತ್ತಾನೆ. ಇಲ್ಲಿ “ನನ್ನೊಂದಿಗೆ ಯುದ್ಧ ಮಾಡಲು ಬಂದವರನ್ನೊಮ್ಮೆ ನೋಡಬೇಕು” ಎನ್ನುವಲ್ಲಿ ಅಹಂಕಾರಭರಿತ ವ್ಯಂಗ್ಯವಿದೆ. ತಾನು ಮಹಾವೀರ, ನನ್ನೆದುರು ನೆರೆದ ಈ ಸೇನೆ ನನಗೆ ಏನೂ ಅಲ್ಲ ಎನ್ನುವ ಸೊಕ್ಕಿನ ಮಾತಿದು.
ಸೊಬಗು – Sobagu ಕರ್ನಾಟಕದ ಗತವೈಭವ ಸಾರುತ್ತಿರುವ ತಾಣ – ನಮ್ಮ ಕನ್ನಡ ನಾಡು
ಜೈ ಶ್ರೀ ರಾಮ್
ನೀವು ಭಗವದ್ಗೀತೆಯನ್ನು ವಿಶ್ಲೇಷಿಸಿದ ರೀತಿ ತುಂಬಾ ಹಿಡಿಸಿತು. ಇದನ್ನು ಎಲ್ಲರಿಗೂ ತಲುಪಿಸುವ ಉದ್ದೇಶ ನನ್ನದು. ನಿಮ್ಮ ವೆಬ್ ಪೇಜಿನ ಲಿಂಕನ್ನೂ ನನ್ನ ಪ್ರತೀ ಪೋಸ್ಟಿನಲ್ಲೂ ಹಾಕಿರುತ್ತೇನೆ. ಇದು ನಿಮ್ಮ ಕಾಪಿರೈಟಿಗೆ ನನಗೆ ಯಾವುದೇ ತೊಂದರೆ ಆಗುವುದಿಲ್ಲ ಅಂದುಕೆಳ್ಳುತ್ತೇನೆ. ಹಾಗೇನಾದರೂ ಇದ್ದರೆ ತಿಳಿಸಿ. ನನ್ನ ಉದ್ದೇಶ ಹೆಚ್ಚಿನ ಜನರಿಗೆ ಗೀತೆಯ ತಾತ್ಪರ್ಯ ತಿಳಿಸುವುದೇ ಆಗಿರುತ್ತದೆ. ಇದರಲ್ಲಿ ಯಾವುದೇ ಆರ್ಥಿಕ ದೃಷ್ಟಿ ಇಲ್ಲ. ನಿಮ್ಮ ಉತ್ತರಕ್ಕೆ ಕಾಯುತ್ತೇನೆ