Friday , 16 October 2026

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 01

ಶ್ಲೋಕ – 12

ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ ।
ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್ ॥೧೨॥

ತಸ್ಯ ಸಂಜನಯನ್ ಹರ್ಷಮ್ ಕುರುವೃದ್ಧಃ ಪಿತಾಮಹಃ ಸಿಂಹನಾದಮ್ ವಿನದ್ಯ ಉಚ್ಚೈಃ ಶಂಖಮ್ ದಧ್ಮೌ ಪ್ರತಾಪವಾನ್ -ಅವನಿಗೆ ಸಂತಸಬರಿಸಲೆಂದು ಕುರುಗಳ ಹಿರಿಯಜ್ಜನಾದ ಆ ಎದೆಗಾರ ಭೀಷ್ಮ, ಗಟ್ಟಿಯಾದ ಸಿಂಹನಾದ ಗೈದು ಶಂಖವನ್ನು ಊದಿದರು..

ಯುದ್ಧ ಪೂರ್ವದಲ್ಲಿ ಭರವಸೆಯನ್ನು ಕಳೆದುಕೊಂಡು ವಿಷಾದದಿಂದ ಮಾತನಾಡುತ್ತಿರುವ ದುರ್ಯೋಧನನ ಭರವಸೆ ಹೆಚ್ಚಿಸಲು, ಆತನಿಗೆ ಆತ್ಮ ವಿಶ್ವಾಸವನ್ನು ತುಂಬಲು, ಕುರು ವಂಶದ ಅತ್ಯಂತ ಹಿರಿಯ ಪ್ರತಾಪಶಾಲಿ ವಯೋವೃದ್ಧ ಭೀಷ್ಮಾಚಾರ್ಯರು ಸಿಂಹನಾದಗೈದು, ತನ್ನ ಕರ್ತವ್ಯಕ್ಕೆ ತಕ್ಕಂತೆ ಶಂಖವನ್ನೂದಿದರು.

ಶಂಖ ಬಹಳ ದೊಡ್ಡ ದುಷ್ಟ ಸಂಹಾರಕ ಶಕ್ತಿ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ತಪ್ಪದೆ ಮನೆಯ ಮೂಲೆ-ಮೂಲೆಯಿಂದ ಅಷ್ಟ ದಿಕ್ಕುಗಳಿಗೂ ಕೇಳುವಂತೆ ಶಂಖನಾದ ಮಾಡುತ್ತಿದ್ದರು. ಇದಕ್ಕೆ ಕಾರಣ ಶಂಖ ನಾದದಲ್ಲಿರುವ ದುಷ್ಟ ಶಕ್ತಿಯ ಎದೆಯೊಡೆಯುವ ಶಕ್ತಿ. ಶಂಖದ ನಾದ ಎಲ್ಲಿಯವರೆಗೆ ಕೇಳಿಸುತ್ತದೋ, ಅಲ್ಲಿಯ ತನಕ ಯಾವ ದುಷ್ಟ ಶಕ್ತಿಗಳೂ ಸುಳಿಯಲಾರವು. ಮೃತ್ಯುವಿನ ತಾಂಡವವಾದ ರಣರಂಗದಲ್ಲಿ ಆಸುರೀ ಶಕ್ತಿಯ ಪ್ರಭಾವ ಇರಬಾರದು ಎನ್ನುವುದಕ್ಕಾಗಿ, ಯುದ್ದಕ್ಕೆ ತಮ್ಮವರನ್ನು ಸಿದ್ಧಗೊಳಿಸುವುದಕ್ಕಾಗಿ ಮತ್ತು ಶತ್ರುಗಳಿಗೆ ತಾವು ಸಿದ್ಧ ಎನ್ನುವ ಸಂಕೇತ ಕೊಡಲು ಹಿಂದೆ ಶಂಖವನ್ನು ಬಳಸುತ್ತಿದ್ದರು. ಇಲ್ಲಿ ಭೀಷ್ಮಾಚಾರ್ಯರು ಶಂಖನಾದದಿಂದ ತಮ್ಮ ಸಿದ್ದತೆಯ ಸಂಕೇತವನ್ನು ಕೌರವ ಸೈನ್ಯಕ್ಕೂ ಹಾಗು ಪಾಂಡವ ಸೈನ್ಯಕ್ಕೂ ರವಾನಿಸುತ್ತಾರೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

2 ಪ್ರತಿಕ್ರಿಯೆಗಳು

  1. ಜೈ ಶ್ರೀ ರಾಮ್

  2. RAMAKRISHNA HEGDE

    ನೀವು ಭಗವದ್ಗೀತೆಯನ್ನು ವಿಶ್ಲೇಷಿಸಿದ ರೀತಿ ತುಂಬಾ ಹಿಡಿಸಿತು. ಇದನ್ನು ಎಲ್ಲರಿಗೂ ತಲುಪಿಸುವ ಉದ್ದೇಶ ನನ್ನದು. ನಿಮ್ಮ ವೆಬ್ ಪೇಜಿನ ಲಿಂಕನ್ನೂ ನನ್ನ ಪ್ರತೀ ಪೋಸ್ಟಿನಲ್ಲೂ ಹಾಕಿರುತ್ತೇನೆ. ಇದು ನಿಮ್ಮ ಕಾಪಿರೈಟಿಗೆ ನನಗೆ ಯಾವುದೇ ತೊಂದರೆ ಆಗುವುದಿಲ್ಲ ಅಂದುಕೆಳ್ಳುತ್ತೇನೆ. ಹಾಗೇನಾದರೂ ಇದ್ದರೆ ತಿಳಿಸಿ. ನನ್ನ ಉದ್ದೇಶ ಹೆಚ್ಚಿನ ಜನರಿಗೆ ಗೀತೆಯ ತಾತ್ಪರ್ಯ ತಿಳಿಸುವುದೇ ಆಗಿರುತ್ತದೆ. ಇದರಲ್ಲಿ ಯಾವುದೇ ಆರ್ಥಿಕ ದೃಷ್ಟಿ ಇಲ್ಲ. ನಿಮ್ಮ ಉತ್ತರಕ್ಕೆ ಕಾಯುತ್ತೇನೆ

Leave a Reply

Your email address will not be published. Required fields are marked *