ಶಿವಲಿಂಗವನ್ನು ಶಿವ (ಲೋಕವಿನಾಶಕ) ಮತ್ತು ಪಾರ್ವತಿ (ಶಕ್ತಿಯ ದೇವತೆ)ಯರ ಸಂಗಮವೆಂದು ಭಾವಿಸಲಾಗುತ್ತದೆ. ಈ ಶಿವಲಿಂಗವನ್ನು ಪೂಜಿಸುವವರು ಪುರುಷರು ಮಾತ್ರ ನೆರವೇರಿಸಬೇಕು ಎಂಬ ನಂಬಿಕೆ ಪ್ರಚಲಿತವಾಗಿದೆ.
ಮಹಿಳೆಯರು, ಅದರಲ್ಲೂ ವಿಶೇಷವಾಗಿ ಅವಿವಾಹಿತ ಕನ್ಯೆಯರು ಈ ಪೂಜೆಯನ್ನು ನಡೆಸಬಾರದು ಎಂಬ ನಂಬಿಕೆ ಬೆಳೆದುಬಂದಿದೆ. ಇದು ಸತ್ಯವೇ? ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದೆ.
ಶಿವಲಿಂಗದ ಪೂಜೆ: ಶಿವಲಿಂಗವನ್ನು ಕನ್ಯೆಯರು ಮುಟ್ಟುವುದು ಅಥವಾ ಇದಕ್ಕೆ ಪ್ರದಕ್ಷಿಣೆ ಬರುವುದರಿಂದ ಭಗವಂತ ಶಿವನ ತಪಸ್ಸು ಭಂಗಗೊಳ್ಳಬಹುದು ಮತ್ತು ಲಿಂಗದ ಪಾವಿತ್ರ್ಯತೆ ಕೆಡಬಹುದು ಎಂಬ ನಂಬಿಕೆಯಿಂದ ಕೇವಲ ಪುರುಷರಿಗೆ ಇದರ ಪೂಜೆಯನ್ನು ಅರ್ಹಗೊಳಿಸಲಾಗಿದೆ.
ಪವಿತ್ರ ವಿಧಿಗಳು: ಶಿವಲಿಂಗದ ಪೂಜೆ ಪವಿತ್ರವಾದ ವಿಧಿಯಾಗಿದ್ದು ಇದರಲ್ಲಿ ಯಾವುದೇ ಲೌಕಿಕ ಕಾಮನೆ ಅಥವಾ ಬಯಕೆಗಳಿರಬಾರದು. ಶಿವಲಿಂಗಗಳಿರುವ ಈ ಸ್ಥಳಗಳು ಸಾಮಾನ್ಯವಾಗಿ ದುರ್ಗಮ ಪ್ರದೇಶದಲ್ಲಿದ್ದು ನಶ್ವರದೇಹಿಗಳಾದ ಮನುಷ್ಯರು ಬಳಿಬರುವುದನ್ನು ತಡೆಯಲಾಗಿದೆ. ಆದರೆ ಪೂಜೆಯನ್ನು ನಡೆಸುವುದು ಅನಿವಾರ್ಯವಾದುದರಿಂದ ಪುರುಷರು ಮಾತ್ರ ಬಳಿ ಬರಬಹುದು ಎಂದು ಹೇಳಲಾಗಿದೆ.
[sociallocker]ಪೂಜೆಯ ವೇಳೆಯಲ್ಲಿ ವಹಿಸಬೇಕಾದ ಅತಿ ಕಾಳಜಿ: ತಪಸ್ಸಿನಲ್ಲಿರುವ ಶಿವನ ಏಕಾಗ್ರತೆಯನ್ನು ಭಂಗಗೊಳಿಸದಿರಲು ಅತಿಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇಂದ್ರಲೋಕದ ಅಪ್ಸರೆಯರು ಮತ್ತು ದೇವಿಯರೇ ಶಿವನ ತಪಸ್ಸನ್ನು ಭಂಗಗೊಳಿಸದಿರಲು ಎಚ್ಚರಿಕೆ ವಹಿಸುತ್ತಿರುವಾಗ ಮನುಷ್ಯರಂತೂ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಪೂಜೆಗೆ ಸಂಬಂಧಿಸಿದ ದಂತಕಥೆ: ತಪಸ್ಸಿನಲ್ಲಿರುವ ಶಿವನಿಗೆ ಉದ್ದೇಶಪೂರ್ವಕವಲ್ಲದ ಯಾವುದೇ ಚಟುವಟಿಕೆ ಭಂಗ ತಂದರೂ ಆತನ ಕೋಪವನ್ನು ಈ ಭೂಮಿ ತಾಳಿಕೊಳ್ಳಲು ಸಾಧ್ಯವಿಲ್ಲದಿರುವುದರಿಂದ ಮಹಿಳೆಯರಿಗೆ ಶಿವಲಿಂಗದ ಬಳಿ ಬರುವುದನ್ನು ನಿಷೇಧಿಸಲಾಗಿದೆ ಎಂದು ಒಂದು ದಂತಕಥೆ ಹೇಳುತ್ತದೆ.
ಕನ್ಯೆಯರು ಪೂಜೆ ನೆರವೇರಿಸುವಂತಿಲ್ಲ: ಕನ್ಯೆಯರು ಶಿವನ ಪೂಜೆಯನ್ನು ನೆರವೇರಿಸುವಂತಿಲ್ಲವೇ? ಇದೆ, ಆದರೆ ಕೇವಲ ಶಿವನನ್ನು ಮಾತ್ರ ಪೂಜಿಸುವಂತಿಲ್ಲ, ಶಿವ ಮತ್ತು ಪಾರ್ವತಿಯರು ಜೊತೆಗಿರುವಂತಿದ್ದಾಗ ಮಾತ್ರ ಪೂಜಿಸಬಹುದು.
ಹದಿನಾರು ಸೋಮವಾರ ವ್ರತ: ಕನ್ಯೆಯರು ಪ್ರತಿ ಸೋಮವಾರದಂದು ಒಟ್ಟು ಹದಿನಾರು ವಾರಗಳ ಕಾಲ ಪೂಜಿಸುವ ವ್ರತ ಪಾಲಿಸಿದರೆ ಶುಭವಾಗುವುದೆಂದು ನಂಬಲಾಗಿದೆ.
ಸೋಮವಾರ ಶಿವನಿಗೆ ಪ್ರಿಯವಾದ ದಿನ: ಶಿವನಿಗೆ ಸೋಮವಾರ ಪ್ರಿಯವಾದ ದಿನವೆಂದು ನಂಬಲಾಗಿದೆ. ಶಿವನೊಬ್ಬ ಮಾದರಿ ಪತಿಯೆಂದು ಪರಿಗಣಿಸಲಾಗುತ್ತದೆ. ಅಂತೆಯೇ ಸೋಮವಾರದಂದು ಉಪವಾಸವಿದ್ದು ಪೂಜಿಸುವ ಮೂಲಕ ಶಿವನಂತಹ ಪತಿಯೇ ದೊರಕುತ್ತಾನೆ ಎಂಬ ನಂಬಿಕೆ ಪ್ರಚಲಿತವಾಗಿದೆ.
ಭೋಲೆನಾಥನಿಗಾಗಿ ಉಪವಾಸ: ಸೋಮವಾರದಂದು ಉಪವಾಸವಿರುವುದರ ಜೊತೆಗೇ ಹಿಂದೂ ಕ್ಯಾಲೆಂಡರ್ ನ ಶ್ರಾವಣ ಮಾಸದಲ್ಲಿಯೂ ಉಪವಾಸವಿರುವುದರಿಂದ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷ ಲಭಿಸುವುದು ಎಂದು ನಂಬಲಾಗಿದೆ.
ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಗಳು: ಶಿವನ ಪೂಜೆ ಪ್ರತಿ ರಾಜ್ಯದಲ್ಲಿಯೂ ಬೇರೆ ಬೇರೆ ತೆರನಾಗಿರುತ್ತದೆ. ದಕ್ಷಿಣ ಭಾರತದಲ್ಲಿ ಗರ್ಭಗುಡಿಯಲ್ಲಿ ಪೂಜಾರಿಯನ್ನು ಬಿಟ್ಟು ಬೇರಾರಿಗೂ ಪ್ರವೇಶವಿಲ್ಲ. ಅದೇ ಉತ್ತರ ಭಾರತದಲ್ಲಿ ವಿಂಧ್ಯಪರ್ವತದಲ್ಲಿರುವ ದೇವಾಲಯಗಳಲ್ಲಿ ಭಕ್ತರಿಗೆ ಶಿವಲಿಂಗದ ದರ್ಶನ ಲಭ್ಯವಿದೆ ಮತ್ತು ಪೂಜೆಗೂ ಅವಕಾಶವಿದೆ.
ಮನೆಯಲ್ಲಿಯೇ ಪೂಜೆ: ದಕ್ಷಿಣ ಭಾರತದಲ್ಲಿ ಮನೆಯಲ್ಲಿಯೇ ಪುರುಷರು ಶಿವಲಿಂಗಕ್ಕೆ ಅಭಿಶೇಕ ನೀಡುವ ಮೂಲಕ ಪೂಜೆ ನಡೆಸಬಹುದು. ಪೂಜೆಯಲ್ಲಿ ಸಾಲಿಗ್ರಾಮ ಅಥವಾ ವಿಗ್ರಹಗಳನ್ನು ಅರ್ಪಿಸಬಹುದು. ಮಹಿಳೆಯರು ಇವರ ಪೂಜೆಗೆ ನೆರವಾಗಬಹುದು ಹಾಗೂ ಪೂಜೆಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸಬಹುದು.
ಶಿವಾಲಯಗಳು: ಭಾರತದಾದ್ಯಂತ ಲಕ್ಷಗಟ್ಟಲೆ ಶಿವಾಲಯಗಳಿವೆ. ಇವುಗಳಲ್ಲಿ ಹೆಚ್ಚಿನವು ನದಿತಟದಲ್ಲಿದ್ದು ಮಹಿಳೆಯರು ನಿತ್ಯರೂ ಪೂಜೆ ಸಲ್ಲಿಸುತ್ತಾರೆ.
ಶಿವಲಿಂಗಕ್ಕೆ ನೀರಿನ ಅರ್ಚನೆ: ನದಿಯಲ್ಲಿ ಮುಳುಗು ಹಾಕಿದ ಬಳಿಕ ಶಿವಲಿಂಗಕ್ಕೆ ನೀರಿನಿಂದ ಅರ್ಚನೆ ಮಾಡುವುದು ಒಂದು ವಿಧಿಯಾಗಿದೆ. ಇದಕ್ಕೆ ಯಾವುದೇ ನಿರ್ಬಂಧವಿಲ್ಲ.
ಲಿಂಗಪುರಾಣ: ಲಿಂಗಪುರಾಣದ ಪ್ರಕಾರ ಪುರುಷರೆಲ್ಲರೂ ಶಿವನ ಅಂಶವಾಗಿದ್ದು ಮಹಿಳೆಯರೆಲ್ಲರೂ ಪಾರ್ವತಿಯ ಒಂದು ಅಂಶವಾಗಿದ್ದಾರೆ. ರಾಮಾಯಣದಲ್ಲಿಯೂ ಸೀತೆ ಶಿವ ಮತ್ತು ಕಾತ್ಯಾಯನಿಯ ರೂಪದ ಪಾರ್ವತಿಯನ್ನು ಆರಾಧಿಸುವುದನ್ನು ಬಣ್ಣಿಸಲಾಗಿದೆ.
ರಾಮೇಶ್ವರದ ಮರಳಿನ ಲಿಂಗ: ತಮಿಳುನಾಡಿನ ರಾಮೇಶ್ವರದಲ್ಲಿ ಮರಳಿನ ಲಿಂಗವೊಂದಿದೆ. ಇದು ಸೀತೆ ನಿರ್ಮಿಸಿದ್ದು ಎಂಬ ನಂಬಿಕೆ ಇದೆ. ಹನುಮಂತನು ಕಾಶಿಯಿಂದ ಶಿವಲಿಂಗವೊಂದನ್ನು ತರಲು ಹೋಗಿದ್ದಾಗ ಕಾಯುತ್ತಿದ್ದ ಶ್ರೀರಾಮ ಈ ವೇಳೆಯಲ್ಲಿ ಈ ಲಿಂಗವನ್ನು ಪೂಜಿಸಿದ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.
ಭಕ್ತಿಯೇ ಪರಮಸತ್ಯ: ವನನ್ನು ಆರಾಧಿಸಲು ಪವಿತ್ರವಾದ ಹೃದಯ ಮತ್ತು ಭಕ್ತಿಯ ಅಗತ್ಯವಿದೆ. ಭಕ್ತಿಯಿಂದ ಆರಾಧಿಸಿದವರಿಗೆ ಶಿವ ಪ್ರಸನ್ನನಾಗುತ್ತಾನೆ. ಶಿವನಲ್ಲಿ ನಂಬಿಕೆ, ಅಚಲ ವಿಶ್ವಾಸ ಮತ್ತು ಶ್ರದ್ದೆ ಪೂಜೆ ಸಫಲಗೊಳ್ಳಲು ಅಗತ್ಯವಾಗಿವೆ.
ಆಧಾರ : ಕನ್ನಡ. ಬೋಲ್ಡ್ ಸ್ಕೈ.ಕಾಮ್[/sociallocker]
ಶ್ರೇಯಾಂಕ
ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.