sahasralinga

ಶಿವಲಿಂಗಗಳ ಸಹಸ್ರಲಿಂಗ ದರ್ಶನ

ಶಿವಲಿಂಗ: ಕರ್ನಾಟಕದ ಪಶ್ಚಿಮ ಘಟ್ಟಗಳು ತನ್ನ ನಯನ ಮನೋಹರ ಪ್ರಕೃತಿಗೆ ಹೆಸರುವಾಸಿಯಾಗಿದೆ. ಇಲ್ಲಿ ಕಂಡುಬರುವ ದಟ್ಟ ಹಸಿರಿನಿಂದ ಕೂಡಿದ ಕಾಡು-ಮೇಡುಗಳು, ಜುಳು ಜುಳು ನಾದ ಮಾಡುತ್ತ ಹರಿಯುವ ಕೆರೆ-ತೊರೆಗಳು, ಗಾಳಿಯೊಂದಿಗೆ ಸರಸವಾಡುತ್ತಿರುವ ಬೆಟ್ಟ-ಗುಡ್ಡಗಳು ಒಂದು ರೀತಿಯ ಉತ್ಸಾಹವನ್ನು ಮೂಡಿಸುತ್ತದೆ.

ಮನಸೂರೆಗೊಳ್ಳುವ ಕೋಟಿಲಿಂಗೇಶ್ವರನ ದರ್ಶನ ಮಾಡಿ

ಆದರೆ ಪಶ್ಚಿಮ ಘಟ್ಟಗಳು ಕೇವಲ ತನ್ನ ಶ್ರೀಮಂತ ವನ್ಯಸಿರಿಯಿಂದ ಮಾತ್ರವಲ್ಲದೆ ಅದ್ಭುತ ಕಥೆ ಸಾರುವ, ಕುತೂಹಲ ಕೆರಳಿಸುವ ಧಾರ್ಮಿಕ ಸ್ಥಳಗಳಿಗೂ ಹೆಸರುವಾಸಿಯಾಗಿದೆ. ಅಂತಹ ಸ್ಥಳಗಳ ಪೈಕಿ ಒಂದಾಗಿದೆ ಕರ್ನಾಟಕ ದಲ್ಲಿರುವ ಸಹಸ್ರಲಿಂಗ ತಾಣ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಿಂದ ಸುಮಾರು 17 ಕಿ.ಮೀ ಗಳಷ್ಟು ದೂರದಲ್ಲಿದೆ ಈ ಕ್ಷೇತ್ರ.

ಶಿರಸಿಯಿಂದ ಬಾಡಿಗೆಗೆ ಜೀಪುಅಗಳನ್ನು ಪಡೆದು ಇಲ್ಲಿಗೆ ತೆರಳುವುದು ಬಲು ಸೂಕ್ತ. ಇನ್ನುಳಿದಂತೆ ನಿಮ್ಮ ಸ್ವಾಂತ ವಾಹನಗಳಿದ್ದರೆ ಸಾಕಷ್ಟು ಅನುಕೂಲ, ಏಕೆಂದರೆ ಇದರ ಸುತ್ತಮುತ್ತಲೂ ಸಾಕಷ್ಟು ಇತರೆ ನೈಸರ್ಗಿಕ ಆಕರ್ಷಣೆಗಳನ್ನು ಆನಂದದಿಂದ ನೋದಬಹುದು.

ಶಿವಲಿಂಗ
ಶಿವಲಿಂಗ

ಇನ್ನುಳಿದಂತೆ, ಇಲ್ಲಿ ಯಾವುದೆ ರೀತಿಯ ಉಪಹಾರಗೃಹಗಳಿಲ್ಲ. ಕಾರಣ ನೀವು ಶಿರಸಿಯಿಂದಲೆ ಊಟದ ವ್ಯವಸ್ಥೆ ಮಾಡಿಕೊಂಡು ಬಂದಿದ್ದಲ್ಲಿ ಇಲ್ಲಿನ ಪ್ರಶಾಂತ ಹಾಗೂ ರಮಣೀಯ ಪರಿಸರದ ಮಧ್ಯೆ ಹಾಯಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತ ಊಟ ಸವಿಯಬಹುದು. ಆದರೆ ದಯವಿಟ್ಟು ಈ ಸ್ಥಳದಲ್ಲಿ ಗಲೀಜು ಮಾಡದಂತೆ ನೋಡಿಕೊಂಡರೆ ಸಾಕು.

ಶಿರಸಿ ಪ್ರದೇಶದಲ್ಲಿ ಹಿಂದೆ 1678-1718 ರ ಸಮಯದಲ್ಲಿ ಆಳುತ್ತಿದ್ದ ಸದಾಶಿವರಾಯ ಅರಸನು ಈ ಶಿವಲಿಂಗಗಳ ನಿರ್ಮಾತೃ ಎನ್ನಲಾಗಿದೆ. ಶಿವನ ಪರಮ ಭಕ್ತನಾಗಿದ್ದ ಇತ ಇಲ್ಲಿ ಹರಿದಿರುವ ಶಲ್ಮಲಾ ನದಿಯ ತಟದ ಕಲ್ಲುಗಳ ಮೇಲೆ, ನೀರೊಳಗಿನ ಕಲ್ಲುಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಶಿವಲಿಂಗಗಳನ್ನು ಕೆತ್ತಿಸಿದ್ದಾನೆ.

ಎಲ್ಲೂ ನೋಡಿದರೂ ಶಿವಲಿಂಗಗಳು ಸಾವಿರ ಸಾವಿರ ಸಂಖ್ಯೆಯಲ್ಲಿರುವಂತೆ ಕಂಡುಬರುತ್ತವೆ. ಹೀಗಾಗಿ ಈ ಸ್ಥಳಕ್ಕೆ ಸಹಸ್ರಲಿಂಗ ಎಂದು ಹೆಸರು ಬಂದಿದೆ. ಒಂದು ದಿನದ ಹಾಯಾದ ಪಿಕ್ನಿಕ್ಕಿಗೆ ಅಥವಾ ಪ್ರಕೃತಿಯ ಶಾಂತತೆಯಲ್ಲಿ ದಿನ ಕಳೆಯುವುದಕ್ಕೆ ಈ ಸ್ಥಳ ಪ್ರಶಸ್ತವಾಗಿದೆ. ಆದರೆ ಮಹಾಶಿವರಾತ್ರಿಯ ಸಂದರ್ಭದಲ್ಲಿ ಇದರ ಸುತ್ತಮುತ್ತಲಿನ ಸ್ಥಳಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

English summary

Sahasralinga a place where thousands of shivlingas reside

Shasralinga is a pilgrimage site situated in the lush greenery of WesternGhats. It is a small but beautiful place which is located at a distance of 15 km from Sirsi town in Uttara Kannada or north canara district of Karnataka state in India.

ಕೃಪೆ: commons.wikimedia.orgkannada.nativeplanet

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 5 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

ಹೊಯ್ಸಳ ವಾಸ್ತುಶಿಲ್ಪ

ಹೊಯ್ಸಳ ವಾಸ್ತುಶಿಲ್ಪ

ಕರ್ನಾಟಕವನ್ನು ಬಹುಕಾಲದವರೆವಿಗೆ ಆಳಿದವರಲ್ಲಿ ಹೊಯ್ಸಳರೂ ಪ್ರಮುಖರು. ಕದಂಬರು ಮತ್ತು ಚಾಲುಕ್ಯರಂತೆ ಇವರೂ ಸಹ ಕನ್ನಡನಾಡಿನಾದ್ಯಂತ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಕನ್ನಡನಾಡಿನಲ್ಲಿ …

Leave a Reply

Your email address will not be published. Required fields are marked *