Lord Shiva

ಶಿವನ ವಿವಿಧ ರೂಪಗಳು

೧. ರುದ್ರ | ೧ ಅ. ಉತ್ಪತ್ತಿ ಮತ್ತು ಅರ್ಥ | ೧. ರೋದಯತಿ ಇತಿ ರುದ್ರಃ

ಅರ್ಥ : ಯಾರು ಅಳಿಸುವವನಾಗಿದ್ದಾನೆಯೋ, ಅವನೇ ರುದ್ರ.
೨. ರು ಎಂದರೆ ಅಳುವುದು ಮತ್ತು ದ್ರು ಎಂದರೆ ಓಡುವುದು. ರುದ್ರ ಎಂದರೆ ಅಳುವ, ಅಳಿಸುವ ಮತ್ತು ಅಳುತ್ತಾ ಓಡಿಹೋಗುವವ. ದೇವರು ದರ್ಶನವನ್ನು ಕೊಡಬೇಕೆಂದು ಅಳುವವನು, ಮುಕ್ತಿಗಾಗಿ ಆಕ್ರಂದನ ಮಾಡುವವನೇ ರುದ್ರ.

೩. ರುತಂ ರಾತಿ ಇತಿ ರುದ್ರಃ

ಅರ್ಥ : ರುತ ಎಂದರೆ ದುಃಖ ಮತ್ತು ರಾತಿ ಎಂದರೆ ನಾಶ ಮಾಡುವುದು. ದುಃಖವನ್ನು ನಾಶ ಮಾಡುವವನೇ ರುದ್ರ. ದುಃಖವೆಂದರೆ ಅವಿದ್ಯೆ ಅಥವಾ ಸಂಸಾರ. ರುದ್ರನೆಂದರೆ ಅವಿದ್ಯೆಯಿಂದ ಅಥವಾ ಸಂಸಾರದಿಂದ ನಿವೃತ್ತಗೊಳಿಸುವವನು.

೨. ಕಾಲಭೈರವ

ಇವನು ಅಷ್ಟಭೈರವರಲ್ಲಿ ಒಬ್ಬನಾಗಿದ್ದು, ಶಿವನ ಕ್ರೋಧದಿಂದ ಅವನ ಉತ್ಪತ್ತಿಯಾಗಿದೆ. ಶಿವನು ಇವನಿಂದ ಬ್ರಹ್ಮದೇವನ ಐದನೆಯ ಮಸ್ತಕವನ್ನು ಕತ್ತರಿಸಿದ ನಂತರ ಅವನಿಗೆ ಕಾಶೀಕ್ಷೇತ್ರದಲ್ಲಿರಲು ಆಜ್ಞೆಯನ್ನು ಮಾಡಿದನು. ಇವನಿಗೆ ಕಾಶಿಯ ಕೋತ್ವಾಲ (ಕಾವಲುಗಾರ) ಎಂದೂ ಕರೆಯುತ್ತಾರೆ. ಕಾಶಿಯನ್ನು ಪ್ರವೇಶಿಸುವಾಗ ಮೊದಲು ಇವನ ದರ್ಶನವನ್ನು ಪಡೆಯಬೇಕಾಗುತ್ತದೆ. ದರ್ಶನವನ್ನು ಪಡೆದು ಹಿಂತಿರುಗುವಾಗ ಕಾಲಭೈರವನ ಕಪ್ಪು ಕಾಶಿದಾರವನ್ನು ಕೈಯಲ್ಲಿ ಕಟ್ಟಿಕೊಳ್ಳುತ್ತಾರೆ.

೩. ವೀರಭದ್ರ

ಯಮಧರ್ಮ ಹಾಗೂ ದಕ್ಷಿಣ ಲೋಕದ ಪ್ರಮುಖ ವೀರಭದ್ರ ಇವರೂ ಶಿವಗಣರಾಗಿದ್ದಾರೆ. ದಕ್ಷಿಣಲೋಕದೊಂದಿಗೆ ಪ್ರತ್ಯಕ್ಷ ಸಂಬಂಧವಿರುವ ಏಕೈಕ ದೇವನೆಂದರೆ ವೀರಭದ್ರ; ಆದುದರಿಂದ ಅವನು ಭೂತಮಾತ್ರರ ನಾಥ ಅಂದರೆ ಭೂತನಾಥನಾಗಿದ್ದಾನೆ. ಇವನು ಬೇತಾಳನನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ. ಲಿಂಗರೂಪದಲ್ಲಿ ಶಿವನ ಪೂಜೆ ಸಲ್ಲಿಸಿದವರಲ್ಲಿ ವೀರಭದ್ರನೇ ಮೊಟ್ಟ ಮೊದಲಿಗನೆಂಬ ಕಥೆಯಿದೆ.

೪. ಭೈರವ (ಭೈರವನಾಥ)

ಭೈರವರು ಪ್ರತಿಯೊಂದು ಶಕ್ತಿ ಪೀಠದ ರಕ್ಷಣೆಯನ್ನು ಮಾಡುತ್ತಾರೆ ಎಂದು ಹೇಳಲಾಗಿದೆ. ಭೈರವರನ್ನು ಹೊರತು ಪಡಿಸಿ ಮಾಡುವ ಶಕ್ತಿಯ ಪೂಜೆಯು ನಿಷ್ಫಲವಾಗುತ್ತದೆ ಎಂದು ಮಹಾಪೀಠನಿರೂಪಣ ಎಂಬ ಗ್ರಂಥದಲ್ಲಿ ಹೇಳಲಾಗಿದೆ.

೫. ಬೇತಾಳ

ಅ.ಉತ್ಪತ್ತಿ ಮತ್ತು ಅರ್ಥ : ಬೇತಾಳ ಈ ಶಬ್ದವು ವೈತಾಳ ಎಂಬ ಶಬ್ದದಿಂದ ನಿರ್ಮಾಣವಾಗಿದೆ. ವೈತಾಳ ಎಂದರೆ ವಿಕೃತಿಯನ್ನು ತಾಳಕ್ಕೆ ಸರಿಯಾಗಿ ಕುಣಿಸುವವನು. ಆಹತ ಮತ್ತು ಅನಾಹತ ನಾದಗಳು ಒಟ್ಟಿಗೆ ಸೇರಿದಾಗ ಅಲ್ಲಿ ವೈ ಎಂಬ ಹೆಸರಿನ ಸ್ಪಂದನಗಳು ನಿರ್ಮಾಣವಾಗುತ್ತವೆ. ಅವು ವಿಕೃತಿಯನ್ನು ತಾಳಕ್ಕೆ ತರುತ್ತವೆ.

೬.ಭೂತನಾಥ

ಇವನು ಬೇತಾಳನ ವರ್ಗದಲ್ಲಿನ ಒಬ್ಬ ಕ್ಷುದ್ರದೇವನಾಗಿದ್ದಾನೆ. ಗೋವಾದಲ್ಲಿ ಇವನ ದೇವಸ್ಥಾನಗಳಿವೆ. ಇವನು ಮಧ್ಯರಾತ್ರಿಯಲ್ಲಿ ತನ್ನ ಸೈನಿಕರೊಂದಿಗೆ ತಿರುಗಾಡಲು ಹೊರಡುತ್ತಾನೆ. ಆಗ ಅವನ ಕೈಯಲ್ಲಿ ದಂಡ ಮತ್ತು ಹೆಗಲಿನ ಮೇಲೆ ಕಂಬಳಿಯಿರುತ್ತದೆ ಎಂದು ಹೇಳುತ್ತಾರೆ. ಯಾರಾದರೊಬ್ಬನನ್ನು ಭೂತವು ಹಿಡಿದುಕೊಂಡಿದ್ದರೆ ಭೂತನಾಥನನ್ನು ಆವಾಹನೆ ಮಾಡಿ ಆ ಭೂತವನ್ನು ಬೆದರಿಸಿ ಓಡಿಸುತ್ತಾರೆ.

೭. ನಟರಾಜ

ಶಿವನ ಎರಡು ಅವಸ್ಥೆಗಳನ್ನು ಒಪ್ಪಿಕೊಳ್ಳಲಾಗಿದೆ. ಅದರಲ್ಲಿನ ಒಂದು ಸಮಾಧಿ ಅವಸ್ಥೆ ಮತ್ತು ಎರಡನೆಯ ಅವಸ್ಥೆ ಅಂದರೆ ತಾಂಡವ ಅಥವಾ ಲಾಸ್ಯ ನೃತ್ಯಾವಸ್ಥೆ. ಸಮಾಧಿ ಅವಸ್ಥೆ ಎಂದರೆ ನಿರ್ಗುಣ ಅವಸ್ಥೆ ಮತ್ತು ನೃತ್ಯಾವಸ್ಥೆ ಎಂದರೆ ಸಗುಣ ಅವಸ್ಥೆ. ನಟನೆ ಅಥವಾ ನಾಟ್ಯವೆಂದರೆ ಯಾವುದಾದರೊಂದು ನಿಶ್ಚಿತ ಘಟನೆ ಅಥವಾ ವಿಷಯವನ್ನು ವ್ಯಕ್ತಪಡಿಸಲು ಮಾಡಲಾಗುವ ಶರೀರದ ಚಲನವಲನ. ಈ ನಟನೆಯನ್ನು ಮಾಡುವವನೇ ನಟ. ಶಿವನು ನಟರಾಜನ ರೂಪದಲ್ಲಿ ನಾಟ್ಯಕಲೆಯನ್ನು ಪ್ರೇರೇಪಿಸಿದನು ಎಂದು ಪಾರಂಪರಿಕ ನಂಬಿಕೆಯಿದೆ. ಶಿವನು ಆದಿನಟನಾಗಿದ್ದಾನೆ ಎಂಬ ಶ್ರದ್ಧೆಯಿರುವುದ ರಿಂದಲೇ ಅವನಿಗೆ ನಟರಾಜ ಎಂಬ ಬಿರುದು ಬಂದಿದೆ.

೮.ಕಿರಾತ

ಇದು ಶಿವನ ಕಾಪಾಲಿಕ ರೂಪವಾಗಿದೆ. ಜನಸಾಮಾನ್ಯರಲ್ಲಿ ಈ ರೂಪವು ಶಿವನಷ್ಟೇ ಲೋಕಪ್ರಿಯವಾಗಿದೆ. ಈ ರೂಪದಲ್ಲಿ ಅವನು ಗಜಚರ್ಮವನ್ನು ಹೊದ್ದಿರುತ್ತಾನೆ. ಅವನಿಗೆ ಮದ್ಯವು ಪ್ರಿಯವಾಗಿರುತ್ತದೆ. ಅವನು ವಿವಿಧ ಕ್ರೀಡಾವಿಲಾಸಗಳಲ್ಲಿ ಮಗ್ನನಾಗಿರುತ್ತಾನೆ. ಅವನ ಸುತ್ತಲೂ ಸಾವಿರಾರು ಸ್ತ್ರೀಯರು ಸುತ್ತುವರೆದಿರುತ್ತಾರೆ. ಭೂತಗಣರು ಅವನೆದುರು ನಗುತ್ತ ಕುಣಿಯುತ್ತಿರುತ್ತಾರೆ. ಭಗವತಿ ಉಮಾ ಇವಳೂ ಅವನಂತಹ ವೇಷದಲ್ಲಿಯೇ ಅವನ ಜೊತೆಯಲ್ಲಿರುತ್ತಾಳೆ. ಶೈವಧರ್ಮದ ಉತ್ಕರ್ಷದ ಕಾಲದಲ್ಲಿ ಶಿವನ ಈ ವಿಲಾಸಿ ರೂಪವು ನಿಧಾನವಾಗಿ ಲೋಪವಾಯಿತು. ನೃತ್ಯದೊಂದಿಗಿದ್ದ ಶಿವನ ಸಂಬಂಧವು ಮಾತ್ರ ಉಳಿದುಕೊಂಡಿತು. ಶಿವನ ಆ ನರ್ತಿಸುವ ರೂಪವು ವಿಕಾಸವಾಗಿ ಅವನ ನಟರಾಜ ಮೂರ್ತಿಯು ನಿರ್ಮಾಣವಾಯಿತು.
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಶಿವ ಭಾಗ ೧ ಮತ್ತು ೨)
ಆಧಾರ:kannadasanatanprabha

Review Overview

User Rating: 4.9 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *