VB Herigowdar

ವಿ.ಬಿ. ಹಿರೇಗೌಡರ್

ರಾಷ್ಟ್ರೀಯಮಟ್ಟದ ಕಲಾಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿರೇಗೌಡರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಗುಡಿಗೇರಿ ಗ್ರಾಮದಲ್ಲಿ. ತಂದೆ ಬಸವನಗೌಡ, ತಾಯಿಗಂಗಮ್ಮ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪದವಿ, ಡಿ.ವಿ.ಹಾಲಭಾವಿ ಮತ್ತು ಎಂ.ವಿ. ಮಿಣಜಿಗಿಯವರಲ್ಲಿ ಪಡೆದ ಲಲಿತ ಕಲಾಶಿಕ್ಷಣ, ಆರ್ಟ್ಸ್ ಮಾಸ್ಟರ್‌ ಪದವಿ.

ದಾವಣಗೆರೆ ಲಲಿತಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೦೩ರಲ್ಲಿ ನಿವೃತ್ತಿ. ಕುವೆಂಪು ವಿಶ್ವವಿದ್ಯಾಲಯದ ಲಲಿತ ಕಲಾ ಅಧ್ಯಯನ ಮಂಡಲಿಯ ಅಧ್ಯಕ್ಷರಾಗಿ, ಸೆನೆಟ್‌ ಸದಸ್ಯರಾಗಿ, ಹೊರರಾಜ್ಯದ ಕಲೆ ಮತ್ತು ಕರಕುಶಲ ಮಂಡಲಿ ಸದಸ್ಯರಾಗಿ, ಗುಲಬರ್ಗಾ, ಬೆಂಗಳೂರು, ಮೈಸೂರು, ಕನ್ನಡ ವಿಶ್ವವಿದ್ಯಾಲಯಗಳ ಲಲಿತಕಲಾ ಅಧ್ಯಯನ ಮಂಡಲಿ, ಪರೀಕ್ಷಾ ಮಂಡಲಿ, ಪರೀಕ್ಷಕರಾಗಿ, ಲಲಿತಕಲಾ ಅಕಾಡಮಿಯಲ್ಲಿ ೨ ಬಾರಿ ಸದಸ್ಯರಾಗಿ ಸಲ್ಲಿಸಿದ ಸೇವೆ.

೨೫ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನಗಳು, ರಾಷ್ಟ್ರೀಯ ಮಟ್ಟದ ಹಲವಾರು ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗಿ. ಚಿತ್ರದುರ್ಗದ ರೆಡ್ಡಿಜನಸಂಘ ಸಂಸ್ಥೆ ಆವರಣದಲ್ಲಿ ಯೋಗಿ ವೇಮನ, ಚಿತ್ರದುರ್ಗದ ಬೃಹನ್ಮಠದಲ್ಲಿ ಶ್ರೀ ಜಯದೇವ ಜಗದ್ಗುರುಗಳ, ಮದಕರಿ ವಸ್ತು ಸಂಗ್ರಹಾಲಯಕ್ಕಾಗಿ ಮದಕರಿನಾಯಕನ ತೈಲವರ್ಣ, ತುಮಕೂರಿನ ಸಿದ್ಧಗಂಗಾ ಕ್ಷೇತ್ರಕ್ಕಾಗಿ ಶ್ರೀ ಶಿವಕುಮಾರ ಸ್ವಾಮಿಗಳ ತೈಲವರ್ಣ ಚಿತ್ರ, ಶ್ರೀ ಗುರು ತಿಪ್ಪೆರುದ್ರಸ್ವಾಮಿಗಳ ಭಾವಚಿತ್ರ, ದಾವಣಗೆರೆ ಸ್ನಾತಕೋತ್ತರ ಕೇಂದ್ರದಲ್ಲಿ ಕುವೆಂಪುರವರ ತೈಲವರ್ಣ ಚಿತ್ರ, ಬಸವ ಭವನಕ್ಕಾಗಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರ, ಶ್ರೀ ಚಂದ್ರಶೇಖರ ಸ್ವಾಮೀಜಿಯವರ ತೈಲವರ್ಣಚಿತ್ರ ಮುಂತಾದುವುಗಳ ರಚನೆ. ಅಕೆಡಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರತಿಷ್ಠಿತ ಖಾಸಗಿ ಸಂಗ್ರಹಾಲಯಗಳಲ್ಲಿ ಇವರ ಕಲಾ ಚಿತ್ರಗಳು ಸಂಗ್ರಹೀತ.

ಸಂದ ಪ್ರಶಸ್ತಿ ಗೌರವಗಳು ಹಲವಾರು. ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ನಾಲ್ಕಬಾರಿ, ಕರ್ನಾಟಕ ವಿ.ವಿ. ಕಲಾಪ್ರದರ್ಶನದಲ್ಲಿ ನಾಲ್ಕುಬಾರಿ, ನಾಗಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಕಲಾ ಪ್ರದರ್ಶನದಲ್ಲಿ ಪ್ರಶಸ್ತಿ, ನವದೆಹಲಿಯ ಅಂತಾರಾಷ್ಟ್ರೀಯ ಶಿಕ್ಷಣ ಹಾಗೂ ನಿರ್ವಹಣಾ ಸಂಸ್ಥೆಯಿಂದ ’ಜ್ಯೂವೆಲ್ ಆಫ್ ಇಂಡಿಯಾ’, ಇಂಡಿಯನ್ ಸಾಲಿಡ್ಯಾರಿಟಿ ಕೌನ್ಸಿಲ್‌-ನವದೆಹಲಿಯವರಿಂದ ’ಇಂದಿರಾಗಾಂಧಿ ಎಕ್ಸಲೆನ್ಸಿ’ ಪ್ರಶಸ್ತಿ ಮುಂತಾದುವು.
ಕಣಜ

ಶ್ರೇಯಾಂಕ

ಕನ್ನಡ ಭೂಮಿಯನ್ನು ಚಿನ್ನದ ಭೂಮಿಯನ್ನಾಗಿ ಮಾಡಿದ ಧೀಮಂತ ವ್ಯಕ್ತಿಗಳಿಗೆ ನಮ್ಮ ನಮನಗಳು.

User Rating: 4.85 ( 1 votes)

ಇವುಗಳೂ ನಿಮಗಿಷ್ಟವಾಗಬಹುದು

A V Prakasha

ಎ.ವಿ. ಪ್ರಕಾಶ್‌

ಎ.ವಿ. ಪ್ರಕಾಶ್‌ (೧೫.೧೦.೧೯೪೫): ಪ್ರಖ್ಯಾತ ಕೊಳಲುವಾದಕರಾದ ಎ.ವಿ. ಪ್ರಕಾಶ್‌ರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರಾದ ಎ.ಕೆ. ವೆಂಕಟನಾರಾಯಣ, …

Leave a Reply

Your email address will not be published. Required fields are marked *