ವಿಶ್ವನಂದಿನಿ ಲೇಖನ ಮಾಲೆ – 004.1

ಇವತ್ತಿನ ಗ್ರಹಣದ ಕುರಿತು ಇರುವ ಗೊಂದಲಗಳಿಗೆ ಉತ್ತರಗಳು

ಇವತ್ತು ಚಂದ್ರಗ್ರಹಣ ಮಧ್ಯಾಹ್ನ 3.45 ಕ್ಕೆ ಆರಂಭವಾಗುತ್ತದೆ. ಆದರೆ, ಹಗಲಿನಲ್ಲಿ ಚಂದ್ರಗ್ರಹಣ ಮತ್ತು ರಾತ್ರಿಯಲ್ಲಿ ಸೂರ್ಯಗ್ರಹಣದ ಆಚರಣೆಯನ್ನು ಮಾಡಬಾರದು. ಇದನ್ನು ಗ್ರಸ್ತೋದಯಗ್ರಹಣ ಎನ್ನುತ್ತಾರೆ. ಅಂದರೆ, ಚಂದ್ರ ಸೂರ್ಯರು ಉದಯವಾಗುದವದಕ್ಕಿಂತ ಮುಂಚೆಯೇ ಗ್ರಹಣ ಆರಂಭವಾದರ ಉದಯವಾದ ನಂತರವೇ ಗ್ರಹಣದ ಆಚರಣೆ ಹೊರತು, ಸ್ಪರ್ಶದ ಸಮಯದಿಂದ ಅಲ್ಲ.

ಹೀಗಾಗಿ, ಇಂದು ಸಂಜೆ ಸೂರ್ಯಾಸ್ತದ ಸಮಯಕ್ಕೆ (6.40) ಚಂದ್ರೋದಯವಿದೆ. ಉದಯ ಅಸ್ತಗಳು ಊರಿನಿಂದ ಊರಿಗೆ ಬದಲಾಗುವದರಿಂದ ನಿಮ್ಮ ಊರಿನಲ್ಲಿ ಎಷ್ಟು ಸಮಯಕ್ಕೆ ಚಂದ್ರೋದಯವಿದೆಯೋ ಆ ಸಮಯಕ್ಕೆ ಸ್ಪರ್ಶದ ಸ್ನಾನವನ್ನು ಮಾಡಿ. ಮಧ್ಯಾಹ್ನ 3.45ಕ್ಕೆ ಮಾಡಬಾರದು.

ಮೋಕ್ಷ ರಾತ್ರಿ 7.15 ಕ್ಕೆ. ಆ ಸಮಯಕ್ಕೆ ಮೋಕ್ಷದ ಸ್ನಾನವನ್ನು ಮಾಡಿ.

ಸಾಯಂಕಾಲದ ಸಂಧ್ಯಾವಂದನೆಯನ್ನು ಸರಿಯಾದ ಸಮಯಕ್ಕೆ ಮಾಡಿ. ಗ್ರಹಣ- ವೇಧೆಗಳಿಗೂ ಸಂಧ್ಯಾವಂದನೆಗೂ ಸಂಬಂಧವಿಲ್ಲ. ಸಂಧ್ಯಾವಂದನೆಯ ಸಮಯಕ್ಕೆ ಸಂಧ್ಯಾವಂದನೆ ಮಾಡಿ.

ಮೋಕ್ಷವಾದ ಬಳಿಕ, ಗ್ರಹಣಕಾಲದಲ್ಲಿ ಮುಟ್ಟಿದ ಬಟ್ಟೆಗಳನ್ನೆಲ್ಲ ತೋಯಿಸಿ ಸ್ನಾನ ಮಾಡಿ, ಆ ಬಳಿಕ ದೇವರ ಪೂಜೆ, ನೈವೇದ್ಯ ಊಟಗಳನ್ನು ಮಾಡಿ.

ಗ್ರಹಣದ ಆಚರಣೆಯ ಸಮಯ ತುಂಬ ಕಡಿಮೆ ಇರುವದರಿಂದ ವಿಷ್ಣುಸಹಸ್ರನಾಮವನ್ನು ತಪ್ಪದೇ ಪಠಿಸಿ. ಅದು ಸರ್ವೋತ್ತಮ ಸ್ತೋತ್ರ.

ಅದು ಬಾರದವರು ರಾಘವೇಂದ್ರಸ್ತೋತ್ರವನ್ನು ಪಠಿಸಿ. ಗುರುಗಳ ಸ್ತೋತ್ರದಿಂದ ಪರಮಾತ್ಮ ಒಲಿಯುತ್ತಾನೆ.

ಅದೂ ಬಾರದವರು ಶ್ರೀಗುರುಭ್ಯೋನಮಃ ಎಂಬ ಪರಮಮಂಗಳ ಮಂತ್ರವನ್ನು ಭಕ್ತಿಯಿಂದ ಜಪಮಾಡಿ.

ಆ ಸಂದರ್ಭದಲ್ಲಿ ದಾನ ಮಾಡಲು ಸಾಧ್ಯವಿಲ್ಲದಿದ್ದರೆ, ದಾನಕ್ಕಾಗಿ ಸಂಕಲ್ಪ ಮಾಡಿ ಅದನ್ನು ನಂತರದಲ್ಲಿ ಯೋಗ್ಯರಾದ ಬ್ರಾಹ್ಮಣರಿಗೆ ನೀಡಿ.

ಆಹಾರಸೇವನೆ, ನಿದ್ರೆ, ಮಲಮೂತ್ರವಿಸರ್ಜನೆ ಇವನ್ನು ಗ್ರಹಣಕಾಲದಲ್ಲಿ ಸರ್ವಥಾ ಮಾಡಬೇಡಿ.

ವಿಷ್ಣುಸ್ಮರಣೆ, ಗುರುಸ್ಮರಣೆಗಳನ್ನು ಬಿಡಬೇಡಿ.

ಇವುಗಳೂ ನಿಮಗಿಷ್ಟವಾಗಬಹುದು

vishwanandini-020

ವಿಶ್ವನಂದಿನಿ ಲೇಖನ ಮಾಲೆ – 020

ಶ್ರೀಕನಕದಾಸರ ಹರಿಭಕ್ತಿಸಾರ ವಿಷ್ಣುದಾಸರ ಸಾರಾಮೃತವ್ಯಾಖ್ಯಾನದೊಂದಿಗೆ ಪದ್ಯ – ೨ ದೇವದೇವ ಜಗದ್ಭರಿತ ವಸು- ದೇವಸುತ ಜಗದೇಕನಾಥ ರ- ಮಾವಿನೋದಿತ ಸಜ್ಜನಾನತ …

Leave a Reply

Your email address will not be published. Required fields are marked *