Wednesday , 22 May 2024
electric

ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಪ್ರ್ಯಾಂಕ್ಲಿನ್ ಎಂದು ಹೇಳುತ್ತೇವೆ

ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಪ್ರ್ಯಾಂಕ್ಲಿನ್ ಎಂದು ಹೇಳುತ್ತೇವೆ….

ಇದೇ ಬೆಂಜಮಿನ್ ತಾವು ಬರೆದ ಒಂದು ಪುಸ್ತಕದಲ್ಲಿ ಹೇಳುತ್ತಾರೆ..

ಒಂದು ರಾತ್ರಿ ನಾನು ಭಾರತದ ಪ್ರಾಚೀನವಾದ ಒಂದು ಗ್ರಂಥವನ್ನು ಓದಿದೆ. ಅದರಲ್ಲಿನ ಒಂದು ವಾಕ್ಯ ರಾತ್ರಿಯಿಡೀ ನನ್ನನ್ನು ಕಾಡುತ್ತಿತ್ತು. ಯೋಚಿಸಿ ಯೋಚಿಸಿ ಆ ವಾಕ್ಯದ ಅರ್ಥವನ್ನು ಗ್ರಹಿಸಿದೆ. ಅದು ನನಗೆ ವಿದ್ಯುತ್ತನ್ನು ಕಂಡು ಹಿಡಿಯಲು ನೆರವಾಯಿತು

ಹಾಗಾದರೆ ಆ ವಾಕ್ಯ ಯಾವುದು…?

ಅದು ಅಗಸ್ತ್ಯಮುನಿಗಳು ಬರೆದ “ಅಗಸ್ತ್ಯ ಸಂಹಿತೆ” ಯಲ್ಲಿನ ಒಂದು ವಾಕ್ಯವಾಗಿತ್ತು…!!!

ಮಹರ್ಷಿ ಅಗಸ್ತ್ಯರು, ಮಹಾರಾಜ ದಶರಥನ ರಾಜಗುರುವಾಗಿದ್ದರು. ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಅವರು “ಅಗಸ್ತ್ಯ ಸಂಹಿತಾ” ಎಂಬ ಗ್ರಂಥವನ್ನು ಬರೆದಿದ್ದಾರೆ. ಆಶ್ಚರ್ಯಕರ ಸಂಗತಿಯೇನೆಂದರೆ ಅಗಸ್ತ್ಯ ಸಂಹಿತೆಯಲ್ಲಿ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಅನೇಕ ವಿಷಯಗಳಿವೆ…!!

ಈ ಶ್ಲೋಕಗಳನ್ನು ನೋಡಿ…

ಸಂಸ್ಥಾಪ್ಯ ಮೃಣ್ಮಯೇ ಪಾತ್ರೇ
ತಾಮ್ರಪತ್ರಂ ಸುಸಂಸ್ಕೃತಮ್ ।
ಛಾದಯೇಚ್ಛಿಖಿಗ್ರೀವೇಣ
ಚಾರ್ದಾಭಿಃ ಕಾಷ್ಠಪಾಂಸುಭಿಃ ॥
ದಸ್ತಾಲೋಷ್ಟೋ ನಿಧಾತ್ವಯಃ ಪಾರದಾಛಾದಿತಸ್ತತಃ ।
ಸಂಯೋಗಾಜ್ಜಾಯತೇ ತೇಜೋ
ಮಿತ್ರಾವರುಣ ಸಂಜ್ಞಿತಮ್ ॥

ಈ ಶ್ಲೋಕದ ಕಂಗ್ಲೀಷಾಣುವಾದ ಹೀಗಿದೆ

ಒಂದು ಮಣ್ಣಿನ ಪಾತ್ರೆಯನ್ನು ತೆಗೆದುಕೊಳ್ಳಿ ; ಅದರಲ್ಲಿ ತಾಮ್ರದ ಪಟ್ಟಿಯನ್ನು ಹಾಕಿ ; ಅದರಲ್ಲಿ Copper sulphate ಹಾಕಿ, ಅನಂತರ ಮಧ್ಯದಲ್ಲಿ Wet saw dust ನ್ನು ಹಾಕಿ ; ಮೇಲಿನ ಭಾಗದಲ್ಲಿ Mercury ಹಾಗೂ Zink ನ್ನು ಉಪಯೋಗಿಸಿ. ಆಮೇಲೆ ತಂತಿಗಳನ್ನು ಸೇರಿಸಿ. ಆಗ ಮಿತ್ರಾವರುಣಶಕ್ತಿಯ (ವಿದ್ಯುತ್) ಉತ್ಪಾದನೆಯಾಗುತ್ತದೆ..

ಬೆಂಜಮಿನ್ ವಿದ್ಯುತ್ ಕಂಡುಹಿಡಿಯಲು ಇಷ್ಟು Clue ಸಾಕಲ್ವಾ ಮಿತ್ರರೇ…?

ಇಷ್ಟೇ ಅಲ್ಲ. ಅಗಸ್ತ್ಯ ಸಂಹಿತೆಯಲ್ಲಿ Electroplatingನ ವಿವರಣೆ ಕೂಡ ಸಿಗುತ್ತದೆ…

ಈಗಲಾದರೂ ನಂಬುವಿರಾ.
ವಿಶ್ವಗುರು ಭಾರತ !

ಬೆಂಜಮಿನ್ ಫ್ರ್ಯಾಂಕ್ಲಿನ್: ಬೆಂಜಮಿನ್ ಫ್ರ್ಯಾಂಕ್ಲಿನ್ (ಜನನ: ಜನವರಿ ೧೭, ೧೭೦೬ – ಮರಣ: ಏಪ್ರಿಲ್ ೧೭, ೧೭೯೦) ಇವರು ಆಮೇರಿಕಾ ಸಂಯುಕ್ತ ಸಂಸ್ಥಾನದ ಸಂಸ್ಥಾಪಕರಲ್ಲಿ ಒಬ್ಬರು. ಇವರು ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು, ವಿಜ್ಞಾನಿಯು, ರಾಜ್ಯನೀತಿಶಾಸ್ತ್ರಜ್ಞರು, ಸಂಶೋಧಕರು, ಮುದ್ರಕರು ಮತ್ತು ರಾಯಭಾರಿಯೂ ಆಗಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನದ ಬೋಸ್ಟನ್ ನಲ್ಲಿ ಜನನ. ಚಿಕ್ಕಂದಿನಿಂದಲೇ ವಿಜ್ಞಾನದಲ್ಲಿ ಆಸಕ್ತಿ. ಮುದ್ರಣಾಲಯದಲ್ಲಿ ಮೊಳೆ ಜೋಡಿಸುವುದರಿಂದ ಹಿಡಿದು, ಲೇಖನ ಬರೆಯುವವರೆಗೂ ಎಲ್ಲ ಕೆಲಸಗಳನ್ನು ಮಾಡಿದರು. ಇವರು ವಿಜ್ಞಾನ ಕ್ಷೇತ್ರದಲ್ಲಿ ವಿದ್ಯುಚ್ಛಕ್ತಿ ಸಂಭಂದಿಸಿದ ಸಂಶೋಧನೆಗೆ ಮತ್ತು ಭೌತಶಾಸ್ತ್ರದ ಇತಿಹಾಸದ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ೧೭೫೨ರಲ್ಲಿ ಗುಡುಗು,ಬಿರುಗಾಳಿಯ ಸಂದರ್ಭದಲ್ಲಿ ಆಕಾಶದಲ್ಲಿ ಗಾಳಿಪಟವನ್ನು ಹಾರಿಸುವಾಗ, ಮಿಂಚಿನಲ್ಲಿ ವಿದ್ಯುತ್ ಇದೆ ಎಂದು ಕಂಡುಕೊಂಡರು.ಈ ಘಟನೆ ಫ್ರಾಂಕ್ಲಿನ್ಗೆ ಮಿಂಚುವಾಹಕಗಳನ್ನು ತಯಾರಿಸಲು ಪ್ರೇರೇಪಣೆಯಾಯಿತು. ಬೆಂಜಮಿನ್ ಫ್ರಾಂಕ್ಲಿನ್ ಮಿಂಚುವಾಹಕಗಳನ್ನಲ್ಲದೆ ಸ್ಟೌವ್,ಕನ್ನಡಕ ಮುಂತಾದುವನ್ನು ನಿರ್ಮಿಸಿದರು.ವಾತಾಯನ ವ್ಯವಸ್ಥೆ ಸರಿ ಇಲ್ಲದ ಕೋಣೆಗಳಲ್ಲಿದ್ದರೆ ಕಾಯಿಲೆ ಬಹು ಬೇಗ ಹರಡುತ್ತದೆ ಎಂಬುದನ್ನು ತಿಳಿಸಿದರು.ಲಂಡನ್ನಿನ ರಾಯಲ್ ಸೊಸೈಟಿಯ ಸದಸ್ಯತ್ವ ಇವರಿಗೆ ಲಭಿಸಿತು. ೧೭೫೩ರ ನಂತರ ಅಮೆರಿಕದಲ್ಲಿ ಅನೇಕ ಮಿಂಚುವಾಹಕಗಳನ್ನು ತಯಾರಿಸಿ,ಎಡ್ ಸ್ಟೋನ್ ಲೈಟ್ ಹೌಸ್, ಇಟಲಿಯ ಸಿಡಿಮದ್ದು ಪುಡಿ ಭಂಡಾರ,ಬ್ರಿಟಿಷ್ ಸಿಡಿಮದ್ದು ಉಗ್ರಾಣ ಮುಂತಾದ ಬಹುಮುಖ್ಯ ಕಟ್ಟಡಗಳನ್ನು ರಕ್ಷಿಸಲಾಯಿತು. ಇವರು ಅಮೇರಿಕಾ ದೇಶದಲ್ಲಿಯೇ ಮೊತ್ತಮೊದಲ ಸಾರ್ವಜನಿಕ ಗ್ರಂಥಾಲಯವನ್ನು ಮತ್ತು ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಮೊದಲ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸಿದರು.

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 3.63 ( 6 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *