vastu

ವಾಸ್ತು ಶಾಸ್ತ್ರದಲ್ಲಿ ದಿಕ್ಕಿನ ಪ್ರಾಮುಖ್ಯತೆ

ವಾಸ್ತು ಶಾಸ್ತ್ರವು ವೇದದ ಒಂದು ಅಂಗ. ವಾಸ್ತು ಸೂತ್ರದ ಉಪನಿಷತ್ತು ಅಥರ್ವಣ ವೇದದಲ್ಲಿದೆ. ವಾಸ್ತು, ವಾಸ್ತವ ಶಕ್ತಿಯನ್ನು ಸಾಮರ್ಥ್ಯವನ್ನು ಚೈತನ್ಯಗೊಳಿಸುವ ತಂತ್ರ ಕೌಶಲವಾಗಿದೆ. ಪ್ರಕೃತಿ ಜನ್ಯವಾಗಿದೆ. ಈ ಶಾಸ್ತ್ರವು ಪ್ರಕೃತಿಗೆ ಅನುಗುಣವಾಗಿ ಪ್ರಕೃತಿ ನಿಯಮದಂತೆ ಹೇಳುವ ಶಾಸ್ತ್ರವಾಗಿದೆ.

ವೇದದಲ್ಲಿ ಒಂದು ಅಂಗವಾದ ವಾಸ್ತುಶಾಸ್ತ್ರದಲ್ಲಿ ಈಶಾನ್ಯ ದಿಕ್ಕು (ನಾರ್ತ್ ಈಸ್ಟ್) ಅತ್ಯಂತ ಮಂಗಳಕರವಾದುದು ಎಂದು ಗುರುತಿಸಲಾಗಿದೆ. ಈಶಾನ್ಯ ಎಂಬ ದಿಕ್ಪಾಲಕನು ಇದನ್ನು ಪ್ರವರ್ತಿಸುತ್ತಾನೆ. ಗ್ರಹಗಳಲ್ಲಿ ಶ್ರೇಷ್ಠನಾದ ಗುರು ಈ ದಿಕ್ಕನ್ನು ಪ್ರತಿನಿಧಿಸುತ್ತಾನೆ. ವಾಸ್ತು ಪುರುಷನ ಶಿರಸು ಈ ದಿಕ್ಕಿಗೇ ಇರುತ್ತದೆ. ಆದ್ದರಿಂದ ಈ ದಿಕ್ಕನ್ನು ದೇವಮೂಲೆ ಎಂದು ಸೂಚಿಸಲಾಗಿದೆ. ಈ ದಿಕ್ಕು ಪವಿತ್ರವಾಗಿದ್ದು ಸೂರ್ಯನ ಉದಯಕಾಲದಲ್ಲಿ ಜೀವನಾಧಾರದ ನೇರಳೆ ಬಣ್ಣದ ಕಿರಣಗಳು (ಅಲ್ಟ್ರಾ ವೈಲೆಟ್ ರೇಸ್) ಹೊರಹೊಮ್ಮಿ ಈ ದಿಕ್ಕಿನ ಮೇಲೆ ಪಸರಿಸುತ್ತದೆ. ಆದ್ದರಿಂದ ಇದು ಶುಭಕರ, ಆರೋಗ್ಯಕರವಾಗಿದ್ದು, ಈ ಕಾರಣದಿಂದ ಈ ದಿಕ್ಕಿನ ಕಟ್ಟಡ ಭಾಗದಲ್ಲಿ ಯಾವ ಅಡೆತಡೆ ಇಲ್ಲದಂತೆ ನೋಡಿಕೊಂಡು ಸ್ವಚ್ಛವಾಗಿಡಬೇಕು. ಭಾರ ವಸ್ತುಗಳು ಇರಬಾರದು. ಇದರಿಂದ ಧನಾತ್ಮಕ ಶಕ್ತಿ ಕಟ್ಟಡದ ಒಳಗೆ ಪ್ರವೇಶಿಸಿ ವಾಸ್ತು ದೋಷವಿಲ್ಲದಂತೆ ಆಗುವುದು. ವಿಜ್ಞಾನದ ರೀತ್ಯಾ ಪೂರ್ವ ದಿಕ್ಕಿನಿಂದ ಸೂರ್ಯನ ಬೆಳಕಿನ ಶಕ್ತಿ, ಉತ್ತರ ದಿಕ್ಕಿನಿಂದ ಕಾಂತ ಶಕ್ತಿ ಸೇರಿ ಈಶಾನ್ಯ ಪ್ರವೇಶಿಸಿ ಅಪೂರ್ವ ಶಕ್ತಿಯಾಗಿ ಮಾರ್ಪಡುತ್ತದೆ. ಇದು ಜೀವನಾಧಾರವಾದ ಶಕ್ತಿ. ಇದು ಮನೆಯೊಳಗೆ ಪ್ರವೇಶಿಸಿದಾಗ, ಪರಿಭ್ರಮಿಸಿದಾಗ ಮನೆ ಮಂದಿಗೆಲ್ಲ ವಾಸ್ತು ರೀತ್ಯ ಒಳಿತಾಗಿ ಶುಭ ಫಲಗಳು ಉಂಟಾಗಿ ಸುಖ ಜೀವನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ಹೆಚ್ಚಿನ ಗಾಳಿ, ಬೆಳಕು ಅಡೆತಡೆ ಇಲ್ಲದಂತೆ ನುಗ್ಗಲು ಅವಕಾಶ ಮಾಡಿ ಸ್ವಚ್ಛವಾಗಿಟ್ಟರೆ, ಈಶ್ವರನ, ಗುರು ಗ್ರಹದ ಅನುಗ್ರಹ ಬಲದಿಂದ ಒಳಿತಾಗುವುದರಲ್ಲಿ ಸಂಶಯವಿಲ್ಲ. ಇದು ದೇವಮೂಲೆಯಾದ್ದರಿಂದ ಪೂರ್ವ ಈಶಾನ್ಯದಲ್ಲಿ ಪೂಜಾ ಕೊಠಡಿ ನಿರ್ಮಿಸುವುದು ಸೂಕ್ತ. ಈ ದಿಕ್ಕಿನಲ್ಲಿ ತಗ್ಗಿರುವಂತೆ ನೋಡಿಕೊಂಡು ಹೆಚ್ಚಿನ ಆವರಣ ಬಿಟ್ಟು ಆವರಣದ ಗೋಡೆ ತಗ್ಗಾಗಿರುವಂತೆ ನಿರ್ಮಿಸಿ, ಸೂರ್ಯನ ಕಿರಣಗಳು ಮನೆಯ ಒಳಗಡೆ ಅಡೆತಡೆ ಇಲ್ಲದೇ ನುಗ್ಗಲು ಅವಕಾಶ ಮಾಡಿದರೆ ವಾಸ್ತು ದೋಷ ಪರಿಹಾರವಾಗಿ ಮನೆ ಜನರೆಲ್ಲ ಸುಖ ಜೀವನ ನಡೆಸಲು ಕಾರಣವಾಗುತ್ತದೆ. ಒಟ್ಟಿನಲ್ಲಿ ಈ ದಿಕ್ಕು ಕೆಡದಂತೆ ನೋಡಿಕೊಳ್ಳಬೇಕು.

[sociallocker]ನೈಋತ್ಯ ದಿಕ್ಕು ಈಶಾನ್ಯದಷ್ಟೇ ಮುಖ್ಯವಾದುದು. ಈ ದಿಕ್ಕು ಕೆಟ್ಟರೆ ಬಹಳ ತೊಂದರೆ. ಹೆಚ್ಚಿನ ದುಷ್ಫಲ. ರಾಹು ಗ್ರಹ ಈ ದಿಕ್ಕಿನ ಅಧಿಪತಿ. ವಾಸ್ತು ಪುರುಷನ ಕಾಲುಗಳು ಈ ದಿಕ್ಕಿನಲ್ಲಿರುವುದು. ಆದ್ದರಿಂದ ಈಶಾನ್ಯ ಎಷ್ಟು ತಗ್ಗಿರುವುದೋ ಅಷ್ಟೇ ಈ ದಿಕ್ಕು ಎತ್ತರ ಮತ್ತು ಭಾರವಾಗಿರುವುದು ಒಳಿತು. ರಾಹು ಗ್ರಹ ಇದನ್ನು ತಡೆಯಲು ಶಕ್ತ. ಈಶಾನ್ಯ ಶುಭ್ರವಾಗಿರಬೇಕು. ನೈಋತ್ಯ ಶುಭ್ರವಾಗಿಲ್ಲದಿದ್ದರೂ ಕೆಡುಕಿಲ್ಲ. ಅಂದರೆ ಇಲ್ಲಿ ಭಾರ ವಸ್ತುಗಳನ್ನು, ಮಹಡಿ ಮೆಟ್ಟಿಲುಗಳನ್ನು, ಬೇಡವಾದ ವಸ್ತುಗಳನ್ನಿಡಲು, ಡಸ್ಟ್‌ಬಿನ್ ಇಡಲೂ ಉಪಯೋಗಿಸಬಹುದು. ಆದರೆ ಬೋರ್‌ವೆಲ್, ಬಾವಿ ನಿರ್ಮಿಸಬಾರದು. ಈಶಾನ್ಯದಲ್ಲಿ ಅದರಲ್ಲೂ ಪೂರ್ವ ಅಥವಾ ಉತ್ತರ ಈಶಾನ್ಯದಲ್ಲಿ ಬಾವಿ ನಿರ್ಮಿಸುವುದು ವಾಸ್ತು ರೀತ್ಯ ಸಮ್ಮತ. ಈ ಮೇಲಿನ ನಿಯಮಗಳಂತೆ ಈಶಾನ್ಯ, ನೈಋತ್ಯದ ಪ್ರಾಮುಖ್ಯತೆಯನ್ನು ತಿಳಿದು ನಡೆದುಕೊಂಡರೆ ಉತ್ತಮ ಪರಿಣಾಮಗಳು ಉಂಟಾಗುವುದು.[/sociallocker] * ಎಂ.ವಿ.ಸತ್ಯನಾರಾಯಣ

ಶ್ರೇಯಾಂಕ

ಮತ ನೀಡಿ, ಬಲಪಡಿಸಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಹಂಚಿರಿ.

User Rating: 4.72 ( 3 votes)

ಇವುಗಳೂ ನಿಮಗಿಷ್ಟವಾಗಬಹುದು

ಶಬರಿ ಕೇಳುತ್ತಾಳೆ

ರಾವಣನನ್ನು ಸಂಹಾರ ಮಾಡುವ ನೆಪದಿಂದಲಾದರೂ ನೀನು ಇಲ್ಲಿಗೆ ಬಂದೆಯಲ್ಲ, ಇಲ್ಲ ಅಂದರೆ ಎಲ್ಲಿ ಬರುತ್ತಿದ್ದೆ ಸ್ವಾಮಿ? ಶ್ರೀರಾಮ ಸ್ವಲ್ಪ ಗಂಭೀರ …

Leave a Reply

Your email address will not be published. Required fields are marked *